Home
ಸುದ್ದಿಜಾಲ

Itel: ಐಟೆಲ್‌ನಿಂದ ಹೊಸ ಹೆಡ್‌ಸೆಟ್‌ ಬಿಡುಗಡೆ! ಡಿಸೈನ್‌ ನೋಡಿದ್ರೆ ಅಚ್ಚರಿ ಎನಿಸುತ್ತೆ!

ವಾಯರ್‌ಲೆಸ್‌ ಹೆಡ್‌ಫೋನ್‌ಗಳನ್ನು ಖರೀದಿಸುವವರಿಗೆ ಹಲವು ಬ್ರ್ಯಾಂಡ್‌ಗಳ ಆಯ್ಕೆಗಳಿವೆ. ಈ ಸಾಲಿಗೆ ಐಟೆಲ್‌ ಕಂಪೆನಿ ಮತ್ತೊಂದು ಹೊಸ ಹೆಡ್‌ಸೆಟ್‌ ಅನ್ನು ಸೇರ್ಪಡೆ ಮಾಡಿದೆ. ಐಟೆಲ್‌ ಕಂಪೆನಿ ಹೊಸದಾಗಿ ಐಟೆಲ್‌ ರೋರ್‌ 75 (Itel Roar 75) ಹೆಡ್‌ಫೋನ್‌ ಬಿಡುಗಡೆ ಮಾಡಿದೆ. ಇದು ಕಂಪನಿಯ ಮೊದಲ ತೆರೆದ ಇಯರ್ ಹೆಡ್‌ಸೆಟ್ ಆಗಿದೆ.

ಹೌದು, ಐಟೆಲ್‌ ರೋರ್‌ 75 ಹೆಡ್‌ಫೋನ್‌ ಭಾರತದಲ್ಲಿ ಅನಾವರಣಗೊಂಡಿದೆ. ಇದು ಹಗುರವಾದ ವಿನ್ಯಾಸವನ್ನು ಹೊಂದಿದ್ದು, ಟೈಟಾನಿಯಂ ಮೆಟಲ್‌ ಬಾಡಿಯನ್ನು ಹೊ೦ದಿದೆ. ಇನ್ನು ಹೆಡ್‌ಸೆಟ್‌ 14.2mm ಬಾಸ್ ಬೂಸ್ಟ್ ಡ್ರೈವರ್ ಮತ್ತು ಸ್ಪಷ್ಟವಾದ ಆಡಿಯೋ ಕರೆಗಳಿಗಾಗಿ ಎನ್ವಿರಾನ್ಮೆಂಟಲ್ ನಾಯ್ಸ್‌ ಕ್ಯಾನ್ಸಲೇಶನ್ ಬೆಂಬಲವನ್ನು ಹೊಂದಿದೆ. ಇನ್ನುಳಿದಂತೆ ಈ ಹೆಡ್‌ಫೋನ್‌ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಟೆಲ್‌ನಿಂದ ಹೊಸ ಹೆಡ್‌ಸೆಟ್‌ ಬಿಡುಗಡೆ! ಡಿಸೈನ್‌ ನೋಡಿದ್ರೆ ಅಚ್ಚರಿ ಎನಿಸುತ್ತೆ!

ಐಟೆಲ್‌ ರೋರ್‌ 75 ಫೀಚರ್ಸ್‌ ಹೇಗಿದೆ?
ಐಟೆಲ್‌ ರೋರ್‌ 75 ಹೆಡ್‌ಫೋನ್‌ ಬಳಕೆದಾರರಿಗೆ ಎಕೋ ನಾಯ್ಸ್‌ ಕ್ಯಾನ್ಸಲೇಶನ್ (ENC)ಬೆಂಬಲದೊಂದಿಗೆ ಸರೌಂಡ್-ಸೌಂಡ್ ಅನುಭವವನ್ನು ನೀಡುತ್ತದೆ. ಇನ್ನು ENC ಟೆಕ್ನಾಲಜಿಯು ಅನಗತ್ಯ ಬ್ಯಾಕ್‌ಗೌಂಡ್‌ ಸೌಂಡ್‌ ಅನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಜೊತೆಗೆ ENC ಅಲ್ಲದ ಹೆಡ್‌ಸೆಟ್‌ಗಳಲ್ಲಿ ಸ್ಪಷ್ಟವಾದ ಆಡಿಯೊ ಕರೆ ಅನುಭವವನ್ನು ಒದಗಿಸಲು ಸಹಾಯ ಮಾಡುತ್ತದೆ.

ಇನ್ನು ಐಟೆಲ್‌ ರೋರ್‌ 75 ಹೆಡ್‌ಸೆಟ್‌ 14.2mm ದೊಡ್ಡ ಬಾಸ್ ಬೂಸ್ಟ್ ಡ್ರೈವರ್ ಅನ್ನು ಒಳಗೊಂಡಿದೆ. ಈ ಹೆಡ್‌ಫೋನ್‌ 75mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 13 ಗಂಟೆಗಳವರೆಗೆ ಮ್ಯೂಸಿಕ್‌ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಇದು ಇಯರ್‌ ಓಪನ್‌ ಹೆಡ್‌ಫೋನ್‌ ಆಗಿದ್ದು, USB ಟೈಪ್-C ಚಾರ್ಜಿಂಗ್ ಪೋರ್ಟ್ ಅನ್ನು ಒಳಗೊಂಡಿವೆ. ಇದರೊಂದಿಗೆ ಹೆಡ್‌ಸೆಟ್‌ ಬ್ಲೂಟೂತ್ 5.2 ಸಂಪರ್ಕವನ್ನು 10m ವ್ಯಾಪ್ತಿಯೊಂದಿಗೆ ಬೆಂಬಲಿಸುತ್ತದೆ. ಇದು ಡ್ಯುಯಲ್-ಡಿವೈಸ್ ಪೇರಿಂಗ್ ಅನ್ನು ಸಹ ಅನುಮತಿಸುತ್ತದೆ.

ಐಟೆಲ್‌ನಿಂದ ಹೊಸ ಹೆಡ್‌ಸೆಟ್‌ ಬಿಡುಗಡೆ! ಡಿಸೈನ್‌ ನೋಡಿದ್ರೆ ಅಚ್ಚರಿ ಎನಿಸುತ್ತೆ!

ಈ ಹೆಡ್‌ಸೆಟ್‌ ಭಾರತದಲ್ಲಿ ಕೇವಲ 1,099ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇದು ನೀಲಿ ಬಣ್ಣದ ಆಯ್ಕೆಯಲ್ಲಿ ಬರಲಿದ್ದು, ಈಗಾಗಲೇ ಖರೀದಿಗೆ ಲಭ್ಯವಿದೆ.

ಇನ್ನು ಇತ್ತೀಚಿಗೆ ಐಟೆಲ್‌ ಕಂಪೆನಿ ತನ್ನ ಐಟೆಲ್‌ A05s ಸ್ಮಾರ್ಟ್‌ಫೋನ್‌ನ ಮತ್ತೊಂದು ವೇರಿಯೆಂಟ್‌ ಆಯ್ಕೆಯಲ್ಲಿ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಪ್ರಬಲ 1.6GHz ಯುನಿಸಾಕ್ SC9863A ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಸುಧಾರಿತ ಕಾರ್ಯಕ್ಷಮತೆಯನ್ನು ನೀಡಲಿದೆ. ಈ ಸ್ಮಾರ್ಟ್‌ಫೋನ್ 6.6 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಪ್ರಬಲ 1.6GHz UNISOC ಆಕ್ಟಾ-ಕೋರ್ ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 13 ಗೋ ಆವೃತ್ತಿ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್‌ ಆಗಲಿದೆ.

ಐಟೆಲ್‌ A05s ಸ್ಮಾರ್ಟ್‌ಫೋನ್‌ 2GB ಆಯ್ಕೆಯಲ್ಲಿ 5MP ರಿಯರ್‌ ಕ್ಯಾಮೆರಾವನ್ನು ಹೊಂದಿತ್ತು. ಆದರೆ 4GB RAM ಆಯ್ಕೆಯು 8MP ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಫೋಟೋಗಳು ಮತ್ತು ವೀಡಿಯೊಗಳಿಗಾಗಿ AI ಸೌಂದರ್ಯವರ್ಧಕ ವಿಧಾನಗಳೊಂದಿಗೆ 5MP ಸೆಲ್ಫಿ ಕ್ಯಾಮರಾವನ್ನು ಒಳಗೊಂಡಿದೆ. ಐಟೆಲ್‌ A05s ಬ್ಯಾಟರಿ ಮತ್ತು ಇತರೆ ಐಟೆಲ್‌ A05s ಸ್ಮಾರ್ಟ್‌ಫೋನ್‌ 4000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 5W ಅಡಾಪ್ಟರ್ ಟೈಪ್-ಸಿ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ 4G, ವೈಫೈ, ಬ್ಲೂಟೂತ್‌, ಜಿಪಿಎಸ್‌, ಗ್ಲೋನಾಸ್‌ GLONASS, ಅನ್ನು ಹೊಂದಿದೆ. ಇದಲ್ಲದೆ ಫೇಸ್ ಅನ್‌ಲಾಕ್, ಜಿ ಸೆನ್ಸರ್, ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಒಳಗೊಂಡಿದೆ.

Best Mobiles in India

English summary
Itel Roar 75 Open-Ear Wireless Headphones Launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+