Home
ಸುದ್ದಿಜಾಲ

ಜಿಯೋ IPL ಡಬ್ಬಲ್ ಧಮಾಕಾ: ಕ್ರಿಕೆಟ್ ಪ್ಲೇ ಅಲಾಂಗ್- ಧನ್ ಧನಾ ಧನ್

By Srinidhi

ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ದೇಶಿಯ ಶ್ರೀಮಂತ IPL ಕ್ರಿಕೆಟ್ ಪಂದ್ಯಾವಳಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಸೇವೆಯೊಂದನ್ನು ನೀಡಲು ಮುಂದಾಗಿದೆ. ಕೇವಲ ಟೆಲಿಕಾಂ ಮಾತ್ರವಲ್ಲದೇ ಗೇಮಿಂಗ್ ಮತ್ತು ಟಿವಿ ಶೋವನ್ನು ಆರಂಭಿಸಿದೆ ಎನ್ನಲಾಗಿದೆ.

ಜಿಯೋ IPL ಡಬ್ಬಲ್ ಧಮಾಕಾ: ಕ್ರಿಕೆಟ್ ಪ್ಲೇ ಅಲಾಂಗ್- ಧನ್ ಧನಾ ಧನ್

IPL ಆರಂಭದ ಖುಷಿಯಲ್ಲಿರುವ ಜಿಯೋ ಬಳಕೆದಾರರಿಗೆ ಡಬಲ್ ಧಮಾಕದ ನೀಡಿದೆ. ಒಂದು ಕಡೆ ಆಟವಾಡಲು ಗೇಮ್ ಕೊಟ್ಟಿದ್ದು, ಮತ್ತೊಂದು ಕಡೆ ನಗಲು ಹಾಸ್ಯದ ಶೋವೊಂದನ್ನು ಆರಂಭಿಸಿದೆ.

ಜಿಯೋ ತನ್ನ ಬಳಕೆದಾರರಿಗೆ ಕ್ರಿಕೆಟ್ ಹಬ್ಬ ಆಯೋಜಿಸಿದ್ದು, ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಗೇಮ್​ಗೆ ಚಾಲನೆ ನೀಡಿದೆ. ಇದರಲ್ಲಿ ಬಳಕೆದಾರರು ಲೈವ್ ಆಗಿ ಮೊಬೈಲ್ ಗೇಮ್ ಆಡುವ ಜೊತೆಗೆ ಕೋಟಿಗಟ್ಟಲೆ ಬಹುಮಾನ ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟಿದೆ. IPL ಮ್ಯಾಚ್ ಗಳನ್ನು ನೋಡುತ್ತಾ ಸ್ಮಾರ್ಟ್‌ಫೋನ್‌ ಬಳಕೆದಾರರು ಕ್ರಿಕೆಟ್ ಸಹ ಆಡಬಹುದಾಗಿದೆ.

ಕ್ರಿಕೆಟ್ ಆಟ ನೋಡಿ ಆನಂದಿಸುತ್ತಿದ್ದವರು ಕ್ರಿಕೆಟ್ ಗೇಮ್​ ಆಡುವ ಸಲುವಾಗಿ ಜಿಯೋ ಗೇಮ್ ಆಪ್ ಬಿಡುಗಡೆಯಾಗಿದೆ. ಈ ಆಟವನ್ನು ಎಲ್ಲಾ ಸ್ಮಾರ್ಟ್​ಫೋನ್​ಗಳಲ್ಲೂ ಆಡಬಹುದಾಗಿದ್ದು, 11 ಭಾಷೆಗಳಲ್ಲಿ ಲಭ್ಯವಿರಲಿದೆ.

ಜಿಯೋ IPL ಡಬ್ಬಲ್ ಧಮಾಕಾ: ಕ್ರಿಕೆಟ್ ಪ್ಲೇ ಅಲಾಂಗ್- ಧನ್ ಧನಾ ಧನ್

ಈ ಜಿಯೋ ಕ್ರಿಕೆಟ್ ಹಬ್ಬ ಬರೀ ಗೇಮ್​ಗಾಗಿ ಸೀಮಿತವಾಗಿಲ್ಲ, ಜಿಯೋ ಧನ್ ಧನಾ ಧನ್ ಲೈವ್ ಶೋವೊಂದನ್ನು ನಡೆಸಲು ಮುಂದಾಗಿದ್ದು, ಇದರಲ್ಲಿ ಕ್ರಿಕೆಟ್ ಮತ್ತು ಕಾಮಿಡಿ ಎರಡು ಇರಲಿದೆ. ಬಳಕೆದಾರರು MyJio ಆಪ್ ನಲ್ಲಿ ಜಿಯೋ ಧನ್ ಧನಾ ಧನ್ ಲೈವ್ ಶೋ ನೋಡುವ ಅವಕಾಸವನ್ನು ಪಡೆದುಕೊಂಡಿದ್ದಾರೆ.

ಇದೇ ಏಪ್ರಿಲ್ 7ರಿಂದ ಈ IPL ಆರಂಭವಾಗಲಿದ್ದು, ಅಂದಿನಿಂದಲೇ ಈ ಶೋ ನೇರ ಪ್ರಸಾರ ಶುರುವಾಗಲಿದೆ. ಕಾಮಿಡಿ ನೈಟ್ ವಿಥ್ ಕಪಿಲ್ ಕಾರ್ಯಕ್ರಮದ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡ ನಟ ಸುನೀಲ್ ಗ್ರೋವರ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ. ಪ್ರತೀ ಎಪಿಸೋಡ್​ನಲ್ಲೂ ಕ್ರಿಕೆಟ್ ಆಟಗಾರರು ಮತ್ತು ಸೆಲಬ್ರಿಟಿಗಳು ಕಾಣಿಕೊಳ್ಳುತ್ತಾರೆ.

Best Mobiles in India

English summary
Jio Dhan Dhana Dhan Live. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+