ಜಿಯೋ ಡಿಜಿಟಲ್ ಪ್ಯಾಕ್: ಷರತ್ತು ಇಲ್ಲದೇ ಉಚಿತ 2GB ಡೇಟಾ...! ಆಕ್ಟೀವ್ ಮಾಡಿಕೊಳ್ಳಿ...!
ಜಿಯೋ ತನ್ನ ಬಳಕೆದಾರರಿಗೆ ಡೇಟಾ ಮತ್ತು ಕರೆಗಳ ಪ್ಲಾನ್ ಅನ್ನು ನೀಡುವುದರ ಜೊತೆಗೆ ಡೇಟಾ ಆಡನ್ ಪ್ಲಾನ್ ಗಳನ್ನು ನೀಡಲು ಮುಂದಾಗಿದೆ. ಅದರಲ್ಲಿಯೋ ಬಳಕೆದಾರರಿಗೆ ಹೊಸದೊಂದು ಸರ್ಪ್ರೈಸ್ ಆಫರ್ ಅನ್ನು ನೀಡಿದೆ. ಇದಕ್ಕಾಗಿಯೇ ಜಿಯೋ ಡಿಜಿಟಲ್ ಪ್ಯಾಕ್ ಅನ್ನು ಘೋಷಣೆ ಮಾಡಿದೆ. ಇದರಲ್ಲಿ ಪ್ರೀಪೇಯ್ಡ್ ಬಳಕೆದಾರರಿಗೆ ನಿತ್ಯ ಹೆಚ್ಚುವರಿ 2GB ಡೇಟಾವನ್ನು ನೀಡಲಿದೆ ಎನ್ನಲಾಗಿದೆ.

ಈಗಾಗಲೇ ಜಿಯೋ ಡಿಜಿಟಲ್ ಪ್ಯಾಕ್ ಆಕ್ಟೀವ್ ಆಗಿದ್ದು ಜುಲೈ 30ಕ್ಕೆ ಎಂಡ್ ಆಗಲಿದೆ. ಇದೊಂದು ಜಿವ್ ಆವೇ ಪ್ಲಾನ್ ಆಗಿದ್ದು, ಬಳಕೆದಾರರಿಗೆ ಉಚಿತವಾಗಿ 2GB 4G ಡೇಟಾವನ್ನು ಉಚಿತವಾಗಿಯೇ ನೀಡುತ್ತಿದೆ. ಇದು ಎಲ್ಲಾ ಬಳಕೆದಾರರಿಗೆ ದೊರೆಯುವುದಿಲ್ಲ ಎನ್ನಲಾಗಿದೆ. ಕೆಲವೇ ಕೆಲವು ಮಂದಿಗೆ ಮಾತ್ರವೇ ಲಭ್ಯವಿರಲಿದೆ. ನಿಮಗೂ ಈ ಆಪರ್ ದೊರೆಯುತ್ತಿದೆಯೇ ಇಲ್ಲವೇ ಎಂಬುದನ್ನು ಮೈ ಜಿಯೋ ಆಪ್‌ನಲ್ಲಿ ನೋಡಿದರೆ ತಿಳಿಯಲಿದೆ.

ನಿತ್ಯ 2 GB:
ಜಿಯೋ ನೀಡುತ್ತಿರುವ ಉಚಿತ ಪ್ಲಾನ್ ಇದಾಗಿದೆ. ಇದರಲ್ಲಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ನೀಡುತ್ತಿರುವ ಆಫರ್ ಇದಾಗಿದೆ. ಇದರಲ್ಲಿ ಬಳಕೆದಾರರಿಗೆ ನಿತ್ಯ ಅವರು ಬಳಕೆ ಮಾಡಿಕೊಳ್ಳುತ್ತಿರುವ ಡೇಟಾದ ಜೊತೆಗೆ 2GB ಡೇಟಾವನ್ನು ಬಳಕೆ ನೀಡಲಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದ ಡೇಟಾ ದೊರೆಯಲಿದೆ.

ಇದು ಆಡ್ ಆನ್ ಪ್ಯಾಕ್:
ಇದೊಂದು ಆಡ್ ಆನ್ ಪ್ಯಾಕ್ ಆಗಿದ್ದು, ಇದರಲ್ಲಿ ಯಾವುದೇ ಕರೆ ಮಾಡುವ ಸೇವೆ ಸೇರಿದಂತೆ ಬೇರೆ ಯಾವುದೇ ಉಚಿತ ಸೇವೆಗಳು ದೊರೆಯುವುದಿಲ್ಲ ಎನ್ನಲಾಗಿದೆ. ಇದರಲ್ಲಿ ಕೇಲವ 2GB ಡೇಟಾವನ್ನು ಮಾತ್ರವೇ ಬಳಕೆದಾರರಿಗೆ ದೊರೆಯಲಿದೆ. ಇದು ಆಕ್ವೀವ್ ಪ್ರೀಪೇಯ್ಡ್ ಪ್ಲಾನ್ ನೊಂದಿಗೆ ಮಾತ್ರವೇ ದೊರೆಯಲಿದೆ.

ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಇಲ್ಲ:
ಜಿಯೋ ಡಿಜಿಟಲ್ ಪ್ಯಾಕ್ ಕೇಲವ ಪ್ರೀಪೇಯ್ಡ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದ್ದು, ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಈ ಪ್ಲಾನ್ ಲಭ್ಯವಿಲ್ಲ. ಇದರಿಂದಾಗಿ ಈ ಆಡ್ ಆನ್ ಲಾಭ ಜಿಯೋ ಪ್ರೀ ಪೇಯ್ಡ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ.

ಜುಲೈ 30ಕ್ಕೆ ಕೊನೆ
ಜಿಯೋ ಡಿಜಿಟಲ್ ಪ್ಯಾಕ್ ಆಫರ್ ಕೇಲವ ಜುಲೈ 30ರ ವರೆಗೆ ಮಾತ್ರವೇ ಲಭ್ಯವಿದೆ ಎನ್ನಲಾಗಿದೆ. ಈಗಲೇ ನಿಮ್ಮ ಮೈ ಜಿಯೋ ಆಪ್‌ನಲ್ಲಿ ಈ ಆಫರ್ ಕುರಿತು ಸಾಕಷ್ಟು ಮಾಹಿತಿಯೂ ಲಭ್ಯವಿದೆ. ಅಲ್ಲಿಯೇ ಆಕ್ಟೀವ್ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








