Home
ಸುದ್ದಿಜಾಲ

ಭಾರತದಲ್ಲಿ ಪ್ರಾರಂಭವಾಯಿತು ಜೆಬಿಎಲ್ ಆನ್‌ಲೈನ್ ಮಳಿಗೆ..! ಶೇ.50ರಷ್ಟು ರಿಯಾಯಿತಿ..!

By Gizbot Bureau

ಆಡಿಯೋ ಬ್ರ್ಯಾಂಡ್ ಕಂಪೆನಿ ಜೆಬಿಎಲ್ ತನ್ನ ಆನ್ ಲೈನ್ ಸ್ಟೋರ್ ನ್ನು ಭಾರತದಲ್ಲಿ ತೆರೆದಿದೆ. ಇದು ಸ್ಯಾಮ್ ಸಂಗ್ ನ ಅಂಗಸಂಸ್ಥೆಯಾಗಿದೆ ಮತ್ತು ಹಾರ್ಮನ್ ಇಂಟರ್ ನ್ಯಾಷನಲ್ ನ ಒಂದು ಭಾಗವಾಗಿದೆ.

ಪ್ರೊಡಕ್ಟ್ ಗಳ ವೈಶಿಷ್ಟ್ಯತೆಗಳನ್ನು ತಿಳಿಸುವುದು ಮತ್ತು ಬೇರೆಬೇರೆ ಬೆಲೆಯ ಜೆಬಿಎಲ್ ಪ್ರೊಡಕ್ಟ್ ಗಳಾದ ಹೆಡ್ ಫೋನ್, ಬ್ಲೂಟೂತ್ ಪೊರ್ಟೇಬಲ್ ಸ್ಪೀಕರ್ ಗಳು, ಮಲ್ಟಿಮೀಡಿಯಾ ಪ್ರೊಡಕ್ಟ್ ಗಳನ್ನು ಮಾರಾಟ ಮಾಡುವುದು ಮಾತ್ರವಲ್ಲ ಬದಲಾಗಿ ಭವಿಷ್ಯದಲ್ಲಿ ಬಿಡುಗಡೆಗೊಳ್ಳುವ ವಸ್ತುಗಳ ಪ್ರೀಸೇಲ್ ಪ್ರಿವ್ಯೂಗಳನ್ನು ಕೂಡ ಇದು ನೀಡುತ್ತದೆ, ಹೊಸ ಪ್ರೊಡಕ್ಟ್ ಗಳ ಬಿಡುಗಡೆಯನ್ನು ಇಲ್ಲಿ ಮಾಡಲಾಗುತ್ತದೆ.

ಭಾರತದಲ್ಲಿ ಪ್ರಾರಂಭವಾಯಿತು ಜೆಬಿಎಲ್ ಆನ್‌ಲೈನ್ ಮಳಿಗೆ..! ಶೇ.50ರಷ್ಟು ರಿಯಾಯಿತಿ!

ಸದ್ಯ ಇದರ ಪ್ರೊಮೋಷನ್ ಪ್ರಯುಕ್ತ ಕಂಪೆನಿಯು ಜೆಬಿಎಲ್ ಗೋ+ ಬ್ಲೂಟೂತ್ ಸ್ಪೀಕರ್ ನ್ನು 3,499 ರುಪಾಯಿ ಬೆಲೆಗೆ ಮತ್ತು ಜೆಬಿಎಲ್ T205BT ವಯರ್ ಲೆಸ್ ಹೆಡ್ ಫೋನ್ ನ್ನು 2,999 ರುಪಾಯಿ ಬೆಲೆಗೆ ಇ ಕಾಮರ್ಸ್ ಪೋರ್ಟಲ್ ನಲ್ಲಿ ಮಾರಾಟಕ್ಕಿಟ್ಟಿದೆ.

ಜೆಬಿಎಲ್ ಗೋ+ ಸ್ಪೀಕರ್ ರೀಚಾರ್ಜೇಬಲ್ ಬ್ಯಾಟರಿಯನ್ನು ಹೊಂದಿದೆ. ಇದು ಸುಮಾರು 5 ಘಂಟೆಗಳವರೆಗೆ ಕೆಲಸ ನಿರ್ವಹಿಸುತ್ತದೆ. ಇದು ನಾಯ್ಸ್ ಕ್ಯಾನ್ಸಲೇಷನ್ ಸ್ಪೀಕರ್ ಫೋನ್ ಆಗಿದೆ. ಸ್ಪೀಕರ್ ಆಫ್ ಮಾಡದೇ ಕರೆಗಳನ್ನು ರಿಸೀವ್ ಮಾಡಲು ಇದು ಅವಕಾಶ ನೀಡುತ್ತದೆ. ಮೂರು ಬಣ್ಣಗಳ ವೇರಿಯಂಟ್ ನಲ್ಲಿ ಇದು ಲಭ್ಯವಿದೆ.

ಜೆಬಿಎಲ್ T205 BT ಲೋಹದ ಮೇಲ್ಮೈಯನ್ನು ಹೊಂದಿದೆ ಮತ್ತು 12.5 ಡ್ರೈವರ್ ನ್ನು ಒಳಗೊಂಡಿದೆ.ಇದರಲ್ಲಿ ಒಂದು ಬಟನ್ ನ ರಿಮೋಟ್ ಇದೆ ಅದು ಪ್ಲೇಬ್ಯಾಕ್ ನ್ನು ಬಳಕೆದಾರರಿಗೆ ಕಂಟ್ರೋಲ್ ಮಾಡಲು ಅವಕಾಶ ನೀಡುತ್ತದೆ ಜೊತೆಗೆ ಕರೆಗಳನ್ನು ರಿಸೀವ್ ಮಾಡುವುದಕ್ಕೂ ಆಗುತ್ತೆ.

ಇವತ್ತಿನಿಂದ ಮುಂದಿನ ನಾಲ್ಕು ದಿನಗಳ ಕಾಲ ಈ ಮಾರಾಟ ನಡೆಯುತ್ತದೆ ಅಂದರೆ ಅಗಸ್ಟ್ 10 ವರೆಗೆ ಮಾರಾಟ ನಡೆಯಲಿದ್ದು ಶೇಕಡಾ 50 ರಷ್ಟು ರಿಯಾಯಿತಿಯನ್ನು ಈ ಸ್ಟೋರ್ ನಲ್ಲಿ ಲಭ್ಯವಾಗುವ ಪ್ರತಿ ವಸ್ತುಗಳ ಮೇಲೂ ನೀಡಲಾಗುತ್ತದೆ ಜೊತೆಗೆ ಒಂದು ವರ್ಷದ ವ್ಯಾರೆಂಟಿಯನ್ನು ಕೂಡ ನೀಡಲಾಗುತ್ತದೆ.

ಈ ಸೇಲ್ ನಲ್ಲಿ ಪ್ರತಿ 50 ನೇ ಗ್ರಾಹಕನು ತಾನು ಕೊಂಡುಕೊಂಡ ವಸ್ತುವಿನ ಜೊತೆಗೆ ಜೆಬಿಎಲ್ ಸ್ಪೋರ್ಟ್ ಇಯರ್ ಫೋನ್ ನ್ನು ಗೆಲ್ಲುವ ಅವಕಾಶವಿದೆ. HDFC ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡುವವರಿಗೆ ಶೇಕಡಾ 10 ಹೆಚ್ಚುವರಿ ರಿಯಾಯಿತಿ ಕೂಡ ಲಭ್ಯವಾಗುತ್ತದೆ.

ಸದ್ಯ ಜೆಬಿಎಲ್ ಹೆಚ್ಚು ಪ್ರಸಿದ್ಧಿಯಾಗಿರುವ ಆಡಿಯೋ ಬ್ರ್ಯಾಂಡ್ ಆಗಿದೆ. JBL.com ಮೂಲಕ ಉತ್ತಮ ಬೆಲೆ, ಸರಿಯಾದ ದಿನದ ಶಿಪ್ಪಿಂಗ್ ಮತ್ತು ಉತ್ತಮ ಸೇವೆಯನ್ನು ಗ್ರಾಹಕರು ನಿರೀಕ್ಷಿಸಬಹುದು. ಗ್ರಾಹಕರು ಜೆಬಿಎಲ್ ಪ್ರೊಡಕ್ಟ್ ನ ಬಗ್ಗೆ ಯಾವುದೇ ಅನುಮಾನವಿಲ್ಲದೇ ಒರಿಜಿನಲ್ ಪ್ರೊಡಕ್ಟ್ ಗಳನ್ನು ಖರೀದಿಸುವ ನಿಟ್ಟಿನಲ್ಲಿ ಈ ಸೇವೆ ಸಹಕಾರಿಯಾಗಲಿದೆ ಎಂದು ಜೀವನಶೈಲಿ ಆಡಿಯೋ, ಹರ್ಮನ್ ಇಂಡಿಯಾದ ಉಪಾಧ್ಯಕ್ಷರಾಗಿರುವ ಸುಮಿತ್ ಚೌಹಾಣ್ ತಿಳಿಸಿದ್ದಾರೆ.

Best Mobiles in India

English summary
JBL launches online store in India; to offer 50% discount on all products for next four days. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+