ಜೆಬಿಎಲ್ ಸಂಸ್ಥೆಯಿಂದ ಕ್ಲಬ್ ಸರಣಿಯಲ್ಲಿ ಮೂರು ಹೊಸ ಹೆಡ್‌ಫೋನ್ ಬಿಡುಗಡೆ!
ಸ್ಮಾರ್ಟ್‌ಫೋನ್‌ಗಳಲ್ಲಿ ಮ್ಯೂಸಿಕ್ ಅನುಭವವನ್ನು ಅನುಭವಿಸಲು ಉತ್ತಮ ಹೆಡ್‌ಫೋನ್ ಇರಬೇಕು. ಸದ್ಯ ಟೆಕ್ ವಲಯದಲ್ಲಿ ಹಲವು ಕಂಪೆನಿಗಳು ತಮ್ಮ ವೈವಿದ್ಯಮಯ ಹೆಡ್‌ಫೋನ್‌ಗಳನ್ನ ಪರಿಚಯಿಸಿವೆ. ಇವುಗಳಲ್ಲಿ JBL ಕಂಪೆನಿ ಕೂಡ ಒಂದಾಗಿದೆ. ಈಗಾಗಲೇ ತನ್ನ ವಿವಿಧ ಮಾದರಿಯ ಹೆಡ್‌ಫೋನ್‌ಗಳನ್ನ ಪರಿಚಯಿಸಿ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಮತ್ತೊಂದು ಹೊಸ ಸರಣಿಯ ಹೆಡ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ.

ಹೌದು, JBL ಕಂಪೆನಿ ಭಾರತದಲ್ಲಿ ಕ್ಲಬ್ ಸರಣಿಯ ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಸರಣಿಯಲ್ಲಿ ಮೂರು ಮಾದರಿಯ ಹೆಡ್‌ಫೋನ್‌ಗಳನ್ನ ಪರಿಚಯಿಸಿದೆ. ಇನ್ನು ಈ ಕ್ಲಬ್ ಸರಣಿಯ ಹೆಡ್‌ಫೋನ್‌ಗಳು ವಾಯರ್‌ಲೆಸ್ ಕನೆಕ್ಟಿವಿಟಿ, ಆಕ್ಟಿವ್ ನಾಯ್ಸ್ ಕ್ಯಾನ್ಸೆಲೆಶನ್ , ವಾಯ್ಸ್ ಅಸಿಸ್ಟೆಂಟ್ ಸಪೋರ್ಟ್, ಮತ್ತು ಉನ್ನತ ಮಟ್ಟದ ಫೀಚರ್ಸ್‌ಗಳನ್ನು ಹೊಂದಿರುವ ಪ್ರೀಮಿಯಂ ಸರಣಿ ಇದಾಗಿದೆ. ಸದ್ಯ ಇನ್ನು ಈ ಹೆಡ್‌ಫೋನ್‌ಗಳು In.jbl.com ನಲ್ಲಿ ಕಂಪನಿಯ ಜೆಬಿಎಲ್ ಇ-ಸ್ಟೋರ್ ಸೇರಿದಂತೆ ಭಾರತದಾದ್ಯಂತ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿದೆ. ಇನ್ನು ಈ ಹೆಡ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜೆಬಿಎಲ್ ಕಂಪೆನಿ ಬಿಡುಗಡೆ ಮಾಡಿರುವ ಮೂರು ಹೊಸ ಹೆಡ್‌ಫೋನ್‌ಗಳಲ್ಲಿ JBL ಕ್ಲಬ್ 700 BT, ಕ್ಲಬ್ 950NC, ಮತ್ತು ಕ್ಲಬ್ ಒನ್ ಹೆಡ್‌ಫೊನ್ ಎಂದು ಹೆಸರಿಸಲಾಗಿದೆ. ಇದರಲ್ಲಿ JBL ಕ್ಲಬ್ 700BT ಹೆಡ್‌ಫೋನ್ ಮಧ್ಯಮ ಶ್ರೇಣಿಯ ವಾಯರ್‌ಲೆಸ್ ಹೆಡ್‌ಫೋನ್ ಆಗಿದ್ದರೆ, ಕ್ಲಬ್ 950NC ಮತ್ತು ಕ್ಲಬ್ ಒನ್ ಹೆಡ್‌ಫೋನ್‌ಗಳು ಆಕ್ಟಿವ್ ನಾಯ್ಸ್ ಕ್ಯಾನ್ಸೆಲೆಶನ್ ಅನ್ನು ಹೊಂದಿವೆ. ಇನ್ನು ಈ ಎಲ್ಲಾ ಮೂರು ಹೆಡ್‌ಫೋನ್‌ಗಳು ಗೂಗಲ್ ಅಸಿಸ್ಟೆಂಟ್ ಮತ್ತು ಅಮೆಜಾನ್ ಅಲೆಕ್ಸಾ, ಆಂಬಿಯೆಂಟ್ ಸೌಂಡ್ ಮೋಡ್ ಮತ್ತು ಜೆಬಿಎಲ್ ಮೈ ಹೆಡ್‌ಫೋನ್ ಆಪ್ ಮೂಲಕ ಕಸ್ಟಮೈಸೇಶನ್‌ಗಾಗಿ ವಾಯ್ಸ್ ಅಸಿಸ್ಟೆಂಟ್ ಬೆಂಬಲವನ್ನು ಹೊಂದಿವೆ.

ಇನ್ನು ಈ ಮೂರು ಮಾದರಿಯ ಹೆಡ್‌ಫೋನ್‌ಗಳಲ್ಲೂ ಬಿಲ್ಡ್ ಗುಣಮಟ್ಟವು ಒಂದೇ ಆಗಿದೆ. ಅದರಲ್ಲೂ ಜೆಬಿಎಲ್ ಲೋಹದ ಹಿಂಜ್ ಮತ್ತು ಟಚ್ ಕಂಟ್ರೋಲ್ ಅನ್ನು ಸಹ ಬಳಸಿದೆ. ಇದಲ್ಲದೆ ಜೆಬಿಎಲ್ ಕ್ಲಬ್ ಶ್ರೇಣಿಯಲ್ಲಿನ ಪ್ರೀಮಿಯಂ ಹೆಡ್‌ಫೋನ್ ಕ್ಲಬ್ ಒನ್ ಆಗಿದೆ. ಇನ್ನು ಈ ಹೆಡ್‌ಫೋನ್‌ಗಳು ಎಸ್‌ಬಿಸಿ ಮತ್ತು ಎಎಸಿ ಬ್ಲೂಟೂತ್ ಕೋಡೆಕ್‌ಗಳಿಗೆ ಬೆಂಬಲದೊಂದಿಗೆ 40 ಎಂಎಂ ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಸಹ ಹೊಂದಿವೆ. ಅಲ್ಲದೆ ಬಳಕೆದಾರರ ಕಿವಿಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯವನ್ನ ಈ ಹೆಡ್‌ಫೋನ್‌ಗಳಲ್ಲಿ ನೀಡಲಾಗಿದೆ.

ಜೆಬಿಎಲ್ ಕ್ಲಬ್ 700BT ಹೆಡ್‌ಫೋನ್ 50 ಗಂಟೆಗಳಷ್ಟು ಬ್ಯಾಟರಿ ಬಾಳಿಕೆ ಬರಲಿದೆ ಎಂದು ಹೇಳಲಾಗ್ತಿದೆ. ಆದರೆ ಉನ್ನತ-ಮಟ್ಟದ ಆಯ್ಕೆಗಳು ಆಕ್ಟಿವ್ ನಾಯ್ಸ್ ಕ್ಯಾನ್ಸೆಲೇಶನ್ ಕಾರ್ಯದೊಂದಿಗೆ ಬಳಸಿದಾಗ ಸುಮಾರು 23-25 ಗಂಟೆಗಳ ಕಡಿಮೆ ಕ್ಲೈಮ್ ಮಾಡಿದ ಬ್ಯಾಟರಿ ಅವಧಿಯನ್ನು ಹೊಂದಿವೆ. ಇನ್ನು ಈ ಹೆಡ್‌ಫೋನ್‌ಗಳು ಉತ್ತಮ ಆಡಿಯೋ ಬೆಂಬಲವನ್ನು ಒಳಗೊಂಡಿದ್ದು, ಉತ್ತಮ ಆಡಿಯೋ ಅನುಭವವನ್ನು ಸಹ ನೀಡಲಿವೆ. ಇನ್ನು ಜೆಬಿಎಲ್ ಕ್ಲಬ್ 700 BT ಮತ್ತು ಕ್ಲಬ್ 950NC ಹೆಡ್‌ಫೋನ್ ಬೆಲೆ ಕ್ರಮವಾಗಿ ರೂ. 9,999 ಮತ್ತು ರೂ. 14,999,ಆಗಿದೆ. ಇನ್ನು ಜೆಬಿಎಲ್ ಕ್ಲಬ್ ಒನ್ ಬೆಲೆ ರೂ. 24,999 ರೂ. ಬೆಲೆಯಲ್ಲಿ ಲಭ್ಯವಾಗಲಿದೆ.


Click it and Unblock the Notifications




