ಜಿಯೋಗೆ 2 ವರ್ಷದ ಸಂಭ್ರಮ: ಅಂಬಾನಿ ಕೊಟ್ಟ ಉಚಿತ 2 GB ಡೇಟಾ ಆಫರ್...!

ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ತನ್ನ ಜಿಯೋ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯ ಆಫರ್ ವೊಂದನ್ನು ನೀಡಲು ಮುಂದಾಗಿದೆ. ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ 2016ರಲ್ಲಿ ಕಾರ್ಯಚರಣೆಯನ್ನು ಆರಂಭಿಸಿದ ರಿಲಯನ್ಸ್ ಮಾಲೀಕತ್ವದ ಜಿಯೋ ಇಂದಿಗೆ ಎರಡು ವರ್ಷಗಳು ಯಶಸ್ವಿಯಾಗಿ ಪೂರೈಸಿದೆ ಈ ಹಿನ್ನಲೆಯಲ್ಲಿ ತನ್ನ ಬಳಕೆದಾರರಿಗೆ ಸರ್ಪ್ರೈಸ್ ಆಫರ್ ವೊಂದನ್ನು ಲಾಂಚ್ ಮಾಡಿದೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಟೆಲಿಕಾಂ ಕಂಪನಿಯೊಂದು ಇಷ್ಟು ಮಟ್ಟದ ಆಫರ್ ವೊಂದನ್ನು ನೀಡಿದೆ.

ಜಿಯೋ ಬಳಕೆದಾರರಿಗೆ ಅಂಬಾನಿ ನಿತ್ಯ ಉಚಿತವಾಗಿ ಯಾವುದೇ ಡೇಟಾ ಪ್ಲಾನ್ ಇಲ್ಲದೇ, ಯಾವುದೇ ನಿರ್ಬಂಧಗಳಿಲ್ಲದೇ ಉಚಿತವಾಗಿ 2 GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದಕ್ಕಾಗಿ ಹೊಸ ಪ್ಲಾನ್‌ಗೆ ಜಿಯೋ ಸೆಲೆಬ್ರೆಷನ್ ಪ್ಯಾಕ್ ಎಂದು ನಾಮಕರಣವನ್ನು ಮಾಡಿದೆ. ಇದು ಬಳಕೆದಾರರಿಗೆ ಸೆಪ್ಟೆಂಬರ್ 11ರ ವರೆಗೆ ದೊರೆಯಲಿದೆ ಎನ್ನಲಾಗಿದೆ. ಈ ಕುರಿತು ಸಂಫೂರ್ಣ ಮಾಹಿತಿ ಮುಂದಿದೆ.

ಜಿಯೋ ಸೆಲೆಬ್ರೆಷನ್ ಪ್ಯಾಕ್ ಆಫರ್:
ಜಿಯೋ ಹೊಸದಾಗಿ ನೀಡಿರುವ ಜಿಯೋ ಸೆಲೆಬ್ರೆಷನ್ ಪ್ಯಾಕ್ ನಲ್ಲಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಲಾಭವಾಗಲಿದೆ. ಇದರಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 2 GB 4G ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದು ಕೆಲವು ಬಳಕೆದಾರರಿಗೆ ಏರಿಕೆಯೂ ಆಗಬಹುದು. ಇನ್ನು ಕೆಲವರಿಗೆ ಕಡಿಮೆಯೂ ಆಗಬಹುದು.

ಸೆಪ್ಟೆಂಬರ್ 11ರ ವರೆಗೆ:
ಈ ಪ್ಲಾನ್ ಸೆಪ್ಟೆಂಬರ್ 11ರ ಒಳಗೆ ದೊರೆಯಲಿದೆ ಎನ್ನಲಾಗಿದೆ. ಈ ಅವಧಿಯಲ್ಲಿ ಪ್ಲಾನ್ ಅನ್ನು ರಿಚಾರ್ಜ್ ಮಾಡಿಸಿಕೊಂಡವರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಇಲ್ಲವಾದರೆ ಆಫರ್ ಲಾಭ ದೊರೆಯುವುದಿಲ್ಲ.

ಹೇಗೆ ಪಡೆದುಕೊಳ್ಳುವವರು:
ಮೈ ಜಿಯೋ ಆಪ್‌ನಲ್ಲಿ ಬಳಕೆದಾರರಿಗೆ ಈ ಆಯ್ಕೆಯನ್ನು ನೀಡಲಾಗಿದೆ. ಮೈ ಜಿಯೋ ಆಪ್ ನಲ್ಲಿ ಮೈ ಪ್ಲಾನ್ ಮೆನುವಿನಲ್ಲಿ ಈ ಹೊಸ ಮಾದರಿಯ ಆಫರ್ ಅನ್ನು ಕಾಣಬಹುದಾಗಿದೆ. ಜಿಯೋ ಸೆಲೆಬ್ರೆಷನ್ ಪ್ಯಾಕ್ ಆಫರ್ ನಲ್ಲಿ ಈ ಹೊಸದಾಗಿ ಈ ಪ್ಲಾನ್ ಕಾಣಿಸಿಕೊಂಡಿದೆ.

ಡೈರಿ ಮಿಲ್ಕ್ ಆಫರ್:
ಇದಲ್ಲದೆ ಬಳಕೆದಾರರಿಗೆ ಜಿಯೋ ಸೆಲೆಬ್ರೆಷನ್ ಪ್ಯಾಕ್ ಆಫರ್ ನಲ್ಲಿ ಡೈರಿ ಮಿಲ್ಕ್ ಆಫರ್ ಅನ್ನು ಕಾಣಬಹುದಾಗಿದೆ. ಡೈರಿ ಮಿಲ್ಕ್ ಚಾಕಲೇಟ್ ಅನ್ನು ತೆಗೆದುಕೊಂಡು ಅದರ ರಾಪರ್ ಅನ್ನು ಫೋಟೋ ತೆಗೆದು ಹಾಕಿದರು 1 GB 4G ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋ ಸಂಭ್ರಮ:
ಇದಲ್ಲದೇ ಜಿಯೋ ಎರಡು ವರ್ಷ ಆರಂಭವಾಗಿ ಕಳೆದಿರುವ ಹಿನ್ನಲೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಂಭ್ರಮದ ಆಚರಣೆಯನ್ನು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಆಫರ್ ಗಳನ್ನು ನೀಡುತ್ತಿದೆ.


Click it and Unblock the Notifications








