Home
ಸುದ್ದಿಜಾಲ

ಜಬ್ರಾ ಸಂಸ್ಥೆಯಿಂದ ಎವೊಲ್ವ್ 2 ಸರಣಿಯ ಮೂರು ಹೊಸ ಹೆಡ್‌ಫೋನ್‌ಗಳು ಬಿಡುಗಡೆ!

ಸದ್ಯ ಇಡೀ ಜಗತ್ತಿನಲ್ಲಿ ಕೋವಿಡ್‌-19 ನಿಂದಾಗಿ ಲಾಕ್‌ಡೌನ್‌ ಆವರಿಸಿಕೊಂಡಿದೆ. ಭಾರತವೂ ಸೇರಿದಂತೆ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್‌ ಆಗಿವೆ. ಇದೇ ಕಾರಣಕ್ಕೆ ಟೆಕ್‌ವಲಯದಲ್ಲಿ ಕೂಡ ಬಹುತೇಕ ಕಂಪೆನಿಗಳು ತಮ್ಮ ಹೊಸ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಿವೆ. ಹೆಚ್ಚಿನ ಕಂಪೆನಿಗಳು ಬಿಡುಗಡೆ ಕಾರ್ಯಕ್ರಮಗಳನ್ನ ಮುಂದೂಡುತ್ತಿದ್ದರೆ,ಇನ್ನು ಕೆಲವು ಕಂಪೆನಿಗಳು ಆನ್‌ಲೈನ್‌ ಈವೆಂಟ್‌ ಮೂಲಕ ಗ್ರಾಹಕರಿಗೆ ತಮ್ಮ ಹೊಸ ಪ್ರಾಡಕ್ಟ್‌ಗಳನ್ನ ಪರಿಚಯಿಸುತ್ತವೆ. ಆದರೂ ಕೂಡ ಲಾಕ್‌ಡೌನ್‌ ನಿಂದಾಗಿ ಕಿರಿಕಿರಿ ತಪ್ಪಿದಲ್ಲ. ಇದೀಗ ಇದೇ ಹಾದಿಯಲ್ಲಿ ಜಬ್ರಾ ಕಂಪೆನಿ ಕೂಡ ಹೆಜ್ಜೆ ಇಟ್ಟಿದ್ದು ತನ್ನ ಹೊಸ ಇಯರ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಹೌದು

ಹೌದು, ಜನಪ್ರಿಯ ಇಯರ್‌ಫೋನ್‌ ಪ್ರಾಡಕ್ಟ್‌ಗಳ ತಯಾರಕ ಜಬ್ರಾ ಕಂಪೆನಿ ತನ್ನ ಹೊಸ ಇಯರ್‌ ಹೆಡ್‌ಫೋನ್‌ಗಳ ಸರಣಿಯನ್ನ ಬಿಡುಗಡೆ ಮಾಡಿದೆ. ತನ್ನ ಜನಪ್ರಿಯ ಸರಣಿ ಎವೊಲ್ವ್ 2 ಸರಣಿಯ ಅಡಿಯಲ್ಲಿ ಮೂರು ಹೊಸ ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಸದ್ಯ ಈ ಸರಣಿಯಲ್ಲಿ ಎವೊಲ್ವ್2 85, ಎವೊಲ್ವ್2 65 ಮತ್ತು ಎವೊಲ್ವ್2 40 ಎಂಬ ಮೂರು ಹೆಡ್‌ಫೋನ್‌ಗಳನ್ನ ಪರಿಚಯಿಸಿದೆ. ಈ ಹೊಸ ಹೆಡ್‌ಫೋನ್‌ಗಳು ಕೆಲಸ ಕಾರ್ಯ ಕಚೇರಿಗಳಲ್ಲಿ ಏಕಾಗ್ರತೆ, ಫ್ಲೆಕ್ಸಿಬಿಲಿಟಿ, ಅನ್ನು ಹೆಚ್ಚಿಸುವ ಗುರಿಯನ್ನ ಹೊಂದಿವೆ ಎಂದು ಜಬ್ರಾ ಕಂಪೆನಿ ಹೇಳಿಕೊಂಡಿದೆ. ಇನ್ನು ಇವುಗಳ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಇದೀಗ

ಇನ್ನು ಇದೀಗ ಬಿಡುಗಡೆ ಆಗಿರುವ ಇಯರ್‌ಫೋನ್‌ಗಳು ಎವೊಲ್ವ್ 2 ಶ್ರೇಣಿಯಲ್ಲಿ ಈ ಮೊದಲೇ ಬಿಡುಗಡೆ ಆಗಿರುವ ಶ್ರೇಣಿಗಳಿಗಿಂತ ಉತ್ತಮವಾಗಿವೆ. ಅಲ್ಲದೆ ಮೊದಲಿಗಿಂತ ಹೆಚ್ಚಿನ ಶಬ್ದವನ್ನು ನಿರ್ಬಂಧಿಸುತ್ತದೆ ಮತ್ತು ಇತರ ವೈಶಿಷ್ಟ್ಯಗಳ ನಡುವೆ ಉತ್ತಮ ಧ್ವನಿ ಸ್ಪಷ್ಟತೆಯನ್ನು ನೀಡುತ್ತದೆ. ಇವುಗಳಲ್ಲಿ ಜಬ್ರಾ ಎವೊಲ್ವ್ 2 85 ಡಿಜಿಟಲ್ ಹೈಬ್ರಿಡ್ ಎಎನ್‌ಸಿಯನ್ನು ಹೊಂದಿದ್ದು, ಒಟ್ಟು 10 ಮೈಕ್ರೊಫೋನ್ಗಳೊಂದಿಗೆ ಒಳಗೊಂಡಿದೆ. ಇವುಗಳಲ್ಲಿ ಎರಡು ಮೈಕ್ರೋಫೋನ್‌ಗಳು ಬೂಮ್-ಆರ್ಮ್‌ನಲ್ಲಿ ಸೇರ್ಪಡೆಗೊಂಡರೆ, ಉಳಿದ ಎಂಟು ಮೈಕ್ರೋ ಫೋನ್‌ಗಳು ಇಯರ್ ಕಪ್‌ಗಳಲ್ಲಿ ಅಳವಡಿಸಲಾಗಿದೆ. ಅಲ್ಲದೆ ಈ ಎರಡೂ ಇಯರ್ ಕಪ್‌ಗಳಲ್ಲಿ 360 ಡಿಗ್ರಿ ವೀಕ್ಷಣೆಯೊಂದಿಗೆ ಸಂಯೋಜಿತ ಕಾರ್ಯನಿರತ ಬೆಳಕನ್ನು ಹೊಂದಿರುವ 40mm ಆಡಿಯೋ ಡ್ರೈವರ್‌ಗಳನ್ನು ಸಹ ನೀಡಲಾಗಿದೆ. ಅಲ್ಲದೆ ಇದು 37 ಗಂಟೆಗಳ ವೈರ್‌ಲೆಸ್ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಹೊಂದಿದೆ

ಇದಲ್ಲದೆ ಎವೊಲ್ವ್ 2 65 ಒಟ್ಟು ಮೂರು ಮೈಕ್ರೊಫೋನ್‌ಗಳನ್ನು ಹೊಂದಿದೆ, ಅವುಗಳಲ್ಲಿ ಒಂದನ್ನು ಬೂಮ್-ಆರ್ಮ್‌ನಲ್ಲಿ ಇರಿಸಲಾಗಿದೆ ಮತ್ತು ಮತ್ತೊಂದು ಬಲ ಕಿವಿಯ ಕಪ್‌ನಲ್ಲಿ ಇರಲಿದೆ. ಜೊತೆಗೆ ಈ ಇಯರ್‌ಫೋನ್‌ 37 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಹಿಂದಿನ ಶ್ರೇಣಿಗಳಿಗಿಂತ ಮೂರು ಪಟ್ಟು ಉತ್ತಮ ವಾಯರ್‌ಲೆಸ್‌ ಶ್ರೇಣಿಯನ್ನು ನೀಡುತ್ತದೆ. ಇನ್ನು ಜಬ್ರಾ ಎವೊಲ್ವ್ 2 40 ಕಾರ್ಡೆಡ್ ಹೆಡ್‌ಫೋನ್ ಉತ್ತಮ ಮಾದರಿಯ ಸೌಕರ್ಯ ಮತ್ತು ವಿಶೇಷತೆಗಳನ್ನ ಹೊಂದಿದೆ. ಅಲ್ಲದೆ ಸಂಸ್ಥೆಯು ಜಬ್ರಾ ಲಿಂಕ್ 380, ಬಿಟಿ ಅಡಾಪ್ಟರ್ ಜೊತೆಗೆ ಎವೊಲ್ವ್ 2 85 ಮತ್ತು ಎವೊಲ್ವ್ 2 65 ಅನ್ನು ನೀಡುತ್ತಿದೆ.

ಎವೊಲ್ವ್

ಇನ್ನು ಬೆಲೆಗೆ ಸಂಬಂಧಿಸಿದಂತೆ, ನೊಡುವುದಾದರೆ ಜಬ್ರಾ ಎವೊಲ್ವ್ 2 85 ಸ್ಟಿರಿಯೊ ಬೆಲೆ 55,101 ರೂ., ಎವೊಲ್ವ್ 2 65 ಸ್ಟಿರಿಯೊ ಮತ್ತು ಮೊನೊ ರೂಪಾಂತರಗಳು ಕ್ರಮವಾಗಿ 30,557 ಮತ್ತು 29,330 ರೂ. ಹಾಗೂ ಎವೊಲ್ವ್ 2 40 ಸ್ಟಿರಿಯೊ ಮತ್ತು ಮೊನೊ ಕ್ರಮವಾಗಿ 17,058 ಮತ್ತು 15,831 ರೂಗಳಲ್ಲಿ ಲಭ್ಯವಿರುತ್ತದೆ. ಈ ಹೆಡ್‌ಫೋನ್‌ಗಳು ಮೇ ತಿಂಗಳಿನಿಂದ ಜಬ್ರಾ ಅಧಿಕೃತ ಮರುಮಾರಾಟಗಾರರ ಮೂಲಕ ಮತ್ತು ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಬ್ಲ್ಯಾಕ್ ಮತ್ತು ಬೀಜ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Jabra claims these new headphones aim to make users more productive in the office environment.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+