ಜಬ್ರಾ ಎಲೈಟ್ 85T ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್ ಲಾಂಚ್!
ಜನಪ್ರಿಯ ಇಯರ್‌ಫೊನ್ ತಯಾರಕ ಜಬ್ರಾ ಸಂಸ್ಥೆ ತನ್ನ ಜಬ್ರಾ ಎಲೈಟ್ 85T ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಇಯರ್‌ಫೋನ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಹೊಂದಿದೆ. ಅಲ್ಲದೆ ಇದು ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಶಬ್ದ ಕೂಡ ಕೇಳುವಂತೆ ಹಿಯರ್ ಥ್ರೂ ಮೋಡ್ ಅನ್ನು ಸಹ ಹೊಂದಿದೆ. ಇದಲ್ಲದೆ ಈ ಇಯರ್‌ಫೋನ್ ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್ ವಾಯ್ಸ್ ಬೆಂಬಲವನ್ನು ಹೊಂದಿದೆ. ಜೊತೆಗೆ ಇದರ ಬೆಲೆ $229 (ಅಂದಾಜು ರೂ. 16,900).ಆಗಿದೆ.

ಹೌದು, ಜಬ್ರಾ ಎಲೈಟ್ ಕಂಪೆನಿ ತನ್ನ ಹೊಸ ಜಬ್ರಾ ಎಲೈಟ್ 85T ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್‌ಗಳನ್ನು ಪರಿಚಯಿಸಿದೆ. ಈ ಇಯರ್‌ಫೋನ್ 5.5 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, ANC ಆನ್ ಮಾಡಿ ಹೆಚ್ಚುವರಿ ಬ್ಯಾಟರಿ ಅವಧಿ ಪರಿಗಣಿಸಿದರೆ 25 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಅಲ್ಲದೆ ಇದು ಚಾರ್ಜಿಂಗ್ ಕೇಸ್‌ನಲ್ಲಿ ಯುಎಸ್‌ಬಿ ಟೈಪ್ ಸಿ ಫೋರ್ಟ್ ಅನ್ನು ಹೊಂದಿದ್ದು, ಕಿ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ. ಇನ್ನುಳಿದಂತೆ ಜಬ್ರಾ ಎಲೈಟ್ 85T ವಾಯರ್‌ಲೆಸ್ ಇಯರ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಬ್ರಾ ಎಲೈಟ್ 85T ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಮತ್ತು ಕರೆ ಫಂಕ್ಷನ್‌ಗಳಿಗಾಗಿ ಇದರಲ್ಲಿ ಆರು ಮೈಕ್ರೋಫೋನ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದಲ್ಲದೆ ನಾಯ್ಸ್ ಕ್ಯಾನ್ಸಲೇಶನ್ ತೀವ್ರತೆ ಮತ್ತು ಕೇಳುವ ವಿಧಾನಗಳು ಸೇರಿದಂತೆ ವಿವಿಧ ಫೀಚರ್ಸ್‌ಗಳನ್ನು ಕಸ್ಟಮೈಸ್ ಮಾಡಲು ಅನುಮತಿಸುವ ಜಾಬ್ರಾ ಸೌಂಡ್ + ಅಪ್ಲಿಕೇಶನ್ ಅನ್ನು ಸಹ ಬೆಂಬಲಿಸಲಿದೆ. ಮ್ಯೂಸಿಕ್ ಪ್ಲೇ ಟೈಂನಲ್ಲಿ ಜಬ್ರಾ ಎಲೈಟ್ 85T ಉತ್ತಮ ಅನುಭವ ನೀಡಲಿದೆ. ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯವನ್ನ ಈ ಇಯರ್‌ಫೋನ್‌ಗಳು ಹೊಂದಿವೆ.

ಸದ್ಯ ಈ ಇಯರ್‌ಫೋನ್ ಸೋನಿಯ ಇಯರ್‌ಫೊನ್‌ಗಳಿಗೆ ಸೆಡ್ಡು ಹೊಡೆಯುವ ಭರವಸೆಯನ್ನು ಸಹ ಜಬ್ರಾ ಕಂಪೆನಿ ಹೊಂದಿದೆ. ಇದೇ ಕಾರಣಕ್ಕೆ ಹೊಸ ವಿನ್ಯಾಸದ ಜೊತೆಗೆ ಹೊಸ ಸಾಫ್ಟವೇರ್ ತಂತ್ರಜ್ಞಾನವನ್ನ ಇದರಲ್ಲಿ ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ಇನ್ನು ಈ ಇಯರ್‌ಫೋನ್ 5.5 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, ANC ಆನ್ ಮಾಡಿ ಹೆಚ್ಚುವರಿ ಬ್ಯಾಟರಿ ಅವಧಿ ಪರಿಗಣಿಸಿದರೆ 25 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಜೊತೆಗೆ ಚಾರ್ಜಿಂಗ್ ಕೇಸ್‌ನಲ್ಲಿ ಯುಎಸ್‌ಬಿ ಟೈಪ್ ಸಿ ಫೋರ್ಟ್ ಅನ್ನು ಹೊಂದಿದ್ದು, ಕಿ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ.

ಇನ್ನು ಜಬ್ರಾ ಎಲೈಟ್ 85T ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್ ವಾಟರ್ ಪ್ರೂಪ್ ವ್ಯವಸ್ಥೆಯನ್ನು ಹೊಂದಿದ್ದು, ಇದಕ್ಕಾಗಿ IPX4 ರೇಟ್ ಅನ್ನು ಮಾಡಲಾಗಿದೆ. ಇದರಿಂದ ಮಳೆ, ಬೆವರು ಸಮಯದಲ್ಲಿಯೂ ಸಹ ಇಯರ್‌ಫೋನ್ ಅನ್ನು ಬಳಕೆದಾರರು ಬಳಸಬಹುದಾಗಿದೆ. ಉತ್ತಮ ಮ್ಯೂಸಿಕ್ ಅನ್ನು ಸಹ ಅನುಭವಿಸಬಹುದಾಗಿದೆ. ಇನ್ನು ಇದರ ಬೆಲೆ $229 (ಅಂದಾಜು ರೂ. 16,900)ಆಗಿದೆ.


Click it and Unblock the Notifications