Subscribe to Gizbot

ಜಗದೀಶ್ ಶೆಟ್ಟರ ವೆಬ್ಸೈಟ್: ಒಂದು ಪರಿಚಯ

Posted By: Varun
ಜಗದೀಶ್ ಶೆಟ್ಟರ ವೆಬ್ಸೈಟ್: ಒಂದು ಪರಿಚಯ

ರಾಜ್ಯದ ನೂತನ ಮುಖ್ಯ ಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ, ಉತ್ತರ ಕರ್ನಾಟಕದ ಪ್ರಭಾವಿ ಬಿಜೆಪಿನಾಯಕ ಜಗದೀಶ್ ಶೆಟ್ಟರ್, ತಮ್ಮದೇ ಆದ ಸರಲ ವೆಬ್ಸೈಟ್ ಅನ್ನು ಹೊಂದಿದ್ದಾರೆ.

ಅವರಷ್ಟೇ ಸರಳವಾದ ವೆಬ್ಸೈಟ್ ಅನ್ನು ನೀವು ಕ್ಲಿಕ್ ಮಾಡಿದರೆ ಮೊದಲಿಗೆ ನಿಮ್ಮ ಕಣ್ಣಿಗೆ ಬೀಳುವುದು, ತಮ್ಮನ್ನು ಮುಖ್ಯಮಂತ್ರಿಯಾಗಿ ಮಾಡಿದ ಮಾನ್ಯ ಯಡಿಯೂರಪ್ಪನವರ ಜೊತೆ ಸಮಾಲೋಚಿಸುತ್ತಿರುವ ಫೋಟೋ. ಸ್ಕ್ರೀನ್ ನ ಬಲಭಾಗದಲ್ಲಿ ನೋಡಿದರೆ ಪಾಸ್ಪೋರ್ಟ್ ಗಾತ್ರದ ನಗುತ್ತಿರುವ ಅವರ ಫೋಟೋ ಕೆಳಗೆ ಅವರ ರಾಜಕೀಯ ಜೀವನದ ಸಂಪೂರ್ಣ ವಿವರಗಳನ್ನೂ ಕೊಡಲಾಗಿದೆ.

ಆದರೆ ಫೋಟೋ ಗ್ಯಾಲರಿಗೆ ಹೋಗಿ ನೋಡಿದರೆ ಮಾತ್ರ, ತಾವು ಪ್ರತಿನಿಧಿಸುತ್ತಿರುವ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸಿರುವಂತೆ, ಅದೂ page under construction ಎಂಬ ಮೆಸೇಜ್ ತೋರಿಸುತ್ತಿದೆ.

ಇನ್ನು ಸಾಧನೆಗಳ ವಿಷಯಕ್ಕೆ ಬಂದರಂತೂ, ಅವಳಿ ನಗರಕ್ಕೆ ತಂದ 100 ಕೋಟಿ ಯೋಜನೆಯ ಬಗ್ಗೆ, ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಏರಿಸಲು ತಾವು ಮಾಡಿದ ಕೆಲಸದ ಬಗ್ಗೆ, ನೃಪತುಂಗ ಬೆಟ್ಟದ ಅಭಿವೃದ್ಧಿ ಕಾರ್ಯದ ಬಗ್ಗೆ, ಹುಬ್ಬಳ್ಳಿಯ ರೈಲ್ವೆ ಶೆಡ್ ನಿರ್ಮಾಣ, ಐಟಿ ಪಾರ್ಕ್, ಕನ್ನಡದ ಭವನದ ಬಗ್ಗೆ, ಕಂದಾಯ ಸಚಿವರಾಗಿದ್ದಾಗ ಕೈಗೊಂಡ ಭೂಮಿ ತಂತ್ರಾಂಶ ಯೋಜನೆ, ಕಳಸಾ- ಬಂಡೂರಿ ಯೋಜನೆಗೆ ತಮ್ಮ ಕೊಡುಗೆ, ಹೀಗೆ ತಮ್ಮ ಮುಂದಾಳತ್ವದಲ್ಲಿ ಆದ ಕಾರ್ಯಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಕೊನೆಯದಾಗಿ ಅವರನ್ನು ಮೇಲ್ ಮೂಲಕ ಸಂಪರ್ಕಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ.

ಜಗದೀಶ್ ಶೆಟ್ಟರ್ ಅವರ ವೆಬ್ಸೈಟ್ ಅನ್ನು ಭೇಟಿ ಮಾಡಲು ಇದನ್ನು ಕ್ಲಿಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot