Just In
Don't Miss
- Movies
ಕರಾಟೆಯಲ್ಲಿ ಕಿಂಗ್ ಡ್ಯಾನ್ಸ್ ನಲ್ಲಿ ನಂ.1: 'DKD' ಸ್ಪರ್ಧಿ ಮಲ್ಟಿ ಟ್ಯಾಲೆಂಟ್ ನಿಧಿ ಬಗ್ಗೆ ನಿಮಗೆಷ್ಟು ಗೊತ್ತು?
- News
ಮುಸ್ಲಿಮರಲ್ಲಿ ಫಲವತ್ತತೆ ಪ್ರಮಾಣ ಹೆಚ್ಚು; ವಿವಾದ ಹುಟ್ಟುಹಾಕಿದ ಬಿಜೆಪಿ ನಾಯಕನ ಹೇಳಿಕೆ
- Finance
ಎಲೆಕ್ಟ್ರಿಕ್ ವಾಹನಗಳ ಪೂರೈಕೆ: ಮಹೀಂದ್ರಾ ಜೊತೆಗೆ ಅಮೆಜಾನ್ ಪಾಲುದಾರಿಕೆ
- Sports
ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ತಂದೆ ಪೌಲ್ ಸ್ಟಾರ್ಕ್ ನಿಧನ
- Automobiles
ಹೊಸ ಎಲೆಕ್ಟ್ರಿಕ್ ಸ್ಕೂಟರ್ಗಳ ಬಿಡಗಡೆಗೆ ಸಿದ್ದವಾದ ಯಮಹಾ
- Lifestyle
ಸೋರೆಕಾಯಿ ಹಲ್ವಾ ರೆಸಿಪಿ
- Education
MANMUL Recruitment 2021: ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟೆಲಿಕಾಂ ಮಾರುಕಟ್ಟೆಯನ್ನು ದಿಗ್ಭ್ರಮೆಗೊಳಿಸಿದ ಜಿಯೋ ಪ್ಲಾನ್: ರೂ. 101ಕ್ಕೆ ನಿತ್ಯ 2GB 4G ಡೇಟಾ..!

ಈಗಾಗಲೇ ಸ್ಮಾರ್ಟ್‌ಫೋನಿನಲ್ಲಿ IPL ನೋಡುವವಂತೆ ಮಾಡಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ, ಇದಕ್ಕಾಗಿಯೇ ಬೆಸ್ಟ್ ಡೇಟಾ ಪ್ಲಾನ್ ಅನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಆಫರ್ ಅನ್ನು ಲಾಂಚ್ ಮಾಡಿ ಟೆಲಿಕಾಂ ಕಂಪನಿಗಳು ತಿರುಗಿ ನೋಡುವಂತೆ ಮಾಡಿತ್ತು. ಇದೇ ಮಾದರಿಯಲ್ಲಿ ಬೆಸ್ಟ್ ಡೇಟಾ ಪ್ಲಾನ್ ವೊಂದನ್ನು ನೀಡಲು ಮುಂದಾಗಿದ್ದು, ರೂ. 101ಕ್ಕೆ ನಿತ್ಯ 2GB ಡೇಟಾವನ್ನು ನೀಡುವ ಆಫರ್ ಅನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ.
ಈ ಬಾರಿಯ IPL ಕಳೆಕಟ್ಟಲು ಜಿಯೋ ಸಹ ಪ್ರಮುಖ ಕಾರಣ ಎಂದರೆ ತಪ್ಪಾಗುವುದಿಲ್ಲ. ಜಿಯೋ ನೀಡಿದ ಆಫರ್ ಗಳ ಮೂಲಕವೇ ಎಷ್ಟೋ ಮಂದಿ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ರಿಕೆಟ್ ನೋಡುವುದಲ್ಲದೇ ಅದರೊಂದಿಗೆ ಹಲವು ಗೇಮ್ ಗಳನ್ನು ಆಡುವ ಮೂಲಕ ಬಹುಮಾನಗಳನ್ನು ಪಡೆದುಕೊಂಡರು. ಅಲ್ಲದೇ ಇದರೊಂದಿಗೆ ಮನರಂಜನೆಯನ್ನು ನೀಡುವ ಸಲುವಾಗಿ ಜಿಯೋ ಧನ್ ಧನಾ ಧನ್ ಶೋ ವನ್ನು ಸಹ ನೀಡಿತ್ತು. ಈಗ ಇದೇ ಮಾದರಿಯಲ್ಲಿ ಕಾಮ್ಪಪ್ಲಿಮೆಂಟ್ರಿ ಆಫರ್ ವೊಂದನ್ನು ಘೋಷಣೆ ಮಾಡಿದೆ.

ಕ್ರಿಕೆಟ್ ಟೀಸರ್ ಪ್ಯಾಕ್:
IPL ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಪಂದ್ಯವನ್ನು ಬಳಕೆದಾರರು ನೋಡಲಿ ಎನ್ನುವ ಒಂದೇ ಕಾರಣಕ್ಕೆ ಜಿಯೋ ಈ ಪ್ಲಾನ್ ಅನ್ನು ಲಾಂಚ್ ಮಾಡಿದ್ದು, 8 GB ಹೆಚ್ಚುವರಿ ಡೇಟಾವನ್ನು ನೀಡಲಿದ್ದು, ಬಳಕೆದಾರರಿಗೆ ಹೆಚ್ಚಿನ ಡೇಟಾ ಲಾಭವನ್ನು ಮಾಡಿಕೊಡಲಿದೆ ಎನ್ನಲಾಗಿದೆ.

2GB ಡೇಟಾ ನಿತ್ಯ:
ರೂ.101 ಪ್ಲಾನ್ ಘೋಷಣೆ ಮಾಡಿರುವ ಜಿಯೋ, ಇದರಲ್ಲಿ ಬಳಕೆದಾರರಿಗೆ ನಿತ್ಯ 2GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಈ ಪ್ಲಾನ್ ಕೇವಲ 4 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, 8 GB ಡೇಟಾವನ್ನು ನೀಡಲಿದೆ. ಆದರೆ ಇದರಲ್ಲಿ ಯಾವುದೇ ಕಂಬೋ ಪ್ಯಾಕ್‌ಗಳು ಲಭ್ಯವಿಲ್ಲ.

ಅನ್‌ಲಿಮಿಟೆಡ್ ಡೇಟಾ:
ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ದೊರೆಯಲಿದೆ ಎನ್ನಲಾಗಿದೆ. ನಿತ್ಯ 2GB ಡೇಟಾವನ್ನು ಖಾಲಿ ಮಾಡಿದ ನಂತರದಲ್ಲಿ ಬಳಕೆದಾರರಿಗೆ 64Kbps ವೇಗದಲ್ಲಿ ಕಾರ್ಯನಿರ್ವಹಿಸುವ ಡೇಟಾವನ್ನು ಜಿಯೋ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಅನಿಯಮಿತ ಡೇಟಾ ಬಳಕೆಗೆ ದೊರೆಯಲಿದೆ.

ಡೇಟಾ ಆಡ್ ಅನ್:
ಜಿಯೋ ಘೋಷಣೆ ಮಾಡಿರುವ ಪ್ಲಾನ್ ಡೇಟಾ ಆಡ್ ಆನ್ ಪ್ಲಾನ್ ಆಗಿದ್ದು, ಈಗಾಗಲೇ ನೀವು ರೀಚಾರ್ಜ್ ಮಾಡಿಸಿಕೊಂಡಿರುವ ಪ್ಲಾನ್‌ನೊಂದಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ.ಇದರಲ್ಲಿ ಕರೆ ಮಾಡುವ ಮತ್ತು SMS ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿಲ್ಲ.

ಮೈ ಜಿಯೋ ಆಪ್‌ನಲ್ಲಿ:
ಜಿಯೋ ಘೋಷಣೆ ಮಾಡಿರುವ ರೂ.101 ಡೇಟಾ ಆಡ್ ಆನ್ ಪ್ಲಾನ್ ಮೈ ಜಿಯೋ ಆಪ್‌ನಲ್ಲಿ ಲಭ್ಯವಿದ್ದು, ಅಲ್ಲಿಯೇ ನೀವು ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ನೀವು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190