Home
ಸುದ್ದಿಜಾಲ

ಜಿಯೋದಿಂದ ಹೊಸ ಆಲ್‌-ಇನ್‌-ಒನ್‌ ಪ್ಲಾನ್‌..! 1000 ನಿಮಿಷ, ಡೈಲಿ 2GB ಡೇಟಾ..!

By Gizbot Bureau

ಐಯುಸಿ ಶುಲ್ಕ ಮತ್ತು ವಿಶೇಷ ಟಾಪ್-ಅಪ್ ಯೋಜನೆಗಳನ್ನು ಪ್ರಕಟಿಸಿದ ನಂತರ, ರಿಲಾಯನ್ಸ್ ಜಿಯೋ 222 ರೂ.ಗಳಿಂದ ಆಲ್-ಇನ್-ಒನ್ ಯೋಜನೆಗಳನ್ನು ತನ್ನ ಗ್ರಾಹಕರಿಗಾಗಿ ಹೊರತಂದಿದೆ. ಈ ಪ್ಲಾನ್‌ನಿಂದ ಗ್ರಾಹಕರು ದೈನಂದಿನ 2ಜಿಬಿ ಡೇಟಾ ಮತ್ತು ಜಿಯೋದಿಂದ ಜಿಯೋಗೆ ಅನಿಯಮಿತ ವಾಯ್ಸ್‌ ಕಾಲ್‌ಗಳನ್ನು ಪಡೆಯಲಿದ್ದು, ಇತರ ನೆಟ್‌ವರ್ಕ್‌ಗಳಿಗೆ ಹೆಚ್ಚುವರಿ 1,000 ಐಯುಸಿ ನಿಮಿಷಗಳನ್ನು ಬಳಕೆದಾರರು ಪಡೆಯಲಿದ್ದಾರೆ. ಇದರಿಂದಾಗಿ ಚಂದಾದಾರರು ಐಯುಸಿ ಟಾಪ್-ಅಪ್ ಯೋಜನೆಗಳೊಂದಿಗೆ ಜಿಯೋಗೆ ರೀಚಾರ್ಜ್ ಮಾಡಬೇಕಾಗುತ್ತದೆ.

ಮೂರು ಪ್ಲಾನ್‌ಗಳು

ಮೂರು ಪ್ಲಾನ್‌ಗಳು

ಹೊಸ ಜಿಯೋ ಆಲ್ ಇನ್ ಒನ್ ಪ್ಲಾನ್‌ಗಳು 222 ರೂ., 333 ರೂ. ಮತ್ತು 444 ರೂ.ಗಳಲ್ಲಿ ದೊರೆಯುತ್ತಿದ್ದು, ಪ್ರತಿಸ್ಪರ್ಧಿ ಟೆಲಿಕಾಂ ಆಪರೇಟರ್‌ಗಳಲ್ಲಿ ಅಸ್ತಿತ್ವದಲ್ಲಿರುವ ಯೋಜನೆಗಳಿಗಿಂತ ಶೇ.20 ರಿಂದ ಶೇ.50ರಷ್ಟು ಅಗ್ಗವಾಗಿದೆ. ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಈ ಯೋಜನೆಗಳು ಒಂದು ತಿಂಗಳಿಂದ ಮೂರು ತಿಂಗಳವರೆಗೆ ಮಾನ್ಯವಾಗಿರುತ್ತವೆ.

222 ರೂ. ಪ್ಲಾನ್‌

222 ರೂ. ಪ್ಲಾನ್‌

222 ರೂ.ನ ಹೊಸ ಜಿಯೋ ಆಲ್ ಇನ್ ಒನ್ ಯೋಜನೆಯಲ್ಲಿ ಗ್ರಾಹಕರು ಜಿಯೋದಿಂದ ಜಿಯೋಗೆ ಅನಿಯಮಿತ ಕರೆಗಳನ್ನು ಪಡೆದರೆ, ಇತರ ನೆಟ್‌ವರ್ಕ್‌ಗಳಿಗೆ 1,000 ನಿಮಿಷಗಳ ವಾಯ್ಸ್‌ ಕರೆಗಳನ್ನು ಪಡೆಯಲಿದ್ದಾರೆ. ಇನ್ನು, ದೈನಂದಿನವಾಗಿ 2 ಜಿಬಿ ಡೇಟಾವನ್ನು ಬಳಕೆದಾರರು ಪಡೆಯಲಿದ್ದು, 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

333 ರೂ. ಪ್ಲಾನ್‌

333 ರೂ. ಪ್ಲಾನ್‌

ಇನ್ನು, 333 ರೂ. ಪ್ರಿಪೇಯ್ಡ್ ಯೋಜನೆಯು ಒಂದೇ ರೀತಿಯ ಪ್ರಯೋಜನಗಳನ್ನು ನೀಡಿದರೂ, ಎರಡು ತಿಂಗಳು ಅಂದರೆ, 56 ದಿನಗಳ ವ್ಯಾಲಿಡಿಟಿ ಹೊಂದಿದೆ. 444 ರೂ. ಪ್ಲಾನ್‌ ಕೂಡ ಮೇಲಿನ ಎರಡು ಪ್ಲಾನ್‌ಗಳಂತೆ ಒಂದೇ ರೀತಿಯ ಯೋಜನೆಗಳನ್ನು ನೀಡಿದರೂ, 84 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ. 111 ರೂ. ಹೆಚ್ಚುವರಿ ಪಾವತಿ ಮೇಲೆ ಜಿಯೋ ಹೆಚ್ಚುವರಿ ಒಂದು ತಿಂಗಳ ಪ್ರಯೋಜನಗಳನ್ನು ನೀಡುತ್ತಿದ್ದು, ಗ್ರಾಹಕರಿಗೆ ಉಪಯುಕ್ತವಾಗಲಿದೆ.

ಹೇಗೆ ಪ್ರಯೋಜನಕಾರಿ?

ಹೇಗೆ ಪ್ರಯೋಜನಕಾರಿ?

ಹೊಸ ಆಲ್-ಇನ್-ಒನ್ ಯೋಜನೆಗಳು ಗ್ರಾಹಕರಿಗೆ ಹೇಗೆ ಪ್ರಯೋಜನಕಾರಿ ಎಂದರೆ, ಬೇಸ್ ರೀಚಾರ್ಜ್ ಯೋಜನೆಯೊಂದಿಗೆ ಐಯುಸಿ ಟಾಪ್-ಅಪ್ ಪ್ಯಾಕ್‌ಗಳು ಹೆಚ್ಚು ಅಗ್ಗವಾಗಿವೆ. ಉದಾಹರಣೆಗೆ, ರೂ. 444 ಯೋಜನೆಯು 1,000 ನಿಮಿಷಗಳ ಉಚಿತ ಆಫ್-ನೆಟ್‌ವರ್ಕ್ ಕರೆಗಳನ್ನು ನೀಡಲಿದೆ. ಇದಕ್ಕಾಗಿ 448 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ 80 ರೂ.ನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಅಲ್ಲದೇ ಹೆಚ್ಚುವರಿ ಡೇಟಾ ಕೂಡ ನಿಮಗೆ ಕೇವಲ ಪ್ರತಿ ಜಿಬಿಗೆ 1 ರೂ.ನಂತೆ ಸಿಗಲಿದ್ದು, ಗ್ರಾಹಕರಿಗೆ ಹೆಚ್ಚು ಉಪಯುಕ್ತವಾಗಿದೆ.

19 ಮತ್ತು 52 ರೂ. ಪ್ಲಾನ್‌ ಸ್ಥಗಿತ

19 ಮತ್ತು 52 ರೂ. ಪ್ಲಾನ್‌ ಸ್ಥಗಿತ

ರಿಲಯನ್ಸ್ ಜಿಯೋದ ಹೊಸ ಆಲ್‌-ಇನ್‌-ಒನ್‌ ಪ್ಲಾನ್‌ಗಳಿಂದಾಗಿ ಈ ಹಿಂದೆ ಇದ್ದ 19 ರೂ. ಮತ್ತು 52 ರೂ. ರೀಚಾರ್ಜ್‌ ಪ್ಯಾಕ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಈ ರೀಚಾರ್ಜ್ ಪ್ಯಾಕ್‌ಗಳು ಐಯುಸಿ ಟಾಪ್-ಅಪ್ ಪ್ಲಾನ್‌ ಪ್ರಾರಂಭದ ನಂತರ ನಿಷ್ಪ್ರಯೋಜಕಾವಗಿದ್ದು, ಇತರ ನೆಟ್‌ವರ್ಕ್‌ಗಳಿಗೆ ಕರೆ ಮಾಡಲು ಈ ಪ್ಲಾನ್‌ಗಳಲ್ಲಿ ನಿಮಿಷಕ್ಕೆ 60 ಪೈಸೆ ಪಾವತಿಸಬೇಕಾಗಿತ್ತು. ಆದರೆ, ಆಲ್‌-ಇನ್‌-ಒನ್‌ ಪ್ಲಾನ್‌ಗಳಲ್ಲಿ ಉಚಿತ ನಿಮಿಷಗಳು ದೊರೆಯುತ್ತವೆ.

Best Mobiles in India

English summary
After the IUC charges and special top-up plans, Reliance Jio has come up with All-in-One plans. These plans offer 2GB daily data and unlimited voice calling from Jio to Jio. The new plans come with additional 1,000 IUC minutes to other networks so that subscribers need to recharge with the IUC top-up plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+