ನೆಲದಡಿಯಲ್ಲಿ ಪಾರ್ಕಿಂಗ್‌!

Posted By:

ಬೆಂಗಳೂರಿನಲ್ಲಿ ವಾಹನ ಹೊಂದಿದ ಸವಾರರಿಗೆ ವಾಹನಗಳನ್ನು ಪಾರ್ಕ್‌ ಮಾಡುವುದೇ ಒಂದು ದೊಡ್ಡ ಸಮಸ್ಯೆ. ಪಾರ್ಕಿಂಗ್‌ ಜಾಗದಲ್ಲಿ ಬೈಕ್‌ ಕಾರ್‌ಗಳನ್ನು ಪಾರ್ಕ್‌ ಮಾಡಿದ್ರೆ ಓಕೆ. ಅದನ್ನು ಬಿಟ್ಟು ಇಷ್ಟ ಬಂದ ರಸ್ತೆಯ ಬದಿಯಲ್ಲಿ ಪಾರ್ಕಿಂಗ್‌ ಮಾಡಿದ್ರೆ ವಾಹನಗಳು ಪೊಲೀಸ್‌ ಸ್ಟೇಷನ್‌ನಲ್ಲಿರುತ್ತದೆ. ಈ ಸಮಸ್ಯೆ ಬೆಂಗಳೂರಿಗೆ ಮಾತ್ರ ವಿಶ್ವದ ಹಲವು ದೇಶಗಳ ಮಹಾನಗರಗಳಲ್ಲಿ ಈ ಸಮಸ್ಯೆ ಇದೆ. ಆದರೆ ದೂರದ ಜಪಾನ್‌ವರು ತುಂಬ ಕ್ರಿಯೇಟ್‌ವ್‌ ವ್ಯಕ್ತಿಗಳು. ಅಲ್ಲಿ ನಮ್ಮ ಹಾಗೆ ರಸ್ತೆಗಳಲ್ಲಿ ಬೈಕ್‌ನಲ್ಲಿ ಬರುವವವರ ಸಂಖ್ಯೆ ಕಡಿಮೆ. ಹೆಚ್ಚಾಗಿ ಸೈಕಲ್‌ ತುಳಿದುಕೊಂಡೇ ಅಲ್ಲಿ ಕೆಲಸ ಮತ್ತು ಅಂಗಡಿಗಳಿಗೆ ಜನ ಹೋಗುತ್ತಾರೆ. ಜಪಾನ್‌ ಮಹಾನಗರಗಳು ಅಂದ್ರೆ ಕೇಳಬೇಕೆ ? ಅಲ್ಲೂ ಜಾಗದ ಸಮಸ್ಯೆ ಇದೆ. ಹಾಗಂತ ಅವರು ಪಾರ್ಕಿಂಗ್‌ ಮಾಡಲು ಕಷ್ಟ ಎಂದು ಹೇಳಿ ಸೈಕಲ್‌ನಲ್ಲಿ ಸಿಟಿಗೆ ಹೋಗುವುದನ್ನು ನಿಲ್ಲಿಸಲಿಲ್ಲ. ಬದಲಾಗಿ ಸೈಕಲ್‌ಗೆ ಎಂದು ಹೊಸ ಪಾರ್ಕಿಂಗ್‌ ಮಾಡಿದ್ದಾರೆ.
ಸಣ್ಣ ಜಾಗದಲ್ಲಿ ಅವರು ಇನ್ನೂರಕ್ಕಿಂತಲೂ ಹೆಚ್ಚಿನ ಸೈಕಲ್‌ಗಳನ್ನು ನಿಲ್ಲಿಸುತ್ತಿದ್ದಾರೆ. ಅವರ ಈ ಪಾರ್ಕಿಂಗ್‌ ಹೇಗಿದೆ? ಯಾವ ತಂತ್ರಜ್ಞಾನ ಉಪಯೋಗಿಸಿದ್ದಾರೆ ಎನ್ನುವ ಮಾಹಿತಿಗಾಗಿ ಮುಂದಿನ ಪುಟವನ್ನು ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

8.55 ಮೀಟರ್ ವ್ಯಾಸ, 11 ಮೀಟರ್‌ ಆಳದ ಭೂಮಿಯನ್ನು ಕೊರೆದು ಈ ಪಾರ್ಕಿ‌ಂಗ್‌ ನಿರ್ಮಿಸಿದ್ದಾರೆ.

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಸೈಕಲ್‌ ಕೆಳಗಡೆ ಹೋಗಲು ಒಂದು ಲಿಫ್ಟ್ ಇದೆ. ಈ ಲಿಫ್ಟ್‌ ಒಳಗಡೆ ಸೈಕಲ್‌ ಇರಿಸಿ, ಕಾರ್ಡ್‌‌ನ್ನು ಸ್ಕ್ಯಾನ್‌ ಮಾಡಿದ್ರೆ ಸೈಕಲ್‌ ಕೆಳಗಡೆ ಹೋಗುತ್ತದೆ.

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಸೈಕಲ್‌ನ ಮುಂದಿನ ಚಕ್ರದ ಫ್ರೇಮ್‌ಗೆ ಇಂದು ಐಸಿ ಟ್ಯಾಗ್‌ ಅಳವಡಿಸಿದ್ದು, ಇದರಲ್ಲಿ ಸೆನ್ಸಾರ್‌ ಇದೆ.

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಈ ಪಾರ್ಕಿಂಗ್‌ನಲ್ಲಿ 204 ಸೈಕಲ್‌ಗಳನ್ನು ಪಾರ್ಕ್‌ ಮಾಡಬಹುದಾಗಿದೆ.

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಸೈಕಲ್‌ ಮರಳಿ ಪಡೆಯಬೇಕಾದ್ರೆ ಇಲ್ಲಿರುವ ಬಟನ್‌ ಪ್ರೆಸ್‌ ಮಾಡಿದ್ರೆ ಆಯ್ತು. ಕೇವಲ 13 ಸೆಕೆಂಡಿನಲ್ಲಿ ಈ ಲಿಫ್ಟ್‌ನಲ್ಲಿ ಮೇಲೆ ಬರುತ್ತದೆ.

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಈ ಪಾರ್ಕಿಂಗ್‌ನಲ್ಲಿ ಗರಿಷ್ಟ 30 ಕೆ.ಜಿ. ಹೊಂದಿರುವ ಸೈಕಲ್‌ಗಳನ್ನು ಪಾರ್ಕ್‌ ಮಾಡಬಹುದಾಗಿದೆ.

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಸಿಲಿಂಡರ್‌ ಆಕಾರದಲ್ಲಿ ನಿರ್ಮಿಸಲಾಗಿದ್ದು ಭೂಕಂಪವಾದರೂ ಈ ಪಾರ್ಕಿ‌ಂಗ್ ಏನು ಆಗುವುದಿಲ್ಲ ಎಂದು ಇದನ್ನು ನಿರ್ಮಿ‌ಸಿದ ಕಂಪೆನಿ ಹೇಳಿದೆ.

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ಸೈಕಲ್‌ ಪಾರ್ಕಿಂಗ್‌ಗೆ ಜಪಾನ್‌ನಲ್ಲಿ ಹೊಸ ತಂತ್ರಜ್ಞಾನ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot