ಬರಲಿದೆ ವಿಭಿನ್ನ ಫೀಚರ್ಸ್‌ನ Jabra Elite Active 75t ಇಯರ್‌ ಬಡ್‌!

|

ಇತ್ತೀಚಿನ ದಿನಗಳಲ್ಲಿ ಬಳಕೆದಾರರ ಆಶಯಕ್ಕೆ ತಕ್ಕಂತೆ ಹೊಸ ವಿನ್ಯಾಸದ ಇಯರ್‌ ಬಡ್‌ಗಳನ್ನ ಮಾರುಕಟ್ಟೆಗೆ ಲಾಂಚ್‌ ಮಾಡೋದ್ರಲ್ಲಿ ಜಬ್ರಾ ಕಂಪೆನಿ ಕೂಡ ಯಶಸ್ವಿಯಾಗಿದೆ. ಕಳೆದ ವರ್ಷ ಎಲೈಟ್ 75 ಟಿ ಇಯರ್‌ಬಡ್‌ ಅನ್ನ ಬಿಡುಗಡೆ ಮಾಡಿದ್ದ ಜಬ್ರಾ ಕಂಪೆನಿ ಇದೀಗ ಲಾಸ್ ವೇಗಾಸ್‌ನಲ್ಲಿ ಎಲೈಟ್ ಆಕ್ಟಿವ್ 75 ಟಿ ಅನ್ನು ಪರಿಚಯಿಸಲಿದೆ. ಎಲೈಟ್ ಆಕ್ಟಿವ್ 75 ಟಿ ಇಯರ್‌ಬಡ್‌ ಜೊತೆಗೆ ಎಲೈಟ್ 45 ಹೆಚ್ ಹೆಡ್‌ಫೋನ್‌ ಅನ್ನ ಸಹ ಬಿಡುಗಡೆ ಮಾಡಲಿದೆ.

ಹೌದು

ಹೌದು ಜಬ್ರಾ ಕಂಪೆನಿ ಯಾವಾಗಲೂ ಫಿಟ್‌ನೆಸ್ ಕೇಂದ್ರಿತ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳುತ್ತದೆ. ಎಲೈಟ್ ಆಕ್ಟಿವ್ 75 ಫಿಟ್‌ನೆಸ್-ಕೇಂದ್ರಿತ ನಿಜವಾದ ವೈರ್‌ಲೆಸ್ ಇಯರ್‌ಬಡ್‌ಗಳಾಗಿದ್ದು ಇದು ಫೆಬ್ರವರಿಯಿಂದ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಇದು "ಧೂಳು ಮತ್ತು ಬೆವರು ನಿರೋಧಕತೆಗೆ ಬಾಳಿಕೆ ಬರುವ ಲೇಪನ" ವನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ. ಆಕ್ಟಿವ್ ಲೈನ್ಅಪ್‌ನ ಭಾಗವಾಗಿ, ಜಬ್ರಾ ಐಪಿ 57 ಗೆ ನೀರು ಅಥವಾ ಬೆವರು ಪ್ರತಿರೋಧವನ್ನು ಕೂಡ ಹೆಚ್ಚಿಸುತ್ತಿದೆ.

ಇನ್ನು

ಇನ್ನು ಆಕ್ಟಿವ್‌ ಎಲೈಟ್ 75ಟಿ ಐಪಿ 55 ರೇಟಿಂಗ್‌ ಅನ್ನ ಹೊಂದಿದ್ದು, ಸ್ಟ್ಯಾಂಡರ್ಡ್ ಇಯರ್‌ ಬಡ್‌ ಆಗಿದೆ. ಅಲ್ಲದೆ ಜಬ್ರಾ ಎಲೈಟ್‌ ಇಯರ್‌ಬಡ್‌ ವಿನ್ಯಾಸದಲ್ಲಿ ಆಕರ್ಷಕವಾಗಿದ್ದು, ಸ್ಪರ್ಶ ಸೂಕ್ಷ್ಮ ನಿಯಂತ್ರಣಗಳನ್ನು ಹೊಂದಿವೆ. ಇಯರ್‌ಬಡ್ ಅನ್ನು ಟ್ಯಾಪ್ ಮಾಡಬಹುದು. ಇದಲ್ಲದೆ, ಒಳಬರುವ ಕರೆಗೆ ಉತ್ತರಿಸಲು ನೀವು ಸ್ಪರ್ಶ-ಸೂಕ್ಷ್ಮ ಫಲಕವನ್ನು ಟ್ಯಾಪ್ ಮಾಡಬಹುದು.

ಜೊತೆಗೆ

ಜೊತೆಗೆ ಈ ಇಯರ್‌ ಬಡ್‌ನ ಬ್ಯಾಟರ್‌ ಪ್ಯಾಕ್‌ಆಪ್‌ ಕೂಡ ಉತ್ತಮವಾಗಿದ್ದು 7.5 ಗಂಟೆಗಳ ಮತ್ತು ಒಟ್ಟು 28 ಗಂಟೆಗಳ ಅವಧಿಯವರೆಗೆ ಬಾಳಿಕೆಯನ್ನ ನೀಡುತ್ತದೆ. ಇನ್ನು ಎಲೈಟ್ ಆಕ್ಟಿವ್ 75ಟಿ ಆರು ವಿಭಿನ್ನ ಬಣ್ಣಗಳಲ್ಲಿ ಬರಲಿದ್ದು, ನೇವಿ, ಕಾಪರ್ ಬ್ಲ್ಯಾಕ್ ಮತ್ತು ಟೈಟಾನಿಯಂ ಬ್ಲ್ಯಾಕ್ ಬಣ್ಣದ ರೂಪದಲ್ಲಿ ಲಭ್ಯವಾಗಲಿದೆ. ಅಲ್ಲದೆ ಮಾರ್ಚ್‌ನಲ್ಲಿ ಕಂಪನಿಯು ಗ್ರೇ ಕಲರ್ ಆಯ್ಕೆಯನ್ನು ಸೇರಿಸಲಿದ್ದು, ಮಿಂಟ್ ಮತ್ತು ಸಿಯೆನ್ನಾ ಬಣ್ಣದ ಆಯ್ಕೆಗಳು ಏಪ್ರಿಲ್‌ನಲ್ಲಿ ಬರಲಿವೆ.

ಜಬ್ರಾ

ಸದ್ಯ ಜಬ್ರಾ ಎಲೈಟ್ ಆಕ್ಟಿವ್ 75 ಟಿ ಫೆಬ್ರವರಿಯಲ್ಲಿ $ 199 (ಅಂದಾಜು14,349ರೂ) ಬೆಲೆಗೆ ಲಭ್ಯವಿರುತ್ತದೆ. ಇನ್ನು ಎಲೈಟ್ ಆಕ್ಟಿವ್ 75ಟಿ ಜೊತೆಗೆ, ಜಾಬ್ರಾ ಕಂಪೆನಿ ಎಲೈಟ್ 45 ಹೆಚ್ ಹೆಡ್‌ಫೋನ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಎಲೈಟ್ 45 ಹೆಚ್ ಒಂದೇ ಚಾರ್ಜ್‌ನಲ್ಲಿ 40 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ. ಕೇವಲ 15 ನಿಮಿಷಗಳ ಚಾರ್ಜ್‌ನೊಂದಿಗೆ, ನೀವು 8 ಗಂಟೆಗಳ ಆಲಿಸುವ ಸಮಯವನ್ನು ಪಡೆಯಬಹುದು. ಅಲ್ಲದೆ 40 ಎಂಎಂ ಸ್ಪೀಕರ್ ಮತ್ತು ಧ್ವನಿ ಕರೆಗಳಿಗಾಗಿ ಡ್ಯುಯಲ್ ಮೈಕ್‌ ಅನ್ನು ಸಹ ಹೊಂದಿದೆ.

ಎಲೈಟ್

ಜಬ್ರಾ ಎಲೈಟ್ 45 ಹೆಚ್ ಬ್ಲೂಟೂತ್ 5.0 ಅನ್ನು ಸಹ ಬೆಂಬಲಿಸಲಿದ್ದು, ನಿಮ್ಮ ಆದ್ಯತೆಯ ಧ್ವನಿ ಸಹಾಯಕವನ್ನು ಸಕ್ರಿಯಗೊಳಿಸಲು ಮೀಸಲಾದ ಬಟನ್ ಹೊಂದಿದೆ. ನಿಮ್ಮ ಶ್ರವಣಕ್ಕೆ ತಕ್ಕಂತೆ ವೈಯಕ್ತಿಕಗೊಳಿಸಿದ ಧ್ವನಿ ಪ್ರೊಫೈಲ್‌ಗಳನ್ನು ಪರಿಚಯಿಸುವುದಾಗಿ ಕಂಪನಿ ಘೋಷಿಸಿದೆ. ಅಲ್ಲದೆ ಮೈಸೌಂಡ್ ಅಪ್ಲಿಕೇಶನ್‌ಗಾಗಿ ಫರ್ಮ್‌ವೇರ್ ಅಪ್‌ಡೇಟ್‌ನ ಭಾಗವಾಗಿ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲಾಗುತ್ತದೆ. ಎಂದು ಜಬ್ರಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಜಬ್ರಾ ಎಲೈಟ್‌45 ಹೆಚ್ ಬೆಲೆ $199(ಅಂದಾಜು 7,134 ರೂ)ಆಗಿದೆ.

Most Read Articles
Best Mobiles in India

Read more about:
English summary
At CES 2020, Jabra is announcing the Active version of its Elite 75t true wireless earbuds. The Danish company had launched Elite 75t at IFA 2019 in Berlin last year. Now, the company has introduced Elite Active 75t at CES 2020 in Las Vegas. However, it is not the only product being announced by the company. The Elite Active 75t is joined by an affordable headphones called the Elite 45h. After critical acclaim for Elite 75t, the company is pushing its product portfolio even further in this segment.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X