Home
ಸುದ್ದಿಜಾಲ

ಜಬ್ರಾ ಕಂಪೆನಿಯ ''ಎಲೈಟ್ ಆಕ್ಟಿವ್ 75t'' ಇಯರ್‌ಬಡ್ಸ್‌ ಬಿಡುಗಡೆ!

ಇತ್ತೀಚಿನ ದಿನಗಳಲ್ಲಿ ಟೆಕ್‌ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಆಡಿಯೋ ಆಕ್ಸಿಸರೀಸ್‌ಗಳಿಗೆ ಭಾರಿ ಭೇಡಿಕೆ ಇದೆ. ಇಯರ್‌ಬಡ್ಸ್‌, ಇಯರ್‌ಫೋನ್‌, ಹೆಡ್‌ಫೋನ್‌ ಸೇರಿದಂತೆ ವೈವಿಧ್ಯಮಯವಾದ ಇಯರ್‌ಫೋನ್‌ಗಳು ಲಭ್ಯವಿವೆ. ಆದರೂ ಇದೀಗ ವಾಯರ್‌ಲೆಸ್‌ ಇಯರ್‌ಬಡ್ಸ್‌, ಇಯರ್‌ಫೋನ್‌ ಗಳಿಗೆ ಉತ್ತಮ ಬೇಡಿಕೆ ಇದ್ದು,ಈಗಾಗ್ಲೆ ಹಲವಾರು ಕಂಪೆನಿಗಳ ಇಯರ್‌ಬಡ್ಸ್‌,ಇಯರ್‌ಫೋನ್‌ಗಳು ಲಭ್ಯವಿವೆ. ಇದರಲ್ಲಿ ಜಬ್ರಾ ಕಂಪೆನಿ ಕೂಡ ಒಂದಾಗಿದ್ದು, ಇದೀಗ ಹೊಸ ಮಾದರಿಯ ಇಯರ್‌ಬಡ್ಸ್‌ ಒಂದನ್ನ ಮಾರುಕಟ್ಟೆಗೆ ಪರಿಚಯಿಸಿದೆ.

ಡೆನ್ಮಾರ್ಕ್‌

ಹೌದು, ಡೆನ್ಮಾರ್ಕ್‌ ಮೂಲದ ಜಬ್ರಾ ಕಂಪೆನಿ ತನ್ನ ಹೊಸ ಮಾದರಿಯ ಜಬ್ರಾ ಎಲೈಟ್‌ ಆಕ್ಟಿವ್‌ 75t ವಾಯರ್‌ಲೆಸ್‌ ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಇನ್‌ ಇಯರ್‌ ಆಂಡ್‌ ಆನ್‌ ಇಯರ್‌ ಆಡಿಯೋ ಪರಿಕರಗಳನ್ನ ಪರಿಚಯಿಸುವಲ್ಲಿ ಜಬ್ರಾ ಕಂಪೆನಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಬಿಡುಗಡೆಯಾಗಿರುವ ಜಬ್ರಾ ಎಲೈಟ್‌ ಆಕ್ಟಿವ್‌ 75t ಇಯರ್‌ಬಡ್ಸ್‌ ಹೊಸ ವಿನ್ಯಾಸವನ್ನ ಹೊಂದಿದ್ದು, ಕೇವಲ 16,999 ರೂ.ಬೆಲೆಯನ್ನ ಹೊಂದಿದೆ.

ಜಬ್ರಾ ಎಲೈಟ್‌ ಆಕ್ಟಿವ್‌ 75t

ಜಬ್ರಾ ಎಲೈಟ್‌ ಆಕ್ಟಿವ್‌ 75t

ಜಬ್ರಾ ಎಲೈಟ್ ಆಕ್ಟಿವ್ 75t ಇಯರ್‌ಬಡ್ಸ್‌ ಇದರ ಹಿಂದಿನ ಆವೃತ್ತಿಯಾದ ಎಲೈಟ್ ಆಕ್ಟಿವ್ 65t ಗಿಂತ 22% ಚಿಕ್ಕದಾಗಿದೆ. ಇವುಗಳ ಆಪ್ಟಿಮೈಸ್ಡ್‌ ಗ್ರಿಪ್‌ಗಾಗಿ ಉತ್ತಮ ಕೋಟಿಂಗ್‌ ಲೇಯರ್‌ ಅನ್ನು ಇವುಗಳಲ್ಲಿ ಅಳವಡಿಸಲಾಗಿದೆ. ಇದಲ್ಲದೆ ಈ ಇಯರ್‌ ಬಡ್ಸ್‌ಗಳು ಧೂಳು ಮತ್ತು ಬೆವರು ನಿರೋಧಕವಾಗಿವೆ. ಅಲ್ಲದೆ 28 ಗಂಟೆಗಳವರೆಗೆ ಬೆಂಬಲಿಸುವ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ಒಂದೇ ಚಾರ್ಜ್‌ನಲ್ಲಿ ಈ ಇಯರ್‌ಬಡ್ಸ್‌ಗಳು 7.5 ಗಂಟೆಗಳ ನಿರಂತರ ಆಲಿಸುವಿಕೆಯನ್ನ ಹೊಂದಿದೆ.

ವಿನ್ಯಾಸ

ವಿನ್ಯಾಸ

ಈ ಇಯರ್‌ಬಡ್‌ಗಳು IP57 ರೇಟಿಂಗ್ ಅನ್ನು ಹೊಂದಿದ್ದು, ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನ ಹೊಂದಿದೆ. ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಗ್ರಿಪ್‌ಆಗಿ ಹೊಂದಿಕೊಳ್ಳಲಿದೆ. ನಿಮ್ಮ ವರ್ಕೌಟ್‌, ಸ್ಪೋರ್ಟ್ಸ್‌, ಸ್ವಿಮ್ಮಿಂಗ್‌ ಎಲ್ಲಾ ಸಂಧರ್ಭದಲ್ಲಿಯೂ ಈ ಇಯರ್‌ಬಡ್ಸ್‌ಗಳನ್ನ ಉಪಯೋಗಿಸಬಹುದಾಗಿದೆ. ಉತ್ತಮ ಮ್ಯೂಸಿಕ್‌ ಸೌಂಡ್‌ ಅನ್ನು ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ವಿಶೇಷತೆ

ವಿಶೇಷತೆ

ಎಲೈಟ್‌ ಆಕ್ಟಿವ್‌ 65t ಇಯರ್‌ಬಡ್ಸ್‌ಗಿಂತ ಈ ಇಯರ್‌ ಬಡ್ಸ್‌ 22% ಚಿಕ್ಕದಾಗಿರುವುದು ಇದರ ವಿಶೇಷತೆಯಾಗಿದೆ. ಅಲ್ಲದೆ ಕರೆಗಳು ಮತ್ತು ಮ್ಯೂಸಿಕ್‌ ಎರಡನ್ನು ಖುಡ ಟಚ್‌ನಲ್ಲಿಯೇ ನಿಯಂತ್ರಿಸುವ ಅವಕಾಶವನ್ನ ಇವುಗಳಲ್ಲಿ ನೀಡಲಾಗಿದೆ. ಅಷ್ಟೇ ಅಲ್ಲದೆ ಇವುಗಳಲ್ಲಿ ನಜಬ್ರಾ ಪ್ಲಸ್‌ ಸೌಂಡ್‌ ಸಿಸ್ಟಮ್‌ ಅನ್ನು ಅಳವಡಿಸಲಾಗಿದೆ ಎಂದು ಕಂಪೆನಿ ಹೇಳಿದೆ. ಇದರಿಂದಾಗಿ ಬಳಕೆದಾರನ ಕಿವಿಗೆ ತಕ್ಕಂತೆ ಮ್ಯೂಸಿಕ್‌ ಪ್ಲೇ ಸೌಂಡ್‌ ಅನ್ನು ಬದಲಾಯಿಸಿಕೊಳ್ಳುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸದ್ಯ ಜಬ್ರಾ ಎಲೈಟ್ ಆಕ್ಟಿವ್ 75t ಇಯರ್‌ ಬಡ್ಸ್‌ ಭಾರತದಲ್ಲಿ ಬಿಡುಗಡೆಯಾಗಿದ್ದು, ಇದರ ಬೆಲೆ 16,999 ರೂ ಆಗಿದ್ದು, ಇದೇ ಮಾರ್ಚ್‌ 11ರಿಂದ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತಾಣದಲ್ಲಿ ಮಾರಾಟವಾಗಲಿದೆ. ಇನ್ನು ಈ ಇಯರ್‌ಬಡ್ಸ್‌ ನ್ಯಾವಿ, ಕಾಪರ್‌ಬ್ಲ್ಯಾಕ್‌, ಟೈಟಾನಿಯಮ್‌ ಬ್ಲ್ಯಾಕ್‌, ಗ್ರೇ ಕಲರ್‌ನಲ್ಲಿ ಖರೀದಿಸಲು ಲಭ್ಯವಾಗಲಿದೆ.

Best Mobiles in India

English summary
Jabra’s latest wireless earbuds is similar to the Active 75t but with features optimised for fitness.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+