ತೆರಿಗೆ ಪಾವತಿದಾರರೇ ಗಮನಿಸಿ: ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ ತಾತ್ಕಾಲಿಕ ಸ್ಥಗಿತ!

|

ತೆರಿಗೆ ಪಾವತಿದಾರರು ಈ ಸುದ್ದಿಯನ್ನು ಓದಲೇಬೇಕು. ಏಕೆಂದರೆ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ ಜೂನ್ 6 ರವರೆಗೆ ಕಾರ್ಯನಿರ್ವಹಿಸುವುದಿಲ್ಲ. ಸದ್ಯ ಆದಾಯ ತೆರಿಗೆ ರಿಟರ್ನ್ ವೆಬ್‌ಸೈಟ್ ಅಭಿವೃದ್ಧಿಯ ಹಂತದಲ್ಲಿದೆ. ಆದರಿಂದ ಎಲ್ಲಾ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ ಅಧಿಕೃತ ವೆಬ್‌ಸೈಟ್ ಅನ್ನು ಸತತವಾಗಿ ಆರು ದಿನಗಳವರೆಗೆ ಬಳಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಆದಾಯ ತೆರಿಗೆ ಇಲಾಖೆ ಹೊಸ ಆದಾಯ ತೆರಿಗೆ ವೆಬ್‌ಸೈಟ್ ಪ್ರಾರಂಭಿಸುವುದಕ್ಕೆ ಮುಂದಾಗಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ.

ವೆಬ್‌ಸೈಟ್‌

ಹೌದು, ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ ಸದ್ಯ ಜೂನ್‌ ಒಂದರಿಂದ ಸ್ಥಗಿತವಾಗಿದೆ. ಇದು ಜೂನ್ 6 ರವರೆಗೆ ಕೂಡ ಕಾರ್ಯನಿರ್ವಹಿಸುವುದಿಲ್ಲ. ಆದ ಕಾರಣ ತೆರಿಗೆ ಪಾವತಿ ಮಾಡುವವರು ಹೊಸ ವೆಬ್‌ಸೈಟ್‌ ಪ್ರಾರಂಭವಾಗುವ ತನಕ ಕಾಯಬೇಕಿದೆ. ಆದಾಯ ಇಲಾಖೆ ಹೊಸ ವೆಬ್‌ಸೈಟ್‌ ಜಾರಿಗೊಳಿಸಲು ಮುಂದಾಗಿದ್ದು ಯಾಕೆ? ಹಾಗಾದ್ರೆ ಹೊಸ ವೆಬ್‌ಸೈಟ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೆಬ್‌ಸೈಟ್

ಐಟಿ ಇಲಾಖೆಯು ತೆರಿಗೆದಾರರಿಗೆ ತಮ್ಮ ಇ-ಫೈಲಿಂಗ್ ಕೆಲಸವನ್ನು ಅದಕ್ಕೆ ತಕ್ಕಂತೆ ಯೋಜಿಸುವಂತೆ ವಿನಂತಿಸಿತು. ಇದೇ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ಜೂನ್ 7 ರಂದು ತೆರಿಗೆ ರಿಟರ್ನ್ಸ್ ಸಲ್ಲಿಸಲು ಹೊಸ ಐಟಿಆರ್ ವೆಬ್‌ಸೈಟ್ ಅನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿದೆ. ಹೊಸ ವೆಬ್‌ಸೈಟ್‌ ಶುರುಮಾಡುವುದಾಗಿ ಆದಾಯ ತೆರಿಗೆ ಇಲಾಖೆಯ ಅಧಿಕೃತವಾಗಿ ಈಗಾಗಲೇ ಪ್ರಕಟಿಸಿದೆ, ಆದರಿಂದ ಇಲಾಖೆಯ ಅಸ್ತಿತ್ವದಲ್ಲಿರುವ ಪೋರ್ಟಲ್ www.incometaxindiaefiling.gov.in ನಲ್ಲಿ ನೀವು ಇದೀಗ ಯಾವುದೇ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಪೋರ್ಟಲ್

ಇನ್ನು ಹಳೆಯ ಪೋರ್ಟಲ್ www.incometaxindiaefiling.gov.in ನಿಂದ ಹೊಸ www.incometaxgov.in ಗೆ ಪರಿವರ್ತನೆ ಜೂನ್ 7 ರಿಂದ ಕಾರ್ಯರೂಪಕ್ಕೆ ಬರಲಿದೆ ಎಂದು ಹೇಳಲಾಗಿದೆ. ಸದ್ಯ ಹೊಸ ವೆಬ್‌ಸೈಟ್ ಲಿಂಕ್ ಅನ್ನು ಹೆಚ್ಚು ಬಳಕೆದಾರ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಹಲವಾರು ಹೊಸ ಫೀಚರ್ಸ್‌ಗಳನ್ನು ಸಹ ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ.

ಐಟಿಆರ್

ಇದು ಆದಾಯ ತೆರಿಗೆ ಇಲಾಖೆ ಪ್ರಸ್ತುತ ಐಟಿಆರ್ ಇ-ಫೈಲಿಂಗ್ ವೆಬ್‌ಸೈಟ್ ಅನ್ನು ನವೀಕರಿಸುತ್ತಿದೆ. ಆದ್ದರಿಂದ ಯಾವುದೇ ಕೆಲಸಕ್ಕಾಗಿ ನೀವು ಹೊಸ ವೆಬ್‌ಸೈಟ್ ಪ್ರಾರಂಭಿಸಲು ಜೂನ್ 7 ರವರೆಗೆ ಕಾಯಬೇಕಾಗುತ್ತದೆ. ಆದರಿಂದ ತೆರಿಗೆದಾರರು ಎಚ್ಚರಿಕೆ ಇಂದ ಇರಬೆಕು. ಇದೇ ಸಮಯದಲ್ಲಿ ನಕಲಿ ವೆಬ್‌ಸೈಟ್‌ ಲಿಂಕ್‌ಗಳು ನಿಮ್ಮ ದಾರಿ ತಪ್ಪಿಸುವ ಸಾಧ್ಯತೆ ಕೂಡ ಇದೆ. ಆದರಿಂದ ತಮ್ಮ ಎಚ್ಚರಿಕೆ ತಾವಿರುವುದು ಉತ್ತಮ.

Best Mobiles in India

Read more about:
English summary
Income Tax Return website is currently under development. The ITR website will not be operational from June 1 to June 6.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X