Home
ಸುದ್ದಿಜಾಲ

Jio Bharat Phone: ಹೊಸ ಕ್ರಾಂತಿಗೆ ಮುನ್ನುಡಿ ಬರೆದ ಜಿಯೋ! ಕೇವಲ 999ರೂ.ಗಳಿಗೆ ಸಿಗಲಿದೆ 4G ಫೋನ್!

ಭಾರತವನ್ನು '2G-ಮುಕ್ತ್ ಭಾರತ್' ಮಾಡುವುದಕ್ಕಾಗಿ ಜಿಯೋ ಹೊಸ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ದೇಶದಲ್ಲೇ ಅತಿ ಕಡಿಮೆ ಬೆಲೆಯ 4G ಫೋನ್ ಲಾಂಚ್‌ ಮಾಡಿದೆ. ಈ ಮೂಲಕ ಭಾರತದಲ್ಲಿ ಹೊಸ ಕ್ರಾಂತಿಯನ್ನು ಮಾಡುವುದಕ್ಕೆ ಜಿಯೋ ಮುಂದಾಗಿದೆ. ಭಾರತದಲ್ಲಿ ಇನ್ನೂ ಸಹ 2G ಬಳಕೆ ಮಾಡುತ್ತಿರುವವರನ್ನು 4Gಗೆ ತರುವುದಕ್ಕೆ ಜಿಯೋ ಮುಂದಾಗಿದೆ.

ಹೌದು, ಭಾರತವನ್ನು 2G-ಮುಕ್ತ್ ಮಾಡುವುದಕ್ಕಾಗಿ ಜಿಯೋ ಹೊಸ 'ಜಿಯೋ ಭಾರತ್ ವಿ2' ಎಂಬ ಫೋನ್‌ ಅನ್ನು ಲಾಂಚ್‌ ಮಾಡಿದೆ. ಈ ಫೋನ್‌ ಅತಿ ಕಡಿಮೆ ಬೆಲೆ ಅಂದರೆ ಕೇವಲ 999 ರೂಪಾಯಿಗಳಿಗೆ ಲಭ್ಯವಾಗಲಿದೆ. ಅಷ್ಟೇ ಅಲ್ಲ ಇದು 4G ಮತ್ತು 5G ನೆಟ್‌ವರ್ಕ್‌ಗಳಲ್ಲಿ ಮಾತ್ರ ನಿರ್ವಹಿಸಲಿದೆ. ಇನ್ನುಳಿದಂತೆ ಈ ಹೊಸ ಮೊಬೈಲ್‌ನಲ್ಲಿ ಏನೆಲ್ಲಾ ಫೀಚರ್ಸ್‌ಗಳಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Jio Bharat Phone: ಹೊಸ ಕ್ರಾಂತಿಗೆ ಜಿಯೋ ಮುನ್ನುಡಿ! ಕೇವಲ 999ರೂ.ಗೆ 4G ಫೋನ್!

ಭಾರತದಲ್ಲಿ ಮತ್ತೊಂದು ಕ್ರಾಂತಿಗೆ ಜಿಯೋ ಮುನ್ನುಡಿ ಬರೆದಿದೆ. ಈ ಮೂಲಕ ಭಾರತವನ್ನು 2G ಮುಕ್ತ ಮಾಡುವ ಕನಸ್ಸನ್ನು ಬಿತ್ತಿದೆ. ಅಲ್ಲದೆ ಇದರ ಆರಂಭವೆಂಬಂತೆ ಹೊಸ 'ಜಿಯೋ ಭಾರತ್ ವಿ2' ಫೋನ್‌ ಅನ್ನು ಪರಿಚಯಿಸಿದೆ. ಇದು ಜಿಯೋ 4G ಫೋನ್‌ ಆಗಿದ್ದು, ದೇಶಾದ್ಯಂತ ಸುಮಾರು 10 ಕೋಟಿಗೂ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲಿದೆ ಎಂದು ರಿಲಯನ್ಸ್ ಜಿಯೋ ಹೊಂದಿದೆ. ಇದರಿಂದ ಇನ್ನು ಕೂಡ 2G ಯುಗದಲ್ಲಿ 'ಟ್ರ್ಯಾಪ್' ಆಗಿರುವ 250 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರಿಗೆ 4G ಯುಗಕ್ಕೆ ಕಾಲಿಡಲು ಸಾದ್ಯವಾಗಲಿದೆ ಎಂದಿದೆ.

ಸದ್ಯ '2G-ಮುಕ್ತ್ ಭಾರತ್' ಮಾಡುವ ಉದ್ದೇಶದಿಂದ ಎಂಟ್ರಿ ನೀಡಿರುವ ಹೊಸ ಜಿಯೋ ಭಾರತ್ ಫೋನ್‌ಗಳು ಸದ್ಯದಲ್ಲೇ ಲಭ್ಯವಾಗಲಿದೆ. ಇದೇ ಜುಲೈ 7 ರಿಂದ 6,500 ತಹಸಿಲ್‌ಗಳಲ್ಲಿ ಮೊದಲ 1 ಮಿಲಿಯನ್ ಜಿಯೋ ಭಾರತ್ ಫೋನ್‌ಗಳ ಬೀಟಾ ಪ್ರಯೋಗವನ್ನು ಪ್ರಾರಂಭಿಸುವುದಾಗಿ ಜಿಯೋ ಹೇಳಿದೆ. ಈ ಫೋನ್‌ಗಳು ಇಂಟರ್‌ನೆಟ್‌ ಸಶಕ್ತ ಫೋನ್‌ಗಳಾಗಿದ್ದು, ಅತಿ ಕಡಿಮೆ ಬೆಲೆಯಲ್ಲಿ ಕೈ ಸೇರಲಿವೆ ಅನ್ನೊದು ಮೇನ್‌ ಹೈಲೈಟ್‌ ಆಗಲಿದೆ.

Jio Bharat Phone: ಹೊಸ ಕ್ರಾಂತಿಗೆ ಜಿಯೋ ಮುನ್ನುಡಿ! ಕೇವಲ 999ರೂ.ಗೆ 4G ಫೋನ್!

ಇದರೊಂದಿಗೆ ಈ ಫೋನ್‌ಗಳ ಮೂಲಕ ಭಾರತದಲ್ಲಿ ಡಿಜಿಟಲೀಕರಣ ಇನ್ನಷ್ಟು ವೇಗವನ್ನು ಪಡೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಕೈ ಗೆಟಕುವ ಬೆಲೆಯಲ್ಲಿ ಮೊಬೈಲ್‌ ಖರೀದಿಸಲು ಬಯಸುವವರನ್ನು ಗುರಿಯಾಗಿಸಿಕೊಂಡಿದೆ. ಇಂಟರ್‌ನೆಟ್‌ ಬಳಕೆಯಿಂದ ದೂರವಿರುವ ಜನರನ್ನು ಇಂಟರ್‌ನೆಟ್‌ ಯುಗಕ್ಕೆ ಎಳೆದು ತರಲಿದೆ ಎಂದು ಜಿಯೋ ಸಂಸ್ಥೆ ಹೇಳಿಕೊಂಡಿದೆ. ಇದಲ್ಲದೆ ಈ ಮೊಬೈಲ್‌ ಫೋನ್‌ಗಳ ಬೇಸ್‌ ರೀಚಾರ್ಜ್‌ ಪ್ಲಾನ್‌ ಅನ್ನು ಕೂಡ ಘೋಷಣೆ ಮಾಡಿದೆ. ಈ ರೀಚಾರ್ಜ್ ಪ್ಲಾನ್‌ ಬೆಲೆ ಕೇವಲ 123 ರೂ.ಆಗಿರಲಿದ್ದು, ಅನಿಯಮಿತ ಧ್ವನಿ ಕರೆಗಳು ಮತ್ತು 14GB ಡೇಟಾ ಪ್ರಯೋಜನವನ್ನು ನೀಡಲಿದೆ.

ಇದೇ ಸಂದರ್ಭದಲ್ಲಿ ಮಾತನಾಡಿರುವ ರಿಲಯನ್ಸ್‌ ಜಿಯೋ ಅಧ್ಯಕ್ಷ ಆಕಾಶ್‌ ಅಂಬಾನಿ ಭಾರತದಲ್ಲಿ ಇನ್ನು ಕೂಡ 250 ಮಿಲಿಯನ್ ಮೊಬೈಲ್‌ ಬಳಕೆದಾರರು 2Gಯಲ್ಲಿಯೇ ಟ್ರ್ಯಾಪ್‌ ಆಗಿದ್ದಾರೆ. ಇವರನ್ನು ಮುಕ್ತವಾಗಿ 4Gಗೆ ಕರೆತರುವುದಕ್ಕೆ ಈ ಹೊಸ ಫೋನ್‌ ಸಹಾಯ ಮಾಡಲಿದೆ. ಇಡೀ ಜಗತ್ತು 5G ಕ್ರಾಂತಿಯಲ್ಲಿರುವಾಗ ಇನ್ನು ಕೆಲವರಿಗೆ ಇಂಟರ್‌ನೆಟ್‌ ಫೀಚರ್ಸ್‌ಗಳನ್ನು ಬ್ರೌಸ್‌ ಮಾಡಲಾಗುತ್ತಿಲ್ಲ. ಅಂತಹ ಜನರಿಗೆ ಮೂಲ ಇಂಟರ್‌ನೆಟ್‌ ವ್ಯವಸ್ಥೆ ಕಲ್ಪಿಸುವುದಕ್ಕೆ ನಾವು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಈ ಮೂಲಕ ನಾವು ನಮ್ಮ ರಾಷ್ಟ್ರದ ಪ್ರತಿಯೊಬ್ಬ ನಾಗರೀಕರ ಬಗ್ಗೆ ಕಾಳಜಿವಹಿಸುತ್ತೇವೆ. ಪ್ರತಿಯೊಬ್ಬರು ಕೂಡ ಡಿಜಿಟಲ್‌ ಯುಗದ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದು ನಾವು ಬಯಸುತ್ತೇವೆ ಎಂದು ರಿಲಯನ್ಸ್‌ ಜಿಯೋ ಹೇಳಿದೆ.

Best Mobiles in India

English summary
Jio announces new Jio Bharat phones aimed at making India '2G-Mukt Bharat'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+