Subscribe to Gizbot

ಟೆಲಿಕಾಂಗೆ ಮತ್ತೆ ಶಾಕ್!..ನ್ಯೂ ಇಯರ್‌ಗೆ ಜಿಯೋ ಗಿಫ್ಟ್!..ಹೊಸ ಅದ್ಬುತ ಆಫರ್‌ಗಳ ಘೋಷಣೆ!!

Written By:

ಏರ್‌ಟೆಲ್‌ ಸೇರಿ ಇತರ ಟೆಲಿಕಾಂಗಳು ನೀಡುತ್ತಿದ್ದ ಪೈಪೋಟಿಗೆ ಜಿಯೋ ಮತ್ತೆ ತಕ್ಕ ಉತ್ತರ ನೀಡಿದೆ.! ಇತ್ತೀಚಿಗೆ ಹೆಚ್ಚಿಕೊಂಡಿದ್ದ ಇತರ ಎಲ್ಲಾ ಟೆಲಿಕಾಂಗಳ ಅಬ್ಬರವನ್ನು ಕಡಿಮೆ ಮಾಡಲು ಜಿಯೋ ಮೆತ್ತೆರಡು ಆಫರ್‌ಗಳನ್ನು ನೀಡಿದ್ದು, ತನ್ನ ಗ್ರಾಹಕರಿಗಾಗಿ 2018 ನೇ ವರ್ಷದ ನ್ಯೂ ಇಯರ್ ಆಫರ್‌ಗಳನ್ನು ಘೋಷಿಸಿದೆ.!!

ಜಿಯೋ ಇದೇ ಮೊದಲ ಭಾರಿಗೆ 200 ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಗೆ ಪ್ರತಿದಿನ ಒಂದು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ನೀಡುವ ಆಫರ್ ಅನ್ನು ಘೋಷಿಸಿದ್ದು, ಇದರಿಂದ ಟೆಲಿಕಾಂಗೆ ಮತ್ತೆ ಶಾಕ್ ನೀಡಿದೆ.!! ಹಾಗಾದರೆ, ಜಿಯೋ ನೀಡಿರುವ ಹೊಸ ಆಫರ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋವಿನ ಡೇಟಾ ಬೆಲೆ ಇಳಿಕೆ!!

ಜಿಯೋವಿನ ಡೇಟಾ ಬೆಲೆ ಇಳಿಕೆ!!

ಟೆಲಿಕಾಂನಲ್ಲಿ ನಡೆಯುತ್ತಿದ್ದ ದರಸಮರ ಪೈಪೋಟಿಗೆ ಜಿಯೋ ಮತ್ತೆ ಕಾಲಿಟ್ಟಿದೆ.! ಏರ್‌ಟೆಲ್, ವೊಡಾಫೋನ್‌ ಕಂಪೆನಿಗಳಿಗೆ ಮತ್ತೆ ಟಾಂಗ್ ನೀಡಲಿ ಜಿಯೋ ತನ್ನ ಡೇಟಾ ಬೆಲೆಯನ್ನು ಇಳಿಕೆ ಮಾಡಿದ್ದು, ಇದೀಗ ಆರು ರೂಪಾಯಿಗೆ ಒಂದು ಜಿಬಿ ಡೇಟಾ ನೀಡುವ ಆಫರ್‌ಗಳನ್ನು ಪ್ರಕಟಿಸಿದೆ.!!

ಜಿಯೋ ತಿಂಗಳ ಆಫರ್!!

ಜಿಯೋ ತಿಂಗಳ ಆಫರ್!!

ಇಲ್ಲಿಯವರೆಗೂ ತನ್ನ ಗ್ರಾಹಕರಿಗೆ ಮೂರು ತಿಂಗಳ ವ್ಯಾಲಿಡಿಟಿ ಆಫರ್ ಅನ್ನು ನೀಡುತ್ತಿದ್ದ ಜಿಯೋ ಇದೀಗ ಅತ್ಯಂತ ಕಡಿಮೆ ಬೆಲೆಗಳಿಗೆ ಪ್ರತಿತಿಂಗಳ ಆಫರ್‌ಗಳನ್ನು ನೀಡಿದೆ.!! ಮೂರು ತಿಂಗಳಿಗೆ ಒಮ್ಮೆಲೆ ರೀಚಾರ್ಜ್ ಮಾಡಿಸಲು ಸಾಧ್ಯವಾಗದಿದ್ದರೂ, ಪ್ರತಿದಿನ ಒಂದು ಜಿಬಿಗಿಂತಲೂ ಹೆಚ್ಚು ಡೇಟಾವನ್ನು ಜಿಯೋ ಗ್ರಾಹಕರು ಪಡೆಯಬಹುದಾಗಿದೆ.!!

ಜಿಯೋ 199 ರೂ ಆಫರ್!!

ಜಿಯೋ 199 ರೂ ಆಫರ್!!

ಜಿಯೋ ನ್ಯೂ ಇಯರ್ ಆಫರ್ ಆಗಿ ಪ್ರತಿದಿನ 1.2GB ಡೇಟಾ ಮತ್ತು ಅನ್‌ಲಿಮಿಟೆಡ್ ಕರೆಗಳನ್ನು 200 ರೂ. ಒಳಗೆ ನೀಡಿದೆ.!! ಇದೇ ಮೊದಲ ಭಾರಿ ಜಿಯೋ ಕೇವಲ 199 ರೂಪಾಯಿಗಳಿಗೆ ಪ್ರತಿದಿನ 1.2GB ಡೇಟಾ ಮತ್ತು ಅನ್‌ಲಿಮಿಟೆಡ್ ಕರೆಗಳನ್ನು ನೀಡಿದ್ದು, ಈ ಆಫರ್ ವ್ಯಾಲಿಡಿಟಿ 28 ದಿನಗಳಾಗಿವೆ.!!

ಜಿಯೋ 299 ರೂ.ಆಫರ್!!

ಜಿಯೋ 299 ರೂ.ಆಫರ್!!

ಪ್ರತಿದಿನ ಒಂದು ಜಿಬಿ ಡೇಟಾ ಸಾಲದೆ ಇರುವ ಬಳಕೆದಾರರಿಗಾಗಿ ಜಿಯೋ 299 ರೂ.ಆಫರ್ ಫೋಷಿಸಿದೆ.! ಜಿಯೋವಿನ 299 ರೂ.ಆಫರ್ ರೀಚಾರ್ಜ್ ಮಾಡಿಸಿದರೆ ಪ್ರತಿದಿನ ಎರಡು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳ ಜೊತೆಗೆ ಜಿಯೋವಿನ ಇತರೆ ಸೇವೆಗಳನ್ನು 28 ದಿನಗಳ ವ್ಯಾಲಿಡಿಟಿಯಲ್ಲಿ ಪಡೆಯಬಹುದಾಗಿದೆ.!!

ಮತ್ತೆ ಬೆದರಿದ ಟೆಲಿಕಾಂ!!

ಮತ್ತೆ ಬೆದರಿದ ಟೆಲಿಕಾಂ!!

ಜಿಯೋವಿನ ಮೂರು ತಿಂಗಳ ಆಫರ್‌ಗಳಿಗೆ ವಿರುದ್ದವಾಗಿ ಏರ್‌ಟೆಲ್, ಐಡಿಯಾ ಮತ್ತು ವೊಡಾಫೋನ್ ಟೆಲಿಕಾಂಗಳು ಪ್ರತಿ ತಿಂಗಳ ಆಫರ್‌ಗಳನ್ನು ಬಿಡುಗಡೆ ಮಾಡಿದ್ದವು.! ಇದರಿಂದ ಜಿಯೋವಿನ ಸ್ವಲ್ಪ ಗ್ರಾಹಕರು ಇತರ ಟೆಲಿಕಾಂಗಳ ಪಾಲಾಗಿದ್ದರಿಂದ ಜಿಯೋ ಹೊಸ ವರ್ಷಕ್ಕೆ ಈ ಆಫರ್‌ಗಳನ್ನು ನೀಡಿದೆ.! ಹಾಗಾಗಿ, ಮತ್ತೆ ಟೆಲಿಕಾಂ ಬೆದರಿದೆ.!!

ಓದಿರಿ:ಜಿಯೋ ಎಫೆಕ್ಟ್!!..ಅಮೆರಿಕ, ಚೀನಾದ ಒಟ್ಟಾರೆ ಡೇಟಾ ಬಳಕೆ ಮೀರಿಸಿದೆ ಭಾರತ!!.ಎಷ್ಟು ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Reliance Jio has added two new plans to its portfolio. The new Jio 199 and Jio 299 plans.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot