ಭಾರತದಲ್ಲಿ ಲಾಂಚ್ ಆಯ್ತು ಐಟೆಲ್ S9 ಪ್ರೊ ಇಯರ್‌ಬಡ್ಸ್! ಬೆಲೆ ಜಸ್ಟ್ 799ರೂ ಮಾತ್ರ!
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಐಟೆಲ್ S9 ಪ್ರೊ ಇಯರ್‌ಬಡ್ಸ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಇಯರ್‌ಬಡ್ಸ್ ಬಜೆಟ್ ಪ್ರೈಸ್‌ಟ್ಯಾಗ್‌ನಲ್ಲಿ ಎಂಟ್ರಿ ನೀಡಿರುವುದು ವಿಶೇಷವಾಗಿದೆ. ಇನ್ನು ಈ ಇಯರ್‌ಬಡ್ಸ್ 10mm ಬಾಸ್ ಬೂಸ್ಟ್ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿರುವ ಇನ್-ಇಯರ್ ವಿನ್ಯಾಸವನ್ನು ಹೊಂದಿದೆ.
ಹೌದು, ಐಟೆಲ್ S9 ಪ್ರೊ ಇಯರ್‌ಬಡ್ಸ್ ಭಾರತದಲ್ಲಿ ಲಾಂಚ್ ಆಗಿದೆ. ಈ ಇಯರ್‌ಬಡ್ಸ್ ಎನ್ವಿರಾನ್‌ಮೆಂಟಲ್ ನೋಯ್ಸ್ ಕ್ಯಾನ್ಸಲೇಷನ್ (ENC) ಅನ್ನು ಹೊಂದಿದೆ. ಇದು ಕರೆಗಳ ಸಮಯದಲ್ಲಿ ಪರಿಸರದ ಶಬ್ದವನ್ನು ಪರಿಣಾಮಕಾರಿಯಾಗಿ ತೆಗೆದುಹಾಕಲಿದ್ದು, ಸ್ಪಷ್ಟ ಸಂವಹನವನ್ನು ಖಚಿತಪಡಿಸುತ್ತದೆ. ಹಾಗಾದ್ರೆ ಐಟೆಲ್ S9 ಪ್ರೊ ಇಯರ್‌ಬಡ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಟೆಲ್ S9 ಪ್ರೊ ಇಯರ್‌ಬಡ್ಸ್ ಫೀಚರ್ಸ್ ಹೇಗಿದೆ?
ಐಟೆಲ್ S9 ಪ್ರೊ ಇಯರ್‌ಬಡ್ಸ್ 10mm ಬಾಸ್ ಬೂಸ್ಟ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು ಡ್ಯುಯಲ್ ಎನ್ವಿರಾನ್‌ಮೆಂಟಲ್ ನೋಯ್ಸ್ ಕ್ಯಾನ್ಸಲೇಷನ್ ಅನ್ನು ಹೊಂದಿದೆ. ಜೊತೆಗೆ 45ms ಅಲ್ಟ್ರಾ-ಲೋ ಲೇಟೆನ್ಸಿ ಮೋಡ್, ಟಚ್ ಕಂಟ್ರೋಲ್‌ಗಳು ಮತ್ತು ಅನುಕೂಲಕರ ಚಾರ್ಜಿಂಗ್ ಅನುಭವಕ್ಕಾಗಿ ಟೈಪ್-ಸಿ ಪೋರ್ಟ್ ಅನ್ನು ಒದಗಿಸಲಿದೆ.
ಇನ್ನು ಈ ಇಯರ್‌ಬಡ್ಸ್ ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವ ಗುಣವನ್ನು ಹೊಂದಿದೆ. ಇದರಲ್ಲಿ ನೀಡಲಾಗಿರುವ ಫೀಚರ್ಸ್ ಬಳಕೆದಾರರ ಗಮನಸೆಳೆಯುವಂತಿದ್ದು, ಒಟ್ಟು ಪ್ಲೇಟೈಮ್ 40 ಗಂಟೆಗಳವರೆಗೆ ಇರಲಿದೆ. ಇದು ತಡೆರಹಿತ ಸಂಪರ್ಕಕ್ಕಾಗಿ ಬ್ಲೂಟೂತ್ 5.3 ಅನ್ನು ಬೆಂಬಲಿಸಲಿದ್ದು, ಅತ್ಯುತ್ತಮ ಮ್ಯೂಸಿಕ್ ಅನುಭವವನ್ನು ನೀಡಲಿದೆ.

ಐಟೆಲ್ S9 ಪ್ರೊ ಇಯರ್‌ಬಡ್ಸ್‌ನ ಪ್ರತಿ ಇಯರ್‌ಬಡ್ಸ್ ಕೂಡ 40mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರ ಚಾರ್ಜಿಂಗ್ ಕೇಸ್ 400mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಟೈಪ್-ಸಿ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, ವೇಗದ ಚಾರ್ಜಿಂಗ್ ಹೊಂದಿದೆ. 10 ನಿಮಿಷ ಚಾರ್ಜ್‌ನಲ್ಲಿ 100 ನಿಮಿಷ ಪ್ಲೇಬ್ಯಾಕ್ ಟೈಂ ನೀಡಲಿದೆ.
ಬೆಲೆ ಮತ್ತು ಲಭ್ಯತೆ
ಐಟೆಲ್ S9 ಪ್ರೊ ಇಯರ್‌ಬಡ್ಸ್ ಭಾರತದಲ್ಲಿ ಕೇವಲ 799ರೂ ಬೆಲೆಯನ್ನು ಹೊಂದಿದೆ. ಇದು ಗಾಢ ನೀಲಿ ಮತ್ತು ನೆಬ್ಯುಲಾ ಕಪ್ಪು ಬಣ್ಣದಲ್ಲಿ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದನ್ನು ಭಾರತದಾದ್ಯಂತ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ.
ಇನ್ನು ಐಟೆಲ್ ಕಂಪೆನಿ ಭಾರತದಲ್ಲಿ ತನ್ನ ಪವರ್ ಸರಣಿಯ ಫೋನ್‌ಗಳನ್ನು ಪರಿಚಯಿಸುವುದ್ಕೆ ತಯಾರಿ ನಡೆಸಿದೆ. ಅದರಂತೆ ಈ ಸರಣಿಯ ಫೋನ್‌ಗಳು ಇದೇ ಫೆಬ್ರವರಿ 8 ರಂದು ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸುವುದು ಪಕ್ಕಾ ಆಗಿದೆ. ಇನ್ನು ಈ ಸರಣಿಯಲ್ಲಿ ಐಟೆಲ್ P55, ಐಟೆಲ್ P55+ ಮತ್ತು ಐಟೆಲ್ P55T ಹೆಸರಿನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ.
ಈ ಸರಣಿಯಲ್ಲಿ ಐಟೆಲ್ P55+ ಫೋನ್ 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಇನ್ನು ಐಟೆಲ್ P55T ಮೊಬೈಲ್ ಪಂಚ್ ಹೋಲ್ ಕ್ಯಾಮೆರಾ ಜೊತೆಗೆ 6000 mAh ಬ್ಯಾಟರಿ ಸೌಲಭ್ಯ ಒಳಗೊಂಡಿರಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ ಈ ಸರಣಿಯ ಮೂರು ಫೋನ್‌ಗಳು ಅಂದಾಜು 10,000ರೂ. ಒಳಗಿನ ಬೆಲೆಯಲ್ಲಿ ಬರಲಿದೆ ಎಂದು ಹೇಳಲಾಗಿದೆ. ಈ ಪೈಕಿ ಐಟೆಲ್ P55+ ಫೋನ್ ಅತ್ಯುತ್ತಮ ಚಾರ್ಜಿಂಗ್ ಸೌಲಭ್ಯ ಹೊಂದಿರಲಿದ್ದು, ಸುಮಾರು 30 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಈ ಎಲ್ಲಾ ಕುತೂಹಲಗಳಿಗೆ ಇದೇ ಫೆಬ್ರವರಿ 8 ರಂದು ತೆರೆ ಬೀಳಲಿದೆ.


Click it and Unblock the Notifications








