Home
ಸುದ್ದಿಜಾಲ

ಸ್ವದೇಶಿ ಬ್ರ್ಯಾಂಡ್‌ನ ಈ ಫೋನಿಗೆ ಈಗ ಬಿಗ್ ಡಿಸ್ಕೌಂಟ್‌; ಅಧಿಕ RAM ಇದೆ!

ಐಟೆಲ್‌ ಮೊಬೈಲ್‌ ಕಂಪನಿಯು ಕೆಲವು ಅಗ್ಗದ ಸ್ಮಾರ್ಟ್‌ಫೋನ್‌ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದು ಸ್ವದೇಶಿ ಬ್ರ್ಯಾಂಡ್‌ ಆಗಿದ್ದು, ಭಿನ್ನ ಮಾದರಿಯ ಫೋನ್‌ ಆಯ್ಕೆಗಳನ್ನು ಗ್ರಾಹಕರಿಗೆ ನೀಡಿದೆ. ಸಂಸ್ಥೆಯ ಐಟೆಲ್‌ S23 ಮೊಬೈಲ್‌ ಫೋನ್‌ ಇದೀಗ ಅಮೆಜಾನ್‌ ವೆಬ್‌ಸೈಟ್‌ ನಲ್ಲಿ ಭಾರೀ ರಿಯಾಯಿತಿ ಪಡೆದಿದೆ.

ಹೌದು, ಜನಪ್ರಿಯ ಇ ಕಾಮರ್ಸ್‌ ದೈತ್ಯ ಅಮೆಜಾನ್‌ ವೆಬ್‌ಸೈಟ್‌ ನಲ್ಲಿ ಐಟೆಲ್‌ S23 ಮೊಬೈಲ್ 23% ರಷ್ಟು ಡಿಸ್ಕೌಂಟ್‌ ಅನ್ನು ಪಡೆದಿದೆ. ಈ ಮೊಬೈಲ್‌ 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿದ್ದು, ಇದರ ಬೆಲೆಯು 10,999 ರೂ. ಆಗಿದೆ. ಸದ್ಯ ಡಿಸ್ಕೌಂಟ್‌ನಲ್ಲಿ 8,499ರೂ. ಗಳಿಗೆ ಗ್ರಾಹಕರು ಖರೀದಿ ಮಾಡಲು ಅವಕಾಶ ಇದೆ. ಇತರೆ ಆಫರ್‌ ಮೂಲಕ ಇನ್ನಷ್ಟು ರಿಯಾಯಿತಿ ಪಡೆಯಬಹುದಾಗಿದೆ.

ಸ್ವದೇಶಿ ಬ್ರ್ಯಾಂಡ್‌ನ ಈ ಫೋನಿಗೆ ಈಗ ಬಿಗ್ ಡಿಸ್ಕೌಂಟ್‌; ಅಧಿಕ RAM ಇದೆ!

ಐಟೆಲ್‌ S23 ಎಂಟ್ರಿ ಲೆವೆಲ್ ವಿಭಾಗದ ಸ್ಮಾರ್ಟ್‌ಫೋನ್‌ ಆಗಿದ್ದು, ಇದು ಯುನಿಸೊಕ್ T606 SoC ಪ್ರೊಸೆಸರ್‌ ಪವರ್‌ ಪಡೆದುಕೊಂಡಿದೆ. ಅಲ್ಲದೇ ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ಐಟೆಲ್‌ S23 ಫೋನಿನ ಸೌಲಭ್ಯ/ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಐಟೆಲ್‌ S23 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಮಾಹಿತಿ ಇಲ್ಲಿದೆ : ಐಟೆಲ್‌ S23 ಮೊಬೈಲ್‌ ಫೋನ್‌ 6.6 ಇಂಚಿನ HD+ ಐಪಿಎಸ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇ 720 x 1,612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಇದು 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಪಡೆದು ಕೊಂಡಿದೆ.

ಐಟೆಲ್‌ S23 ಪ್ರೊಸೆಸರ್‌ ಸಾಮರ್ಥ್ಯ ಕಾರ್ಯವೈಖರಿ ಹೇಗೆ : ಐಟೆಲ್‌ S23 ಮೊಬೈಲ್‌ ಆಕ್ಟಾ ಕೋರ್ 12nm ಯುನಿಸೊಕ್ T606 SoC ಪ್ರೊಸೆಸರ್‌ ಪವರ್ ಹೊಂದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 8 GB RAM ಮತ್ತು 128GB ಆಂತರೀಕ ಸ್ಟೊರೇಜ್‌ ಅನ್ನು ಹೊಂದಿದೆ. ಹಾಗೆಯೇ ವರ್ಚುವಲ್ RAM ಆಯ್ಕೆ ಇದ್ದು, ಜೊತೆಗೆ ಆನ್‌ಬೋರ್ಡ್ ಮೆಮೊರಿಯನ್ನು 16GB ವರೆಗೆ ವಿಸ್ತರಿಸಬಹುದು.

ಐಟೆಲ್‌ S23 ಕ್ಯಾಮೆರಾ ಸೆನ್ಸಾರ್ ಯಾವುದು : ಐಟೆಲ್‌ S23 ಮೊಬೈಲ್‌ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಹಿಂಭಾಗದ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದ್ದು, ಇದರ ಜೊತೆಗೆ LED ಫ್ಲ್ಯಾಷ್‌ ಲೈಟ್‌ ಸೌಲಭ್ಯ ಸಹ ಪಡೆದಿದೆ. ಅದೇ ರೀತಿ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ.

ಐಟೆಲ್‌ S23 ಬ್ಯಾಟರಿ ಬ್ಯಾಕ್‌ಅಪ್‌ ಎಷ್ಟಿದೆ ಮತ್ತು ಇತರೆ : ಐಟೆಲ್‌ S23 ಮೊಬೈಲ್‌ 10W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲ ನೀಡುವ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಈ ಫೋನ್ ಸಿಂಗಲ್‌ ಚಾರ್ಜ್‌ನಲ್ಲಿ 15 ಗಂಟೆಗಳ ಬ್ಯಾಟರಿ ಅವಧಿ ಒದಗಿಸಬಲ್ಲದು.

ಹಾಗೆಯೇ ಐಟೆಲ್‌ S23 ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್‌ ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಸೌಲಭ್ಯ ಸಹ ಹೊಂದಿದೆ.

ಐಟೆಲ್‌ S23 ಮೆಮೊರಿ ಹಾಗೂ ಕಲರ್ ಆಯ್ಕೆಯ ಮಾಹಿತಿ : ಐಟೆಲ್‌ S23 ಸ್ಮಾರ್ಟ್‌ಫೋನ್‌ 8 GB RAM + 128 GB ಸ್ಟೋರೇಜ್ ವೇರಿಯಂಟ್‌ ಆಯ್ಕೆ ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮಿಸ್ಟರಿ ವೈಟ್ ಮತ್ತು ಸ್ಟಾರಿ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Itel S23 available at huge discount price. price and specifications details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+