Home
ಸುದ್ದಿಜಾಲ

ಜಿಯೋಗೆ ಇಂದು 7 ವರ್ಷ: ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ರೀಚಾರ್ಜ್‌ ಆಫರ್‌!

ಭಾರತದ ಟೆಲಿಕಾಂ ವಲಯದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ್ದ ಜಿಯೋಗೆ ಇದೀಗ 7ನೇ ವರ್ಷ. ಜಿಯೋ ಟೆಲಿಕಾಂ ಭಾರತದಲ್ಲಿ ಶುರುವಾಗಿ ಇಂದಿಗೆ ಏಳನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದ ಅಂಗವಾಗಿ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದೆ. ಈ ಮೂಲಕ ತನ್ನ ಏಳನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಘೋಷಿಸಿದೆ.

ಹೌದು, ರಿಲಯನ್ಸ್‌ ಜಿಯೋ ತನ್ನ ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದೆ. ಭಾರತದಲ್ಲಿ 7ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದ ಪ್ರಯುಕ್ತ ವಿಶೇಷ ಪ್ರಯೋಜನಗಳನ್ನು ಘೋಷಿಸಿದೆ. ಈ ಪ್ರಯೋಜನಗಳು ದೇಶದ ಎಲ್ಲಾ ಜಿಯೋ ಪ್ರಿಪೇಯ್ಡ್‌ ಬಳಕೆದಾರರಿಗೆ ಲಭ್ಯವಾಗಲಿದ್ದು, ಇದು ಸೀಮಿತ ಅವಧಿಗೆ ಮಾತ್ರ ಎನ್ನಲಾಗಿದೆ. ಹಾಗಾದ್ರೆ ಜಿಯೋ ತನ್ನ 7ನೇ ವರ್ಷದ ವಾರ್ಷಿಕೋತ್ಸವದಲ್ಲಿ ಯಾವೆಲ್ಲಾ ಪ್ರಯೋಜನಗಳನ್ನು ನೀಡುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋಗೆ ಇಂದು 7 ವರ್ಷ: ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ರೀಚಾರ್ಜ್‌ ಆಫರ್‌!

ಜಿಯೋಗೆ ಇಂದು ಏಳು ವರ್ಷ.. ಗ್ರಾಹಕರಿಗೆ ಹೆಚ್ಚುವರಿ ಡೇಟಾದ ಹರ್ಷ
ಜಿಯೋ ತನ್ನ 7ನೇ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಪ್ರಿಪೇಯ್ಡ್ ಆಫರ್ ಪ್ರಕಟಿಸಿದೆ. ಅದರಂತೆ ಜಿಯೋದ ಮೂರು ಜನಪ್ರಿಯ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಹೆಚ್ಚುವರಿ ಡೇಟಾ ಪ್ರಯೋಜನ ನೀಡಲು ಮುಂದಾಗಿದೆ. ಇನ್ನು ಈ ಹೆಚ್ಚುವರಿ ಡೇಟಾ ಪ್ರಯೋಜನ ಸೆಪ್ಟೆಂಬರ್ 5 ಮತ್ತು ಸೆಪ್ಟೆಂಬರ್ 30 ರ ನಡುವೆ ರೀಚಾರ್ಜ್‌ ಮಾಡುವ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಜಿಯೋದ 299ರೂ, 749ರೂ ಮತ್ತು 2,999ರೂ ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಜಿಯೋ ಇದೀಗ ಹೆಚ್ಚುವರಿ ಡೇಟಾ ಪ್ರಯೋಜನ ಘೋಷಿಸಿದೆ.

ಜಿಯೋದ 299ರೂ ಪ್ರಿಪೇಯ್ಡ್‌ ಪ್ಲಾನ್‌
ಜಿಯೋ ಏಳನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 299ರೂ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ ಹೆಚ್ಚುವರಿ ಡೇಟಾ ಪ್ರಯೋಜನವನ್ನು ಘೋಷಿಸಿದೆ. ಅದರಂತೆ ಜಿಯೋ ಹೇಳಿರುವ ಸೀಮಿತ ಅವಧಿಯಲ್ಲಿ ನೀವು ಈ ಪ್ಲಾನ್‌ ಅನ್ನು ರೀಚಾರ್ಜ್‌ ಮಾಡಿಸಿದರೆ 7GB ಹೆಚ್ಚುವರಿ ಡೇಟಾ ವೋಚರ್ ಲಭ್ಯವಾಗಲಿದೆ. ಅಂದರೆ ಈ ಪ್ಲಾನ್‌ನ ಸಾಮಾನ್ಯ ಪ್ರಯೋಜನಗಳ ಜೊತೆಗೆ 7GB ಹೆಚ್ಚುವರಿ ಡೇಟಾ ವೋಚರ್ ಕೂಡ ದೊರೆಯಲಿದೆ. ಇನ್ನು ಈ ಪ್ಲಾನ್‌ 28 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, ಅನಿಯಮಿತ ಕರೆ ಹಾಗೂ ದೈನಂದಿನ 100 ಎಸ್‌ಎಂಎಸ್‌ ಪ್ರಯೋಜನವನ್ನು ನೀಡಲಿದೆ.

ಜಿಯೋದ 749ರೂ ಪ್ರಿಪೇಯ್ಡ್‌ ಪ್ಲಾನ್‌
ಜಿಯೋದ 749ರೂ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿಯು ಸಹ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಘೋಷಣೆ ಮಾಡಿದೆ. 90 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಪ್ರಿಪೇಯ್ಡ್‌ ಪ್ಲಾನ್‌ನಲ್ಲಿ ಇದೀಗ ನಿಮಗೆ 14GB (7GB x 2) ಡೇಟಾ ಹೆಚ್ಚುವರಿಯಾಗಿ ಲಭ್ಯವಾಗಲಿದೆ. ಇದರಿಂದ ಹೆಚ್ಚವರಿ ಡೇಟಾ ಬಯಸೋರಿಗೆ ಇದು ಖುಷಿಯ ವಿಚಾರವಾಗಿದೆ. ಇನ್ನು ಈ ಪ್ಲಾನ್‌ನಲ್ಲಿ ಅನಿಯಮಿತ ಕರೆ ಪ್ರಯೋಜನ ಹಾಗೂ ದೈನಂದಿನ 100 ಎಸ್‌ಎಂಎಸ್‌ ಪ್ರಯೋಜನಗಳು ಕೂಡ ದೊರೆಯಲಿದೆ.

ಜಿಯೋದ 2,999ರೂ ಪ್ರಿಪೇಯ್ಡ್‌ ಪ್ಲಾನ್‌
ಜಿಯೋದ 2,999ರೂ ಪ್ರಿಪೇಯ್ಡ್‌ ಪ್ಲಾನ್‌ ವಾರ್ಷಿಕ ಅವಧಿಯ ಪ್ಲಾನ್‌ ಆಗಿದೆ. ಈ ಪ್ಲಾನ್‌ ಒಟ್ಟು 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಸದ್ಯ ಜಿಯೋ ಈ ಪ್ಲಾನ್‌ನಲ್ಲಿ ಒಟ್ಟು 21GB (7GB x 3) ಹೆಚ್ಚುವರಿ ಡೇಟಾ ಪ್ರಯೋಜನವನ್ನು ಘೋಷಣೆ ಮಾಡಿದೆ. ಇದರಿಂದ ನಿಮಗೆ ಪ್ಲಾನ್‌ನ ಡೇಟಾ ಜೊತೆಗೆ ಹೆಚ್ಚುವರಿಯಾಗಿ 21GB ಡೇಟಾ ದೊರೆಯಲಿದೆ.

ಇನ್ನು ಜಿಯೋ ಟೆಲಿಕಾಂ ಘೋಷಣೆ ಮಾಡಿರುವ ಈ ಹೆಚ್ಚುವರಿ ಡೇಟಾ ವೋಚರ್‌ಗಳು ಮತ್ತು ಪ್ರಯೋಜನಗಳನ್ನು ಬಳಕೆದಾರರ MyJio ಅಪ್ಲಿಕೇಶನ್‌ಗೆ ಸೇರಿಸಲಾಗುತ್ತದೆ. ಇದರಲ್ಲಿ ರಿಡೀಮ್‌ ಮಾಡುವ ಮೂಲಕ ಬಳಕೆದಾರರು ಹೆಚ್ಚುವರಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಭಾರತದಲ್ಲಿ ಜಿಯೋ 7 ವರ್ಷಗಳ ಪ್ರಯಾಣ ಹೇಗಿತ್ತು?
ಜಿಯೋ ಟೆಲಿಕಾಂ ಭಾರತದ ಟೆಲಿಕಾಂ ವಲಯದಲ್ಲಿ ಹೊಸ ಕ್ರಾಂತಿಯನ್ನು ಬರೆದಿದ್ದು ಸುಳ್ಳಲ್ಲ. ಪ್ರಾರಂಭದಲ್ಲಿ ಹೊಸ ಸುನಾಮಿಯನ್ನೇ ಎಬ್ಬಿಸಿದ್ದ ಜಿಯೋ ಪ್ರಸ್ತುತ ಆಗಸ್ಟ್ 2023 ರ ಹೊತ್ತಿಗೆ 450 ಮಿಲಿಯನ್ ಚಂದಾದಾರರನ್ನು ಹೊಂದಿರುವ ಪ್ರಮುಖ ಟೆಲಿಕಾಂ ಆಪರೇಟರ್ ಆಗಿದೆ. ಅಷ್ಟೇ ಅಲ್ಲ ವಿಶ್ವದಲ್ಲಿಯೇ ಅತ್ಯಂತ ಕೈಗೆಟುಕುವ ಬೆಲೆಯ 4G ಫೋನ್ ಪರಿಚಯಿಸಿದ ಕೀರ್ತಿ ಕೂಡ ಜಿಯೋಗೆ ಸೇರುತ್ತದೆ.

Best Mobiles in India

English summary
Jio 7th Anniversary Offer: Get Up to 21GB Extra Data with select few prepaid plans in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+