ಭಾರತೀಯ ವಿದ್ಯಾರ್ಥಿಗಳೇ ತಯಾರಿಸಿದ ಈ ಚಾಲಕರಹಿತ ಸ್ಮಾರ್ಟ್‌ಬಸ್‌ಗೆ ನಮ್ಮ ಸಲಾಮ್!!

|

ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನ ಪ್ರಪಂಚದಲ್ಲಿ ಭಾರತೀಯರ ಸಾಧನೆ ಉತ್ತುಂಗಕ್ಕೇರುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಉದಾಹರಣೆಯಾಗಿ ಭಾರತಿಯರು ಹಲವು ತಂತ್ರಜ್ಞಾನ ಕಂಪೆನಿಗಳಲ್ಲಿ ಆಯಕಟ್ಟಿನ ಸ್ಥಾನಗಳನ್ನೇ ಅಲಂಕರಿಸಿದ್ದಾರೆ. ದೇಶ ವಿದೇಶಗಳಲ್ಲಿ ನಮ್ಮ ಎಂಜಿನಿಯರ್‌ಗಳು ಪವಾಡವನ್ನೇ ಸೃಷ್ಟಿಸುವಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ.

ಭಾರತದಲ್ಲಿ ಈಗ ತಂತ್ರಜ್ಞಾನದ ಪ್ರವಾಹವೇ ಹರಿಯುತ್ತಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಕಾಲೇಜು ವಿದ್ಯಾರ್ಥಿಗಳು ಕೂಡ ಹೊಸ ಹೊಸ ಸಂಶೋಧನೆಗಳಿಗೆ ಮುಂದಾಗುತ್ತಿದ್ದಾರೆ. ಹೊಸ ಸಂಶೋಧನೆಗಳತ್ತ ಮುಖ ಮಾಡಿರುವ ಭಾರತೀಯ ವಿಧ್ಯಾರ್ಥಿಗಳು ಈಗ ಮಂತ್ರಮುಗ್ದಗೊಳಿಸುವ ಚಾಲಕ ರಹಿತ ಮತ್ತು ಸೌರಶಕ್ತಿ ಬಸ್ ಒಂದನ್ನು ನಿರ್ಮಿಸಿ ಗಮನಸೆಳೆದಿದ್ದಾರೆ.

ಭಾರತೀಯ ವಿದ್ಯಾರ್ಥಿಗಳೇ ತಯಾರಿಸಿದ ಈ ಚಾಲಕರಹಿತ ಸ್ಮಾರ್ಟ್‌ಬಸ್‌ಗೆ ನಮ್ಮ ಸಲಾಮ್!!

ಹೌದು, ಕಾಲೇಜು ವಿದ್ಯಾರ್ಥಿಗಳೇ ಸೇರಿಕೊಂಡು ನಿರ್ಮಿಸಿರುವ ಒಂದು ಚಾಲಕ ರಹಿತ ಮತ್ತು ಸೌರಶಕ್ತಿ ಬಸ್ ನಿಮ್ಮನ್ನು ಖಂಡಿತವಾಗಿಯೂ ಮಂತ್ರಮುಗ್ದಗೊಳಿಸುತ್ತದೆ. ಇಂತಹ ಒಂದು ಬಸ್ ದೇಶದಲ್ಲಿ ನಿರ್ಮಾಣವಾಗಿರುವುದು ನಮಗೆಲ್ಲ ಹೆಮ್ಮೆಯವಿಷಯವಾಗಿದೆ. ಹಾಗಾದರೆ, ವಿದ್ಯಾರ್ಥಿಗಳೇ ರೂಪಿಸಿರುವ ಮಂತ್ರಮುಗ್ದಗೊಳಿಸುವ ಆ ಬಸ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

ಚಾಲಕ ರಹಿತ ಮತ್ತು ಸೌರಶಕ್ತಿ ಬಸ್!

ಚಾಲಕ ರಹಿತ ಮತ್ತು ಸೌರಶಕ್ತಿ ಬಸ್!

ಇಂದಿನ ದಿನಗಳಲ್ಲಿ ಇಂತಹದೊಂದು ಕಲ್ಪನೆಯನ್ನು ಕಾಣಲು ಸುಲಭವಾಗಿರುತ್ತದೆ. ಆದರೆ, ಅದನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಸಾಧ್ಯವಾಗುವುದು ದೃಢನಿಶ್ಚಯ ಇದ್ದಾಗ ಮಾತ್ರ. ಹೌದು, ರಾಷ್ಟ್ರದಲ್ಲಿ ಮೊದಲ ಬಾರಿಗೆ ಚಾಲಕ ರಹಿತ ಮತ್ತು ಸೌರಶಕ್ತಿ ಚಲಿತ ಅತ್ಯಂತ ಅಗ್ಗದ ಬಸ್‌ ನಿರ್ಮಾಣ ಮಾಡುವ ಮೂಲಕ ಪಂಜಾಬ್‌ನ ಕಾಲೇಜು ವಿದ್ಯಾರ್ಥಿಗಳು ಸುದ್ದಿಯಾಗಿದ್ದಾರೆ.

ಮಾಲಿನ್ಯ ರಹಿತ ಸ್ಮಾರ್ಟ್‌ ಬಸ್‌

ಮಾಲಿನ್ಯ ರಹಿತ ಸ್ಮಾರ್ಟ್‌ ಬಸ್‌

ಪಂಜಾಬ್‌ನ ಲವ್ಲಿ ಪ್ರೊಫೆಶನಲ್ ಯೂನಿವರ್ಸಿಟಿ (ಎಲ್‌ಪಿಯು) ವಿದ್ಯಾರ್ಥಿಗಳು ನಿರ್ಮಿಸಿರುವ ಈ ಬಸ್ ಕೇವಲ ಚಾಲಕ ರಹಿತ ಮತ್ತು ಸೌರಶಕ್ತಿಯಿಂದ ಚಲಿಸುವ ಅತ್ಯಂತ ಅಗ್ಗದ ಬಸ್‌ ಮಾತ್ರವಲ್ಲ, ಬದಲಾಗಿ ಸಂಪೂರ್ಣ ಮಾಲಿನ್ಯರಹಿತ ಸ್ಮಾರ್ಟ್ಬಸ್ ಇದಾಗಿದೆ. ಜಿಪಿಎಸ್ ಮತ್ತು ಬ್ಲೂಟೂತ್‌ ಸಹಾಯದಿಂದ ಸ್ವಯಂ ಕಾರ್ಯನಿರ್ವಹಿಸುವ ತಂತ್ರಜ್ಞಾನವನ್ನು ಬಸ್ ಹೊಂದಿದೆ.

ಇದರ ವಿಶೇಷತೆ ಏನು ಗೊತ್ತಾ?

ಇದರ ವಿಶೇಷತೆ ಏನು ಗೊತ್ತಾ?

ಸಂಪೂರ್ಣ ಮಾಲಿನ್ಯರಹಿತ ಈ ಸ್ಮಾರ್ಟ್ಬಸ್ ಗಂಟೆಗೆ 30 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. 10-30 ಮಂದಿ ಸಾಮರ್ಥ್ಯದ ನೂತನ ಬಸ್‌, ಒಂದು ಬಾರಿ ಪೂರ್ತಿ ಚಾರ್ಚ್ ಮಾಡಿದರೆ 70 ಕಿ.ಮೀ. ವರಗೆ ಚಲಿಸುತ್ತದೆ. ಚಾಲನೆ ಮತ್ತು ನಿರ್ವಹಣೆಗಾಗಿ ಅತ್ಯಂತ ಕಡಿಮೆ ವಿದ್ಯುಚ್ಚಕ್ತಿಯನ್ನು ಬಳಸಿಕೊಳ್ಳುವ ಈ ಬಸ್ ಅತ್ಯಂತ ಕಡಿಮೆ ವೆಚ್ಚದಲ್ಲಿಯೂ ತಯಾರಾಗಿರುವುದು ಆಶ್ಚರ್ಯ.!

ಬೆಲೆ ಕೇವಲ 6 ಲಕ್ಷ ರೂ.

ಬೆಲೆ ಕೇವಲ 6 ಲಕ್ಷ ರೂ.

ಜಲಂದರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಬಸ್‌ ಪ್ರದರ್ಶಿಸಲಾದ ಈ ಬಸ್‌ನ ಮೊದಲ ಆಕರ್ಷಣೆ ಇದರ ವಿನ್ಯಾಸ, ಚಾಲಕ ರಹಿತ, ಸ್ಮಾರ್ಟ್‌ ವಿಶೇಷತೆಗಳು ಹಾಗೂ ಸಂಪೂರ್ಣ ತಂತ್ರಜ್ಞಾನಗಳಾಗಿದ್ದವು. ಆದರೆ, ಇದರ ಬೆಲೆ ಕೇವಲ 6 ಲಕ್ಷ ರೂ. ಎಂದಾಗ ಎಲ್ಲರೂ ಮಂತ್ರಮುಗ್ದರಾದರು. ಏಕೆಂದರೆ, ಸಾಮಾನ್ಯ ಬಸ್‌ಗಳ ಬೆಲೆಯೇ 15-20 ಲಕ್ಷ ರೂ.ಗಳಿರುತ್ತವೆ.

ಒಂದು ವರ್ಷ ಕಾಲಾವಕಾಶ

ಒಂದು ವರ್ಷ ಕಾಲಾವಕಾಶ

ಜಿಪಿಎಸ್ ಮತ್ತು ಬ್ಲೂಟೂತ್‌ ಸಹಾಯದಿಂದ ಚಾಲಕ ರಹಿತವಾಗಿ ಚಲಿಸುವ ಈ ನೂತನ ಬಸ್‌ ತಯಾರಿಕೆಗೆ ವಿದ್ಯಾರ್ಥಿಗಳು ಒಂದು ವರ್ಷ ಕಾಲಾವಕಾಶ ತೆಗೆದುಕೊಂಡಿದ್ದಾರೆ. ನೂರಕ್ಕೆ ನೂರು ಹೊಸ ತಂತ್ರಜ್ಞಾನವನ್ನು ಅಳವಡಿಸಲು ವಿಧ್ಯಾರ್ಥಿಗಳು ಸಾಕಷ್ಟು ಶ್ರಮಿಸಿದ್ದಾರೆ. ಹಣ ಮತ್ತು ಶ್ರಮವನ್ನು ದೇಶಕ್ಕಾಗಿ ಬಳಸಿಕೊಂಡ ಆ ವಿದ್ಯಾರ್ಥಿಗಳಿಗೆ ನಮ್ಮದೊಂದು ಸಲಾಮ್.

Best Mobiles in India

English summary
Jalandhar students develop a driverless, solar-powered smart bus priced at Rs 6 lakh. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X