ಜಬ್ರಾ ಕಂಪೆನಿಯ ಟ್ರೂಲಿ ವೈಯಾರ್‌ಲೆಸ್‌ ಎಲೈಟ್‌75T ಲಾಂಚ್‌!

|

ಪ್ರಸ್ತುತ ಟೆಕ್‌ಲೋಕದಲ್ಲಿ ಸ್ಮಾರ್ಟ್‌ಫೋನ್‌ಗಳಿಗಿರುವಷ್ಟೇ ಬೇಡಿಕೆ ಟ್ರೂಲಿ ವೈಯಾರ್‌ಲೆಸ್‌ ಇಯರ್‌ಬಡ್‌ಗಳಿಗೂ ಇದೆ. ಈಗಾಗಲೇ ಸಾಕಷ್ಟು ಬಗೆಯ ಇಯರ್‌ಬಡ್‌ಗಳೂ ಮಾರುಕಟ್ಟೆಗ ಬಂದು ಗ್ರಾಹಕರನ್ನ ಸೆಳೆಯುತ್ತಿವೆ. ಅಷ್ಟೇ ಅಲ್ಲ ಹೊಸ ಹೊಸ ವಿನ್ಯಾಸದ ಜೊತೆಗೆ ವಿಭಿನ್ನ ಫೀಚರ್ಸ್‌ಗಳ ಇಯರ್‌ಬಡ್‌ಗಳ ಮೂಲಕ ಸಾಕಷ್ಟು ಕಂಪೆನಿಗಳು ಮಾರುಕಟ್ಟೆಯಲ್ಲಿ ತಮ್ಮದೇ ಆದ ಬೇಡಿಕೆ ಸೃಷ್ಟಿಸಿ ಕೊಂಡಿವೆ. ಇದೀಗ ಡೆನ್ಮಾರ್ಕ್‌ ಮೂಲದ ಜಬ್ರಾ ಕಂಪೆನಿ ಈಗಿನ ತಲೆಮಾರಿಗೆ ಹೊಂದಿಕೆಯಾಗುವ ನೂತನ ಟ್ರೂಲಿ ಇಯರ್‌ಬಡ್‌ಗಳನ್ನ ಲಾಂಚ್‌ ಮಾಡಿದೆ.

ಜಬ್ರಾ

ಹೌದು, ಜಬ್ರಾ ಕಂಪೆನಿ ತನ್ನ ಹೊಸ ಮಾದರಿಯ ಟ್ರೂಲಿ ವೈಯಾರ್‌ ಲೆಸ್‌ ಎಲೈಟ್‌75T ಇಯರ್‌ ಬಡ್ಸ್‌ ಅನ್ನ ಬಿಡುಗಡೆ ಮಾಡಿದೆ. ಇದು ಕಂಪೆನಿ ಬಿಡುಗಡೆ ಮಾಡಿರುವ ನಾಲ್ಕನೇ ತಲೆಮಾರಿನ ಇಯರ್‌ಬಡ್ಸ್‌್ಆಗಿದ್ದು ಅತ್ಯುತ್ತಮವಾದ ವಿನ್ಯಾಸದ ಜೊತೆಗೆ ಬಳಕೆದಾರನ ಕಿವಿಗೆ ತಕ್ಕಂತೆ ವಿನ್ಯಾಸ ಪಡಿಸಲಾಗಿದೆ. ಯುವಜನತೆಯನ್ನೇ ಆಧಾರವಾಗಿಟ್ಟುಕೊಂಡು ಈ ಇಯರ್‌ಬಡ್‌ಗಳನ್ನ ವಿನ್ಯಾಸಗೊಳಿಸಲಾಗಿದ್ದು, ಎಂತಹದ್ದೆ ಸಂದರ್ಭದಲ್ಲೂ ಇದನ್ನ ಬಳಸಬಹುದಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಎಲೈಟ್ 75T

ಇನ್ನು ಜಬ್ರಾ ಎಲೈಟ್ 75T 28ಗಂಟೆಗಳ ಬ್ಯಾಟರಿ ಅವಧಿಯನ್ನ ಹೊಂದಿದ್ದು, ಯುಎಸ್‌ಬಿ-ಸಿ ಚಾರ್ಜಿಂಗ್ ಆಯ್ಕೆಯನ್ನ ಒಳಗೊಂಡಿದೆ. ಅಲ್ಲದೆ ಬ್ಯಾಟರಿ ಇಲ್ಲದೆ 7ಗಂಟೆಗಳ ಅವಧಿಯವರೆಗೂ ಪ್ಲೇಬ್ಯಾಕ್‌ ಸಂಗೀತವನ್ನ ಆಲಿಸಬಹುದಾಗಿದೆ. ಅಲ್ಲದೆ ಕರೆಯನ್ನ ಸ್ವೀಕರಿಸುವುದಕ್ಕೆ ಮತ್ತು ಕರೆಮಾಡುವುದಕ್ಕಾಗಿ ಜಬ್ರಾ ನಾಲ್ಕು ಮೈಕ್ರೊಫೋನ್‌ಗಳನ್ನ ಹೊಂದಿದ್ದು ಎಲ್ಲಾ ಬ್ಲೂಟೂತ್-ಒಳಗೊಂಡ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಜೊತೆಗೆ ಸಂಪರ್ಕವನ್ನ ಸಾಧಿಸಬಲ್ಲದು.

ಇಯರ್‌ಬಡ್ಸ್‌

ಜೊತೆಗೆ ಜಬ್ರಾ ಎಲೈಟ್ 75T ಇಯರ್‌ಬಡ್ಸ್‌ಗಳು ಅಮೆಜಾನ್ ಅಲೆಕ್ಸಾ, ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ ಜೊತೆಗೆ ಸಂಪರ್ಕ ಸಾಧಿಸುವ ಆಯ್ಕೆಯನ್ನು ಸಹ ಹೊಂದಿದ್ದು, ಒಮ್ಮೆಗೆ ಯಾವುದಾದರೂ ಒಂದು ಆಯ್ಕೆಯನ್ನ ಮಾಡಿಕೊಳ್ಳಬಹುದಾಗಿದೆ. ಅಷ್ಟೆ ಅಲ್ಲ ಧ್ವನಿ ಆಜ್ಞೆಗಳ ಮೂಲಕ ನಿಯಂತ್ರಿಸಬಹುದಾದ ಅವಕಾಶವೂ ಸಹ ನೀಡಲಾಗಿದೆ. ಅಲ್ಲದೆ ಈ ಇಯರ್‌ಬಡ್‌ಗಳು ಐಪಿ 55-ರೇಟೆಡ್ ಪ್ರಮಾಣೀಕರಣದೊಂದಿಗೆ ಡಸ್ಟ್‌ಪ್ರೂಪ್‌, ವಾಟರ್‌ ಪ್ರೂಪ್‌ಮತ್ತು ಬಾಳಿಕೆಯಲ್ಲಿ 2 ವರ್ಷಗಳ ವಾರೆಂಟಿಯನ್ನು ಸಹ ಹೊಂದಿದೆ.

ಆವಿಷ್ಕಾರ

ಸದ್ಯ ನಾವು ನಿರಂತರ ಆವಿಷ್ಕಾರಗಳನ್ನು ಮಾಡುವ ಮೂಲಕ ಈ ಇಯರ್‌ಬಡ್‌ಗಳನ್ನ ಲಾಂಚ್‌ ಮಾಡುತ್ತಿದ್ದು ಗ್ರಾಹಕರಿಗೆ ನಿಜವಾದ ವೈರ್‌ಲೆಸ್ ಇಯರ್‌ಬಡ್ ನ ಅನುಭವವನ್ನ ಅನುಭವಿಸಲು ಅನುವು ಮಾಡಿಕೊಡುತ್ತಿದ್ದೇವೆ. ಇದು ಹೊಸ ತಲೆಮಾರಿನ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದ್ದು ಉತ್ತಮ ಅನುಭವ ನೀಡಲಿದೆ. ಸುಧಿರ್ಘ ಬಾಳಿಕೆ ಹಾಗೂ ಸುಧಾರಿತ ಮಾದರಿಯ ಇಯರ್‌ಬಡ್‌ ಇದಾಗಿದೆ ಅಂತಾ ಜಬ್ರಾ ಕಂಪೆನಿಯ ಕಂಟ್ರಿ ಮಾರ್ಕೆಟಿಂಗ್ ಮ್ಯಾನೇಜರ್ "ಅಮಿಟೇಶ್ ಪುನ್ಹಾನಿ, ಹೇಳಿದ್ದಾರೆ.

ವೈಯಾರ್‌ಲೆಸ್

ಇನ್ನು ಜಬ್ರಾ ಎಲೈಟ್‌75T ವೈಯಾರ್‌ಲೆಸ್ ಇಯರ್‌ಬಡ್‌ಗಳು ಡಿಸೆಂಬರ್ 27 ರಿಂದ ಕ್ರೋಮಾ, ಅಮೆಜಾನ್, ಫ್ಲಿಪ್‌ಕಾರ್ಟ್ ಮಳಿಗೆ, ಹಾಗೂ ಜಬ್ರಾ ಕಂಪೆನಿಯ ಮಾರಾಟ ಮಳಿಗೆಗಳಲ್ಲಿ ಮಾರಾಟವಾಗಲಿದ್ದು. ಎಲೈಟ್ 75T ಟೈಟಾನಿಯಂ ಬ್ಲ್ಯಾಕ್ ಮತ್ತು ಗೋಲ್ಡ್ ಬೀಜ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.ಈ ಇಯರ್‌ ಬಡ್ಸ್‌ಗಳ ಬೆಲೆ 15,999 ರೂ. ಆಗಿದೆ.

Most Read Articles
Best Mobiles in India

English summary
Refreshing its wireless earbuds series in India, Denmark-based Jabra, a subsidiary of GN Netcom that makes in-ear and on-ear audio wearables, on Tuesday launched Elite 75t in the country. Jabra Elite 75t are priced at Rs. 15,999. The wireless earbuds will be available via Croma, Amazon, Flipkart, and Jabra-authorised resellers, starting December 27.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more