ಜಿಯೋ ಬ್ರಾಡ್‌ಬ್ಯಾಂಡ್ ಇನ್ನೂ ಸ್ವಲ್ಪ ದಿನ ಉಚಿತ..! ಕಾರಣ ಏನು ಗೊತ್ತಾ..?
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಎಬ್ಬಿಸಿರುವ ರಿಲಯನ್ಸ್ ಜಿಯೋ ಇನ್ಫೋಕಾಮ್ ತನ್ನ ಹೋಮ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಕನಿಷ್ಠ ಇನ್ನು ಒಂದು ತಿಂಗಳು ಶುಲ್ಕ ವಿಧಿಸಲು ಸಾಧ್ಯವಿಲ್ಲ. ಏಕೆಂದರೆ, ಜಿಯೋ ಇನ್ನೂ ಸ್ಥಿರಗೊಳ್ಳದ ಸಮಗ್ರ ಬಿಲ್ಲಿಂಗ್ ವ್ಯವಸ್ಥೆಗೆ ವಲಸೆ ಹೋಗುತ್ತಿದ್ದು, ಜಿಯೋಫೈಬರ್ ಸೇವೆಗಳ ಹಣಗಳಿಕೆಯನ್ನು ವಿಳಂಬಗೊಳಿಸುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಇಷ್ಟೇ ಅಲ್ಲದೆ, ಕಂಪನಿಯ ವೈವಿಧ್ಯಮಯ ಹೋಮ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಮಾರಾಟ ಮಾಡಲು ಜಿಯೋದಲ್ಲಿನ ಮಾರಾಟ ಮತ್ತು ಮಾರ್ಕೆಟಿಂಗ್ ಸಿಬ್ಬಂದಿಗಳಿಗೆ ಸಂಪೂರ್ಣ ತರಬೇತಿಯನ್ನು ನೀಡದಿರುವುದು ರಿಲಯನ್ಸ್ ಇಂಡಸ್ಟ್ರೀಸ್‌ನ ಸೇವೆಗಳ ವಾಣಿಜ್ಯ ಹಣಗಳಿಕೆಯನ್ನು ತಡವಾಗಿಸುತ್ತಿದೆ.

ವಿವಿಧ ಪ್ಲಾನ್‌ಗಳು
ತಿಂಗಳಿಗೆ 699 ರೂ. ನಿಂದ 8,499 ರೂ.ಗಳವರೆಗೆ ಜಿಯೋ ಫೈಬರ್‌ನ ಯೋಜನೆಗಳು ಇವೆ, 100 Mbps ನಿಂದ 1 Gbps ವರೆಗಿನ ವೇಗದೊಂದಿಗೆ, ವಿಶೇಷ ಸೇವೆಗಳಾದ ಗೇಮಿಂಗ್, ಹೋಮ್ ನೆಟ್‌ವರ್ಕ್ ಶೇರಿಂಗ್, ಟಿವಿ ವಿಡಿಯೋ ಕರೆ ಮತ್ತು ಕಾನ್ಫರೆನ್ಸಿಂಗ್, ಸಾಧನದ ಸುರಕ್ಷತೆಯ ಜೊತೆಗೆ ವಿಷಯ ಪ್ರವೇಶದ ಜೊತೆಗೆ ಅನೇಕ ಸೇವೆಗಳ ಬಂಡಲ್‌ಗಳಿವೆ.

ವಾಣಿಜ್ಯ ಸೇವೆಗೆ ಒಂದು ತಿಂಗಳು
ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಜುಲೈನಿಂದ ಸೆಪ್ಟೆಂಬರ್‌ವರೆಗಿನ ವಹಿವಾಟಿನ ಫಲಿತಾಂಶ ಹಾಗೂ ಜಿಯೋ ಸಂಖ್ಯೆಗಳನ್ನು ಕೂಡ ಪ್ರಕಟಿಸಿದೆ. ಜಿಯೋ ವಾಣಿಜ್ಯಿಕವಾಗಿ ತನ್ನ ಫೈಬರ್ ಆಧಾರಿತ ಹೋಮ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ತಿಂಗಳ ಹಿಂದೆ ಪ್ರಾರಂಭಿಸಿದೆ. ಆದರೆ, ಇನ್ನೂ ಗ್ರಾಹಕರಿಗೆ ಬಿಲ್ಲಿಂಗ್ ಪ್ರಾರಂಭಿಸಿಲ್ಲ. ಸೆಪ್ಟೆಂಬರ್ 5ರ ವಾಣಿಜ್ಯಿಕ ಪ್ರಾರಂಭಕ್ಕೂ ಮುಂಚೆಯೇ ಜಿಯೋಫೈಬರ್ ಪ್ರಯೋಗಗಳಿಗೆ ಸೈನ್ ಅಪ್ ಆಗಿದ್ದ 5 ಲಕ್ಷ ಬಳಕೆದಾರರು ಉಚಿತವಾಗಿ ಸೇವೆಗಳನ್ನು ಪಡೆಯುವುದನ್ನು ಮುಂದುವರೆಸಿದ್ದು, ನಿರ್ದಿಷ್ಟ ಪ್ಯಾಕ್‌ಗಳನ್ನು ಖರೀದಿಸಲು ಕಂಪನಿಯು ಕೂಡ ಯಾವುದೇ ಮಾಹಿತಿಯನ್ನು ಗ್ರಾಹಕರಿಗೆ ನೀಡಿಲ್ಲ.

ಇನ್ನು ಸಮಯ ಬೇಕು
2,500 ರೂ.ಗಳ ಮರುಪಾವತಿಸಬಹುದಾದ ಭದ್ರತಾ ಠೇವಣಿ ಇರಿಸಿದ ಹೊಸ ಜಿಯೋಫೈಬರ್ ಗ್ರಾಹಕರ ಹೋಮ್ ಬ್ರಾಡ್‌ಬ್ಯಾಂಡ್ ಸೇವೆಗಳಿಗೂ ಸಹ ಶುಲ್ಕ ವಿಧಿಸಲಾಗುತ್ತಿಲ್ಲ ಎಂದು ಜಿಯೋದ ಹೆಸರು ಹೇಳಲು ಇಚ್ಛಿಸಿದ ಅಧಿಕಾರಿ ತಿಳಿಸಿದ್ದಾರೆ. ಜಿಯೋ ಫೈಬರ್ ಸೇವೆಗಳ ವಾಸ್ತವಿಕ ಬಿಲ್ಲಿಂಗ್ ಪ್ರಾರಂಭಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಏಕೆಂದರೆ ಕಂಪನಿಯು ಶುದ್ಧ ಮೊಬೈಲ್ ಸೇವೆಗಳ ಬಿಲ್ಲಿಂಗ್ ವ್ಯವಸ್ಥೆಯಿಂದ ಒಮ್ಮುಖವಾಗುತ್ತಿದ್ದು, ಇದು 4ಜಿ ಚಲನಶೀಲತೆ ಮತ್ತು ಹೋಮ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಬಳಸುವ ಗ್ರಾಹಕರಿಗೆ ಬಿಲ್ಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಜಿಯೋದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಿಲ್ಲಿಂಗ್ ಪರಿಶೀಲನೆ
ಜಿಯೋಫೈಬರ್ ಗ್ರಾಹಕರಿಗೆ ಇನ್ನೂ ಯಾವುದೇ ಪಾವತಿಗಳನ್ನು ಮಾಡದೇ ತಾಂತ್ರಿಕವಾಗಿ ಬಿಲ್ ಮಾಡಲಾಗುತ್ತಿದೆ. ಏಕೆಂದರೆ, ನಿಜವಾದ ಬಿಲ್ಲಿಂಗ್ ವ್ಯವಸ್ಥೆ ಕಾರ್ಯಪ್ರವೃತ್ತಿಯಾದ ನಂತರ ಯಾವುದೇ ಅಡೆತಡೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಇನ್ನೂ ತನ್ನ ಬಿಲ್ಲಿಂಗ್ ವ್ಯವಸ್ಥೆಯನ್ನು ಪರಿಶೀಲಿಸುತ್ತಿದೆ.

ಉಚಿತ ಬಳಕೆ
ನಿರ್ದಿಷ್ಟ ಜಿಯೋ ಫೈಬರ್ ಯೋಜನೆಯನ್ನು ಆಯ್ಕೆ ಮಾಡಲು ನನ್ನನ್ನು ಯಾವುದೇ ಜಿಯೋ ಕಾರ್ಯನಿರ್ವಾಹಕರು ಸಂಪರ್ಕಿಸಿಲ್ಲ, ಮತ್ತು ಹೋಮ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಉಚಿತವಾಗಿ ಪಡೆಯುತ್ತಿದ್ದೇನೆ ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ. ಆರಂಭಿಕ 100 ಜಿಬಿ ಡೇಟಾ ಬಳಕೆಯ ನಂತರ 40 ಜಿಬಿ ಡೇಟಾ ಬಳಕೆ ಮಾಡಲು ಸಾಧ್ಯವಾಗುತ್ತಿದ್ದು, ಹೆಚ್ಚುವರಿ ಡೇಟಾ ಅಗತ್ಯಗಳನ್ನು ಪೂರೈಸಲು ಉಚಿತವಾಗಿ ರೀಚಾರ್ಜ್ ಮಾಡಲಾಗುತ್ತಿದೆ ಎಂದು ಎರಡು ವರ್ಷಗಳ ಹಿಂದೆ ಜಿಯೋ ಫೈಬರ್ ಟ್ರಯಲ್ಸ್ ಆಯ್ದುಕೊಂಡ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಆರ್ಥಿಕ ನಷ್ಟ..?
ಜಿಯೋಫೈಬರ್ ಸೇವೆಗಳ ಬಿಲ್ಲಿಂಗ್‌ನಲ್ಲಿನ ದೀರ್ಘ ವಿಳಂಬ ಜಿಯೋಗೆ ಆದಾಯದ ಬೆಳವಣಿಗೆಯ ಸವಾಲುಗಳನ್ನು ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ, ಅದರಲ್ಲೂ ವಿಶೇಷವಾಗಿ ಕಳೆದ ಏಳು ತ್ರೈಮಾಸಿಕಗಳಿಂದ ಪ್ರತಿ ಬಳಕೆದಾರರಿಗೆ ಅದರ ಮೊಬೈಲ್ ವ್ಯವಹಾರದ ಸರಾಸರಿ ಆದಾಯವೂ ಕುಸಿಯುತ್ತಿದ್ದು, ಹೀಗೆ ಮುಂದುವರೆದರೆ ಜಿಯೋ ಆರ್ಥಿಕ ಅಡ್ಡಕತ್ತರಿಗೆ ಸಿಲುಕಬೇಕಾಗುತ್ತದೆ.


Click it and Unblock the Notifications








