itel: ಭಾರತಕ್ಕೆ ಬರ್ತಿದೆ ಅಗ್ಗದ 5G ಫೋನ್; ಟ್ರಿಪಲ್ ಕ್ಯಾಮೆರಾ ಸೆಟಪ್.. 100 ದಿನಗಳು ಡಿಸ್ಪ್ಲೇ ಬದಲಾವಣೆ ಫ್ರೀ!
ಐಟೆಲ್ ಭಾರತದಲ್ಲಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಕಂಪನಿಯು ಈಗಾಗಲೇ ತನ್ನ ಕಡಿಮೆ ಬಜೆಟ್ ಐಟೆಲ್ ಝೆನೋ 10 (Itel Zeno 10) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದನ್ನು ಕೇವಲ 5,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದೀಗ, ಕಂಪನಿಯು ತನ್ನ 'Zeno' ಸರಣಿಯ ಅಡಿಯಲ್ಲಿ ಹೊಸ ಮತ್ತು ಅಗ್ಗದ 5G ಫೋನನ್ನು ತರುತ್ತಿದೆ. ಇದು ಐಟೆಲ್ ಝೆನೋ 5G (itel Zeno 5G) ಎಂಬ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ. ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳು ಇಲ್ಲಿವೆ ನೋಡಿ.
ಐಟೆಲ್ ಝೆನೋ 5G ಸ್ಮಾರ್ಟ್‌ಫೋನ್ 10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಭಾರತಕ್ಕೆ ಬರುತ್ತಿದೆ. ಈಗಾಗಲೇ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಫೋನಿನ ಮೈಕ್ರೋ ಸೈಟ್ ಲೈವ್ ಆಗಿದೆ. ಇದರಲ್ಲಿ ಫೋನಿನ ಹೆಸರು ಮತ್ತು ಫೋಟೋವನ್ನು ಸಹ ಹಂಚಿಕೊಳ್ಳಲಾಗಿದೆ. ಪ್ರಸ್ತುತ, ಕಂಪನಿಯು ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಈ ಅಗ್ಗದ ಫೋನ್ 'ಶೀಘ್ರದಲ್ಲೇ ಬರಲಿದೆ' ಎಂದು ಬರೆಯಲಾಗಿದೆ. ಕಂಪನಿಯು ತನ್ನ ಮುಂಬರುವ ಮೊಬೈಲ್ ಅನ್ನು 'ರಿಯಲ್ 5G' ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡುವುದು ಖಚಿತವಾಗಿದೆ.

ಐಟೆಲ್ ಝೆನೋ 5G ಬೆಲೆ (ನಿರೀಕ್ಷಿತ)
ಸೋರಿಕೆ ಪ್ರಕಾರ, ಐಟೆಲ್ ಝೆನೋ 5G ಮೊಬೈಲ್ ಬೆಲೆ 10,000 ರೂ.ಗಳಿಗಿಂತ ಕಡಿಮೆ ಇರುತ್ತದೆ. ಈ ಅಗ್ಗದ 5G ಫೋನನ್ನು 9,999 ರೂ.ಗಳಿಗೆ ಮಾರಾಟಕ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಮೊಬೈಲ್ ಉಚಿತ ಸ್ಕ್ರೀನ್ ಬದಲಿಯೊಂದಿಗೆ ಬರಲಿದ್ದು, ಮೊದಲ 100 ದಿನಗಳಲ್ಲಿ ಈ ಫೋನ್ ಡಿಸ್ಪ್ಲೇಯನ್ನು ಉಚಿತವಾಗಿ ಬದಲಾಯಿಸಬಹುದು ಎಂದು ಅಮೆಜಾನ್ ಮೂಲಕ ಮಾಹಿತಿ ನೀಡಲಾಗಿದೆ.
ಐಟೆಲ್ ಝೆನೋ 5G ವೈಶಿಷ್ಟ್ಯಗಳು
ಐಟೆಲ್ ಝೆನೋ 5G ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದನ್ನು ಫೋನಿನ ಹಿಂಭಾಗದ ಫಲಕದಲ್ಲಿ ಲಂಬವಾಗಿ ಅಳವಡಿಸಲಾಗಿದೆ. ಈ ಮೊಬೈಲ್‌ನ ಡಿಸ್ಪ್ಲೇಯು 120Hz ರಿಫ್ರೆಶ್ ದರದೊಂದಿಗೆ ಬರಲಿದೆ. ಇದು ಕೇವಲ 7.8 ಮಿಮೀ ದಪ್ಪವಿರುವ ಸ್ಲಿಮ್ ಮೊಬೈಲ್ ಆಗಿದೆ. ಐಟೆಲ್ ಝೆನೋ 5G ಫೋನ್ ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಕಂಪನಿಯು 5 ವರ್ಷಗಳ ನಿರರ್ಗಳ ಅನುಭವವನ್ನು ಒದಗಿಸುವುದಾಗಿ ಹೇಳಿದೆ. ಈ ಅಗ್ಗದ 5G ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆಗೆ IP54 ರೇಟಿಂಗ್ ಸಹ ಹೊಂದಿದೆ.
ಐಟೆಲ್ ಝೀನೋ 10 ಬೆಲೆ
ಐಟೆಲ್ ಝೀನೋ 10 ಮೊಬೈಲ್ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ 3GB RAM + 64GB ಸ್ಟೋರೇಜ್ ರೂಪಾಂತರದ ಬೆಲೆ 5,999 ರೂ. ಮತ್ತು 4GB RAM + 64GB ಸ್ಟೋರೇಜ್ ವೇರಿಯಂಟ್ ಬೆಲೆ 6,499 ರೂ. ಇದೆ. ನೀವು ಅಮೆಜಾನ್‌ನಲ್ಲಿ 600 ರೂ.ಗಳವರೆಗೆ ರಿಯಾಯಿತಿಯೊಂದಿಗೆ ಈ ಫೋನನ್ನು ಖರೀದಿಸಬಹುದು.
ಐಟೆಲ್ ಝೀನೋ 10 ವೈಶಿಷ್ಟ್ಯಗಳು
ಟೆಲ್ ಝೀನೋ 10 ಸ್ಮಾರ್ಟ್‌ಫೋನ್ 6.66 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 720 x 1612 ಪಿಕ್ಸೆಲ್‌ಗಳ ರೆಸಲ್ಯೂಶನ್, 60Hz ರಿಫ್ರೆಶ್ ದರ ಹೊಂದಿದೆ. ಈ ಐಟೆಲ್ ಮೊಬೈಲ್ ಯುನಿಸಾಕ್ T603 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 8GB RAM (3GB + 5GB) ಮತ್ತು 12GB RAM (4GB + 8GB) ಹೊಂದಿದೆ.
ಟೆಲ್ ಝೀನೋ 10 ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್ಇಡಿ ಫ್ಲ್ಯಾಷ್ ಜೊತೆಗೆ 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ದ್ವಿತೀಯ ಎಐ (AI) ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ. ಈ ಅಗ್ಗದ ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಮೊಬೈಲ್ 10W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.


Click it and Unblock the Notifications