Subscribe to Gizbot

ಜಿಯೋ ಡಿಟಿಹೆಚ್ ಯಾವಾಗ ಬಿಡುಗಡೆಯಾಗುತ್ತದೆ?..ಇಲ್ಲಿದೆ ಫುಲ್ ಡೀಟೆಲ್ಸ್!!

Written By:

ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಜಿಯೋ ಡಿಟಿಹೆಚ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿರುವ ಗ್ರಾಹಕರಿಗೆ ಸಿಹಿಸುದ್ದಿ, ಜಿಯೋ ಬಗೆಗಿನ ಹೊಸ ಅಪ್‌ಡೇಟ್ ಸುದ್ದಿಯ ಪ್ರಕಾರ ಜಿಯೋ ಡಿಟಿಹೆಚ್ ಜುಲೈ ತಿಂಗಳಿನ ಮಧ್ಯಭಾಗದಲ್ಲಿ ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ.!!

ಹೌದು, ಕೆಲವು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಜಿಯೋ ಡಿಟಿಹೆಚ್ ಸೇವೆಯ ಪ್ರಾಯೋಗಿಕ ಪರೀಕ್ಷೆ ಹಂತವು ಯಶಸ್ವಿಯಾಗಿ ಮುಗಿದಿದ್ದು, ಜುಲೈ ತಿಂಗಳಿನ 14 ಅಥವಾ 15 ನೇ ತಾರೀಖಿನಂದು ಜಿಯೋ ಡಿಟಿಹೆಚ್ ಬಿಡುಗಡೆಯಾಗುತ್ತಿದೆ ಎಂದು ಹೇಳಿವೆ.!!

ಜಿಯೋ ಮೂಲಗಳ ಪ್ರಕಾರ ಈ ಮಾಹಿತಿ ಬಯಲಾಗಿದೆ ಎನ್ನಲಾಗಿದ್ದು, ಜಿಯೋ ಡಿಟಿಹೆಚ್ ಸೇವೆಗಳ ಬಗ್ಗೆಯೂ ಸಹ ಮಾಹಿತಿ ಹೊರಬಿದ್ದಿದೆ. ಇದೀಗ ಸಿಕ್ಕಿರುವ ಸುದ್ದಿಯಲ್ಲಿ ಜಿಯೋ ಡಿಟಿಹೆಚ್ ಬೆಲೆ? ಡಿಟಿಹೆಚ್ ಪ್ಲಾನ್? ಚಾನೆಲ್‌ಗಳ? ಮಾಹಿತಿಯೂ ಇದ್ದು, ಜಿಯೋ ಡಿಟಿಹೆಚ್ ಸೇವೆಗಳ ಬಗ್ಗೆ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂರು ತಿಂಗಳು ಉಚಿತ!!

ಮೂರು ತಿಂಗಳು ಉಚಿತ!!

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಜಿಯೋ ಡಿಟಿಹೆಚ್ ಮೂರು ತಿಂಗಳು ಉಚಿತವಾಗಿರಲಿದೆ ಎನ್ನುವುದು ಬಹುತೇಕ ಫೈನಲ್ ಆಗಿದೆ.!! ಇದೇ ಮೊದಲ ಬಾರಿಗೆ ಡಿಟಿಹೆಚ್ ಉಚಿತ ಸೇವೆಯನ್ನು ಡಿಟಿಹೆಚ್ ಗ್ರಾಹಕರು ಪಡೆಯಬಹುದು.!!

ಫೈಬರ್ ಆಪ್ಟಿಕ್!!

ಫೈಬರ್ ಆಪ್ಟಿಕ್!!

ಜಿಯೋ ಡಿಟಿಹೆಚ್ ಜಿಯೋ ಫೈಬರ್ ಆಪ್ಟಿಕ್ ಸಂಪರ್ಕ ಬಳಸಿಕೊಂಡು ಕಾರ್ಯನಿರ್ವಹಣೆ ನೀಡಲಿದೆ. ಜಿಯೋ ಸೆಟ್-ಟಾಪ್ ಬಾಕ್ಸ್ ಸಿಪಿಇ ಸಾಧನ ಮತ್ತು ಸ್ಯಾಟಲೈಟ್‌ ಅನ್ನು ಬಳಸಿಕೊಂಡು ಜಿಯೋ ಡಿಟಿಹೆಚ್ ಸೇವೆಯೂ ಎಲ್ಲೆಡೆಯೂ ಲಭ್ಯವಾಗಲಿದೆ.!!

ಬೆಸಿಕ್ ಪ್ಲಾನ್ ಕೇವಲ 99 ರೂ!!

ಬೆಸಿಕ್ ಪ್ಲಾನ್ ಕೇವಲ 99 ರೂ!!

ಜಿಯೋ ಕಡಿಮೆ ಬೆಲೆಯಲ್ಲಿ ಡಿಟಿಹೆಚ್ ಸೇವೆಯನ್ನು ಆರಂಭಿಸಲಿದ್ದು ಬೆಸಿಕ್ ಪ್ಲಾನ್ ಅನ್ನು ಕೇವಲ ರೂ.99ಕ್ಕೆ ನೀಡಲಿದೆ. 180 ರೂಪಾಯಿಗಳಿಗೆ 300 ಕ್ಕೂ ಅಧಿಕ ಚಾನೆಲ್‌ಗಳು ಲಭ್ಯವಿದ್ದು, ಮೈ ಪ್ಲಾನ್ ಮತ್ತು ಫ್ಯಾಮಿಲಿ ಪ್ಲಾನ್‌ಗಳು ಸಹ ಜಿಯೋ ಡಿಟಿಹೆಚ್ ಸೇವೆಯಲ್ಲಿರಲಿವೆ.!!

ಜಿಯೋ ಡಿಟಿಹೆಚ್ ಬೆಲೆ ಎಷ್ಟು?

ಜಿಯೋ ಡಿಟಿಹೆಚ್ ಬೆಲೆ ಎಷ್ಟು?

ಜಿಯೋ.ಕಾಮ್‌( JIO.Com) ನಲ್ಲಿ ಡಿಟಿಹೆಚ್ ಬುಕ್ ಮಾಡಬಹುದಾಗಿದ್ದು, ಜಿಯೋ ಡಿಟಿಹೆಚ್ 1500 ರೂ.ಗಳಾಗಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಜಿಯೋ ಡಿಟಿಹೆಚ್ ಬೆಲೆಯ ಬಗ್ಗೆ ಇನ್ನು ಪೂರ್ತಿಯಾಗಿ ನಿರ್ಧರ ಹೊರಬಿದ್ದಿಲ್ಲ ಎಂದು ರಿಪೋರ್ಟ್ ಹೇಳಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
According to Jio DTH news or latest reports, Jio has ready to come into the market with Jio set box. to know more visit to kannada.izbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot