ಜಿಯೋ ಮತ್ತು ಏರ್ ಟೆಲ್ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವನ್ನು ನಡೆಸುತ್ತಿರುವ ಮಾದರಿಯಲ್ಲಿಯೇ, ಆಪಲ್ ವಾಚ್ ಸಿರೀಸ್ 3 (GPS + ಸೆಲ್ಯೂಲರ್) ಯನ್ನು ಬಿಡುಗಡೆ ಮಾಡಲು ಸಹ ಸ್ಪರ್ಧೇಯನ್ನು ನಡೆಸುತ್ತಿವೆ. ಮೇ 4ನೇ ತಾರೀಖಿನಿಂದ ಮಾರುಕಟ್ಟೆಯಲ್ಲಿ ಇದು ಲಭ್ಯವಿರಲಿದ್ದು, ಜಿಯೋ .ಕಾಮ್, ರಿಲಯನ್ಸ್ ಡಿಜಿಟಲ್, ಜಿಯೋ ಸ್ಟೋರ್ ಮತ್ತು ಏರ್ಟೆಲ್ ವೆಬ್ ಸೈಟ್ ಗಳಲ್ಲಿ ಮಾರಾಟವಾಗಲಿದೆ.
ಇದಲ್ಲದೇ ಮೇ 11 ರಿಂದ ಸಾಮಾನ್ಯ ಆಫ್ ಲೈನ್ ಮಾರುಕಟ್ಟೆಯಲ್ಲಿಯೂ ಈ ಸ್ಮಾರ್ಟ್ ವಾಚ್ ಲಭ್ಯವಿರಲಿದೆ. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಆಪಲ್ ವಾಚ್ ಸಿರೀಸ್ 3 ಸಾಕಷ್ಟು ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ.
ಜಿಯೋ ಆಪಲ್ ವಾಚ್ ಸಿರೀಸ್ 3 ಖರೀದಿಸುವವರಿಗೆ ಸುಪ್ರೀಮ್ ಸರ್ವೀಸ್ ಅನ್ನು ನೀಡಲಿದ್ದು, ಒಂದೇ ನಂಬರ್ ಐಫೋನ್ ಮತ್ತು ವಾಚ್ ನಲ್ಲಿಯೂ ಕಾರ್ಯನಿರ್ವಹಿಸುವಂತೆ ಮಾಡಲಿದೆ. ಇದಲ್ಲದೇ ಜಿಯೋ ಬಳಕೆದಾರರು ಈಗಾಗಲೇ ಪಡೆದುಕೊಂಡರುವ ಪ್ಲಾನ್ ಗಳನ್ನು ಮುಂದುವರೆಸಿಕೊಂಡು ಹೋಗಬಹುದಾಗಿದೆ.
ಇದಲ್ಲದೇ ಜಿಯೋ ತನ್ನ ಪೋಸ್ಟ್ ಪೇಯ್ಡ್ ಮತ್ತು ಪ್ರೀಪೇಯ್ಡ್ ಬಳಕೆದಾರರಿಗೆ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಇದಲ್ಲದೇ ಯಾರು ಬೇಕಾದರು ಜಿಯೋ ಕನೆಕ್ಷನ್ ನೊಂದಿಗೆ ಆಪಲ್ ವಾಚ್ ಸಿರೀಸ್ 3 ಪ್ರೀ ಬುಕ್ ಮಾಡಬಹುದಾಗಿದೆ. ಇದಲ್ಲದೇ ಹೋಮ್ ಡಿಲಿವರಿಯೂ ಲಭ್ಯವಿದೆ. ಇದಲ್ಲದೇ ಮೊಬೈಲ್ ನಂಬರ್ ಪೋರ್ಟಬಲಿಟಿಯನ್ನು ಇದರೊಂದಿಗೆ ನೀಡಲಿದೆ.
ಡೆಬಿಟ್/ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಮರೆತರೆ ATMನಲ್ಲಿಯೇ ರೀಸೆಟ್ ಮಾಡಿಕೊಳ್ಳುವುದು ಹೇಗೆ?
ಇದಲ್ಲದೇ ಏರ್ಟೆಲ್ ತನ್ನ ಬಳಕೆದಾರರಿಗೆ ಹೊಸ ಆಯ್ಕೆಯನ್ನು ನೀಡಿದೆ. ಇದಕ್ಕಾಗಿ ಇನ್ಫಿನಿಟಿ ಪ್ಲಾನ್ ಅನ್ನು ಬಳಕೆದಾರರಿಗೆ ನೀಡಲಿದೆ. ಇದರಿಂದಾಗಿ ಆಪಲ್ ವಾಚ್ ಸಿರೀಸ್ 3 ಬಳಕೆದಾರರಿಗೆ ಫ್ರೀಯಾಗಿಯೇ ದೊರೆಯಲಿದೆ ಎನ್ನಲಾಗಿದೆ.
ಆಪಲ್ ವಾಚ್ ಸಿರೀಸ್ 3 (GPS + ಸೆಲ್ಯೂಲರ್) ಸಿಮ್ ಎಲೆಕ್ಸಿಕ್ ಸಿಮ್ ನೊಂದಿಗೆ ಕಾರ್ಯನಿರ್ವಹಿಸಲಿದ್ದು, ಇದು ಎಲ್ಲಾ ಐಫೋನ್ ಗಳೊಂದಿಗೂ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಅಮೆಜಾನ್ ನಲ್ಲಿ ಲಭ್ಯವಿದ್ದು, ರೂ.28,899ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ.
To stay updated with latest technology news & gadget reviews, follow GizBot on
Twitter,
Facebook,
YouTube and also subscribe to our notification.
Allow Notifications
You have already subscribed