ಜಿಯೋವಿನ ಮತ್ತೆರಡು ನೂತನ ಯೋಜನೆಗಳು ಮೂರು ತಿಂಗಳು ಉಚಿತವಾಗಿ ಬರಲಿವೆ!!

By Bhaskar N J

    ಇತ್ತೀಚಿಗಷ್ಟೆ ಡಬಲ್ ಧಮಾಕ ಡೇಟಾ ಆಫರ್ ಘೋಷಿಸಿರುವ ಜಿಯೋ ಶೀಘ್ರದಲ್ಲಿಯೇ ಮತ್ತೊಂದು ಬಹುದೊಡ್ಡ ಯೋಜನೆಯನ್ನು ಘೋಷಿಸುವ ಸಾಧ್ಯತೆ ದಟ್ಟವಾಗಿದೆ. ಭಾರತೀಯರಿಗೆ ಜಿಯೋ ಮತ್ತೊಂದು ಕೊಡುಗೆ ನೀಡಲು ಮುಂದಾಗಿದ್ದು, ಶೀಘ್ರದಲ್ಲಿಯೇ ಜಿಯೋ ಡಿಟಿಹೆಚ್ ಮತ್ತು ಫೈಬರ್‌ನೆಟ್ ಅನ್ನು ಜಿಯೋ ಪ್ರಾರಂಭಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

    ಗ್ರಾಹಕರಿಗೆ ಈಗಾಗಲೇ ಅಗ್ಗದ ದರದಲ್ಲಿ ಇಂಟರ್‌ನೆಟ್ ಸೇವೆ ನೀಡುತ್ತಿರುವ ಜಿಯೋ ಇನ್ನೇನು ಕೆಲವೇ ದಿವಸಗಳಲ್ಲಿ ಡಿಟಿಹೆಚ್ ಟಿವಿ ಮತ್ತು ಫೈಬರ್ ನೆಟ್ ಪ್ರಾರಂಭಿಸಲಿದೆ. ಇನ್ನು ಪ್ರಾರಂಭಿಕ ಕೊಡುಗೆಳಾಗಿ ಈ ಸೇವೆಗಳನ್ನು ಉಚಿತವಾಗಿ 3 ಅಥವಾ 6 ತಿಂಗಳ ಕಾಲ ಒದಗಿಸಲಾಗುತ್ತದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿರುವುದಾಗಿ ಕೆಲ ಪತ್ರಿಕೆಗಳು ವರದಿಮಾಡಿವೆ.

    ಜಿಯೋವಿನ ಮತ್ತೆರಡು ನೂತನ ಯೋಜನೆಗಳು ಮೂರು ತಿಂಗಳು ಉಚಿತವಾಗಿ ಬರಲಿವೆ!!

    ಜಿಯೋ ಡಿಟಿಹೆಚ್ ಮತ್ತು ಜಿಯೋ ಫೈಬರ್ ಪ್ಲಾನ್ ಬಗ್ಗೆ ಈಗಾಗಲೇ ಮಾಹಿತಿಯನ್ನು ಲೀಕ್ ಮಾಡಿರುವ ಜಿಯೋ ಏಕಕಾಲದಲ್ಲಿ ದೇಶದಾಧ್ಯಂತ ಎರಡೂ ಸೇಬೆಗಳನ್ನು ಪರಿಚಯಿಸಲು ಮುಂದಾಗಿದೆ ಎನ್ನಲಾಗಿದೆ. ಹಾಗಾದರೆ, ಜಿಯೋ ಫೈಬರ್ ಮತ್ತು ಜಿಯೋ ಡಿಶ್ ಏನೆಲ್ಲಾ ಆಫರ್ ಹೊಂದಿರಲಿವೆ.? ಲೀಕ್ ಆಗಿರುವ ಮಾಹಿತಿಗಳೇನು? ಎಂಬುದನ್ನು ಮುಂದೆ ತಿಳಿಯಿರಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    1 GBPS ವೇಗದ ಇಂಟರ್‌ನೆಟ್!!

    ಮೂರು ತಿಂಗಳ ಉಚಿತ ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಡೇಟಾವನ್ನು ಜಿಯೋ 1 GBPS ವೇಗದಲ್ಲಿ ನೀಡುತ್ತಿದೆ.! ಜಿಯೋ ಫೈಬರ್ ಬ್ರಾಡ್‌ಬ್ಯಾಂಡ್ ಮೂರು ತಿಂಗಳು ಉಚಿತವಾದರೂ ಪ್ರತಿ ತಿಂಗಳು 100GB ಸ್ಪೀಡ್ ಡೇಟಾ ಲಭ್ಯವಿದೆ. ನಂತರ ಕಡಿಮೆ ವೇಗೆದಲ್ಲಿ ಡೇಟಾ ಕಾರ್ಯನಿರ್ವಹಿಸುತ್ತದೆ.!

    4K ಗುಣಮಟ್ಟದಲ್ಲಿ ಬ್ರಾಡ್‌ಬ್ಯಾಂಡ್!!

    ಜಿಯೋ ಫೈಬರ್ ಟು ದಿ ಹೋಮ್ (ಎಫ್‌ಟಿಟಿಹೆಚ್) ಬ್ರಾಡ್ ಬ್ಯಾಂಡ್ ಸೇವೆಯು 4K ಗುಣಮಟ್ಟದಲ್ಲಿ ದೊರೆಯಲಿದೆ.ಒಂದು ತಿಂಗಳ ವ್ಯಾಲಿಡಿಟಿ ಮುಗಿದ ನಂತರ ಮತ್ತೆ 100GB ಡೇಟಾ ಆಫರ್ ಲಭ್ಯವಾಗುತ್ತದೆ. ಹೀಗೆ ಪ್ರತಿತಿಂಗಳಂತೆ ಮೂರು ತಿಂಗಳು ಜಿಯೋ ಫೈಬರ್ ನೆಟ್ ಸೇವೆ ಉಚಿತವಾಗಿರಲಿದೆ.!

    100GB ಡೇಟಾಗೆ 500 ರೂ.!

    ಜಿಯೋ ಫೈಬರ್ ಉಚಿತ ಸೇವೆ ಕೊನೆಯಾದ ನಂತರದ ಆಫರ್ ಬಗ್ಗೆಯೂ ಸಹ ಮಾಹಿತಿ ಹೊರಬಿದ್ದಿದೆ. 100GB ಡೇಟಾಗೆ 500 ರೂ ಹಣ ಪಾವತಿ ಮಾಡಿ ನಂತರ ಜಿಯೋ ಬ್ರಾಡ್‌ಬ್ಯಾಂಡ್ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.!

    ಮೂರು ತಿಂಗಳು ಉಚಿತ ಡಿಟಿಹೆಚ್!!

    ಜಿಯೋ ಸಿಮ್ ರೀತಿಯಲ್ಲಿಯೇ ಜಿಯೋ ಡಿಟಿಹೆಚ್ ಸಹ ಮೂರು ತಿಂಗಳ ಉಚಿತ ಪ್ರಮೋಷನಲ್ ಆಫರ್ ಅನ್ನು ಹೊಂದಿರುತ್ತದೆ ಎನ್ನಲಾಗಿದೆ. ಆದರೆ, ಜಿಯೋ ಡಿಟಿಹೆಚ್ ಸೇವೆ ಸಂಪರ್ಕ ಪಡೆಯಲು 1000 ದಿಂದ 1500 ರೂಪಾಯಿಗಳನ್ನು ಮೊದಲು ಪಾವತಿಸಬೇಕಾಗುತ್ತದೆ ಎನ್ನುತ್ತಿವೆ ವರದಿಗಳು.!

    ಏಕಕಾಲದಲ್ಲಿ ಜಿಯೋ ಡಿಟಿಹೆಚ್!!

    ಉತ್ತರ ಭಾರತ, ದಕ್ಷಿಣ ಭಾರತ, ಪೂರ್ವ ಭಾರತ ಮತ್ತು ಪಶ್ಛಿಮ ಭಾರತ ಎಂದು ಜಿಯೋ ಡಿಟಿಹೆಚ್ ಸೇವೆಯನ್ನು ವಿಂಗಡನೆ ಮಾಡಲಾಗಿದ್ದು, ಏಕಕಾಲದಲ್ಲಿ ಜಿಯೋ ಡಿಟಿಹೆಚ್ ಸೇವೆಯನ್ನು ದೇಶದೆಲ್ಲೇಡೆ ಪರಿಚಯಿಸಲಾಗುತ್ತಿದೆ ಎಂದು ತಿಳಿದುಬಂದಿದೆ.!

    ಬೆಸಿಕ್ ಪ್ಲಾನ್ ಕೇವಲ 99 ರೂ!!

    ಸ್ಥಳೀಯ ಭಾಷೆಗಳಿಗೆ ಹೆಚ್ಚು ಮಹತ್ವ ನೀಡಲು ಜಿಯೋ ಮುಂದಾಗಿದೆ. ಇದಲ್ಲದೆ ಕಡಿಮೆ ಬೆಲೆಯಲ್ಲಿ ಡಿಟಿಹೆಚ್ ಸೇವೆಯನ್ನು ಆರಂಭಿಸಲಿದ್ದು, ಬೆಸಿಕ್ ಪ್ಲಾನ್ ಅನ್ನು ಕೇವಲ ರೂ.99ಕ್ಕೆ ನೀಡಲಿದೆ. ಜೊತೆಗೆ ಮೈ ಪ್ಲಾನ್ ಮತ್ತು ಫ್ಯಾಮಿಲಿ ಪ್ಲಾನ್‌ಗಳು ಸಹ ಜಿಯೋ ಡಿಟಿಹೆಚ್ ಸೇವೆಯಲ್ಲಿರಲಿವೆ.!

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    English summary
    So you can expect JIO DTH dispatch date in 2018 as per sources.to know more visit to kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more