Home
ಸುದ್ದಿಜಾಲ

ಭಾರತದಲ್ಲಿ ಕೈಗೆಟುಕುವ Zeno 5G ಸ್ಮಾರ್ಟ್‌ಫೋನ್ ಬಿಡುಗಡೆ!

ಭಾರತದ ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿರುವ ಐಟೆಲ್ (itel) ಕಂಪನಿಯು, ತನ್ನ ಇತ್ತೀಚಿನ 5G ಸ್ಮಾರ್ಟ್‌ಫೋನ್ Zeno 5G ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಕೈಗೆಟುಕುವ ಬೆಲೆಯಲ್ಲಿ 5G ಸಂಪರ್ಕ ಮತ್ತು ಆಕರ್ಷಕ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಗ್ರಾಹಕರನ್ನು ತಲುಪುವ ಗುರಿಯನ್ನು ಈ ಫೋನ್ ಹೊಂದಿದ್ದು, ಮಂಗಳವಾರ ಭಾರತದಲ್ಲಿ ಬಿಡುಗಡೆಯಾದ ಈ Zeno 5G ಸ್ಮಾರ್ಟ್‌ಫೋನ್ ಬಜೆಟ್ ವಿಭಾಗದಲ್ಲಿ ಉತ್ತಮ ಆಯ್ಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹಾಗಾದರೆ, ಹೊಸ Zeno 5G ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.

Zeno 5G: ಬೆಲೆ, ಲಭ್ಯತೆ ಮತ್ತು ಬಣ್ಣಗಳು
ಭಾರತದಲ್ಲಿ ಐಟೆಲ್ Zeno 5G ಸ್ಮಾರ್ಟ್‌ಫೋನ್ 4GB RAM + 128GB ಸಂಗ್ರಹಣೆ ಮಾದರಿಯ ಬೆಲೆ ರೂ. 10,299 ಆಗಿದೆ. ಗ್ರಾಹಕರು ಪ್ರಸ್ತುತ ಅಮೆಜಾನ್ ಮೂಲಕ ಪ್ರತ್ಯೇಕವಾಗಿ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು. ಆರಂಭಿಕ ಕೊಡುಗೆಯಾಗಿ, ಗ್ರಾಹಕರು ಫೋನ್ ಖರೀದಿಸುವಾಗ ರೂ. 1,000 ಕೂಪನ್ ರಿಯಾಯಿತಿಯನ್ನು ಪಡೆಯಬಹುದು. ಈ ಐಟೆಲ್ Zeno 5G ಫೋನ್ ಕ್ಯಾಲ್ಕ್ಸ್ ಟೈಟಾನಿಯಂ (Calx Titanium), ಶ್ಯಾಡೋ ಬ್ಲ್ಯಾಕ್ (Shadow Black) ಮತ್ತು ವೇವ್ ಗ್ರೀನ್ (Wave Green) ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ, ಐಟೆಲ್ ತನ್ನ ಗ್ರಾಹಕರಿಗೆ ಒಂದು ವಿಶೇಷ ಕೊಡುಗೆಯನ್ನು ನೀಡಿದ್ದು, ಖರೀದಿಸಿದ ದಿನದಿಂದ ಮೊದಲ 100 ದಿನಗಳಲ್ಲಿ ಉಚಿತ ಸ್ಕ್ರೀನ್ ಬದಲಿ ಸೇವೆಗಳನ್ನು ಒದಗಿಸಲಿದೆ.

Zeno 5G: ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷಣಗಳು
ಐಟೆಲ್ Zeno 5G ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆಗಳಲ್ಲಿ ಅದರ ಕಾರ್ಯಕ್ಷಮತೆ ಮತ್ತು ಡಿಸ್‌ಪ್ಲೇ ಎನ್ನಬಹುದು. ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿರುವ ಈ ಹೊಸ ಐಟೆಲ್ Zeno 5G ಸ್ಮಾರ್ಟ್‌ಫೋನ್ 6.67-ಇಂಚಿನ HD+ (720x1,612 ಪಿಕ್ಸೆಲ್‌ಗಳು) IPS ಡಿಸ್ಪ್ಲೇಯನ್ನು ಹೊಂದಿದ್ದು, ಇದು 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ನೀಡುತ್ತದೆ. ಇದು ಸುಗಮ ಸ್ಕ್ರೋಲಿಂಗ್ ಮತ್ತು ಉತ್ತಮ ಗೇಮಿಂಗ್ ಅನುಭವವನ್ನು ಒದಗಿಸುತ್ತದೆ. ಡಿಸ್ಪ್ಲೇ ರಕ್ಷಣೆಗಾಗಿ ಪಾಂಡಾ MN228 ಗ್ಲಾಸ್ ಪ್ರೊಟೆಕ್ಷನ್ ಅಳವಡಿಸಲಾಗಿದೆ. ಕಾರ್ಯಕ್ಷಮತೆಗಾಗಿ, ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 SoC ಪ್ರೊಸೆಸರ್‌ನಿಂದ ಶಕ್ತಿ ಪಡೆಯುತ್ತದೆ. ಇದು 4GB LPDDR4X RAM ಮತ್ತು 128GB UFS 2.2 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ವರ್ಚುವಲ್ RAM ವಿಸ್ತರಣೆಯ ಬೆಂಬಲದೊಂದಿಗೆ, RAM ಅನ್ನು ಹೆಚ್ಚುವರಿ 4GB ವರೆಗೆ ವಿಸ್ತರಿಸಬಹುದು. ಮೈಕ್ರೊ SD ಕಾರ್ಡ್ ಬಳಸಿ ಸಂಗ್ರಹಣೆಯನ್ನು 1TB ವರೆಗೆ ವಿಸ್ತರಿಸಲು ಅವಕಾಶವಿದೆ. ಐಟೆಲ್ Zeno 5G ಇತ್ತೀಚಿನ ಆಂಡ್ರಾಯ್ಡ್ 14 (Android 14) ಆಪರೇಟಿಂಗ್ ಸಿಸ್ಟಮ್ ಅನ್ನು ಆಫ್-ದಿ-ಬಾಕ್ಸ್‌ನಲ್ಲಿ ರನ್ ಮಾಡುತ್ತದೆ. ಕಂಪನಿಯು ಫೋನ್ ಐದು ವರ್ಷಗಳ ಕಾಲ ಲ್ಯಾಗ್-ಮುಕ್ತ ಫ್ಲೂಯೆನ್ಸಿ ಅನುಭವವನ್ನು ನೀಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.

ಭಾರತದಲ್ಲಿ ಕೈಗೆಟುಕುವ Zeno 5G ಸ್ಮಾರ್ಟ್‌ಫೋನ್ ಬಿಡುಗಡೆ!

ಕ್ಯಾಮೆರಾ ವಿಭಾಗದಲ್ಲಿ, Zeno 5G ಫೋನಿನ ಹಿಂಭಾಗದಲ್ಲಿ f/1.6 ಅಪರ್ಚರ್ ಹೊಂದಿರುವ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ಲೈಟ್ ಸೆನ್ಸರ್ ಅನ್ನು ಒಳಗೊಂಡಿದೆ. ಈ ಹಿಂಭಾಗದ ಕ್ಯಾಮೆರಾ 30fps ನಲ್ಲಿ 2K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, ಫೋನ್ ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದೆ.ಇತರ ಪ್ರಮುಖ ವೈಶಿಷ್ಟ್ಯಗಳಲ್ಲಿ, Zeno 5G ಆಸ್ಕ್ AI (Ask AI) ಮತ್ತು ಐಟೆಲ್‌ನ AI ವಾಯ್ಸ್ ಅಸಿಸ್ಟೆಂಟ್ ಆದ ಐವಾನಾ (Ivana) ನಂತಹ AI ವೈಶಿಷ್ಟ್ಯಗಳನ್ನು ಹೊಂದಿದೆ. ಇದು 10W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ IP54-ರೇಟೆಡ್ ಧೂಳು ಮತ್ತು ಸ್ಪ್ಲಾಶ್-ನಿರೋಧಕ ವಿನ್ಯಾಸವನ್ನು ಹೊಂದಿದೆ. ಭದ್ರತೆಗಾಗಿ, ಫೋನ್‌ನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು IR ಬ್ಲಾಸ್ಟರ್ ಇವೆ. ಸಂಪರ್ಕ ಆಯ್ಕೆಗಳಲ್ಲಿ ಡ್ಯುಯಲ್ ನ್ಯಾನೋ ಸಿಮ್, 5G, 4G, ಬ್ಲೂಟೂತ್, ವೈ-ಫೈ, GPS ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಈ ಫೋನ್ 7.8mm ನಷ್ಟು ತೆಳ್ಳಗಿದೆ. ಒಟ್ಟಾರೆಯಾಗಿ, ಐಟೆಲ್ Zeno 5G ಕೈಗೆಟುಕುವ ಬೆಲೆಯಲ್ಲಿ 5G ಸಂಪರ್ಕ, ಉತ್ತಮ ಡಿಸ್ಪ್ಲೇ, ಡೀಸೆಂಟ್ ಕ್ಯಾಮೆರಾ ಮತ್ತು ಕೆಲವು AI ವೈಶಿಷ್ಟ್ಯಗಳನ್ನು ಒದಗಿಸುವ ಮೂಲಕ ಭಾರತದ ಬಜೆಟ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಗಮನ ಸೆಳೆಯಲು ಸಿದ್ಧವಾಗಿದೆ ಎನ್ನಬಹುದು.

Best Mobiles in India

English summary
e Itel Zeno 5G features a 6.67-inch HD+ IPS display, offering a 120Hz refresh rate and a 240Hz touch sampling rate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+