Home
ಸುದ್ದಿಜಾಲ

ಹೆಡ್‌ಪೋನ್, ಸ್ಪೀಕರ್‌ಗಳ ಮೇಲೆ ಅಮೇಜಾನ್‌ನಲ್ಲಿ ಭಾರೀ ರಿಯಾಯಿತಿ..!

By Gizbot Bureau

ಅಮೇಜಾನ್ ನಲ್ಲಿ ಆಗಾಗ ಹಲವು ಕಾರಣಗಳಿಂದ ರಿಯಾಯಿತಿ ಮಾರಾಟ ನಡೆಯುತ್ತಿರುತ್ತೆ. ಗ್ರಾಹಕರು ಅದಕ್ಕಾಗಿ ಕಾಯುತ್ತಿರುತ್ತಾರೆ ಕೂಡ. ಈಗಲೂ ಹಾಗೆ ಈ ತಿಂಗಳ ಆರಂಭದಲ್ಲಿ ವಿಶ್ವವು ವಿಶ್ವ ಮ್ಯೂಸಿಕ್ ಹಬ್ಬವನ್ನು ಆಚರಿಸಿತ್ತು. ಈ ಹಬ್ಬವನ್ನು ಅಧ್ದೂರಿಯಾಗಿ ಆಚರಿಸುವ ಉದ್ದೇಶವನ್ನು ಇ-ಕಾಮರ್ಸ್ ವೆಬ್ ಸೈಟ್ ಅಮೇಜಾನ್ ಕೂಡ ಇಚ್ಛಿಸಿದ್ದು JBL music festival ಎಂಬ ಹೆಸರಿನಲ್ಲಿ ಆಚರಿಸುತ್ತಿದೆ.

(ಜೂನ್ 28 ರಿಂದ ಜೂನ್ 30 ರ ವರೆಗೆ ಇದು ನಡೆಯಲಿದೆ). ಈ ಮೂರು ದಿನದಲ್ಲಿ ಆನ್ ಲೈನ್ ಚಿಲ್ಲರೆ ವ್ಯಾಪಾರಿಗಳು ಜೆಬಿಎಲ್ ಸ್ಪೀಕರ್, ಹೆಡ್ ಫೋನ್ ಗಳನ್ನು ಅತ್ಯಂತ ಕಡಿಮೆ ಬೆಲೆಗೆ ರಿಯಾಯಿತಿ ನೀಡುತ್ತಿದ್ದು ಜೊತೆಗೆ ವೋಚರ್ ಗಳು ಮತ್ತು ಕೆಲವು ಉಡುಗೊರೆಗಳನ್ನು ಕೂಡ ನೀಡುತ್ತಿದೆ.

ಹೆಡ್‌ಪೋನ್, ಸ್ಪೀಕರ್‌ಗಳ ಮೇಲೆ ಅಮೇಜಾನ್‌ನಲ್ಲಿ ಭಾರೀ ರಿಯಾಯಿತಿ..!

ಹಬ್ಬಕ್ಕಾಗಿ ಆಫರ್ ಗಳು

ಜೆಬಿಎಲ್ ಮ್ಯೂಸಿಕ್ ಹಬ್ಬದ ಸಲುವಾಗಿ ಅಮೇಜಾನ್ ಗಾನಾ, ಕೆಫೆ ಕಾಫಿ ಡೇ, ಜೊಮೋಟೋ ಮತ್ತು ಪೆಟಿಎಮ್ ಗಳ ಗಿಫ್ಟ್ ವೋಚರ್ ಗಳನ್ನು ನೀಡುತ್ತಿದೆ. ಗ್ರಾಹಕರು ಇದರಲ್ಲಿ ಯಾವುದಾದರೂ ಒಂದನ್ನು ಪಡೆಯಬಹುದು. 2 ಉಚಿತ Cappuccino ವನ್ನು ಕೆಫೆ ಕಾಫಿ ಡೇಯಿಂದ , 2 ತಿಂಗಳ ಗಾನಾ ಚಂದಾದಾರಿಕೆ, 150 ರುಪಾಯಿಯ ಜೊಮೋಟೋ ಜಿವಿ ಮತ್ತು 150 ರುಪಾಯಿಯ ಪೆಟಿಎಂ ಚಲನಚಿತ್ರದ ಟಿಕೆಟ್..

ಈ ವೋಚರ್ ಗಳನ್ನು ಹಬ್ಬದ ಪ್ರಯುಕ್ತ ಅಮೇಜಾನ್ ವೆಬ್ ಸೈಟ್ ನಲ್ಲಿ ಎಲ್ಲಾ ಜೆಬಿಎಲ್ ಪ್ರೊಡಕ್ಟ್ ಗಳ ಖರೀದಿಯ ಮೇಲೂ ನೀಡಲಾಗುತ್ತಿದೆ. 15 ದಿನಗಳ ಒಳಗೆ ವೋಚರ್ ಗಳನ್ನು ಬಳಸಬೇಕು.

ಜೆಬಿಎಲ್ ಸಿ100ಎಸ್ ಐ ಇಯರ್ ಹೆಡ್ ಫೋನ್ ಗಳು ಈ ಸೇಲ್ ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅಂದರೆ ಕೇವಲ 699 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಜೆಬಿಎಲ್ ಟಿ 205 ಪ್ಯೂರ್ ಬೇಸ್ ಮೆಟಲ್ ಇಯರ್ ಬಡ್ಸ್ ನ ನೈಜ ಬೆಲೆ 1,599 ರುಪಾಯಿ ಆದರೆ ಈಗ ಹಬ್ಬದ ಪ್ರಯುಕ್ತ 1049 ರುಪಾಯಿ ಬೆಲೆಗೆ ಆಫರ್ ಮಾಡಲಾಗಿದೆ.

ಹೆಡ್ ಫೋನ್ ಗಳು ಹಲವಾರು ವಿಧದ ಬಣ್ಣಗಳಲ್ಲಿ ಲಭ್ಯವಿದೆ. ಕಪ್ಪು, ಚಿನ್ನದ ಬಣ್ಣ, ಗುಲಾಬಿ ಚಿನ್ನ ಮತ್ತು ಬೆಳ್ಳಿಯ ಬಣ್ಣಗಳಲ್ಲಿ ಲಭ್ಯವಿದೆ. ಹೆಚ್ಚು ಬೆಲೆ ಜೆಬಿಎಲ್ ಸ್ಪೋರ್ಟ್ ವಯರ್ ಲೆಸ್ ಹೆಡ್ ಫೋನ್ ಗಳ ಬೆಲೆ 12,999 ರುಪಾಯಿ ಸದ್ಯ ಅದಕ್ಕೆ 200 ರುಪಾಯಿಯ ರಿಯಾಯಿತಿ ಬೆಲೆ ಇದೆ. 12799 ರುಪಾಯಿಗೆ ಲಭ್ಯವಿರುವ ಇದನ್ನು ಇಎಂಐ ಆಯ್ಕೆಯಲ್ಲೂ ಖರೀದಿಸಬಹುದಾಗಿದ್ದು ತಿಂಗಳಿಗೆ 608 ರುಪಾಯಿ ಪಾವತಿಸಬೇಕಾಗುತ್ತದೆ.

ಈ ಸೇಲ್ ನಲ್ಲಿ ಜೆಬಿಎಲ್ ಗೋ ಪೋರ್ಟೆಬಲ್ ವಯರ್ ಲೆಸ್ ಬ್ಲೂಟೂತ್ ಸ್ಪೀಕರ್ ನ ನಿಜವಾದ ಬೆಲೆ 2,699 ರುಪಾಯಿಗಳು ಆದರೆ ಈಗ ಕೇವಲ 1699 ರುಪಾಯಿಯ ರಿಯಾಯಿತಿ ಮಾರಾಟದಲ್ಲಿ ಲಭ್ಯವಿದೆ. ಇದರಲ್ಲಿ ಕಪ್ಪು, ಕೆಂಪು, ನೀಲಿ, ಕೇಸರಿ, ಬೂದು ಬಣ್ಣ, ಗುಲಾಬಿ ಬಣ್ಣ, ಮತ್ತು ಹಳದಿ ಬಣ್ಣಗಳೂ ಕೂಡ ಲಭ್ಯವಿರುತ್ತೆ.

ಜೆಬಿಎಲ್ 5.1 ಚಾನಲ್ 4ಕೆ ಅಲ್ಟ್ರಾ ಹೆಚ್ ಡಿ ಸೌಂಡ್ ಬಾರ್ ಜೊತೆಗೆ ವಯರ್ ಲೆಸ್ ಸರೌಂಡ್ ಸ್ಪೀಕರ್ ಬೆಲೆ 49,990 ಆದರೆ ಈಗ ರಿಯಾಯಿತಿಯಲ್ಲಿ 45,999 ರುಪಾಯಿಗೆ ಲಭ್ಯವಿದೆ ಒಟ್ಟು 3,991 ರುಪಾಯಿಯ ರಿಯಾಯಿತಿ ಇದೆ. ಇನ್ನು ಇದಕ್ಕೆ ಇಎಂಐ ಆಯ್ಕೆಯೂ ಇದ್ದು 2,187 ರುಪಾಯಿಯನ್ನು ಪ್ರತಿ ತಿಂಗಳು ಪಾವತಿ ಮಾಡಿ ಖರೀದಿಸಲೂ ಬಹುದು.

ಜೆಬಿಎಲ್ ಭೂಮ್ ಬಾಕ್ಸ್ ಪೋರ್ಟೆಬಲ್ ಸ್ಪೀಕರ್ , 20000 mAh ಬ್ಯಾಟರಿ ಮತ್ತು ಬಿಲ್ಟ್ ಇನ್ ಪವರ್ ಬ್ಯಾಂಕ್ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೆಚ್ಚಿನ ಗ್ರಾಹಕರ ರೇಟಿಂಗ್ ಇರುವ ಇದು 25,179 ರುಪಾಯಿಗೆ ಲಭ್ಯವಿದ್ದು ಬರೋಬ್ಬರಿ 9,811 ರುಪಾಯಿಯ ರಿಯಾಯಿತಿ ಸಿಗಲಿದೆ.

ಹೀಗೆ ಹಲವು ರೀತಿಯ ರಿಯಾಯಿತಿ ಬೆಲೆಯಲ್ಲಿ ಡಿವೈಸ್ ಗಳು ಲಭ್ಯವಿದೆ.ನಿಮಗೂ ಆಸಕ್ತಿ ಇದ್ದಲ್ಲಿ ಕೂಡಲೇ ಅಮೇಜಾನ್ ಗೆ ಲಾಗ್ ಆನ್ ಆಗಿ.

Best Mobiles in India

English summary
JBL headphones, speakers and more on discount on Amazon: Assured gifts from Gaana, Paytm, CCD and Zomato. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+