ಕರ್ನಾಟಕದ 40,000 ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಿದೆ ಜಪಾನ್‌

By Suneel
|

ಶಾಲಾ-ಕಾಲೇಜು ಪರೀಕ್ಷೆಗಳಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಅಲ್ಲಿ ಇಲ್ಲಿ ಅಂತ ಪರೀಕ್ಷೆಗಿಂತ ಮೊದಲೇ ಬಹಿರಂಗವಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಇಂತಹ ಸಮಸ್ಯೆಗಳನ್ನು ತಡೆಗಟ್ಟಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಮೂರು ವರ್ಷಗಳ ಹಿಂದಿನಿಂದಲೇ ಆನ್‌ಲೈನ್‌ ಪ್ರಶ್ನೆ ಪತ್ರಿಕೆ ವಿತರಣಾ ವ್ಯವಸ್ಥೆ ಜಾರಿಗೆ ತಂದಿದೆ. ಇಂತಹ ತಾಂತ್ರಿಕ ಅಭಿವೃದ್ದಿಯನ್ನು ಟೆಕ್ನಾಲಜಿ ದೈತ್ಯ ರಾಷ್ಟ್ರವು ಸಹ ಭಾರತವನ್ನು ಪ್ರಶಂಸಿಸಿದೆ. ಅಲ್ಲದೇ ಇಂತಹ ಅಭಿವೃದ್ದಿಯಿಂದ ಜಪಾನ್‌ ಸರ್ಕಾರ ಈಗ ತನ್ನ ದೇಶಕ್ಕೆ ವಿಶೇಷವಾಗಿ ಕರ್ನಾಟಕದಿಂದಲೇ 40,000 ಇಂಜಿಯರ್‌ಗಳನ್ನು‌ ಉದ್ಯೋಗಕ್ಕೆ ಹಂತ ಹಂತವಾಗಿ ನೇಮಕ ಮಾಡಿಕೊಳ್ಳಲು ಆಸಕ್ತಿ ತೋರಿಸಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದ ಸ್ಲೈಡ್‌ನಲ್ಲಿ ಓದಿರಿ.

 ಆನ್‌ಲೈನ್ ಪ್ರಶ್ನೆ ಪತ್ರಿಕೆ ವಿತರಣೆ

ಆನ್‌ಲೈನ್ ಪ್ರಶ್ನೆ ಪತ್ರಿಕೆ ವಿತರಣೆ

ಆನ್‌ಲೈನ್‌ ಪ್ರಶ್ನೆ ಪತ್ರಿಕೆ ವಿತರಣೆ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಳವಡಿಸಿಕೊಂಡಿರುವುದನ್ನು ಭಾರತದಲ್ಲಿ ಮಾತ್ರ ಪ್ರಶಂಸೆ ಮಾಡದೇ ವಿದೇಶದಲ್ಲೂ ಸಹ ತುಂಬಾ ಹೊಗಳಿದ್ದಾರೆ.

ಜಪಾನ್‌

ಜಪಾನ್‌

ಟೆಕ್ನಾಲಜಿ ದೈತ್ಯ ದೇಶ ಜಪಾನ್‌ ಸಹ ಈಗ ಆನ್‌ಲೈನ್ ಪ್ರಶ್ನೆ ಪತ್ರಿಕೆ ವಿತರಣೆ ವ್ಯವಸ್ಥೆ ಅಳವಡಿಸಿಕೊಳ್ಳಲು ಮುಂದೆ ಬಂದಿದೆ. ವಿಶೇಷ ಅಂದ್ರೆ ಜಪಾನ್‌ ಕರ್ನಾಟಕದಿಂದ 40,000 ಇಂಜಿನಿಯರ್‌ಗಳನ್ನು ಉದ್ಯೋಗಕ್ಕೆ ಹಂತ ಹಂತವಾಗಿ ನೇಮಕಾತಿ ಮಾಡಿಕೊಳ್ಳಲು ಆಸಕ್ತಿತೋರಿಸಿದೆ.

 ವಿಟಿಯು'ಗೆ ಭೇಟಿ ನೀಡಿದ ಜಪಾನ್‌ ಸರ್ಕಾರಿ ಪ್ರತಿನಿಧಿಗಳು

ವಿಟಿಯು'ಗೆ ಭೇಟಿ ನೀಡಿದ ಜಪಾನ್‌ ಸರ್ಕಾರಿ ಪ್ರತಿನಿಧಿಗಳು

ಇತ್ತೀಚೆಗೆತಾನೆ 10 ಜಪಾನ್‌ ಸರ್ಕಾರದ ಪ್ರತಿನಿಧಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಆನ್‌ಲೈನ್‌ ಪ್ರಶ್ನೆ ಪತ್ರಿಕೆ ವಿತರಣಾ ವ್ಯವಸ್ಥೆ ಹೇಗೆ ನಿರ್ವಹಿಸುತ್ತದೆ ಎಂದು ತಿಳಿದಿದ್ದರು. ವಿಟಿಯು ಉಪಕುಲಪತಿ 'ಎಚ್‌ ಜಿ ಶೇಖರಪ್ಪ'ರವರು, " ಜಪಾನ್‌ ಸರ್ಕಾರ ವಿಟಿಯು'ನ ಆನ್‌ಲೈನ್‌ ಪ್ರಶ್ನೆ ಪತ್ರಿಕೆ ವಿತರಣಾ ವ್ಯವಸ್ಥೆ ಅಳವಡಿಸಿಕೊಳ್ಳಲು ಒಪ್ಪಂದಕ್ಕೆ ಸಹಿ ಹಾಕಿದೆ. ಇದು ವಿಶ್ವವಿದ್ಯಾಲಯ ಮತ್ತು ದೇಶಕ್ಕೆ ಹೆಮ್ಮೆಯ ವಿಷಯ. ಅಲ್ಲದೇ ಈ ವ್ಯವಸ್ಥೆಯು ಪ್ರಶ್ನೆ ಪತ್ರಿಕೆ ಬಹಿರಂಗ ವ್ಯವಸ್ಥೆಗೆ ಸುರಕ್ಷಿತ ವ್ಯವಸ್ಥೆ" ಎಂದು ಮಾಧ್ಯಮಗಳಿಗೆ ಹೇಳಿದರು.

ಯಾವುದೇ ಪ್ರಶ್ನೆ ಪತ್ರಿಕೆ ಬಹಿರಂಗವಾಗಿಲ್ಲ

ಯಾವುದೇ ಪ್ರಶ್ನೆ ಪತ್ರಿಕೆ ಬಹಿರಂಗವಾಗಿಲ್ಲ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಕಳೆದ 3 ವರ್ಷಗಳಿಂದ ವಿವಿಧ UG, PG, PhD ಪರೀಕ್ಷೆಗಳು ಸೇರಿದಂತೆ ವರ್ಷಕ್ಕೆ 6000 ಪರೀಕ್ಷೆಗಳನ್ನು ನಡೆಸಿದೆ. ಇದುವರೆಗೆ ಯಾವುದೇ ರೀತಿಯ ಸಣ್ಣ ತಪ್ಪುಗಳು ಇದರಿಂದ ಉಂಟಾಗಿಲ್ಲ ಎಂದು ಉಪಕುಲಪತಿ ಶೇಖರಪ್ಪ ಹೇಳಿದ್ದಾರೆ.

ಜಪಾನ್‌ನಿಂದ 40,000 ಉದ್ಯೋಗ ನೇಮಕಾತಿ

ಜಪಾನ್‌ನಿಂದ 40,000 ಉದ್ಯೋಗ ನೇಮಕಾತಿ

ಜಪಾನ್‌ ವಿಶೇಷವಾಗಿ ಕರ್ನಾಟಕದಿಂದ 40,000 ಇಂಜಿಯರ್‌ಗಳನ್ನು ಉದ್ಯೋಗಕ್ಕೆ ನೇಮಕಾತಿ ಮಾಡಿಕೊಳ್ಳಲು ಆಸಕ್ತಿ ತೋರಿಸಿದೆ. ಒಮ್ಮೆ ನೇಮಕಾತಿ ಆದರೆ ನೇಮಕಗೊಂಡ ಉದ್ಯೋಗಿಯು ಜಪಾನ್‌ನಲ್ಲಿ ಒಂದು ವರ್ಷ ತರಬೇತಿ ಪಡೆಯುತ್ತಾರೆ ಎಂದು ವಿಟಿಯು ಉಪಕುಲಪತಿ ಶೇಖರಪ್ಪ ಹೇಳಿದ್ದಾರೆ. ಅಲ್ಲದೇ ಉನ್ನತ ಶಿಕ್ಷಣ ಸಚಿವ ಟಿ ಬಿ ಜಯಚಂದ್ರ'ರವರು ಈ ಒಪ್ಪಂದಕ್ಕೆ ಆಸಕ್ತಿ ತೋರಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ವದೇಶಿ ಜಿಪಿಎಸ್'ನಿಂದ ಅಮೇರಿಕಕ್ಕೆ ಪೈಪೋಟಿ ನೀಡಿದ ಭಾರತ!!ಸ್ವದೇಶಿ ಜಿಪಿಎಸ್'ನಿಂದ ಅಮೇರಿಕಕ್ಕೆ ಪೈಪೋಟಿ ನೀಡಿದ ಭಾರತ!!

ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!ಮಂಗಳ ಗ್ರಹಕ್ಕೆ ಹೊರಟ ಮಾನವರಹಿತ ಗಗನ ನೌಕೆ ವಿಶೇಷತೆ!!

ಭಾರತದ ಬಗ್ಗೆ ಆಪಲ್‌ ಸಿಇಓ ಹೇಳಿದ್ದೇನು ಗೊತ್ತೇ?ಭಾರತದ ಬಗ್ಗೆ ಆಪಲ್‌ ಸಿಇಓ ಹೇಳಿದ್ದೇನು ಗೊತ್ತೇ?

ಅಂತು ಬಂತು ಬಾಡಿಗೆ ಬೈಕ್‌ ಬುಕ್‌ ಮಾಡಲು ಮೊಬೈಲ್‌ ಅಪ್ಲಿಕೇಶನ್‌ಅಂತು ಬಂತು ಬಾಡಿಗೆ ಬೈಕ್‌ ಬುಕ್‌ ಮಾಡಲು ಮೊಬೈಲ್‌ ಅಪ್ಲಿಕೇಶನ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Japan govt to recruit 40,000 engineers from Karnataka. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X