Home
ಸುದ್ದಿಜಾಲ

ಜಿಯೋ ಮತ್ತು ಏರ್‌ಟೆಲ್‌ನ 300 ರೂ. ಒಳಗಿನ ಎಲ್ಲಾ ಪ್ರಿಪೇಯ್ಡ್ ಪ್ಲಾನ್ಸ್ ಪಟ್ಟಿ ಇಲ್ಲಿದೆ!

ಭಾರತದ ಪ್ರಮುಖ ಟೆಲಿಕಾಂ ಕಂಪೆನಿಗಳಾದ ಜಿಯೋ ಮತ್ತು ಏರ್‌ಟೆಲ್ ಎರಡೂ ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸಲು ಇನ್ನಿಲ್ಲದ ಪೈಪೋಟಿಗೆ ಬಿದ್ದಿವೆ. ಅದರಲ್ಲೂ 4G ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿರುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಇತ್ತೀಚಿಗೆ ನ 300 ರೂ. ಒಳಗೆ ಹಲವಾರು ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿವೆ. 4G ಸಂಪರ್ಕದೊಂದಿಗೆ ಅನಿಯಮಿತ ಕರೆಗಳ ಸೌಲಭ್ಯವನ್ನು ಹೊಂದಿರುವ ಹಾಗೂ ಕೈಗೆಟುಕುವ ಯೋಜನೆಯನ್ನು ಬಯಸುವವರಿಗೆ ಈ ಯೋಜನೆಗಳು ವಿಶೇಷವಾಗಿ ಲಾಭ ಒದಗಿಸುತ್ತವೆ. ಹಾಗಾಗಿ, ಇಂದಿನ ಲೇಖನದಲ್ಲಿ ಜಿಯೋ ಮತ್ತು ಏರ್‌ಟೆಲ್ ಎರಡು ಕಂಪೆನಿಗಳು ಒದಗಿಸುತ್ತಿರುವ 300 ರೂ. ಒಳಗಿನ ರೀಚಾರ್ಜ್ ಯೋಜನೆಗಳು ಹೇಗಿವೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ ಬನ್ನಿ.

₹300 ಕ್ಕಿಂತ ಕಡಿಮೆ ಬೆಲೆ ಹೊಂದಿರುವ ಜಿಯೋ ರೀಚಾರ್ಜ್ ಪ್ಲಾನ್‌ಗಳು ಹಿಗಿವೆ,

  • ₹199 ಪ್ರಿಪೇಯ್ಡ್ ಪ್ಲಾನ್: ಈ ರೀಚಾರ್ಜ್ ಯೋಜನೆಯಲ್ಲಿ ದಿನಕ್ಕೆ 1.5 GB ಡೇಟಾ, ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಮತ್ತು JioTV, JioCinema ಮತ್ತು JioCloud ಗೆ ಪ್ರವೇಶವಿದೆ.
  • ₹239 ಪ್ರಿಪೇಯ್ಡ್ ಪ್ಲಾನ್: ಈ ರೀಚಾರ್ಜ್ ಯೋಜನೆಯಲ್ಲಿ ದಿನಕ್ಕೆ 1.5 GB ಡೇಟಾ, ಅನಿಯಮಿತ ಕರೆಗಳು, ದಿನಕ್ಕೆ 100 SMS ಮತ್ತು JioTV, JioCinema ಮತ್ತು JioCloud ಗೆ ಪ್ರವೇಶವಿದೆ.
  • ₹299 ಪ್ರಿಪೇಯ್ಡ್ ಪ್ಲಾನ್: ಈ ರೀಚಾರ್ಜ್ ಯೋಜನೆಯಲ್ಲಿ ದಿನಕ್ಕೆ 1.5 GB ಡೇಟಾ, ಅನಿಯಮಿತ ಕರೆಗಳು ಮತ್ತು JioTV, JioCinema ಮತ್ತು JioCloud ಗೆ ಪ್ರವೇಶವಿದೆ.
  • ₹209 ಪ್ರಿಪೇಯ್ಡ್ ಪ್ಲಾನ್: ಈ ರೀಚಾರ್ಜ್ ಯೋಜನೆಯಲ್ಲಿ ದಿನಕ್ಕೆ 1 GB 5G ಹೈ ಸ್ಪೀಡ್ ಡೇಟಾ, ಅನಿಯಮಿತ ಧ್ವನಿ ಕರೆಗಳು, ಮತ್ತು 28 ದಿನಗಳವರೆಗೆ 100 SMS ಗಳ ಲಾಭವಿದೆ.
  • ಜಿಯೋ ಮತ್ತು ಏರ್‌ಟೆಲ್‌ನ 300 ರೂ. ಒಳಗಿನ ಎಲ್ಲಾ ಪ್ರಿಪೇಯ್ಡ್ ಪ್ಲಾನ್ಸ್ ಪಟ್ಟಿ!

₹300 ಕ್ಕಿಂತ ಕಡಿಮೆ ಬೆಲೆ ಹೊಂದಿರುವ ಏರ್‌ಟೆಲ್ ರೀಚಾರ್ಜ್ ಪ್ಲಾನ್‌ಗಳು ಹಿಗಿವೆ,

  • ₹199 ಪ್ರಿಪೇಯ್ಡ್ ಪ್ಲಾನ್: ಈ ರೀಚಾರ್ಜ್ ಯೋಜನೆಯು ಒಟ್ಟು 2GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 100 SMS/ದಿನಕ್ಕೆ 28 ದಿನಗಳವರೆಗೆ ಬರುತ್ತದೆ. ಈ ಯೋಜನೆಯೊಂದಿಗೆ ಇತರೆ ಬೇರೆ ಲಾಭಗಳು ಇಲ್ಲ.
  • ₹219 ಪ್ರಿಪೇಯ್ಡ್ ಪ್ಲಾನ್ : ಈ ರೀಚಾರ್ಜ್ ಯೋಜನೆಯು ಒಟ್ಟು 3GB ಡೇಟಾ, ಅನಿಯಮಿತ ಧ್ವನಿ ಕರೆ, ಒಟ್ಟು 300 ಕ್ಕೆ ಸೀಮಿತಗೊಳಿಸಲಾಗಿರುವ ಎಸ್‌ಎಂಎಸ್‌ ಜೊತೆಗೆ 30 ದಿನಗಳ ಸೇವಾ ಮಾನ್ಯತೆಯನ್ನು ಹೊಂದಿದೆ
  • ₹249 ಪ್ರಿಪೇಯ್ಡ್ ಪ್ಲಾನ್ : ಈ ರೀಚಾರ್ಜ್ ಯೋಜನೆಯು ಒಟ್ಟು 3GB ಡೇಟಾ, ಅನಿಯಮಿತ ಧ್ವನಿ ಕರೆ, ಒಟ್ಟು 300 ಕ್ಕೆ ಸೀಮಿತಗೊಳಿಸಲಾಗಿರುವ ಎಸ್‌ಎಂಎಸ್‌ ಜೊತೆಗೆ 30 ದಿನಗಳ ಸೇವಾ ಮಾನ್ಯತೆಯನ್ನು ಹೊಂದಿದೆ
  • ₹299 ಪ್ರಿಪೇಯ್ಡ್ ಪ್ಲಾನ್ : ಈ ರೀಚಾರ್ಜ್ ಯೋಜನೆಯು 1GB ದೈನಂದಿನ ಡೇಟಾ ಮತ್ತು ದಿನಕ್ಕೆ 100 SMS ನೊಂದಿಗೆ ಬರುತ್ತದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಯೋಜನೆಯು ಉಚಿತ ಹೆಲೋಟ್ಯೂನ್ಸ್ ಪ್ರವೇಶ ನೀಡುತ್ತದೆ.

ಜಿಯೋ ಮತ್ತು ಏರ್‌ಟೆಲ್‌ ಒದಗಿಸುತ್ತಿರುವ 300 ರೂ. ಒಳಗಿನ ಈ ಮೇಲಿನ ಎಲ್ಲಾ ಪ್ರೀಪೇಡ್ ಯೋಜನೆಗಳು ಕೈಗೆಟುಕುವ ದರದಲ್ಲಿ ಉತ್ತಮ ಸಂಪರ್ಕವನ್ನು ಬಯಸುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿವೆ. ಇವುಗಳಲ್ಲಿ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಸೂಕ್ತವಾದ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

Best Mobiles in India

English summary
Jio and Airtel Service Plans Priced Below ₹300 with Validity. check details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+