ಅಚ್ಚರಿ! ಒಂದೇ ಸಮಯದಲ್ಲಿ 6 ಡಿವೈಸ್‌ಗಳನ್ನು ಬೆಂಬಲಿಸಲಿದೆ ಈ ಇಯರ್‌ಬಡ್ಸ್!
ಜನಪ್ರಿಯ ಇಯರ್‌ಬಡ್ಸ್ ಬ್ರ್ಯಾಂಡ್‌ಗಳಲ್ಲಿ ಜಬ್ರಾ ಕಂಪೆನಿ ಮುಂಚೂಣಿಯಲ್ಲಿದೆ. ತನ್ನ ವಿಭಿನ್ನ ವಿನ್ಯಾಸ ಹಾಗೂ ಸ್ಟೈಲಿಶ್ ಲುಕ್‌ನಿಂದಾಗಿ ಸಾಕಷ್ಟು ಗಮನಸೆಳೆದಿದೆ. ಸದ್ಯ ಇದೀಗ ಜಬ್ರಾ ಕಂಪೆನಿ ಹೊಸ ಜಬ್ರಾ ಎಲೈಟ್ 4 ಟ್ರೂಲಿ ವಾಯರ್‌ಲೆಸ್ ಇಯರ್‌ಬಡ್ಸ್ ಅನ್ನು ಪರಿಚಯಿಸಿದೆ. ಇದು ಬ್ಲೂಟೂತ್ 5.2 ಕನೆಕ್ಟಿವಿಟಿ ಆಯ್ಕೆಯನ್ನು ಹೊಂದಿದೆ.
ಹೌದು, ಜಬ್ರಾ ಎಲೈಟ್ 4 ಟ್ರೂಲಿ ವಾಯರ್‌ಲೆಸ್ ಇಯರ್‌ಬಡ್ಸ್ ಭಾರತಕ್ಕೆ ಎಂಟ್ರಿ ನೀಡಿದೆ. ಈ ಇಯರ್‌ಬಡ್ಸ್ ಇನ್ ಇಯರ್ ಇಯರ್‌ಫೋನ್ ಆಗಿದ್ದು, ANC ಆನ್ ಇರುವಾಗ 22 ಗಂಟೆಗಳ ಪ್ಲೇ ಬ್ಯಾಕ್ ಟೈಂ ಅನ್ನು ನೀಡಲಿದೆ. ಇದಲ್ಲದೆ ANC ಆಫ್ ಮಾಡಿದಾಗ 28 ಗಂಟೆಗಳ ಪ್ಲೇ ಬ್ಯಾಕ್ ಟೈಂ ಅನ್ನು ನೀಡಲಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್ ಏನೆಲ್ಲಾ ಫೀಚರ್ಸ್ ಅನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಬ್ರಾ ಎಲೈಟ್ 4 ಇಯರ್‌ಬಡ್ಸ್ ಫೀಚರ್ಸ್ ಹೇಗಿದೆ?
ಜಬ್ರಾ ಎಲೈಟ್ 4 ಇಯರ್‌ಬಡ್ಸ್ ತನ್ನ ಸ್ಟೈಲಿಶ್ ಲುಕ್‌ನಿಂದ ಟ್ರೆಂಡ್ ಸೃಷ್ಟಿಸಿದೆ. ಈ ಇಯರ್‌ಬಡ್ಸ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP55 ರೇಟಿಂಗ್ ಅನ್ನು ಹೊಂದಿದೆ. ಇನ್ನು ಇಯರ್‌ಬಡ್ಸ್ ಸುಧಾರಿತ ಕರೆ ಸ್ಪಷ್ಟತೆಯನ್ನು ನೀಡಲು 4 ಮೈಕ್ರೊಫೋನ್ ಅನ್ನು ಹೊಂದಿದೆ. ಜೊತೆಗೆ 6 ಎಂಎಂ ಆಡಿಯೊ ಡ್ರೈವರ್‌ಗಳನ್ನು ಹೊಂದಿದೆ. ಇದರಲ್ಲಿ ಮೈಕ್ರೊಫೋನ್‌ಗಳು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಸಕ್ರಿಯಗೊಳಿಸಲಿವೆ. ಇನ್ನು ಚಾರ್ಜಿಂಗ್ ಕೇಸ್ ಹೊಂದಿರುವ ಈ ಇಯರ್‌ಬಡ್ಸ್ ತೂಕ ಕೇವಲ 33.4gm ಆಗಿದೆ.
ಜಬ್ರಾ ಎಲೈಟ್ 4 ಇಯರ್‌ಬಡ್ಸ್ ಬಳಕೆದಾರರಿಗೆ ಸೆಟ್ಟಿಂಗ್ಸ್ ಅನ್ನು ಟ್ವೀಕ್ ಮಾಡಲು ಅವಕಾಶ ನೀಡಿದೆ. ಜೊತೆಗೆ ಇತರ ಡಿವೈಸ್‌ಗಳೊಂದಿಗೆ ಕನೆಕ್ಟ್ ಮಾಡಲು ಜಬ್ರಾ ಸೌಂಡ್ ಪ್ಲಸ್ ಎಂಬ ಕಂಪ್ಯಾನಿಯನ್ ಅಪ್ಲಿಕೇಶನ್ ಅನ್ನು ಹೊಂದಿದೆ. ಇದರಿಂದ ನಿಮ್ಮ ಇಯರ್‌ಬಡ್ಸ್ ಅನ್ನು ಮೊಬೈಲ್‌ನೊಂದಿಗೆ ಕನೆಕ್ಟ್ ಮಾಡಲಿದೆ. ಇದಲ್ಲದೆ ಈ ಇಯರ್‌ಬಡ್ಸ್ ಗೂಗಲ್ ಅಸಿಸ್ಟೆಂಟ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಎರಡನ್ನು ಕೂಡ ಬೆಂಬಲಿಸಲಿದೆ.

ಇದಲ್ಲದೆ ಜಬ್ರಾ ಎಲೈಟ್ 4 ಇಯರ್‌ಬಡ್ಸ್ ಬ್ಲೂಟೂತ್ 5.2 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಸ್ಮಾರ್ಟ್‌ಫೋನ್ ಜೊತೆಗೆ ವೇಗವಾಗಿ ಕನೆಕ್ಟ್ ಮಾಡುವುದಕ್ಕಾಗಿ ಫಾಸ್ಟ್ ಪೇರ್ ಕನೆಕ್ಟಿವಿಟಿ ಫೀಚರ್ಸ್ ಅನ್ನು ಸಹ ನೀಡಲಾಗಿದೆ. ಇದರಿಂದ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ನೊಂದಿಗೆ ಇಯರ್‌ಬಡ್ಸ್ ಅನ್ನು ತ್ವರಿತವಾಗಿ ಕನೆಕ್ಟ್ ಮಾಡಬಹುದು. ಇನ್ನು ಈ ಡಿವೈಸ್ ಮಲ್ಟಿಪಾಯಿಂಟ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, ಏಕಕಾಲದಲ್ಲಿ 6 ಬ್ಲೂಟೂತ್ ಡಿವೈಸ್‌ಗಳಿಗೆ ಕನೆಕ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲ ಇದರ ಬ್ಲೂಟೂತ್ ಕನೆಕ್ಟಿವಿಟಿ ರೇಂಜ್ 33 ಅಡಿಗಳವರೆಗೆ ಇರುತ್ತದೆ ಎನ್ನಲಾಗಿದೆ.
ಜಬ್ರಾ ಎಲೈಟ್ 4ನಲ್ಲಿ ಗಮನಸೆಳೆಯುವ ಅಂಶ ಎಂದರೇ ಇದರ ಬ್ಯಾಟರಿ ಬ್ಯಾಕ್‌ಅಪ್ ಅಂತಾನೇ ಹೇಳಬಹುದು. ಇದು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಆನ್ ಮಾಡಿದಾಗ ಸಿಂಗಲ್ ಚಾರ್ಜ್‌ನಲ್ಲಿ 22 ಗಂಟೆಗಳ ಪ್ಲೇಬ್ಯಾಕ್ ಟೈಂ ನೀಡಲಿದೆ. ಹಾಗೆಯೇ ಸಿಂಗಲ್ ಚಾರ್ಜ್‌ನಲ್ಲಿ ANC ಆಪ್ ಆಗಿರುವಾಗ 28 ಗಂಟೆಗಳ ಪ್ಲೇ ಬ್ಯಾಕ್ ಟೈಂ ಅನ್ನು ನೀಡಲಿದೆ. ಇದಲ್ಲದೆ ಈ ಇಯರ್‌ಬಡ್ಸ್‌ನಲ್ಲಿ ಕ್ವಾಲ್ಕಾಮ್ ಆಪ್ಟಿಎಕ್ಸ್ ಬೆಂಬಲವನ್ನು ಸಹ ನೀಡಲಾಗಿದೆ.

ಜಬ್ರಾ ಎಲೈಟ್ 4 ಬೆಲೆ ಮತ್ತು ಲಭ್ಯತೆ
ಜಬ್ರಾ ಎಲೈಟ್ 4 ಅನ್ನು ಭಾರತದಲ್ಲಿ 9,999ರೂ. ಬೆಲೆಯನ್ನು ಹೊಂದಿದೆ. ಇದು ಡಾರ್ಕ್ ಗ್ರೇ, ನೇವಿ, ಲಿಲಾಕ್ ಮತ್ತು ಲೈಟ್ ಬೀಜ್ ಕಲರ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದನ್ನು ನೀವು ಅಮೆಜಾನ್, ಫ್ಲಿಪ್‌ಕಾರ್ಟ್, ಕ್ರೋಮಾ, ರಿಲಯನ್ಸ್ ಮತ್ತು ಜಬ್ರಾ ಅಧಿಕೃತ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಇಯರ್‌ಬಡ್ಸ್ ಇದೇ ಏಪ್ರಿಲ್ 14 ರಿಂದ ಮಾರಾಟಕ್ಕೆ ಬರಲಿದೆ.


Click it and Unblock the Notifications








