Home
ಸುದ್ದಿಜಾಲ

JBL ಸಂಸ್ಥೆಯಿಂದ ಹೊಸ ಬ್ಲೂಟೂತ್‌ ಸ್ಪೀಕರ್‌ ಬಿಡುಗಡೆ: ಫೀಚರ್ಸ್‌ ಹೇಗಿದೆ

JBL ಕಂಪೆನಿಯ ಸ್ಪೀಕರ್‌ಗಳಿಗೆ ಟೆಕ್‌ ವಲಯದಲ್ಲಿ ಉತ್ತಮ ಬೇಡಿಕೆಯಿದೆ. ತನ್ನ ವಿಭಿನ್ನ ಶೈಲಿಯ ಸ್ಪೀಕರ್‌ಗಳಿಂದ ಗುರುತಿಸಿಕೊಂಡಿರುವ JBL ಇದೀಗ ಹೊಸ ಸ್ಪೀಕರ್‌ ಅನ್ನು ಬಿಡುಗಡೆ ಮಾಡಿದೆ. ಇದನ್ನು JBL Go 4 ಸ್ಪೀಕರ್‌ ಎಂದು ಹೆಸರಿಸಲಾಗಿದ್ದು, ಜೆಬಿಎಲ್‌ ಕಂಪೆನಿಯ ಅತ್ಯಂತ ಚಿಕ್ಕ ಪೋರ್ಟಬಲ್‌ ಸ್ಪೀಕರ್‌ ಎಂಬ ಖ್ಯಾತಿ ಪಾತ್ರವಾಗಿದೆ.

ಹೌದು, JBL Go 4 ಸ್ಪೀಕರ್‌ ಟೆಕ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು ಪೋರ್ಟಬಲ್‌ ಸ್ಪೀಕರ್‌ ಆಗಿದ್ದು, ಇದರ ಸ್ಪೀಕರ್ ಗ್ರಿಲ್‌ಗಾಗಿ 100% ಮರುಬಳಕೆಯ ಬಟ್ಟೆಯನ್ನು ಬಳಸಲಾಗಿದೆ. ಈ ಮಿನಿ ಸ್ಪೀಕರ್ ಬಹು-ಸಂಪರ್ಕವನ್ನು ಸಹ ಅನುಮತಿಸುತ್ತದೆ ಎಂದು ವರದಿಯಾಗಿದೆ. ಹಾಗಾದ್ರೆ JBL Go 4 ಸ್ಪೀಕರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

JBL ಸಂಸ್ಥೆಯಿಂದ ಹೊಸ ಬ್ಲೂಟೂತ್‌ ಸ್ಪೀಕರ್‌ ಬಿಡುಗಡೆ: ಫೀಚರ್ಸ್‌ ಹೇಗಿದೆ

JBL Go 4 ಫೀಚರ್ಸ್‌ ಹೇಗಿದೆ
JBL Go 4 ಸ್ಪೀಕರ್ ಜೆಬಿಎಲ್‌ ಕಂಪನಿಯ ಅತ್ಯಂತ ಚಿಕ್ಕ ಪೋರ್ಟಬಲ್ ಸ್ಪೀಕರ್ ಆಗಿದೆ. ತನ್ನ ಗಾತ್ರದಿಂದಲೇ ಗಮನಸೆಳೆದಿರುವ ಈ ಸ್ಪೀಕರ್‌ ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು LE ಆಡಿಯೊದೊಂದಿಗೆ ಬೆಂಬಲಿಸುತ್ತದೆ. ಇದಲ್ಲದೆ ಸ್ಪೀಕರ್‌ Auracast ತಂತ್ರಜ್ಞಾನದ ಮೂಲಕ ಮಲ್ಟಿ-ಸ್ಪೀಕರ್ ಸಂಪರ್ಕವನ್ನು ಸಹ ಅನುಮತಿಸಲಿದೆ. ಈ ಸ್ಪೀಕರ್‌ ಅನ್ನು ಯುವಜನರ ಅಶಯಕ್ಕೆ ಅನುಗುಣವಾಗಿಯೇ ಡಿಸೈನ್‌ ಮಾಡಲಾಗಿದೆ.

JBL Go 4 ಸ್ಪೀಕರ್‌ ಏಳು ಗಂಟೆಗಳವರೆಗೆ ನಿರಂತರ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. JBL ಸಂಸ್ಥೆ ಹೇಳಿರುವಂತೆ ಇದರಲ್ಲಿ ಪ್ಲೇಟೈಮ್ ಬೂಸ್ಟ್ ಮೋಡ್ ಅನ್ನು ಆನ್ ಮಾಡುವ ಮೂಲಕ ಹೆಚ್ಚುವರಿ ಎರಡು ಗಂಟೆಗಳವರೆಗೆ ಪ್ಲೇ ಬ್ಯಾಕ್‌ ಟೈಂ ಅನ್ನು ವಿಸ್ತರಿಸಬಹುದಾಗಿದೆ. ಇದು USB ಟೈಪ್-C ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದ್ದು, ಸ್ಪೀಕರ್ JBL ಪೋರ್ಟಬಲ್ ಅಪ್ಲಿಕೇಶನ್‌ನೊಂದಿಗೆ ಸಹ ಹೊಂದಿಕೊಳ್ಳಲಿದೆ.

ಇದು ಬಳಕೆದಾರರಿಗೆ ಪ್ಲೇಬ್ಯಾಕ್ ಮತ್ತು EQ ಮೋಡ್‌ಗಳನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. JBL Go 4 ಸ್ಪೀಕರ್‌ ಇದು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP67 ರೇಟಿಂಗ್‌ನೊಂದಿಗೆ ಬರುತ್ತದೆ. ಇದರಿಂದ ಇದರ ಮೇಲೆ ಯಾವುದೇ ದೂಳು ಮತ್ತು ನೀರು ಬಿದ್ದರು ಕೂಡ ರಕ್ಷಣೆ ಸಿಗಲಿದೆ.

JBL Go 4 ಬೆಲೆ ಮತ್ತು ಲಭ್ಯತೆ
JBL Go 4 ಸ್ಪೀಕರ್‌ ಪ್ರಸ್ತುತ ಚೀನಾದಲ್ಲಿ ಇದರ ಬೆಲೆ CNY 429 (ಸುಮಾರು 4,900ರೂ) ಹೊಂದಿರಲಿದೆ. ಇದಲ್ಲದೆ ಇದನ್ನು ಸೀಮಿತ ಅವಧಿಗೆ ಪರಿಚಯಾತ್ಮಕ ಬೆಲೆಯಲ್ಲಿ ಅಂದರೆ CNY 399 (ಸುಮಾರು 4,600ರೂ) ನಲ್ಲಿ ದೊರೆಯಲಿದೆ. ಇನ್ನು ಈ ಸ್ಪೀಕರ್‌ನ ಅಧಿಕೃತ ಮಾರಾಟ ಮಾರ್ಚ್ 18 ರಂದು ಪ್ರಾರಂಭವಾಗಲಿದೆ. ಇದು ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡುವುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಇನ್ನು ಇತ್ತೀಚಿಗೆ ಜೆಬಿಎಲ್‌ ಲೈವ್ 3 ಸರಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಜೆಬಿಎಲ್‌ ಲೈವ್ ಬಡ್ಸ್ 3, ಜೆಬಿಎಲ್‌ ಲೈವ್ ಬೀಮ್ 3 ಮತ್ತು ಜೆಬಿಎಲ್‌ ಲೈವ್ ಫ್ಲೆಕ್ಸ್ 3 (JBL Live Buds 3, JBL Live Beam 3 and JBL Live Flex 3) ಅನ್ನು ಈ ವಿಭಾಗದಲ್ಲಿ ಕಾಣಬಹುದಾಗಿದೆ. ಇನ್ನು ಈ ಸ್ಮಾರ್ಟ್ ಚಾರ್ಜಿಂಗ್ ಕೇಸ್ 1.45 ಇಂಚಿನ ಎಲ್ಇಡಿ ಟಚ್ ಡಿಸ್‌ಪ್ಲೇ ಹೊಂದಿದ್ದು, ಟೆಕ್ಸ್ಟ್‌ ಮೆಸೆಜ್‌ ವೀಕ್ಷಿಸಲು, ಮ್ಯೂಸಿಕ್‌ ಕಂಟ್ರೋಲ್‌ ಮಾಡಲು ಮತ್ತು ಸೋಶಿಯಲ್‌ ಮೀಡಿಯಾ ನೋಟಿಫಿಕೇಶನ್‌ ಪಡೆಯಲು ಅನುವು ಮಾಡಿಕೊಡಲಿದೆ.

ಈ ಮೂರು ಇಯರ್‌ಬಡ್ಸ್‌ಗಳು ಜೆಬಿಎಲ್‌ ಲೈವ್ 3 ಸರಣಿಯು ನಿಜವಾದ ಅಡಾಪ್ಟಿವ್ ಶಬ್ದ ರದ್ದತಿಯನ್ನು ಒಳಗೊಂಡಿರುತ್ತದೆ, ಇದು ಮೀಸಲಾದ ಜೆಬಿಎಲ್‌ ಹೆಡ್‌ಫೋನ್‌ಗಳ ಅಪ್ಲಿಕೇಶನ್‌ನಲ್ಲಿ ಇಯರ್ ಕೆನಾಲ್ ಪರೀಕ್ಷೆಯೊಂದಿಗೆ ತಮ್ಮ ಆಡಿಯೊ ಅನುಭವವನ್ನು ಅತ್ಯುತ್ತಮವಾಗಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ ಬ್ಲೂಟೂತ್ ಆವೃತ್ತಿ 5.3, ಹೈ ರೆಸ್ ಆಡಿಯೋ, ಜೆಬಿಎಲ್‌ ಸಿಗ್ನೇಚರ್ ಸೌಂಡ್, ಮಲ್ಟಿಪಾಯಿಂಟ್ ಸಂಪರ್ಕ ಸೌಲಭ್ಯವನ್ನು ಈ ಇಯರ್‌ಬಡ್ಸ್‌ ಬೆಂಬಲಿಸಲಿದೆ.

Best Mobiles in India

English summary
JBL Go 4 Portable Speaker With Up to 7 Hours of Playback Time Launched: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+