ರೂ. 499ಕ್ಕೆ ಜಿಯೋ ಫೈ ಮಾರಾಟ: ಜಿಯೋ ಸ್ಟೋರ್ ಮುಂದೆ ಖರೀಸಿದಲು ಕ್ಯೂ..!
ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಜಿಯೋ, ಮಾರುಕಟ್ಟೆಯಲ್ಲಿ ಎಲ್ಲಾ ಬಳಕೆದಾರರಿಗೆ ತನ್ನ ಸೇವೆಯೂ ಲಭ್ಯವಾಗಬೇಕು ಎನ್ನುವ ಕಾರಣಕ್ಕೆ ಲಾಂಚ್ ಮಾಡಿದ್ದ ಜಿಯೋ ಫೈ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿತ್ತು. 4G VoLTE ಸ್ಮಾರ್ಟ್ ಫೋನ್ ಇಲ್ಲವಾದವರೂ ಸಹ ಜಿಯೋ ಸೇವೆಯನ್ನು ಬಳಕೆ ಮಾಡುವ ಸಲುವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿದ ಜಿಯೋ ಫೈ ಪೋರ್ಟಬಲ್ ಹಾಟ್ ಸ್ಪಾಟ್, ಸದ್ಯ ಆಫರ್ ನಲ್ಲಿ ಮಾರಾಟವಾಗಲಿದೆ.

ಜಿಯೋ ಫೈ ಮಾರಾಟವನ್ನು ಇನ್ನು ಹೆಚ್ಚು ಮಾಡುವ ಸಲುವಾಗಿ ಹೊಸದೊಂದು ಆಫರ್ ಅನ್ನು ನೀಡಲು ಮುಂದಾಗಿರುವ ಜಿಯೋ, ರೂ.499ಕ್ಕೆ ತನ್ನ ಜಿಯೋ ಫೈ ಅನ್ನು ಮಾರಾಟ ಮಾಡಲು ಯೋಜನೆಯನ್ನು ರೂಪಿಸಿದೆ. ಬಳಕೆದಾರರಿಗೆ ಕ್ಯಾಷ್ ಬ್ಯಾಕ್ ಸೇರಿದಂತೆ ವಿವಿಧ ಆಯ್ಕೆಗಳನ್ನು ನೀಡಲಿದೆ. ಈ ಹಿನ್ನಲೆಯಲ್ಲಿ ನೀವು ಸಹ ರೂ.499ಕ್ಕೆ ಜಿಯೋ ಫೈ ಅನ್ನು ಖರೀದಿ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಜುಲೈ ಮೂರರಿಂದ ಆರಂಭ:
ಮಾರುಕಟ್ಟೆಯಲ್ಲಿ ಸದ್ಯ ರೂ.1999ಕ್ಕೆ ಮತ್ತು ರೂ.999ಕ್ಕೆ ಮಾರಾಟವಾಗುತ್ತಿರುವ ಜಿಯೋ ಫೈ ಅನ್ನು ಜುಲೈ ಮೂರರಿಂದ ರೂ.499ಕ್ಕೆ ಮಾರಾಟ ಮಾಡಲಿದೆ. ಇದು ಜಿಯೋ ಸ್ಟೋರ್ ಸೇರಿಂದತೆ ಇ ಸ್ಟೋರ್ ಗಳಲ್ಲಿಯೂ ಮಾರಾಟವಾಗಲಿದೆ. ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿಯೂ ಮಾರಾಟವಾಗಲಿದೆ.

ಪೋಸ್ಟ್ ಪೇಯ್ಡ್:
ಇದುವರೆಗೂ ಪ್ರೀಪೇಯ್ಡ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದ್ದ ಜಿಯೋಫೈ ಅನ್ನು ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದರಿಂದಾಗಿ ನೀವು ಬಳಕೆ ಮಾಡಿದ ನಂತರದಲ್ಲಿ ಬಿಲ್ ಪಾವತಿ ಮಾಡುವ ಅವಕಾಶವನ್ನು ನೀಡಿದೆ.

ತಿಂಗಳಿಗೆ ರೂ.199:
ಜಿಯೋ ಫೈ ಖರೀದಿಸಿದವರು ತಿಂಗಳಿಗೆ ರೂ.199 ಪಾವತಿ ಮಾಡಬೇಕಾಗಿದೆ. ಒಟ್ಟು 12 ತಿಂಗಳು ರಿಚಾರ್ಜ್ ಮಾಡಿಸಿದ ಸಂದರ್ಭದಲ್ಲಿ ಬಳಕೆದಾರಿಗೆ ರೂ.500 ಕ್ಯಾಷ್ ಬ್ಯಾಕ್ ದೊರೆಯಲಿದೆ ಎನ್ನಲಾಗಿದೆ. ಇದನ್ನು ಮುಂದಿನ ರಿಚಾರ್ಜ್ ಗಳಿಗೆ ಬಳಕೆಯನ್ನು ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ.

ಪ್ಲಾನ್:
ಜಿಯೋ ಫೈ ಖರೀದಿಸಿದ ಸಂದರ್ಭದಲ್ಲಿ ಬಳಕೆದಾರರು ತಿಂಗಳಿಗೆ ರೂ.199 ರಿಚಾರ್ಜ್ ಮಾಡಿಸಬೇಕಾಗಿದೆ. ಇದರಲ್ಲಿ ಬಳಕೆಗೆ 25 GB ಡೇಟಾ ದೊರೆಯಲಿದೆ. ಇದಲ್ಲದೇ ಉಚಿತವಾಗಿ ಕರೆ ಮಾಡುವ ಮತ್ತು ಅನ್ ಲಿಮಿಟೆಡ್ SMS ಕಳುಹಿಸುವ ಅವಕಾಶವನ್ನು ಮಾಡಿಕೊಡಲಿದೆ. ಅಲ್ಲದೇ ಜಿಯೋ ಆಪ್ ಗಳನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆ.

ಮಾರುಕಟ್ಟೆಯಲ್ಲಿ ಹೊಸ ಅಲೆ:
ಈಗಾಗಲೇ ಹಾಟ್ ಸ್ಪಾಟ್ ಮಾರಾಟದಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವ ಜಿಯೋ, ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ಎನ್ನಲಾಗಿದೆ. ಈಗ ಆಫರ್ ನೀಡಿರುವುದರಿಂದಾಗಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ನಿರೀಕ್ಷೆ ಇದ್ದು, ಇತರೆ ಟೆಲಿಕಾಂ ಕಂಪನಿಗಳು ಬಿಡುಗಡೆ ಮಾಡಿರುವ ಹಾಟ್ ಸ್ಪಾಟ್ ಗಳಿಗೆ ಸೆಡ್ಡು ಹೊಡೆಯಲಿದೆ.


Click it and Unblock the Notifications








