ಜೆಟ್ ಕಟ್ಟಿ ಹಾರಿದ ವಿಶ್ವದ ಏಕೈಕ ಮಾನವ:ರಾಸ್ಸಿ

By Super
|
ಜೆಟ್ ಕಟ್ಟಿ ಹಾರಿದ ವಿಶ್ವದ ಏಕೈಕ ಮಾನವ:ರಾಸ್ಸಿ

ರಾಮಾಯಣ, ಮಹಾಭಾರತ, ಚಂದಮಾಮ ಕಥೆ, ಗ್ರೀಕ್, ರೋಮನ್ ಪುರಾಣಗಳಲ್ಲಿ ಹಾಗು ಇತ್ತೀಚಿನ, ಸೂಪರ್ ಮ್ಯಾನ್,ಬ್ಯಾಟ್ ಮ್ಯಾನ್, ಸ್ಪೈಡರ್ ಮ್ಯಾನ್, ಶಕ್ತಿಮಾನ್, ಕ್ರಿಶ್ ನಂತಹ ಚಿತ್ರಗಳಲ್ಲಿ ನೀವು ಅತಿ ಮಾನವರು ಹಾರುವುದನ್ನು ಕೇಳಿರುತ್ತೀರಿ, ನೋಡಿರುತ್ತೀರಿ.

ಆಕಾಶದಲ್ಲಿ ಹಕ್ಕಿಯಂತೆ ಹಾರುವ ಮಾನವನ ಕನಸ್ಸು ವಿಮಾನದ ಮೂಲಕ ಭಾಗಶಃ ಯಶಸ್ವಿಯಾದರೂ ಮತ್ತು ಪ್ಯಾರಾಶೂಟ್ ಕಟ್ಟಿಕೊಂಡು ಆಕಾಶದಲ್ಲಿ ತೇಲಾಡಿದರೂ, ಮಾನವ ಸೂಪರ್ ಮ್ಯಾನ್ ನಂತೆ ಹಾರಲು ಆಗಿರಲಿಲ್ಲ. ಆದರೆ ವಿಜ್ಞಾನದ ಬೆಳವಣಿಗೆಯಿಂದ ಹಾಗು ಮಾನವನ ಅಸೀಮ ಕಲ್ಪನೆಯನ್ನು ತಂತ್ರಜ್ಞಾನದ ಮೂಲಕ ಏನನ್ನಾದರೂ ಮಾಡಲು ಸಾಧ್ಯ ಎನ್ನುವುದಕ್ಕೆ ಸ್ವಿಟ್ಜರ್ಲ್ಯಾಂಡ್ ನ ಪೈಲಟ್ ವೆಸ್ ರಾಸ್ಸಿ ಎಂಬಾತನೇ ಸಾಕ್ಷಿ.

ಹೌದು. ವೆಸ್ ರಾಸಿ ಯ ಸಾಧನೆ ಏನೆಂದರೆ, ವಿಮಾನಯಾನದ ಇತಿಹಾಸದಲ್ಲೇ, ಜೆಟ್ ರೆಕ್ಕೆ ಕಟ್ಟಿಕೊಂಡು ಆಕಾಶದಲ್ಲಿ ಹಾರಾಡಿದ ಜಗತ್ತಿನ ಏಕೈಕ ವ್ಯಕ್ತಿ. 27 ಆಗಸ್ಟ್ 1959 ರಲ್ಲಿ ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಹುಟ್ಟಿದ ರಾಸ್ಸಿ, ತನ್ನ 13 ನೆ ವಯಸ್ಸಿನಲ್ಲಿ ನೋಡಿದ ಏರ್ ಷೋ ಆತನನ್ನು ಪೈಲಟ್ ಆಗುವಂತೆ ಪ್ರೇರೇಪಿಸಿತು.

ಸ್ವಿಸ್ ಏರ್ಲೈನ್ಸ್ ನಲ್ಲಿ ಪೈಲಟ್ ಆಗುವ ಮುನ್ನ ಹಾಕರ್, ಮಿರಾಜ್ ನಂತಹ ಯುದ್ಧ ವಿಮಾನ ಓಡಿಸುವುದರಲ್ಲಿ ಪರಿಣತಿ ಪಡೆದ. ಬೋಯಿಂಗ್, ಏರ್ ಬಸ್ ನಂತಹ ಸಂಚಾರಿ ವಿಮಾನಗಳನ್ನು ಓಡಿಸುತ್ತಿದ್ದ ರಾಸ್ಸಿ ಗೆ, ವಿಮಾನದಂತಹ ಯಂತ್ರಗಳನ್ನು ಒಳಗಡೆ ಕುಳಿತು ನಿರ್ವಹಿಸುವುದಕ್ಕಿಂತ, ಪಕ್ಷಿಯಂತೆ ಸಹಜವಾಗಿ ಹಾರಾಡಲೇಬೇಕೆಂಬ ಆಸೆ ಮತ್ತೆ ಮತ್ತೆ ಆತನನ್ನು ಹೊಸ ಹೊಸ ಪ್ರಯೋಗಗಳಿಗೆ ಉತ್ತೇಜಿಸುತ್ತಿತ್ತು.

ಆ ಪ್ರಯೋಗಗಳ ಫಲವಾಗಿ ಹಲವಾರು ಬಾರಿ ಸ್ಕೈ ಡೈವಿಂಗ್ ಸಾಹಸಗಳನ್ನು ಮಾಡಿ ಸಾಕಷ್ಟು ಯಶಸ್ಸೂ ಕಂಡ. ಆದರೂ ತೃಪ್ತನಾಗದ ರಾಸಿಗೆ ಹೇಗಾದರೂ ಮಾಡಿ ರೆಕ್ಕೆ ನಿರ್ಮಿಸಿ ಕೈಗೆ ಕಟ್ಟಿಕೊಂಡು ಹಾರೇ ಬಿಡೋಣ ಅನಿಸಿ 4 ಶಕ್ತಿಶಾಲಿ ಜೆಟ್ ಎಂಜಿನ್ ಉಪಯೋಗಿಸಿ 2006 ರಲ್ಲಿ ಪ್ರಯೋಗಾರ್ಥ ಹಾರಾಟ ನಡೆಸಿಯೇ ಬಿಟ್ಟ!!

ಆದರೆ ಅವನ ಸಾಧನೆ ಜಗತ್ತಿಗೇ ಗೊತ್ತಾದದ್ದು 2008 ರಲ್ಲಿ. ಜಗತ್ತಿನ ಎಲ್ಲ ಮಾಧ್ಯಮದವರ ಮುಂದೆ ಆಲ್ಪ್ಸ್ ಪರ್ವತದ ಮೇಲೆ ಹಾರಾಡಿದ. ಅವನ ಮುಂದಿನ ಇಂಗ್ಲಿಷ್ ಚಾನಲ್ ಮೇಲಿನ ಹಾರಾಟ 165 ದೇಶಗಳಲ್ಲಿ ಪ್ರಸಾರವಾಯಿತು.

ಮೇ 2011 ರಲ್ಲಿ, ಅಮೆರಿಕಾದ ಗ್ರಾಂಡ್ ಕ್ಯಾನನ್ ಮೇಲೂ ಅವನ ಹಾರಾಟದ ಸಾಧನೆ ಮುಂದುವರೆಯಿತು. ಈ ರೀತಿ ಜೆಟ್ ಪ್ಯಾಕ್ ಕಟ್ಟಿಕೊಂಡು ಹಾರಾಡುತ್ತಲೇ ಸಾಧನೆ ಮಾಡಿರುವುದರಿಂದ ವೆಸ್ ರಾಸ್ಸಿ ಯನ್ನು ಏರ್ ಮ್ಯಾನ್, ಜೆಟ್ ಮ್ಯಾನ್, ರಾಕೆಟ್ ಮ್ಯಾನ್, ಫ್ಯೂಶನ್ ಮ್ಯಾನ್ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಾನೆ.

"life is all about experience" ಎನ್ನುತ್ತಾನೆ ಖ್ಯಾತ ಬರಹಗಾರ ಪೌಲ್ ಕಾಲೋ. ತಂತ್ರಜ್ಞಾನ ನಿಜಕ್ಕೂ ಕನಸಿನ ರೆಕ್ಕೆಗೆ ಹೇಗೆಲ್ಲಾ ಬಣ್ಣ ತುಂಬಿದ experience ಕೊಡುತ್ತದೆ ಅಲ್ಲವೆ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X