Home
ಸುದ್ದಿಜಾಲ

ಜಿಯೋ ಮತ್ತೆ ದಿಗ್ಗಜ!..ಕನಿಷ್ಠಕ್ಕೆ ಇಳಿದ ಏರ್‌ಟೆಲ್!...ವೊಡಾಫೋನ್ ಐಡಿಯಾಗೆ ಸಂಕಷ್ಟ!!

ಕಳೆದ ಎರಡು ವರ್ಷಗಳಿಂದಲೂ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸುತ್ತಲೇ ಬರುತ್ತಿರುವ 'ರಿಲಯನ್ಸ್ ಜಿಯೋ' ಕಂಪೆನಿಯ ನಾಗಾಲೋಟ ಮುಂದುವರೆದಿದೆ. ಟ್ರಾಯ್ ಬಿಡುಗಡೆ ಮಾಡಿರುವ ನೂತನ ರಿಪೋರ್ಟ್ ಪ್ರಕಾರ, ನವೆಂಬರ್ 2018ರಲ್ಲಿ ಜಿಯೋ ದೇಶದಾದ್ಯಂತ ಅತಿ ಹೆಚ್ಚು ಚಂದಾದಾರನ್ನು ಸೇರಿಸಿಕೊಂಡಿದ್ದರೆ, BSNL ಎರಡನೇ ಸ್ಥಾನವನ್ನು ಪಡೆದಿದೆ.

ಹೌದು, ಟೆಲಿಕಾಂನಲ್ಲಿ ಕಂಡುಬರುತ್ತಿರುವ ಭಾರೀ ಪೈಪೋಟಿ ನಡುವೆಯೂ ಜಿಯೋ ಮತ್ತು ಬಿಎಸ್‌ಎನ್‌ಎಲ್ ಕಂಪೆನಿಗಳು ಹೆಚ್ಚು ಗ್ರಾಹಕರನ್ನು ಸೆಳೆಯಲು ಸಫಲವಾಗಿವೆ. ನವೆಂಬರ್‌ನಲ್ಲಿ ಜಿಯೋ ದೇಶದಾದ್ಯಂತ ಸುಮಾರು 88.01 ಲಕ್ಷ ಚಂದಾದಾರರನ್ನು ಸೇರಿಸಿಕೊಂಡಿದ್ದರೆ, ಭಾರತದ ನಂಬರ್ ಒನ್ ಟೆಲಿಕಾಂ ವೊಡಾಫೋನ್ ಐಡಿಯಾ ಭಾರೀ ಗ್ರಾಹಕರನ್ನು ಕಳೆದುಕೊಂಡಿದೆ.

ಜಿಯೋ ಮತ್ತೆ ದಿಗ್ಗಜ!.ಕನಿಷ್ಠಕ್ಕೆ ಇಳಿದ ಏರ್‌ಟೆಲ್!.ವೊಡಾಫೋನ್ ಐಡಿಯಾಗೆ ಸಂಕಷ್ಟ!

ಇದೇ ಶುಕ್ರವಾರ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ನವೆಂಬರ್ 30 ರ ವೇಳೆಗೆ ರಿಲಯನ್ಸ್ ಜಿಯೊ ಚಂದಾದಾರರ ಸಂಖ್ಯೆ 27.16 ಕೋಟಿ ಎಂದು ತಿಳಿದುಬಂದಿದೆ. ಹಾಗಾದರೆ, ನವೆಂಬರ್ 2018ರ ವೇಳೆಗೆ ಭಾರತದ ಟೆಲಿಕಾಂನಲ್ಲಿ ಏನೆಲ್ಲಾ ಬದಲಾವಣೆಗಳು ಆಗಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ದೇಶದ ಒಟ್ಟು ಫೋನ್ ಚಂದಾದಾರರು?

ದೇಶದ ಒಟ್ಟು ಫೋನ್ ಚಂದಾದಾರರು?

2018 ನವೆಂಬರ್ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ ಒಟ್ಟು 117.18 ಕೋಟಿ ಮೊಬೈಲ್ ಫೋನ್ ಚಂದಾದಾರರು ಇದ್ದಾರೆ ಎಂದು ಟ್ರಾಯ್ ರಿಪೋರ್ಟ್ ತಿಳಿಸಿದೆ. ಇದರಲ್ಲಿ 17.39 ಲಕ್ಷ ಹೊಸ ಗ್ರಾಹಕರ ಸೇರ್ಪಡೆಯಾಗಿದೆ. ಇನ್ನು ಖಾಸಗಿ ಟೆಲಿಕಾಂ ಕಂಪೆನಿಗಳು ಶೇಕಡ 89.99 ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ಸರ್ಕಾರಿ ಕಂಪೆನಿಗಳ ಪಾಲು ಶೇಕಡಾ 10.01 ರಷ್ಟು ಮಾತ್ರ.

ಜಿಯೋ ನಾಗಾಲೋಟ!

ಜಿಯೋ ನಾಗಾಲೋಟ!

ಭಾರತದ 4G ಆಟಗಾರ ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಕಳೆದ ವರ್ಷವೂ ತನ್ನ ನಾಗಾಲೋಟವನ್ನು ಮುಂದುವರೆಸಿದೆ. ಕಳೆದ ವರ್ಷದ ಚಂದಾದಾರಿಕೆ ರೇಸ್‌ನಲ್ಲಿ ನೇತೃತ್ವ ವಹಿಸಿರುವ ಜಿಯೋ ದೇಶದಾದ್ಯಂತ ಸುಮಾರು 88.01 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡಿದೆ, ನವೆಂಬರ್ 30ರ ವೇಳೆಗೆ ಜಿಯೊ ಚಂದಾದಾರರ ಸಂಖ್ಯೆ 27.16 ಕೋಟಿ ದಾಟಿದೆ.

ಎರಡನೇ ಸ್ಥಾನ BSNLಗೆ!

ಎರಡನೇ ಸ್ಥಾನ BSNLಗೆ!

ಇತ್ತೀಚಿಗಷ್ಟೇ ಜಿಯೋಗಿಂತಲೂ ಮೂರು ಪಟ್ಟು ಡೇಟಾ ನೀಡಿ ಆಶ್ಚರ್ಯ ಮೂಡಿಸಿದ್ದ ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಸಂಸ್ಥೆ ಚಂದಾರರನ್ನು ಸೆಳೆಯುವಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ನವೆಂಬರ್ 30ರ ವೇಳೆಗೆ ಬಿಎಸ್‌ಎನ್‌ಎಲ್ ಸಂಸ್ಥೆ 3.78 ಲಕ್ಷ ಚಂದಾದಾರರನ್ನು ಸೇರಿಸಿ ಟೆಲಿಕಾಂನಲ್ಲಿ ಎರಡನೇ ಸ್ಥಾನ ಪಡೆದಿದೆ.

ಕನಿಷ್ಠಕ್ಕೆ ಇಳಿದ ಏರ್‌ಟೆಲ್!

ಕನಿಷ್ಠಕ್ಕೆ ಇಳಿದ ಏರ್‌ಟೆಲ್!

ಭಾರತ ಟೆಲಿಕಾಂನಲ್ಲಿ ಹಲವು ವರ್ಷಗಳ ಕಾಲ ರಾಜನಂತೆ ಮೆರೆದಿದ್ದ ಏರ್‌ಟೆಲ್ ನವೆಂಬರ್ ತಿಂಗಳಿನಲ್ಲಿ ಮಣ್ಣುಮುಕ್ಕಿದೆ. ನವೆಂಬರ್ 30ರ ವೇಳೆಗೆ ಏರ್‌ಟೆಲ್ ಕೇವಲ 1.02 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡಿದ್ದು, ಒಟ್ಟಾರೆಯಾಗಿ, ನವೆಂಬರ್ ಅಂತ್ಯದ ವೇಳೆಗೆ ಏರ್‌ಟೆಲ್‌ನ ಚಂದಾದಾರರು 34.18 ಕೋಟಿಯಷ್ಟು ಇದ್ದಾರೆ ಎಂದು ರಿಪೋರ್ಟ್ ತಿಳಿಸಿದೆ.

ವೊಡಾಫೋನ್ ಐಡಿಯಾಗೆ ಸಂಕಷ್ಟ!

ವೊಡಾಫೋನ್ ಐಡಿಯಾಗೆ ಸಂಕಷ್ಟ!

ದೇಶದ ಅತಿ ದೊಡ್ಡ ಟೆಲಿಕಾಂ ಆಗಿ ಹೊರಹೊಮ್ಮಿರುವ ವೊಡಾಫೋನ್ ಐಡಿಯಾಗೆ ನವೆಂಬರ್ ತಿಂಗಳು ಸಂಕಷ್ಟವನ್ನು ತಂದುಕೊಂಡಿದೆ. ಪ್ರಸ್ತುತ ಅತಿದೊಡ್ಡ ಟೆಲಿಕಾಂಸೇವಾ ಪೂರೈಕೆದಾರ ವೊಡಾಫೋನ್ ಐಡಿಯಾ 65.26 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಇನ್ನು ನವೆಂಬರ್ ಅಂತ್ಯದ ವೇಳೆಗೆ ವೊಡಾಫೋನ್ ಐಡಿಯಾ ಚಂದಾದಾರಿಕೆ 42.11 ಕೋಟಿ ಗಳಷ್ಟಿದೆ.

Best Mobiles in India

English summary
Reliance Jio led the subscription race in November 2018 adding around 88.01 lakh subscribers across the country, the highest among all the telecom service providers.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+