Home
ಸುದ್ದಿಜಾಲ

JBL ನಿಂದ 1.45 ಇಂಚಿನ ಡಿಸ್‌ಪ್ಲೇ ಇರುವ ಕೇಸ್‌ನೊಂದಿಗೆ ಹೊಸ ಇಯರ್‌ಬಡ್ಸ್‌ ಲಾಂಚ್‌ ! ಬೆಲೆ ಎಷ್ಟು?

ಜೆಬಿಎಲ್‌ (JBL) ಎಂದಾಕ್ಷಣ ನಮ್ಮೆಲ್ಲರಿಗೂ ನೆನಪಿಗೆ ಬರುವುದು ಅದ್ಭುತವಾದ ಸೌಂಡ್ ಅನುಭವ. ಅಷ್ಟರಮಟ್ಟಿಗೆ ಈ ಕಂಪೆನಿ ಆಡಿಯೋ ವಿಭಾಗದಲ್ಲಿ ಪಾರುಪತ್ಯ ತೋರಿದೆ. ಈ ಬೆಳವಣಿಗೆ ನಡುವೆ CES 2024 ರಲ್ಲಿ ಜೆಬಿಎಲ್‌ ತನ್ನ ಜೆಬಿಎಲ್‌ ಲೈವ್ 3 ಸರಣಿಯ (JBL Live 3 series) ಅಡಿಯಲ್ಲಿ 3 ಹೊಸ TWS ಅನ್ನು ಅನಾವರಣಗೊಳಿಸಿದೆ.

ಹೌದು, ಜೆಬಿಎಲ್‌ ಇದೀಗ ಮೂರು ಭಿನ್ನ ಫೀಚರ್ಸ್‌ ಇರುವ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಿದೆ. ಲಾಂಚ್‌ ಆದ ಎಲ್ಲಾ ಇಯರ್‌ಬಡ್ಸ್‌ ಸ್ಮಾರ್ಟ್ ಚಾರ್ಜಿಂಗ್ ಕೇಸ್ ಆಯ್ಕೆ ಪಡೆದಿದ್ದು, ಇಯರ್‌ಬಡ್ಸ್‌ ವಿಚಾರದಲ್ಲಿ ಹೊಸ ಅನುಭವ ನೀಡಲಿದೆ. ಹಾಗಿದ್ರೆ, ಈ ಸರಣಿಯಲ್ಲಿ ಎಷ್ಟು ಇಯರ್‌ಬಡ್ಸ್‌ ಅನಾವರಣ ಆಗಿವೆ?, ಫೀಚರ್ಸ್‌ ಏನು?, ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

JBL ನಿಂದ 1.45 ಇಂಚಿನ ಡಿಸ್‌ಪ್ಲೇ ಇರುವ ಕೇಸ್‌ನೊಂದಿಗೆ ಹೊಸ ಇಯರ್‌ಬಡ್ಸ್‌ ಲಾಂಚ್‌

ಜೆಬಿಎಲ್‌ ಲೈವ್ 3 ಸರಣಿ: ಈ ಸರಣಿಯಲ್ಲಿ ಜೆಬಿಎಲ್‌ ಲೈವ್ ಬಡ್ಸ್ 3, ಜೆಬಿಎಲ್‌ ಲೈವ್ ಬೀಮ್ 3 ಮತ್ತು ಜೆಬಿಎಲ್‌ ಲೈವ್ ಫ್ಲೆಕ್ಸ್ 3 (JBL Live Buds 3, JBL Live Beam 3 and JBL Live Flex 3) ಅನ್ನು ಈ ವಿಭಾಗದಲ್ಲಿ ಕಾಣಬಹುದಾಗಿದೆ. ಇವೆಲ್ಲವೂ ಸ್ಮಾರ್ಟ್ ಚಾರ್ಜಿಂಗ್ ಕೇಸ್ ಅನ್ನು ಹೊಂದಿದ್ದು, ಈ ವಿಶೇಷ ಚಾರ್ಜಿಂಗ್ ಕೇಸ್ ಅನ್ನು ಈ ಮೊದಲು ಜೆಬಿಎಲ್‌ ಟೂರ್ ಪ್ರೊ 2 (JBL Tour Pro 2) ನಲ್ಲಿ ಪರಿಚಯಿಸಲಾಗಿತ್ತು.

ಇನ್ನು ಈ ಸ್ಮಾರ್ಟ್ ಚಾರ್ಜಿಂಗ್ ಕೇಸ್ 1.45 ಇಂಚಿನ ಎಲ್ಇಡಿ ಟಚ್ ಡಿಸ್‌ಪ್ಲೇ ಹೊಂದಿದ್ದು, ಬಳಕೆದಾರರಿಗೆ ಕರೆಗಳನ್ನು ಸ್ವೀಕಾರ ಮಾಡಲು, ಟೆಕ್ಸ್ಟ್‌ ಮೆಸೆಜ್‌ ವೀಕ್ಷಿಸಲು, ಮ್ಯೂಸಿಕ್‌ ಕಂಟ್ರೋಲ್‌ ಮಾಡಲು ಮತ್ತು ಸೋಶಿಯಲ್‌ ಮೀಡಿಯಾ ನೋಟಿಫಿಕೇಶನ್‌ ಪಡೆಯಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಈ ಸರಣಿಯಲ್ಲಿ ಕಂಡು ಬಂದ ಲೈವ್ ಫ್ಲೆಕ್ಸ್ 3 ಓಪನ್‌ ಫಿಟ್ ವಿನ್ಯಾಸವನ್ನು ಹೊಂದಿದ್ದರೆ ಇತರ ಎರಡು ಮಾದರಿಗಳು ಇಯರ್‌ ವಿನ್ಯಾಸವನ್ನು ಹೊಂದಿವೆ.

JBL ನಿಂದ 1.45 ಇಂಚಿನ ಡಿಸ್‌ಪ್ಲೇ ಇರುವ ಕೇಸ್‌ನೊಂದಿಗೆ ಹೊಸ ಇಯರ್‌ಬಡ್ಸ್‌ ಲಾಂಚ್‌

ಈ ಮೂರು ಇಯರ್‌ಬಡ್ಸ್‌ಗಳು ಜೆಬಿಎಲ್‌ ಲೈವ್ 3 ಸರಣಿಯು ನಿಜವಾದ ಅಡಾಪ್ಟಿವ್ ಶಬ್ದ ರದ್ದತಿಯನ್ನು ಒಳಗೊಂಡಿರುತ್ತದೆ, ಇದು ಮೀಸಲಾದ ಜೆಬಿಎಲ್‌ ಹೆಡ್‌ಫೋನ್‌ಗಳ ಅಪ್ಲಿಕೇಶನ್‌ನಲ್ಲಿ ಇಯರ್ ಕೆನಾಲ್ ಪರೀಕ್ಷೆಯೊಂದಿಗೆ ತಮ್ಮ ಆಡಿಯೊ ಅನುಭವವನ್ನು ಅತ್ಯುತ್ತಮವಾಗಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ ಬ್ಲೂಟೂತ್ ಆವೃತ್ತಿ 5.3, ಹೈ ರೆಸ್ ಆಡಿಯೋ, ಜೆಬಿಎಲ್‌ ಸಿಗ್ನೇಚರ್ ಸೌಂಡ್, ಮಲ್ಟಿಪಾಯಿಂಟ್ ಸಂಪರ್ಕ ಸೌಲಭ್ಯವನ್ನು ಈ ಇಯರ್‌ಬಡ್ಸ್‌ ಬೆಂಬಲಿಸಲಿದೆ.

ಉತ್ತಮ ಕರೆ ಅನುಭವಕ್ಕಾಗಿ 6 ಮೈಕ್‌ಗಳನ್ನು ಹೊಂದಿದ್ದು, ಜೆಬಿಎಲ್‌ ಲೈವ್ ಬಡ್ಸ್ 3 40 ಗಂಟೆಗಳವರೆಗೆ ಬ್ಯಾಕಪ್‌ ನೀಡುವ ಸಾಮರ್ಥ್ಯ ಹೊಂದಿದ್ದರೆ, ಜೆಬಿಎಲ್‌ ಲೈವ್ ಬೀಮ್ 3 48 ಗಂಟೆಗಳವರೆಗೆ ಬ್ಯಾಕಪ್‌ ನೀಡಲಿದೆ. ಹಾಗೆಯೇ ಜೆಬಿಎಲ್‌ ಲೈವ್ ಫ್ಲೆಕ್ಸ್ 3 50 ಗಂಟೆಗಳವರೆಗೆ ಬ್ಯಾಕಪ್‌ ನೀಡಲಿದೆ. ಉಳಿದಂತೆ ಈ ಮೂರು ಇಯರ್‌ಬಡ್ಸ್‌ ನಲ್ಲಿ ಅಷ್ಟೇನು ಭಿನ್ನತೆ ಇಲ್ಲ. ಜೊತೆಗೆ IP55 ರೇಟಿಂಗ್ ಹೊಂದಿದ್ದು, ಈ ಮೂಲಕ ನೀರಿನಿಂದ ಯಾವುದೇ ರೀತಿಯ ಸಮಸ್ಯೆಗೆ ಒಳಗಾಗುವುದಿಲ್ಲ.

JBL ನಿಂದ 1.45 ಇಂಚಿನ ಡಿಸ್‌ಪ್ಲೇ ಇರುವ ಕೇಸ್‌ನೊಂದಿಗೆ ಹೊಸ ಇಯರ್‌ಬಡ್ಸ್‌ ಲಾಂಚ್‌

ಜೆಬಿಎಲ್‌ ಲೈವ್ 3 ಸರಣಿ ಬೆಲೆ ಮತ್ತು ಲಭ್ಯತೆ: ಜೆಬಿಎಲ್‌ ಲೈವ್ TWS 3 ಲೈನ್ ಅಪ್ ಎರಡು ಹೊಸ ಬಣ್ಣಗಳಲ್ಲಿ ಅಂದರೆ ಕಪ್ಪು ಮತ್ತು ಬೆಳ್ಳಿ ಬಣ್ಣದ ಇಯರ್‌ಬಡ್ಸ್‌ ಅತ್ಯುತ್ತಮವಾಗಿ ಕಾಣಿಸಿಕೊಂಡಿವೆ. ಈ ಸರಣಿಯು JBL.com ನಲ್ಲಿ USD 199.95 (ಭಾರತದಲ್ಲಿ ಅಂದಾಜು 16,630 ರೂ.ಗಳು) ಆರಂಭಿಕ ಬೆಲೆಯಲ್ಲಿ ಲಭ್ಯ ಇರಲಿವೆ. ಇವುಗಳನ್ನು ಖರೀದಿ ಮಾಡಬೇಕು ಎಂದರೆ ಜೂನ್‌ ವರೆಗೂ ಕಾಯಬೇಕಿದೆ.

Best Mobiles in India

English summary
JBL has just unveiled three earbuds namely JBL Live Buds 3, JBL Live Beam 3 and JBL Live Flex 3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+