ಜಿಯೋ, ಏರ್‌ಟೆಲ್, ವೊಡಾಫೋನ್ ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್..?
ನಾವು ಯಾವಾಗಲೂ ನಿಮಗೆ ಹೇಳುವಂತೆ ಜಿಯೋ ಭಾರತೀಯ ಟೆಲಿಕಾಂ ಇಂಡಸ್ಟ್ರಿಯ ಆಳ್ವಿಕೆಯ ರೂಪುರೇಷೆಯನ್ನೇ ಬದಲಾಯಿಸಿಬಿಟ್ಟಿದೆ. ಜಿಯೋ ನೀಡುವ ಕೆಲವು ಕಡಿಮೆ ದರದ ಆಫರ್ ಗಳನ್ನು ಇತರೆ ಕೆಲವು ಟೆಲಿಕಾಂ ಸಂಸ್ಥೆಗಳು ಸ್ಪರ್ಧೆಯಂತೆ ತೆಗೆದುಕೊಂಡಿವೆ ಮತ್ತು ಅದು ಗ್ರಾಹಕರಿಗೆ ಹೆಚ್ಚಿನ ಲಾಭವನ್ನೂ ಮಾಡುತ್ತಿದೆ.
ಸದ್ಯ ಜಿಯೋ ನೀಡಿರುವ 49 ರುಪಾಯಿಯ ಪ್ರಿಪೇಡ್ ರೀಚಾರ್ಜ್ ಪ್ಲಾನ್ ಬ್ಲಾಕ್ ಬಸ್ಟರ್ ಪ್ಲಾನ್ ಆಗಿದೆ ಇದನ್ನೇ ಅನುಸರಿಸಿರುವ ಇತರೆ ಟೆಲಿಕಾಂ ಸಂಸ್ಥೆಗಳು ಇಂತಹದ್ದೇ ಆಫರ್ ನ್ನು ಚಂದಾದಾರರಿಗೆ ನೀಡುತ್ತಿದೆ. ವೊಡಾಫೋನ್ ಇತ್ತೀಚೆಗೆ 47 ರುಪಾಯಿ ಪ್ರೀಪೇಡ್ ಪ್ಲಾನ್ ನ್ನು ಬಿಡುಗಡೆಗೊಳಿಸಿದೆ ಮತ್ತು ಏರ್ ಟೆಲ್ ಕೂಡ 47 ರುಪಾಯಿಯ ಪ್ರೀಪೇಡ್ ಪ್ಲಾನ್ ಒಂದನ್ನು ಗ್ರಾಹಕರಿಗೆ ನೀಡುತ್ತದೆ.

ಹಾಗಾದ್ರೆ ಈ ಮೂರೂ ಟೆಲಿಕಾಂಗಳು ನೀಡಿರುವ ಆಫರ್ ನಲ್ಲಿ ಯಾವ ರೀಚಾರ್ಜ್ ಪ್ಲಾನ್ ಅತ್ಯುತ್ತಮವಾಗಿದೆ. ಇದನ್ನು ತಿಳಿಯಬೇಕು ಎಂದರೆ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಬೇಕು.
. ಜಿಯೋ 49 ರುಪಾಯಿ ಪ್ರಿಪೇಡ್ ರೀಚಾರ್ಜ್ – ವ್ಯಾಲಿಡಿಟಿ, ಡಾಟಾ ಬೆನಿಫಿಟ್ಸ್
ಜಿಯೋ 49 ರುಪಾಯಿ ಪ್ಲಾನ್ ಜಿಯೋ ಫೋನ್ ಬಳಕೆದಾರರಿಗೆ ಸೀಮಿತ. ಈ ಪ್ಲಾನ್ ನ ಅನ್ವಯ 1ಜಿಬಿ ಡಾಟಾ 4ಜಿಯಲ್ಲಿ ಸಿಗುತ್ತದೆ. ಅನಿಯಮಿತ ಸ್ಥಳೀಯ ಮತ್ತು STD ಕರೆಗಳಿಗೆ ಅವಕಾಶವಿದೆ ಮತ್ತು 50 ಎಸ್ಎಂಎಸ್ ಗಳು ಉಚಿತವಾಗಿ ದೊರಕುತ್ತದೆ. ಇದರ ಅವಧಿ 28 ದಿನಗಳಾಗಿರುತ್ತದೆ. ಕೆಲವು ಜಿಯೋ ಆಪ್ ಗಳಿಗೆ ಇದು ಆಕ್ಸಿಸ್ ನೀಡುತ್ತದೆ. ಒಮ್ಮೆ ಇದರ ಲಿಮಿಟ್ ಗಳು ಮುಗಿದರೆ ಡಾಟಾ ಸ್ಪೀಡ್ 64 Kbps ಗೆ ಕಡಿಮೆಯಾಗುತ್ತದೆ.
ಇತರೆ ಟೆಲಿಕಾಂ ಆಫರ್ ಗಳಿಗೆ ಹೋಲಿಸಿದರೆ ಇದು ಅತ್ಯತ್ತಮವಾಗಿದೆ ಆದರೆ ಈ ಪ್ಲಾನ್ ನ ಒಂದೇ ಒಂದು ಸಮಸ್ಯೆಯಂದರೆ ಅದು ಕೇವಲ ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಇದು ಸೀಮಿತವಾಗಿರುತ್ತದೆ. ಒಂದು ವೇಳೆ ನಿಮ್ಮಲ್ಲಿ ಜಿಯೋ ಸಿಮ್ ಇದೆ ಜಿಯೋ ಫೋನ್ ಇಲ್ಲದೇ ಇದ್ದರೆ ಈ 49 ರುಪಾಯಿ ರೀಚಾರ್ಜ್ ಪ್ಲಾನ್ ಲಭ್ಯವಾಗುವುದಿಲ್ಲ.
ವೊಡಾಫೋನ್ 47 ರುಪಾಯಿ ಪ್ರಿಪೇಡ್ ರೀಚಾರ್ಜ್ – ವ್ಯಾಲಿಡಿಟಿ, ಡಾಟಾ ಬೆನಿಫಿಟ್ಸ್
ಇತ್ತೀಚೆಗಷ್ಟೇ ವೊಡಾಫೋನ್ ತನ್ನ 47 ರುಪಾಯಿ ರೀಚಾರ್ಜ್ ಪ್ಲಾನ್ ನ್ನು ಮರುಪರೀಶಿಲನೆಗೊಳಿಸಿದೆ. ಹೊಸ 47 ರುಪಾಯಿಯ ರೀಚಾರ್ಜ್ ಪ್ಲಾನ್ ಪ್ರಕಾರ 125 ನಿಮಿಷಗಳ ಸ್ಥಳೀಯ ಮತ್ತು STD ಕರೆಗಳು ಉಚಿತವಾಗಿ ಲಭ್ಯವಾಗಿದೆ. 50 ಸ್ಥಳೀಯ ಮತ್ತು ರಾಷ್ಟ್ರೀಯ ಎಸ್ಎಂಎಸ್ ಗಳು ಉಚಿತವಾಗಿ ಲಭ್ಯವಾಗುತ್ತದೆ ಜೊತೆಗೆ 500MBಯ 3G/4G ಡಾಟಾ ಸಿಗುತ್ತದೆ. ಈ ಆಫರ್ ನ ವ್ಯಾಲಿಡಿಟಿ ಸಮಯ 28 ದಿನಗಳಾಗಿರುತ್ತದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಈ ಆಫರ್ 48 ರುಪಾಯಿಗೆ ಸಿಗುತ್ತದೆ. ಇದೇ ಪ್ಯಾಕ್ 1 ಜಿಬಿ 3ಜಿ/4ಜಿ ಡಾಟಾ ಲಭ್ಯತೆಯಲ್ಲಿ ಬಿಹಾರ ಮತ್ತು ಜಾರ್ಕಂಡ್ ನಲ್ಲಿ ಸಿಗುತ್ತದೆ. ಅದೇ ಚೆನೈ, ಛತ್ತೀಡ್ ಗಢ, ಕೋಲ್ಕತ್ತಾ, ಮಧ್ಯಪ್ರದೇಶದಲ್ಲಿ ಇದೇ ಆಫರ್ ಜೊತೆಗೆ 150 ನಿಮಿಷದ ಟಾಕ್ ಟೈಮ್ ಉಚಿತವಾಗಿ ಸಿಗುತ್ತದೆ.
ಈ ಹಿಂದೆ 47 ರುಪಾಯಿಯ 1ಜಿಬಿ 3ಜಿ/4ಜಿ ಡಾಟಾ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿತ್ತು. ಇದರಲ್ಲಿ ಎಸ್ಎಂಎಸ್ ಅಥವಾ ವಾಯ್ಸ್ ಕಾಲಿಂಗ್ ಲಾಭಗಳು ಇರಲೇ ಇಲ್ಲ. ಹೊಸದಾಗಿ ಪರಿಚಯಿಸಲಾಗಿರುವ ಪ್ಲಾನ್ ಮೂಲಕ ವಡಾಫೋನ್ ತನ್ನ ಬಳಕೆದಾರರ ಅಗತ್ಯತೆಯನ್ನು ಅರ್ಥೈಸಿಕೊಂಡು ಡಾಟಾ, ವ್ಯಾಲಿಡಿಟಿ, ಕರೆಗಳು ಮತ್ತು ಎಸ್ ಎಂಎಸ್ ಗಳ ಲಾಭಗಳನ್ನು ನೀಡುತ್ತಿದೆ. ಈ ಹೊಸ ಪ್ಲಾನ್ ಎಲ್ಲದರ ಮಿಶ್ರಣವಾಗಿದೆ. ದಿನಕ್ಕೆ 1ಜಿಬಿ ಡಾಟಾ ಬಳಕೆ ಮಾಡುವವರಿಗೆ ಇದು ಅಷ್ಟೇನು ಲಾಭದಾಯಕವಲ್ಲ ಆದರೆ ಡಾಟಾ ಕಡಿಮೆ ಬಳಕೆ ಮಾಡುವವರಿಗೆ ಇದು ಖಂಡಿತ ಉತ್ತಮ ಆಯ್ಕೆಯ ಪ್ಲಾನ್ ಆಗಿರುತ್ತದೆ.
. ಏರ್ ಟೆಲ್ 47 ರುಪಾಯಿ ಪ್ರಿಪೇಡ್ ರೀಚಾರ್ಜ್ – ವ್ಯಾಲಿಡಿಟಿ, ಡಾಟಾ ಬೆನಿಫಿಟ್ಸ್
ಭಾರತೀ ಏರ್ ಟೆಲ್ ನ 47 ರುಪಾಯಿಯ ರೀಚಾರ್ಜ್ ಪ್ಲಾನ್ ಇದ್ದು ಅದು ವಡಾಫೋನ್ ನ 47 ರುಪಾಯಿಯ ರೀಚಾರ್ಜ್ ಪ್ಲಾನ್ ನಂತಿಲ್ಲ. ಏರ್ ಟೆಲ್ ನ ಆಫರ್ ನಲ್ಲಿ 150 ನಿಮಿಷದ ಸ್ಥಳೀಯ ಮತ್ತು STD ಧ್ವನಿ ಕರೆಗಳಿಗೆ ಅವಕಾಶವಿರುತ್ತದೆ. 50 ಸ್ಥಳೀಯ ಮತ್ತು STD ಎಸ್ಎಂಎಸ್ ಗಳು ಉಚಿತವಾಗಿರುತ್ತದೆ ಜೊತೆಗೆ 500MBಯ 3G/ 4G ಡಾಟಾ ಫ್ರಾ ಆಗಿ ಸಿಗುತ್ತದೆ.ಇನ್ನು ಈ ಪ್ಲಾನ್ ನ ವ್ಯಾಲಿಡಿಟಿ ಅವಧಿ 28 ದಿನಗಳೇ ಆಗಿರುತ್ತದೆ.
ಈಗ ಹೇಳಿ, ನಿಮಗೆ ಯಾವ ಫ್ಲಾನ್ ಬೆಸ್ಟ್ ಎಂದು ಅನ್ನಿಸುತ್ತಿದೆ. ಏರ್ ಟೆಲ್ , ಜಿಯೋ, ವಡಾಫೋನ್ ಈ ಮೂರರಲ್ಲಿ ಯಾವುದು ಬೆಸ್ಟ್ ಎಂಬುದನ್ನು ಕಮೆಂಟ್ ಮಾಡಿ ತಿಳಿಸುವುದನ್ನು ಮರೆಯಬೇಡಿ.


Click it and Unblock the Notifications








