ಭಾರತದ ಮಾರುಕಟ್ಟೆಯಲ್ಲಿ ಐಟೆಲ್‌ ಇಯರ್‌ಪಾಡ್ಸ್ ITW-60 ಬಿಡುಗಡೆ!

|

ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕರಲ್ಲಿ ಒಂದಾಗಿರುವ ಟ್ರಾನ್ಸ್‌ಷನ್ ಹೋಲ್ಡಿಂಗ್ಸ್‌ನ ಐಟೆಲ್ ಸ್ಮಾರ್ಟ್‌ಫೋನ್ ಬ್ರಾಂಡ್ ತನ್ನ ಮೊದಲ ಟ್ರೂ ವೈರ್‌ಲೆಸ್ ಇಯರ್‌ಪಾಡ್ಸ್ ITW-60 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ಹೊಸ ಮಾದರಿಯ ವಿನ್ಯಾಸವನ್ನ ಹೊಂದಿದ್ದು, ಅಗ್ಗದ ಬೆಲೆಯಲ್ಲಿ ಅಂದರೆ 1,699 ರೂ, ಬೆಲೆಯನ್ನ ಹೊಂದಿದೆ. ಇನ್ನು ಈ ಇಯರ್‌ ಪಾಡ್ಸ್‌ ಸಬ್ -2 ಬೆಲೆ ವಿಭಾಗದಲ್ಲಿ ರಿಯಲ್‌ಮಿ ಬಡ್ಸ್ ಕ್ಯೂ ಮತ್ತು ರೆಡ್ಮಿ ಇಯರ್‌ಬಡ್ಸ್‌ S ಗೆ ಪೈಪೋಟಿ ನೀಡಲಿದೆ.

ಐಟೆಲ್‌

ಹೌದು, ಐಟೆಲ್‌ ಸ್ಮಾರ್ಟ್‌ಫೋನ್‌ ಕಂಪೆನಿ ತನ್ನ ಮೊದಲ ಟ್ರೂಲಿ ವಾಯರ್‌ಲೆಸ್ ಇಯರ್‌ಪಾಡ್ಸ್ ITW-60 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಐಟೆಲ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮಾತ್ರವಲ್ಲದೆ ಐಟೆಲ್‌ನ ಗ್ರಾಹಕರಿಗೆ ಉತ್ತಮ ಮೊಬೈಲ್ ಮ್ಯೂಸಿನ್‌ ಅನ್ನುಭವವನ್ನು ನೀಡುವುದಕ್ಕೆ ವಿಶೇಷವಾಗಿ ಈ ಇಯರ್‌ಪಾಡ್ಸ್‌ಗಳನ್ನ ವಿನ್ಯಾಸಗೊಳಿಸಲಾಗಿದೆ. ಸದ್ಯ ಈಗಾಗಲೇ ಇಟೆಲ್‌ ಕಂಪೆನಿ ತನ್ನ ಸ್ಮಾರ್ಟ್‌ ಗ್ಯಾಜೆಟ್‌ಗಳ ಮಾರುಕಟ್ಟೆಯನ್ನ ಇನ್ನಷ್ಟು ವಿಸ್ತಾರಗೊಳಿಸುತ್ತಿದೆ. ಇದರ ಅಂಗವಾಗಿ ಇದೀಗ ಕಾರ್ಯಕ್ಷಮತೆ ಮತ್ತು ಗುಣಮಟ್ಟ ಹೊಂದಿರುವ, ಹೊಸ ಇಟಲ್ ಇಯರ್‌ಪಾಡ್‌ಗಳನ್ನ ಪರಿಚಯಿಸಿದೆ. ಹಾಗಾದ್ರೆ ಈ ಇಯರ್‌ ಪಾಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಟೆಲ್‌

ಐಟೆಲ್‌ ಕಂಪೆನಿ ಬಿಡುಗಡೆ ಮಾಡಿರುವ ಟ್ರೂಲಿ ವಾಯರ್‌ಲೆಸ್ ಇಯರ್‌ಪಾಡ್ಸ್ ITW-60 ಪ್ರಭಾವಶಾಲಿ ಆಡಿಯೊ ಗುಣಮಟ್ಟವನ್ನು ಹೊಂದಿದೆ. ಅಲ್ಲದೆ TWS ವರ್ಗವನ್ನು ಇನ್ನಷ್ಟು ಉತ್ತಮಗೊಳಿಸಲಿದೆ ಎನ್ನಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಉತ್ತಮ-ಗುಣಮಟ್ಟದ ಮತ್ತು ಕೈಗೆಟುಕುವ ಪೋರ್ಟಬಲ್ ಆಡಿಯೊ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದನ್ನೆ ಆದಾರವಾಗಿಟ್ಟುಕೊಂಡು ಐಟೆಲ್‌ ತನ್ನ ಇಯರ್‌ ಪಾಡ್ಸ್‌ ಅನ್ನುಪರಿಚಯಿಸಿದೆ. ಅಲ್ಲದೆ ಭಾರತದಲ್ಲಿರುವ ತನ್ನ ನಿಷ್ಠಾವಂತ ಗ್ರಾಹಕರ ನೆಲೆಯನ್ನು ಉತ್ತಮ ಪಡಿಸಿಕೊಳ್ಳಲು ಇದು ನಿರ್ಣಾಐಕ ಹೆಜ್ಜೆ ಆಗಿದೆ ಎಂದು ಐಟೆಲ್‌ ಕಂಪೆನಿ ಸಿಇಒ ಅರಿಜೀತ್ ತಲಪಾತ್ರ ಹೇಳಿದ್ದಾರೆ.

ಇಯರ್‌ಪಾಡ್ಸ್‌

ಇನ್ನು ಈ ಇಯರ್‌ಪಾಡ್ಸ್‌ ಇತರ ವಾಯರ್‌ ಲೆಸ್ ಇಯರ್‌ಪಾಡ್‌ಗಳಂತೆಯೇ, ಈ ಐಟೆಲ್ ಐಟಿಡಬ್ಲ್ಯೂ -60 ಟ್ರೂ ವೈರ್‌ಲೆಸ್ ಇಯರ್‌ಪಾಡ್‌ಗಳು ಸಹ ಆಪಲ್‌ನ ಏರ್‌ಪಾಡ್‌ಗಳ ವಿನ್ಯಾಸ ಮಾದರಿಯನ್ನು ಹೊಂದಿದೆ.ಇವುಗಳು ದಕ್ಷತಾಶಾಸ್ತ್ರೀಯವಾಗಿ ಆರಾಮದಾಯಕವಾದ ಫಿಟ್ ನೀಡಲು ವಿನ್ಯಾಸಗೊಳಿಸಲ್ಪಟ್ಟಿವೆ. ಅಲ್ಲದೆ ಅತ್ಯುತ್ತಮ ಶ್ರವಣೇಂದ್ರಿಯ ಸಾಮರ್ಥ್ಯವನ್ನು ಹೊಂದಿವೆ ಎಂದು ಐಟೆಲ್‌ ಕಂಪನಿ ಹೇಳುತ್ತದೆ. ಆಳವಾದ ಕಡಿಮೆ-ಅಂತ್ಯದ ಧ್ವನಿ, ಸೊಂಪಾದ ಮಿಡ್‌ಗಳು ಮತ್ತು crystal-clear treble claims ಜೊತೆಗೆ 13mm ಸೌಂಡ್ ಆಡಿಯೋ ಡ್ರೈವರ್‌ಗಳನ್ನ ಹೊಂದಿದೆ.

ಐಟೆಲ್

ಇದಲ್ಲದೆ ಐಟೆಲ್ ವೈರ್‌ಲೆಸ್ ಇಯರ್‌ಪಾಡ್‌ಗಳು 35mAh ನ ಸಣ್ಣ ಬ್ಯಾಟರಿಯನ್ನು ಹೊಂದಿದ್ದು, ಇದು 2.5 ಗಂಟೆಗಳ ಮ್ಯೂಸಿಕ್‌ ಪ್ಲೇಟೈಮ್ ಮತ್ತು 3 ಗಂಟೆಗಳ ಟಾಕ್‌ಟೈಮ್ ಅನ್ನು ಒಂದೇ ಚಾರ್ಜ್‌ನಲ್ಲಿ ನೀಡುತ್ತದೆ. ಇನ್ನು ಚಾರ್ಜಿಂಗ್ ಕೇಸ್‌ ಕೂಡ ಆಪಲ್ ಏರ್‌ಪಾಡ್‌ಗಳ ಮಾದರಿಯಲ್ಲಿಯೇ ಇದೆ. ಇದು ಆರು ಮಲ್ಟಿ ಚಾರ್ಜ್‌ಗಳನ್ನು ಮತ್ತು 35 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ಖಚಿತಪಡಿಸಿಕೊಳ್ಳಲು 500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಜೊತೆಗೆ ಇಟೆಲ್ ಇಯರ್‌ಪಾಡ್ಸ್ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಇದು ಬ್ಲೂಟೂತ್ ಆವೃತ್ತಿ ವಿ 5.0 ಅನ್ನು ಹೊಂದಿದ್ದು, ಐಟೆಲ್ ವಾಯರ್‌ಲೆಸ್‌ ಇಯರ್‌ಪಾಡ್‌ಗಳಲ್ಲಿ 12 ತಿಂಗಳ ಖಾತರಿ ವಾರಂಟಿ ಹೊಂದಿದೆ.

Most Read Articles
Best Mobiles in India

English summary
The itel TWS Earpods are quite affordable at Rs 1,699. These directly compete with Realme Buds Q and Redmi Earbuds S in the sub-2K price segment.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X