ಅಲಿಬಾಬಾ ಸ್ಥಾಪಕ 'ಜಾಕ್‌ ಮಾ' ನಿವೃತ್ತಿ!..ಸಾಮಾಜ್ಯ ಕಟ್ಟಿದ ನಾಯಕನಿಗೆ ವಿಶ್ವವೇ ಸಲಾಮ್!

|

ಚೀನಾದ ಜಾಗತಿಕ ದೈತ್ಯ ಇ-ಕಾಮರ್ಸ್ ಕಂಪನಿ ಅಲಿಬಾಬಾ ಸಮೂಹದ ಸ್ಥಾಪಕರಾದ, ಕೋಟ್ಯಧಿಪತಿ ಹಾಗೂ ಚೀನಾದ ಅತ್ಯಂತ ಗೌರವಾನ್ವಿತ ಉದ್ಯಮಿ 'ಜಾಕ್‌ ಮಾ' ಅವರು ನಿವೃತ್ತಿ ತೆಗೆದುಕೊಂಡಿದ್ದಾರೆ. ತಮ್ಮ 55ನೆ ಜನ್ಮದಿನಾಚರಣೆ ದಿನದಂದು ಈ ಮೊದಲೇ ಅವರು ಘೋಷಿಸಿದಂತೆ, ಈ ಮಂಗಳವಾರದಂದು ಸೇವಾ ನಿವೃತ್ತಿ ತೆಗೆದುಕೊಂಡಿದ್ದಾರೆ. 20 ವರ್ಷಗಳ ಕಾಲದಲ್ಲಿ ಅಲಿಬಾಬಾ ಕಂಪೆನಿಯನ್ನು ವಿಶ್ವಮಟ್ಟದಲ್ಲಿ ಉತ್ತುಂಗಕ್ಕೇರಿಸಿದ್ದ ಅವರು ನಿವೃತ್ತಿ ನಂತರವೂ ಕಂಪನಿಯ ಆಡಳಿತ ಮಂಡಳಿಯ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.

30ಕ್ಕೂ ಕಂಪನಿಗಳು ನಿರಾಕರಿಸಿದ್ದ 'ಜಾಕ್‌ ಮಾ'

ಕೆಎಫ್​ಸಿ ಸೇರಿ ಸೇರಿದಂತೆ 30ಕ್ಕೂ ಕಂಪನಿಗಳು ನಿರಾಕರಿಸಿದ್ದ 'ಜಾಕ್‌ ಮಾ' ಅವರು ಚೀನಾದ ಬಡ ಕುಟುಂಬ ಒಂದರಲ್ಲಿ ಜನಿಸಿದ್ದರು. ಆದರೆ, ಚೀನಾದಲ್ಲಿ ಆನ್‌ಲೈನ್‌ ರಿಟೇಲ್ ವಹಿವಾಟಿನ ಉತ್ಕರ್ಷಕ್ಕೆ ಕಾರಣರಾಗಿದ್ದರು. ಇಲ್ಲಿಯವರೆಗೆ ₹ 2.73 ಲಕ್ಷ ಕೋಟಿ ಸಂಪತ್ತಿನ ಒಡೆಯರಾಗಿದ್ದ ಇವರನ್ನು ಫೋರ್ಬ್ಸ್‌ ನಿಯತಕಾಲಿಕೆಯು ಕಳೆದ ವರ್ಷ ಚೀನಾದ ಅತ್ಯಂತ ಸಿರಿವಂತ ಉದ್ಯಮಿ ಎಂದು ಗುರುತಿಸಿತ್ತು. ಇದೀಗ ಅಮೆರಿಕ ಮತ್ತು ಚೀನಾ ವಾಣಿಜ್ಯ ಸಮರದ ಕಾರಣಕ್ಕೆ ಅನಿಶ್ಚಿತತೆ ಎದುರಿಸುತ್ತಿರುವ ಸಂದರ್ಭದಲ್ಲೇ ಅವರು ಪದತ್ಯಾಗ ಮಾಡಿದ್ದಾರೆ.

ಜೀವನವೇ ಒಂದು ರೋಚಕ ಕಥೆ

ಕೆಎಫ್​ಸಿ ಸೇರಿದಂತೆ 30ಕ್ಕೂ ಕಂಪನಿಗಳು ನಿರಾಕರಿಸಿದ್ದ ಜಾಕ್​ ಮಾ ಅವರ ಜೀವನವೇ ಒಂದು ರೋಚಕ ಕಥೆಯಾಗಿತ್ತು. ಇಂಗ್ಲಿಷ್‌ ಶಿಕ್ಷಕರಾಗಿದ್ದ ಜಾಕ್‌ ಮಾ 1999ರಲ್ಲಿ ಅಲಿಬಾಬಾ ಕಂಪನಿ ಸ್ಥಾಪಿಸಿದ್ದರು. ಆನಂತರ ಚೀನಾದ ಮಾರುಕಟ್ಟೆಯಲ್ಲಿ ಉತ್ತುಂಗಕ್ಕೇರಿತ್ತು. ಆನ್‌ಲೈನ್‌ ಬ್ಯಾಂಕಿಂಗ್‌, ಮನರಂಜನೆ, ಕ್ಲೌಡ್ ಕಂಪ್ಯೂಟಿಂಗ್ ವಹಿವಾಟುಗಳ ಮೂಲಕ ವಿಶ್ವಮಟ್ಟದ ಸಂಸ್ಥೆಯನ್ನು ಕಟ್ಟಿದ ಜಾಕ್‌ ಮಾ ಅವರು ವಿಶ್ವದಾದ್ಯಂತ ಮನೆಮಾತಾಗಿದ್ದರು. ಹಾಗಾದರೆ, ಜಾಕ್‌ ಮಾ ಅವರ ಜೀವನದ ರೋಚಕ ಕಥೆ ಹೇಗಿತ್ತು ಎಂಬುದನ್ನು ನೋಡೋಣ ಬನ್ನಿ.

ಈತನ ಜೀವನವೇ ಒಂದು ರೋಚಕ ಕಥೆ

ಈತನ ಜೀವನವೇ ಒಂದು ರೋಚಕ ಕಥೆ

ತನ್ನ ಇಂಗ್ಲೀಷ್ ಭಾಷಾಜ್ಞಾನ ಮತ್ತು ಉದ್ದಿಮೆಯ ಗುಣಗಳಿಂದಲೇ ಚೀನಾದ ನಂಬರ್ ಒನ್ ಶ್ರೀಮಂತನಾಗಿ ಬೆಳೆದುನಿಂತ. ವಿಶ್ವದ ಟಾಪ್ ಇ-ಕಾಮರ್ಸ್ ಕಂಪೆನಿಯೊಂದನ್ನು ಕಟ್ಟಿ ಬೆಳೆಸಿದ ಜಾಕ್ ಮಾ ಬಗ್ಗೆ ಹೇಳುತ್ತಾ ಹೋದರೆ ಅವನ ಜೀವನವೇ ಒಂದು ರೋಚಕ ಕಥೆ. ಆತ್ಮವಿಶ್ವಸವೊಂದಿದ್ದರೆ ಒಬ್ಬ ವ್ಯಕ್ತಿ ಏನೆಲ್ಲಾ ಸಾಧಿಸಬಹುದು ಎಂಬುದನ್ನು ಇವನೇ ಉದಾಹರಣೆ.

ಮಾ ಯುನ್ ಬದಲಾಗಿ ಜಾಕ್ ಮಾ

ಮಾ ಯುನ್ ಬದಲಾಗಿ ಜಾಕ್ ಮಾ

ಅವನ ಮೊದಲ ಹೆಸರು ಮಾ ಯುನ್ ಎಂದು. ಆದರೆ, ಅವನು ಇಂಗ್ಲೀಷ್ ಕಲಿಯಲು ಪ್ರವಾಸಿಗರ ಬಳಿ ತೆರಳುತ್ತಿದ್ದಾಗ ಹಲವರು ಮಾ ಯುನ್ ಎಂಬ ಹೆಸರನ್ನು ಉಚ್ಚರಿಸಲು ಕಷ್ಟವಾಗಿ ಜಾಕ್ ಎಂದು ಕರೆಯಲು ಪ್ರಾರಂಭಿಸಿದರು. ನಂತರ ಜಾಕ್ ಮಾ ಎಂಬ ಹೆಸರೇ ಅವನಿಗೆ ಫೈನಲ್ ಆಯಿತು.

ಜಾಕ್ ಮಾ ಬಾಲ್ಯ ಹೀಗಿತ್ತು.

ಜಾಕ್ ಮಾ ಬಾಲ್ಯ ಹೀಗಿತ್ತು.

ಬಡಕುಟುಂಬದಲ್ಲಿ ಹುಟ್ಟಿ ಹನ್ನೆರಡರ ಪೋರ ಮಾ ಯುನ್‌ಗೆ ಇಂಗ್ಲಿಷ್ ಕಲಿಯುವ ಆಸೆ ಹೆಚ್ಚಿತ್ತು. ಹಾಗಾಗಿ, ತನ್ನೂರಿನ ಹತ್ತಿರದ ನಗರವೊಂದಕ್ಕೆ ಆತ ನಲವತ್ತು ನಿಮಿಷಗಳ ಕಾಲ ಸೈಕಲ್ ತುಳಿದುಕೊಂಡು ಬರುತ್ತಿದ್ದ. ಅಲ್ಲಿಗೆ ಬರುತ್ತಿದ್ದ ವಿದೇಶಿ ಯಾತ್ರಿಗಳಿಗೆ ಹಣಪಡೆಯದೇ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದ. ಇದೇ ಅವನನ್ನು ಇಷ್ಟು ಎತ್ತರಕ್ಕೆ ತಂದುನಿಲ್ಲಿಸಿತು.

ಇಂಗ್ಲೀಷ್ ಪದವಿ ಗಳಿಸಿದ.

ಜಾಕ್ ಮಾಗೆ ಇಂಗ್ಲೀಷ್ ಕಲಿಯುವ ಕನಸಿತ್ತು. ಅದರಂತೆಯೇ ಜಾಕ್ ಮಾ ಇಂಗ್ಲಿಷ್​ನಲ್ಲಿ ಪದವಿ ಪಡೆದ. ಇಂಗ್ಲಿಷ್​ನಲ್ಲಿ ಪದವಿ ಪಡೆದ ನಂತರ ಕಾಲೇಜೊಂದರಲ್ಲಿ ಕೆಲಸ ಸಿಕ್ಕಿತು. ರಾತ್ರಿ ತರಗತಿಗಳನ್ನೂ ತೆಗೆದುಕೊಳ್ಳುತ್ತಿದ್ದ ಜಾಕ್ ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುಕೊಡುವ ಕೆಲಸ ಮಾಡುತ್ತಿದ್ದ.

ರೋಡಿನಲ್ಲಿ ಹೂ ಮಾರುತ್ತಿದ್ದ.

ಜಾಕ್ ಮಾಗೆ ಇಂಗ್ಲೀಷ್ ಪಾಠ ಹೇಳಿಕೊಡುವುದು ಶಾಶ್ವತವಾದ ಕೆಲಸವೇನು ಆಗಿರಲಿಲ್ಲ. ಮತ್ತು ಆದಾಯವಿಲ್ಲದ ಬಳಲಿದ್ದ. ನಂತರ ಜೀವನ ನಿರ್ವಹಣೆಗಾಗಿ ಜಾಕ್ ರಸ್ತೆಯ ಮೇಲೆ ಪುಸ್ತಕ, ಹೂವು, ಬಟ್ಟೆ ಎಲ್ಲವನ್ನೂ ಮಾರಾಟ ಮಾಡಿದ್ದನೆಂದರೆ ಅಂದು ಜಾಕ್ ಮಾ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಊಹಿಸಬಹುದು.

ಅಮೆರಿಕಾಕ್ಕೆ ತೆರಳುವ ಆಫರ್.

ಮೊದಲೇ ಹೇಳಿದಂತೆ ಜಾಕ್‌ಮಾನ ಇಂಗ್ಲೀಷ್ ಕಲಿಕೆಯೇ ಅವನನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿತು ಎನ್ನಬಹುದು. 1995ರಲ್ಲಿ ಅಮೆರಿಕದ ಹೂಡಿಕೆದಾರನೊಬ್ಬನಿಗೆ ಭಾಷಾಂತರಕಾರನಾಗಿ ಜಾಕ್ ಅಮೆರಿಕಕ್ಕೆ ಕಳುಹಿಸಲ್ಪಟ್ಟ. ಜಾಕ್ ಇಂಗ್ಲಿಷ್​ನಲ್ಲಿ ಪರಿಣಿತನೇ ಹೊರತು ಕಂಪ್ಯೂಟರ್​ನಲ್ಲ. ಹಾಗಾಗಿ, ಅವನು ಅಲ್ಲಿ ಕಂಪ್ಯೂಟರ್ ಭವಿಷ್ಯವನ್ನು ತಿಳಿದುಕೊಂಡನು.

ಇಂಟರ್‌ನೆಟ್ ತಲೆಕೆಡಿಸಿತು.

ಇಂಟರ್​ನೆಟ್​ನಲ್ಲಿ ಶಬ್ದವೊಂದನ್ನು ಹುಡುಕುವಾಗ ಚೀನಾಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲದಿರುವುದು ಆತನ ಗಮನಕ್ಕೆ ಬಂತು. ಜಾಕ್​ಗೆ ಆ ಕ್ಷಣವೇ ತನ್ನ ಮುಂದಿನ ಹಾದಿ ಗೋಚರಿಸಿತು!ಅಂತರ್ಜಾಲದ ಅಪಾರ ಸಾಮರ್ಥ್ಯದ ಬಗ್ಗೆ ನಂಬಿಕೆ ಮೂಡಿದ್ದರಿಂದ ಇಂಟರ್‌ನೆಟ್ ಅವನ ತಲೆಕೆಡಿಸಿತು.

ಇ-ಕಾಮರ್ಸ್ ಸಂಸ್ಥೆ ಶುರು.

‘ನಾವೊಂದು ಐತಿಹಾಸಿಕ ಇ-ಕಾಮರ್ಸ್ ಕಂಪನಿಯನ್ನು ಸ್ಥಾಪಿಸಲಿದ್ದೇವೆ. ಆ ಇ-ಕಾಮರ್ಸ್ ಸಂಸ್ಥೆ ಕನಿಷ್ಠ 100 ವರ್ಷಗಳ ಕಾಲ ಅದು ಬಾಳಬೇಕು. ವಿಶ್ವದ ಅಂತರ್ಜಾಲ ಸೈಟ್​ಗಳಲ್ಲಿ ಮೊದಲ ಹತ್ತರೊಳಗಿರಬೇಕು ಎಂದು ಹೇಳಿದ. ಅದೇ ರೀತಿ ವಿಶ್ವದ ಟಾಪ್ 10 ಅಂತರ್ಜಾಲ ಸೈಟ್‌ಗಳಲ್ಲಿ ಒಂದಾದ ಅಲಿಬಾಬ.ಕಾಮ್ ಅನ್ನು ಜಾಕ್ ಮಾ ರೂಪಿಸಿದ.

ಚೀನಾದಲ್ಲಿ ಅಲಿಬಾಬ.

ಈವರೆಗೂ ಹಲವರಿಗೆ ಪ್ರರ್ಶನೆಯಾಗಿಯೇ ಉಳಿದಿರುವುದು ಚೀನಾದಲ್ಲಿ ಅಲಿಬಾಬ ಎಂಬ ಹೆಸರು ಬಂದಿದ್ದೇಗೆ ಎಂಬುದು. ಆದರೆ, ನಿಮಗೆ ಗೊತ್ತಾ? ಜಾಕ್ ಈ ಹೆಸರನ್ನು ಕಂಪನಿಗೆ ಇಟ್ಟ ಉದ್ದೇಶವೆಂದರೆ ಅರೇಬಿಯನ್ ನೈಟ್ಸ್​ನಲ್ಲಿ ಬರುವ ಅಲಿಬಾಬನ ಹೆಸರು ಜಗತ್ತಿನ ಜನರೆಲ್ಲರಿಗೂ ತೀರಾ ಪರಿಚಿತ ಎನ್ನುವುದು! ವಿವಿಧ ದೇಶಗಳ 30 ಜನರನ್ನು ನಿಮಗೆ ಅಲಿಬಾಬಾ ಗೊತ್ತೇ ಎಂದು ಕೇಳಿದಾಗ ಎಲ್ಲರೂ ಗೊತ್ತಿದೆ ಎಂದೇ ಹೇಳಿದ್ದರಂತೆ.

ಅಲಿಬಾಬ.ಕಾಮ್!

18 ಜನರ ಟೀಮ್ ತಮ್ಮ ಉಳಿತಾಯದ 60,000 ಡಾಲರ್​ಗಳನ್ನು ಕೂಡಿಸಿದ ನಂತರ ಜಾಕ್ ಮಾ ನೇತೃತ್ವದಲ್ಲಿ 1999ರಲ್ಲಿ ಅಲಿಬಾಬ.ಕಾಮ್ ಶುರುವಾಯಿತು. ಅಲಿಬಾಬಾ.ಕಾಮ್‌ನಲ್ಲಿ ಮಾರಾಟಗಾರನೊಬ್ಬ ಆನ್‌ಲೈನ್ ಮೂಲಕ ಎಕೆ 47 ಅನ್ನು ಮಾರಾಟ ಮಾಡಲು ಹೊರಟಿದ್ದು ನೆಗೆಟಿವ್ ಪ್ರಚಾರವಾದರೂ ಕಂಪೆನಿ ಹೆಸರು ನಿಧಾನಕ್ಕೆ ಬೆಳೆಯುತ್ತಾ ಹೋಯಿತು.

ಹಿಂದಿರುಗಿ ನೋಡಲೇ ಇಲ್ಲ.

2000ದ ಹೊತ್ತಿಗೆ ಅಲಿಬಾಬಾದಲ್ಲಿ 25 ಮಿಲಿಯನ್​ಗಿಂತ ಹೆಚ್ಚು ಹೂಡಿಕೆಯಾಗಿತ್ತು. ಅಲ್ಲಿಂದ ಮುಂದೆ ಜಾಕ್ ಮತ್ತು ಸ್ನೇಹಿತರು ಹಿಂದಿರುಗಿ ನೋಡಲೇ ಇಲ್ಲ. ಇಂದು ಅಲಿಬಾಬಾ, ವಾಲ್​ವಾರ್ಟ್ ಅನ್ನೂ ಹಿಂದಿಕ್ಕಿ 200ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯನಿರ್ವಹಿಸುವ ಜಗತ್ತಿನ ಅತೀ ದೊಡ್ಡ ರೀಟೇಲರ್ ಕಂಪನಿಯಾಗಿದೆ 2017ರಲ್ಲಿ ಅಲಿಬಾಬಾದ ಮಾರುಕಟ್ಟೆ ಮೌಲ್ಯ 360 ಬಿಲಿಯನ್ ಅಮೆರಿಕನ್ ಡಾಲರ್​ಗಳು ಎಂದರೆ ನೀವು ನಂಬಲೇಬೇಕು.

Best Mobiles in India

English summary
Jack Ma officially retires as Alibaba's chairman. Jack Ma stepped down as Alibaba's chairman. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X