ಐಟೆಲ್ S23 ಮೊಬೈಲ್ ದರದಲ್ಲಿ ಈಗ ಭರ್ಜರಿ ಡಿಸ್ಕೌಂಟ್; 16GB RAM ಆಯ್ಕೆ!
ಕಡಿಮೆ ಬೆಲೆಯ ಮೊಬೈಲ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಐಟೆಲ್ ಕಂಪೆನಿ ಗ್ರಾಹಕರನ್ನು ಸೆಳೆದಿದೆ. ಆ ಪೈಕಿ ಕಂಪನಿಯ ಇತ್ತೀಚಿನ ಐಟೆಲ್ S23 (itel s23) ಮೊಬೈಲ್ ಆಕರ್ಷಕ ಫೀಚರ್ಸ್‌ಗಳಿಂದ ಹಾಗೂ ಬೆಲೆಯಿಂದ ಗ್ರಾಹಕರ ಗಮನ ಸೆಳೆದಿದೆ. ಈ ಫೋನ್ 16 GB RAM ಮತ್ತು 50 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ ಪಡೆದಿರುವುದು ಪ್ಲಸ್ ಪಾಯಿಂಟ್ ಆಗಿದೆ.
ಹೌದು, ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಐಟೆಲ್ S23 ಮೊಬೈಲ್ ಶೇ 23% ಡಿಸ್ಕೌಂಟ್ ಪಡೆದಿದೆ. ಈ ಮೊಬೈಲ್ 8GB RAM + 128GB ಬೆಲೆಯು 10,999ರೂ. ಬೆಲೆಯನ್ನು ಪಡೆದಿದ್ದು, ಆಫರ್‌ನಲ್ಲಿ 8,499ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನ್ ಯುನಿಸೋಕ್ T606 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, 5,000 mAh ಸಾಮರ್ಥ್ಯದ ಬ್ಯಾಟರಿ ಅನದನು ಒಳಗೊಂಡಿದೆ.

ಐಟೆಲ್ S23 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ : ಐಟೆಲ್ S23 ಮೊಬೈಲ್ 6.6 ಇಂಚಿನ HD+ ಐಪಿಎಸ್ ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ ಈ ಡಿಸ್‌ಪ್ಲೇ 720 x 1,612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಪಡೆದುಕೊಂಡಿದೆ.
ಐಟೆಲ್ S23 ಪ್ರೊಸೆಸರ್ ಪವರ್ ಏನು : ಐಟೆಲ್ S23 ಮೊಬೈಲ್ ಆಕ್ಟಾ ಕೋರ್ 12nm ಯುನಿಸೊಕ್ T606 SoC ಪ್ರೊಸೆಸರ್ ಪವರ್ ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 8 GB RAM ಮತ್ತು 128 GB ಆಂತರೀಕ ಸ್ಟೊರೇಜ್ ಅನ್ನು ಹೊಂದಿದೆ. ಇದಲ್ಲದೆ ವರ್ಚುವಲ್ RAM ಬಳಸುವುದಕ್ಕೆ ಕೂಡ ಅವಕಾಶ ನೀಡಿದ್ದು, ಇದರಿಂದ ಆನ್‌ಬೋರ್ಡ್ ಮೆಮೊರಿಯನ್ನು 16 GB ವರೆಗೆ ವಿಸ್ತರಿಸಬಹುದು.
ಐಟೆಲ್ S23 ಕ್ಯಾಮೆರಾ ಸ್ಪೆಷಲ್ ಏನು : ಐಟೆಲ್ S23 ಮೊಬೈಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದು ಕೊಂಡಿದೆ. ಇದರ ಜೊತೆಗೆ ಈ ಫೋನ್ LED ಫ್ಲ್ಯಾಷ್‌ನೊಂದಿಗೆ ಕಾಣಿಸಿಕೊಂಡಿದೆ. ಇದಲ್ಲದೆ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅನ್ನು ಕೂಡಾ ಪಡೆದಿದೆ. ಹಿಂಭದಿಯ ಕ್ಯಾಮೆರಾ ರಚನೆ ವೃತ್ತಾಕಾರವಾಗಿದೆ.
ಐಟೆಲ್ S23 ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ : ಐಟೆಲ್ S23 ಮೊಬೈಲ್ 10W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡುವ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 15 ಗಂಟೆಗಳ ಬ್ಯಾಟರಿ ಅವಧಿ ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಈ ಮೊಬೈಲ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.
ಭಾರತದಲ್ಲಿ ಐಟೆಲ್ S23 ಮೆಮೊರಿ ಮತ್ತು ಕಲರ್ ಮಾಹಿತಿ : ಐಟೆಲ್ S23 ಮೊಬೈಲ್ 8 GB RAM + 128 GB ಸ್ಟೋರೇಜ್ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರು ಮಿಸ್ಟರಿ ವೈಟ್ ಮತ್ತು ಸ್ಟಾರಿ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ.


Click it and Unblock the Notifications








