ಐಟೆಲ್‌ ವಿಷನ್‌1 ಸ್ಮಾರ್ಟ್‌ಫೋನ್‌ ಬಿಡುಗಡೆ!..ಬೆಲೆ 5,499 ರೂ..!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಹೈ ರೇಂಜ್‌ ಪ್ರೈಸ್‌ನಿಂದ ಹಿಡಿದು ಪ್ರೀಮಿಯಂ ಪ್ರೈಸ್‌ ಟ್ಯಾಗ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿವೆ. ಸದ್ಯ ಇದೀಗ ಈಗಾಗ್ಲೆ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿರುವ ಐಟೆಲ್‌ ಕಂಪೆನಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ಐಟೆಲ್‌ ಕಂಪೆನಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿ ಈಗಾಗ್ಲೆ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಐಟೆಲ್‌ ಕಂಪೆನಿ ತನ್ನ ಹೊಸ ಐಟೆಲ್‌ ವಿಷನ್ 1 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಅಲ್ಲದೆ ಐಟೆಲ್ ವಿಷನ್ 1 ಸ್ಮಾರ್ಟ್‌ಫೋನ್ 5,499 ರೂ. ಬೆಲೆಯನ್ನ ಹೊಂದಿದ್ದು, ಸ್ಮಾರ್ಟ್‌ಫೋನ್‌ ಜೊತೆಗೆ 799 ರೂ ಮೌಲ್ಯದ ಐಟೆಲ್ ಬ್ಲೂಟೂತ್ ವೈರ್‌ಲೆಸ್ ಹೆಡ್‌ಸೆಟ್ ಅನ್ನು ಉಚಿತವಾಗಿ ನೀಡುತ್ತಿದೆ. ಹಾಗಾದ್ರೆ ಐಟೆಲ್ ವಿಷನ್ 1 ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಕನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಐಟೆಲ್ ವಿಷನ್ 1 ಸ್ಮಾರ್ಟ್‌ಫೋನ್‌ ವಾಟರ್ ಡ್ರಾಪ್ ನಾಚ್‌ ಶೈಲಿಯನ್ನು ಹೊಂದಿರುವ ಡಿಸ್‌ಪ್ಲೇ ಹೊಂದಿದ್ದು, ಇದು 720x1560 ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.088-ಇಂಚಿನ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ ಇದಾಗಿದೆ. ಈ ಡಿಸ್‌ಪ್ಲೇಯು IPS 2.5D ಡಿಸ್‌ಪ್ಲೇ ಆಗಿದ್ದು, 500 ನಿಟ್ಸ್ ಬ್ರೈಟ್‌ನೆಶ್‌ ಅನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 19: 5: 9 ಆಸ್ಪೆಕ್ಟ್‌ ರೆಶಿಯೋ ಹೊಂದಿದ್ದು, ಇನ್ಸೆಲ್ ತಂತ್ರಜ್ಞಾನ ಹೊಂದಿರುವ ಸಂಪೂರ್ಣ ಲ್ಯಾಮಿನೇಟೆಡ್ ಡಿಸ್‌ಪ್ಲೇ ಇದಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇದಲ್ಲದೆ ಐಟೆಲ್ ವಿಷನ್ 1 ಸ್ಮಾರ್ಟ್‌ಫೋನ್‌ 1.6GHz ಆಕ್ಟಾ-ಕೋರ್ ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ ಪೈ 9 ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಬಜೆಟ್‌ ಬೆಲೆಯ ಈ ಸ್ಮಾರ್ಟ್‌ಫೋನ್ 2GB RAM ಮತ್ತು 32GB ಸ್ಟೋರೇಜ್‌ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ 128GB ವರೆಗೆ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಮಾದರಿ

ಕ್ಯಾಮೆರಾ ಮಾದರಿ

ಈ ಸ್ಮಾರ್ಟ್‌ಫೋನ್‌ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಟೆಕ್ನಾಲಜಿ ಹೊಂದಿರುವ ಪವರ್ ಡ್ಯುಯಲ್ ಕ್ಯಾಮೆರಾ ರಿಯರ್‌ ಸೆಟ್‌ಆಪ್‌ ಹೊಂದಿದ್ದು, ಮೊದಲೇನ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 0.08 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಾದಲ್ಲಿ ಎಐ ಬ್ಯೂಟಿ ಮೋಡ್, ಪೋರ್ಟ್ರೇಟ್ ಮೋಡ್, ಎಚ್‌ಡಿಆರ್, ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಐಟೆಲ್ ವಿಷನ್ 1 ಸ್ಮಾರ್ಟ್‌ಫೋನ್‌ 4000mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದ್ದು, 820 ಗಂಟೆಗಳ ಸ್ಟ್ಯಾಂಡ್‌ಬೈ, 24 ಗಂಟೆಗಳ ಆವರೇಜ್‌ ಯೂಸೇಜ್‌, 45 ಗಂಟೆಗಳ ಪ್ಲೇಬ್ಯಾಕ್‌ ಮ್ಯೂಸಿಕ್‌, 8 ಗಂಟೆಗಳ ವೀಡಿಯೊ ಮತ್ತು 7 ಗಂಟೆಗಳ ಗೇಮಿಂಗ್ ಅನ್ನು ಒದಗಿಸುತ್ತದೆ ಎಂದು ಐಟೆಲ್ ಹೇಳಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಯಲ್ಲಿ ಡ್ಯುಯಲ್ ಆಕ್ಟಿವ್ 4G VOLTE, ವೈಫೈ, ಬ್ಲೂಟೂತ್‌ , ಹಾಟ್‌ಸ್ಪಾಟ್‌ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಐಟೆಲ್ ವಿಷನ್ 1 ಸ್ಮಾರ್ಟ್‌ಫೋನ್‌ 5,499 ರೂ.ಬೆಲೆಯನ್ನ ಹೊಂದಿದೆ. ಅಲ್ಲದೆ 799 ರೂ.ಗಳ ಉಚಿತ ಐಟೆಲ್‌ ಬ್ಲೂಟೂತ್ ವಾಐರ್‌ಲೆಸ್‌ ಹೆಡ್‌ಸೆಟ್‌ ಮತ್ತು ರಿಲಯನ್ಸ್ ಜಿಯೋದಿಂದ 2,200 + 25GB ಹೆಚ್ಚುವರಿ ಡೇಟಾವನ್ನು ಇನಸ್ಟಂಟ್‌ ಕ್ಯಾಶ್‌ಬ್ಯಾಕ್‌ ಆಪರ್‌ ಅನ್ನು ಹೊಂದಿದೆ. ಸದ್ಯ ಭಾರತದ ಎಲ್ಲಾ ಪ್ರಮುಖ ಮಾರಾಟ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Most Read Articles
Best Mobiles in India

English summary
The Vision 1 comes packed with free itel Bluetooth wireless headset worth Rs 799 and also an instant cashback offer of Rs 2,200+25GB additional data from Reliance Jio.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X