ಭಾರತದಲ್ಲಿ 5G ಅಭಿವೃದ್ಧಿ ಪಡಿಸಲು ಜಿಯೋ ಜೊತೆ ಕೈ ಜೋಡಿಸಿದ ಇಂಟೆಲ್‌ ಕಂಪೆನಿ!

|

ಭಾರತದಲ್ಲಿ 5G ನೆಟ್‌ವರ್ಕ್‌ ಪರಿಚಯಿಸುವಲ್ಲಿ ಜಿಯೋ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಜಿಯೋ ಕನಸಿಗೆ ಇಂಟೆಲ್‌ ಕಂಪೆನಿ ಕೂಡ ಕೈ ಜೋಡಿಸಿದೆ. ಭಾರತದಲ್ಲಿ 5G ನೆಟ್‌ವರ್ಕಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ರಿಲಯನ್ಸ್ ಜಿಯೋ ಜೊತೆ ಕೆಲಸ ಮಾಡುವುದಾಗಿ ಇಂಟೆಲ್ ಕಾರ್ಪ್ ತಿಳಿಸಿದೆ. ಇಂಟೆಲ್ ತನ್ನ 5G ರೇಡಿಯೊ-ಆಕ್ಸೆಸ್ ನೆಟ್‌‌ವರ್ಕ್‌ (RAN)ಗಾಗಿ ರಿಲಯನ್ಸ್ ಜಿಯೋ ಜೊತೆ "ಸಹ-ನಾವೀನ್ಯತೆ" ಗಳಲ್ಲಿ ಕೆಲಸ ಮಾಡಲಿದೆ ಎಂದು ಹೇಳಿದೆ.

5G ನೆಟ್‌ವರ್ಕ್‌

ಹೌದು, ರಿಲಯನ್ಸ್‌ ಜಿಯೋ ಜೊತೆ ಭಾರತದಲ್ಲಿ 5G ನೆಟ್‌ವರ್ಕ್‌ ಅಭಿವೃದ್ದಿ ಪಡಿಸಲು ಇಂಟೆಲ್‌ ಕಾರ್ಪ್‌ ಮುಂದಾಗಿದೆ. ಇನ್ನು ಇಂಟೆಲ್‌ನ ವೆಂಚರ್ ಕ್ಯಾಪಿಟಲ್ ಯುನಿಟ್ ಕಳೆದ ವರ್ಷ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಜಿಯೋ ಪ್ಲಾಟ್‌ಫಾರ್ಮ್ಸ್ ಯೂನಿಟ್‌ನಲ್ಲಿ $250 ಮಿಲಿಯನ್ ಹೂಡಿಕೆ ಮಾಡಿದೆ. "ಇದು ಆ ಪಾಲುದಾರಿಕೆಯ ಫಲ" ಎಂದು ಇಂಟೆಲ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಡೇಟಾ ಪ್ಲಾಟ್‌ಫಾರ್ಮ್ ಗುಂಪಿನ ಜನರಲ್ ಮ್ಯಾನೇಜರ್ ನವೀನ್ ಶೆಣೈ ಹೇಳಿದ್ದಾರೆ. ಹಾಗಾದ್ರೆ ರಿಲಯನ್ಸ್‌ ಜಿಯೋ ಮತ್ತು ಇಂಟೆಲ್‌ ಕಾರ್ಪ್‌ ಭಾರತದಲ್ಲಿ 5G ನೆಟ್‌ವರ್ಕ್‌ ಅಭಿವೃದ್ದಿಯಲ್ಲಿ ಹೇಗೆ ಭಾಗವಹಿಸಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ವರ್ಕ್‌

ಭಾರತದಲ್ಲಿ ಲಭ್ಯವಿರುವ ಸ್ಥಳಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಮೇಡ್‌ ಇನ್‌ ಇಂಡಿಯಾ 5G ನೆಟ್‌ವರ್ಕ್‌ ಟೆಕ್ನಾಲಜಿ ನಿರ್ಮಿಸಲು ಜಿಯೋ ಹೊರಟಿದೆ. ಹೊಸ ವಿಧಾನವನ್ನು ಬಳಸಿಕೊಂಡು 5G ನೆಟ್‌ವರ್ಕ್‌ ನಿರ್ಮಿಸಲು ಹೊರಟಿರುವ ವಿಶ್ವದಾದ್ಯಂತದ ಅನೇಕ ವಾಹಕಗಳಲ್ಲಿ ರಿಲಯನ್ಸ್ ಜಿಯೋ ಕೂಡ ಒಂದಾಗಿದೆ. ಮುಖ್ಯವಾಗಿ ನೋಕಿಯಾ, ಎರಿಕ್ಸನ್ ಅಥವಾ ಹುವಾವೇ ಟೆಕ್ನಾಲಜೀಸ್ ಕಾಸ್‌ನಂತಹ ದೂರಸಂಪರ್ಕ-ನಿರ್ದಿಷ್ಟ ಸಂಸ್ಥೆಗಳಿಂದ ಗೇರ್ ಬಳಸುವ ಬದಲು, ವಾಹಕಗಳು ಹೆಚ್ಚಿನ ನೆಟ್‌ವರ್ಕ್ ಕಾರ್ಯಗಳನ್ನು ನಿರ್ವಹಿಸಲು ಸಾಫ್ಟ್‌ವೇರ್ ಅನ್ನು ಬಳಸುವುದರತ್ತ ಸಾಗುತ್ತಿವೆ. ನೆಟ್‌ವರ್ಕ್‌ಗಳನ್ನು ಚಲಾಯಿಸಲು ಡೇಟಾ ಕೇಂದ್ರಗಳಲ್ಲಿ ಬಳಸುವ ಅದೇ ರೀತಿಯ ಸ್ಟ್ಯಾಂಡರ್ಡ್ ಕಂಪ್ಯೂಟಿಂಗ್ ಸಾಧನಗಳನ್ನು ಟ್ಯಾಪ್ ಮಾಡುತ್ತವೆ.

ಜಿಯೋ

ಇದೀಗ ಜಿಯೋ ಜೊತೆಗೆ ಇಂಟೆಲ್‌ನ ಕಾರ್ಪ್‌ ಕೂಡ ಕೈ ಜೋಡಿಸಿದೆ. ಇಂಟೆಲ್‌ ವೆಂಚರ್ ಕ್ಯಾಪಿಟಲ್ ಯುನಿಟ್ ಕಳೆದ ವರ್ಷ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಜಿಯೋ ಪ್ಲಾಟ್‌ಫಾರ್ಮ್ಸ್ ಘಟಕದಲ್ಲಿ $250 ಮಿಲಿಯನ್ ಹೂಡಿಕೆ ಮಾಡಿದೆ. ಇದೇ ಕಾರಣಕ್ಕೆ ಈ ಎರಡು ಕಂಪನಿಗಳು ತಂತ್ರಜ್ಞಾನ ಪಾಲುದಾರಿಕೆಯ ಕ್ಷೇತ್ರಗಳನ್ನು ಕಂಡುಕೊಳ್ಳುತ್ತವೆ ಎಂದು ಹೇಳಲಾಗಿದೆ. ಇನ್ನು ಇಂಟೆಲ್ ತನ್ನ ಪ್ರಮುಖ ದತ್ತಾಂಶ ಕೇಂದ್ರ ಮತ್ತು ವೈಯಕ್ತಿಕ ಕಂಪ್ಯೂಟಿಂಗ್ ಮಾರುಕಟ್ಟೆಗಳಲ್ಲಿ ಪ್ರತಿಸ್ಪರ್ಧಿಗಳಾದ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ ಗೆ ಪಾಲನ್ನು ಕಳೆದುಕೊಳ್ಳುತ್ತಿದೆ. ಆದರೆ ನೆಟ್‌ವರ್ಕಿಂಗ್ ಚಿಪ್‌ಗಳು ಇದರ ವ್ಯವಹಾರದ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ.

ನೆಟ್‌ವರ್ಕ್

ಇಂಟೆಲ್‌ನ ನೆಟ್‌ವರ್ಕ್ ಪ್ಲಾಟ್‌ಫಾರ್ಮ್‌ಗಳ ಗುಂಪಿನ ಜನರಲ್ ಮ್ಯಾನೇಜರ್ ಡಾನ್ ರೊಡ್ರಿಗಸ್, ಸುಮಾರು ಒಂದು ದಶಕದ ಹಿಂದೆ ಇಂಟೆಲ್ ತನ್ನ ನೆಟ್‌ವರ್ಕ್ ಚಿಪ್‌ಗಳಿಗಾಗಿ ಆಪರೇಟಿಂಗ್ ಸಿಸ್ಟಮ್‌ಗೆ ಹೋಲುವ ಸಾಫ್ಟ್‌ವೇರ್‌ನಲ್ಲಿ ಹೂಡಿಕೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಫ್ಲೆಕ್ಸ್‌ರಾನ್ ಎಂದು ಕರೆಯಲ್ಪಡುವ ಈ ವ್ಯವಸ್ಥೆಯು 5G ನೆಟ್‌ವರ್ಕ್‌ಗಳಿಗಾಗಿ ವಾಹಕಗಳನ್ನು ಅಥವಾ ಸಾಫ್ಟ್‌ವೇರ್ ಸಂಸ್ಥೆಗಳಿಗೆ ಕೋಡ್ ಬರೆಯಲು ಅನುವು ಮಾಡಿಕೊಡುತ್ತದೆ. ಕೋಹೆರ್ ಟೆಕ್ನಾಲಜೀಸ್‌ನ ಸಾಫ್ಟ್‌ವೇರ್ ಇಂಟೆಲ್‌ನ ಚಿಪ್‌ಗಳನ್ನು ಬಳಸಿಕೊಂಡು ಕೆಲವು ನೆಟ್‌ವರ್ಕ್ ಸ್ಪೆಕ್ಟ್ರಮ್‌ನ ಬಳಕೆಯನ್ನು ದ್ವಿಗುಣಗೊಳಿಸಬಹುದು, ಸ್ಪೆಕ್ಟ್ರಮ್ ಹಕ್ಕುಗಳನ್ನು ಪಡೆಯಲು ಶತಕೋಟಿ ಖರ್ಚು ಮಾಡುವ ವಾಹಕಗಳಿಗೆ ಇದು ಲಾಭವಾಗುತ್ತದೆ ಎಂದು ಇಂಟೆಲ್‌ ಕಂಪೆನಿ ಹೇಳಿದೆ.

Best Mobiles in India

English summary
Intel's venture capital unit last year invested $250 million in Reliance's Jio Platforms unit, stating that the two companies would find areas of technology partnership.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X