Home
ಸುದ್ದಿಜಾಲ

ಜಬ್ರಾ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಬಿಡುಗಡೆ!..ಹಿಯರ್‌ ಥ್ರೋ ಟೆಕ್ನಾಲಜಿ ವಿಶೇಷ!

ಇಯರ್‌ಬಡ್ಸ್‌ ಮಾರುಕಟ್ಟೆಯಲ್ಲಿ ಜಬ್ರಾ ಕಂಪೆನಿಯ ಡಿವೈಸ್‌ಗಳಿಗೆ ಸಾಕಷ್ಟು ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಜಬ್ರಾ ಸಂಸ್ಥೆ ಕೂಡ ಹಲವು ಆಕರ್ಷಕ ಇಯರ್‌ಬಡ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಜಬ್ರಾ ಎಲೈಟ್‌ 5 TWS ಇಯರ್‌ಬಡ್ಸ್‌ ಲಾಂಚ್‌ ಮಾಡಿದೆ. ಇನ್ನು ಈ ಇಯರ್‌ಬಡ್ಸ್‌ ಹೈಬ್ರಿಡ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಜೊತೆಗೆ Qi ವಾಯರ್‌ಲೆಸ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಜಬ್ರಾ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಬಿಡುಗಡೆ!..ಹಿಯರ್‌ ಥ್ರೋ ಟೆಕ್ನಾಲಜಿ ವಿಶೇಷ

ಹೌದು, ಜಬ್ರಾ ಕಂಪೆನಿ ಭಾರತದಲ್ಲಿ ಹೊಸ ಎಲೈಟ್‌ 5 TWS ಇಯರ್‌ಬಡ್ಸ್‌ ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್‌ ಹಿಯರ್ ಥ್ರೂ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದರಿಂದ ಇಯರ್‌ಬಡ್ಸ್‌ ತೆಗೆಯದೇ ಸುತ್ತಮುತ್ತಲಿನ ಶಬ್ದಗಳನ್ನು ಕೇಳುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ ಜಬ್ರಾ ಎಲೈಟ್‌ 5 TWS ಇಯರ್‌ಬಡ್ಸ್‌ ಕ್ವಾಲ್ಕಾಮ್‌ QCC3050 ಬ್ಲೂಟೂತ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ವಿಶೇಷತೆ ಏನು? ಇದರ ಕಾರ್ಯನಿರ್ವಹಣೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಬ್ರಾ ಎಲೈಟ್‌ 5 ಡಿಸೈನ್‌ ಹೇಗಿದೆ?

ಜಬ್ರಾ ಎಲೈಟ್‌ 5 ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ ಹೊಸ ಮಾದರಿಯ ವಿನ್ಯಾಸವನ್ನು ಪಡೆದುಕೊಂಡಿವೆ. ಈ ಇಯರ್‌ಬಡ್ಸ್‌ಗಳು ಹೈಬ್ರಿಡ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಹೊಂದಿವೆ. ಇದು ಇಯರ್‌ಬಡ್ಸ್‌ನಲ್ಲಿ ರಿಯಾಕ್ಷನ್‌ ಮೈಕ್ರೋಫೋನ್‌ಗಳು (ಒಳಭಾಗದಲ್ಲಿ) ಮತ್ತು ಫೀಡ್‌ಫಾರ್ವರ್ಡ್ ಮೈಕ್ರೊಫೋನ್‌ಗಳು (ಹೊರಭಾಗದಲ್ಲಿ) ಇರುವ ಹೆಚ್ಚಿನ ಬ್ಯಾಕ್‌ಗ್ರೌಂಡ್‌ ಸೌಂಡ್‌ ಅನ್ನು ಕ್ಯಾನ್ಸಲ್‌ ಮಾಡಲಿದೆ. ಆದರೆ ನೀವು ಕಿವಿಯಲ್ಲಿ ಇಯರ್‌ಬಡ್ಸ್‌ ಅನ್ನು ಹೇಗೆ ಇರಿಸುತ್ತಿರಿ ಎಂಬುದರ ಮೇಲೆ ANC ಕಡಿಮೆ ಸಂವೇದನಾಶೀಲವಾಗಿರುತ್ತದೆ.

ಜಬ್ರಾ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಬಿಡುಗಡೆ!..ಹಿಯರ್‌ ಥ್ರೋ ಟೆಕ್ನಾಲಜಿ ವಿಶೇಷ

ಜಬ್ರಾ ಎಲೈಟ್‌ 5 ವಿಶೇಷತೆ ಏನು?

ಇನ್ನು ಈ ಇಯರ್‌ಬಡ್ಸ್‌ ಮತ್ತೊಂದು ವಿಶೇಷತೆ ಎಂದರೆ ಹಿಯರ್‌ ಥ್ರೋ ಟೆಕ್ನಾಲಜಿಗೆ ಬೆಂಬಲಿಸುವುದು. ಇದರಿಂದ ನೀವು ಇಯರ್‌ಬಡ್ಸ್‌ಗಳನ್ನು ತೆಗೆದುಹಾಕದೆಯೇ ಸುತ್ತಮುತ್ತಲಿನ ಶಬ್ದಗಳನ್ನು ಕೇಳಬಹುದು. ಅಂದರೆ ಇದು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಹೊಂದಿದ್ದರು ಸಹ ಹಿಯರ್‌ ಥ್ರೋ ಮೂಲಕ ಸುತ್ತಲಿನ ಶಬ್ದವನ್ನು ಆಲಿಸಬಹುದಾಗಿದೆ. ಇದಲ್ಲದೆ ಈ ಇಯರ್‌ಬಡ್ಸ್‌ ಕ್ವಾಲ್ಕಾಮ್‌ QCC3050 ಬ್ಲೂಟೂತ್ ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸಲಿದ್ದು, 6-mic ಸೆಟಪ್‌ನೊಂದಿಗೆ ಬರುತ್ತದೆ.

ಜಬ್ರಾ ಎಲೈಟ್‌ 5 ಫೀಚರ್ಸ್‌ ಹೇಗಿದೆ?

ಜಬ್ರಾ ಎಲೈಟ್‌ 5 ಇಯರ್‌ಬಡ್ಸ್‌ 6mm ಸ್ಪೀಕರ್‌ಗಳನ್ನು ಹೊಂದಿದೆ. ಇದು ಕ್ವಾಲ್ಕಾಮ್‌ aptX ಆಡಿಯೊಗೆ ಬೆಂಬಲವನ್ನು ನೀಡಲಿದೆ. ಜೊತೆಗೆ ಈ ಇಯರ್‌ಬಡ್ಸ್‌ ಗೂಗಲ್ ಫಾಸ್ಟ್ ಪೇರ್ ಮತ್ತು ಮೈಕ್ರೋಸಾಫ್ಟ್ ಸ್ವಿಫ್ಟ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದರಿಂದ ಇಯರ್‌ಬಡ್ಸ್‌ ಅನ್ನು ವೇಗವಾಗಿ ಕನೆಕ್ಟ್‌ ಮಾಡಲು ಸಾಧ್ಯವಾಗಲಿದೆ. ಇದಲ್ಲದೆ TWS AAC ಮತ್ತು SBC ಕೋಡೆಕ್‌ಗಳೊಂದಿಗೆ ಗೂಗಲ್‌ ಅಸಿಸ್ಟೆಂಟ್‌ ಮತ್ತು ಅಮೆಜಾನ್‌ ಅಲೆಕ್ಸಾವನ್ನು ಕೂಡ ಬೆಂಬಲಿಸಲಿದೆ.

ಜಬ್ರಾ ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಬಿಡುಗಡೆ!..ಹಿಯರ್‌ ಥ್ರೋ ಟೆಕ್ನಾಲಜಿ ವಿಶೇಷ

ಜಬ್ರಾ ಎಲೈಟ್‌ 5 ಪ್ಲೇ ಬ್ಯಾಕ್‌ ಟೈಂ ಎಷ್ಟಿದೆ?

ಇನ್ನು ಬ್ಲೂಟೂತ್ ಮಲ್ಟಿಪಾಯಿಂಟ್ ಅನ್ನು ಬಳಸಿಕೊಂಡು ಏಕಕಾಲದಲ್ಲಿ ಎರಡು ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಲು ಸಾಧ್ಯವಾಗಲಿದೆ. ಇದು ಬ್ಲೂಟೂತ್ 5.2 ಆವೃತ್ತಿಯನ್ನು ಬೆಂಬಲಿಸಲಿದೆ. ಇದಲ್ಲದೆ ಇಯರ್‌ಬಡ್ಸ್‌ IP55 ರೇಟಿಂಗ್ ಅನ್ನು ಹೊಂದಿದ್ದು, ಒಟ್ಟು 28 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ನೀಡಲಿದೆ. ಆದರೆ ANC ಆಕ್ಟಿವ್‌ ಮಾಡಿದ ಸಮಯದಲ್ಲಿ 7 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ನೀಡಲಿದೆ. ಇದು 10 ನಿಮಿಷಗಳ ಚಾರ್ಜಿಂಗ್‌ನಲ್ಲಿ ಸುಮಾರು ಒಂದು ಗಂಟೆಯ ಪ್ಲೇಬ್ಯಾಕ್ ಟೈಂ ಒದಗಿಸಲಿದೆ. ಜೊತೆಗೆ, ನೀವು ಜಬ್ರಾ ಸೌಂಡ್‌ ಪ್ಲಸ್‌ ಅಪ್ಲಿಕೇಶನ್ ಮೂಲಕ EQ ಸೆಟ್ಟಿಂಗ್ಸ್‌ ಅನ್ನು ಕಸ್ಟಮೈಸ್ ಮಾಡಬಹುದಾಗಿದೆ. ಹಾಗೆಯೇ Spotify ಟ್ಯಾಪ್ ಪ್ಲೇಬ್ಯಾಕ್ ಅನ್ನು ಬಳಸಬಹುದು ಎಂದು ವರದಿಯಾಗಿದೆ.

ಜಬ್ರಾ ಎಲೈಟ್‌ 5 ಬೆಲೆ ಮತ್ತು ಲಭ್ಯತೆ

ಜಬ್ರಾ ಎಲೈಟ್‌ 5 ಇಯರ್‌ಬಡ್ಸ್‌ ಭಾರತದಲ್ಲಿ 14,999ರೂ. ಬೆಲೆಯನ್ನು ಹೊಂದಿದೆ. ಇದು ಫೆಬ್ರವರಿ 10 ರಿಂದ ಅಮೆಜಾನ್ ಇಂಡಿಯಾದ ಮೂಲಕ ಸೇಲ್‌ ಆಗಲಿದ್ದು, ಟೈಟಾನಿಯಂ ಕಪ್ಪು ಮತ್ತು ಗೋಲ್ಡ್ ಬೀಜ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Jabra Elite 5 comes with the Qualcomm QCC3050 Bluetooth chipset and a 6-mic setup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+