Home
ಸುದ್ದಿಜಾಲ

ಜಿಯೋ ಎಫೆಕ್ಟ್: ವೊಡಾಫೋನ್ ನಿಂದ 100% ಕ್ಯಾಷ್ ಬ್ಯಾಕ್ ಆಫರ್ಸ್!

ವಡಾಫೋನ್ ಜಿಯೋನೊಂದಿಗೆ ನೇರವಾಗಿ ಸ್ಪರ್ಧೆಮಾಡಲು ತಯಾರಾದಂತೆ ಕಾಣುತ್ತಿದೆ. ಇತ್ತೀಚೆಗಷ್ಟೇ ಜಿಯೋ 100% ಕ್ಯಾಷ್ ಬ್ಯಾಕ್ ಆಫರ್ ನ್ನು ಕೆಲವು ಆಯ್ದ ಪ್ರೀಪೇಯ್ಡ್ ರಿಚಾರ್ಜ್ ಗಳಿಗೆ ನೀಡಿದಂತೆ ಇದೀಗ ದೇಶದ ಎರಡನೇ ಅತೀ ದೊಡ್ಡ ಟೆಲಿಕಾಂ ಆಪರೇಟರ್ ಆಗಿ ಹೊರಹೊಮ್ಮುತ್ತಿರುವ ವಡಾಫೋನ್ ಇದೇ ರೀತಿಯ ಆಫರ್ ನ್ನು ಬಿಡುಗಡೆಗೊಳಿಸಿದೆ. ಹೌದು ವಡಾಫೋನ್ ಟೆಲಿಕಾಂ ಸಂಸ್ಥೆ ಆಯ್ದ ಕೆಲವು ಪ್ರೀಪೇಯ್ಡ್ ಪ್ಲಾನ್ ಗಳಿಗೆ 100% ಕ್ಯಾಷ್ ಬ್ಯಾಕ್ ಆಫರ್ ನ್ನು ನೀಡುತ್ತಿದೆ.

ಎಲ್ಲಾ ಸರ್ಕಲ್ ನಲ್ಲೂ ಲಭ್ಯವಿಲ್ಲ:

ಎಲ್ಲಾ ಸರ್ಕಲ್ ನಲ್ಲೂ ಲಭ್ಯವಿಲ್ಲ:

ಟೆಲಿಕಾಂಟಾಕ್ ವರದಿಯು ಹೇಳುವಂತೆ ಇದರಲ್ಲಿ ಎಲ್ಲರೂ ಗಮನಿಸಬೇಕಾಗಿರುವ ಒಂದು ಅಂಶವಿದೆ. ಈ ಆಫರ್ ನ್ನು ವಡಾಫೋನ್ ಎಲ್ಲಾ ಸರ್ಕಲ್ ನಲ್ಲೂ ಬಿಡುಗಡೆಗೊಳಿಸಿದೆ ನಿಜ ಆದರೆ ಇದರ ಬೆನಿಫಿಟ್ ಗಳು ಬೇರೆಬೇರೆ ಸರ್ಕಲ್ ನಲ್ಲಿ ಬೇರೆಬೇರೆಯಾಗಿರುತ್ತದೆ. ಕಂಪೆನಿಯು ಮೂರು ಪ್ಲಾನ್ ಗಳನ್ನು ಈ ಆಫರ್ ನ ಅಡಿಯಲ್ಲಿ ಬಿಡುಗಡೆಗೊಳಿಸಿದೆ- ರುಪಾಯಿ399, ರುಪಾಯಿ 458 ಮತ್ತು ರುಪಾಯಿ 509.

ವೋಚರ್ ಗಳ ರೂಪದಲ್ಲಿ ಕ್ಯಾಷ್ ಬ್ಯಾಕ್:

ವೋಚರ್ ಗಳ ರೂಪದಲ್ಲಿ ಕ್ಯಾಷ್ ಬ್ಯಾಕ್:

ಈ ಕ್ಯಾಷ್ ಬ್ಯಾಕ್ ನ್ನು ವೋಚರ್ ಗಳ ರೂಪದಲ್ಲಿ ಕ್ರೆಡಿಟ್ ಮಾಡಲಾಗುತ್ತದೆ.ಈ ಮೂರು ಮೇಲಿನ ಪ್ಲಾನ್ ಗಳು 1.4ಜಿಬಿ ಪ್ರತಿದಿನ ಡಾಟಾ, 100ಎಸ್ಎಂಎಸ್ ಉಚಿತ ಮತ್ತು ಅನಿಯಮಿತ ವಾಯ್ಸ್ ಕರೆಗಳು ಅದರಲ್ಲಿ ರೋಮಿಂಗ್ ಕೂಡ ಉಚಿತವಾಗಿ ನೀಡಲಾಗುತ್ತದೆ. ವ್ಯಾಲಿಡಿಟಿ ಪಿರೇಡ್ ನಲ್ಲಿ ವ್ಯತ್ಯಾಸವಿರುತ್ತದೆ.

ರುಪಾಯಿ ವ್ಯಾಲಿಡಿಟಿ ಪಿರೇಡ್ ಕ್ಯಾಷ್ ಬ್ಯಾಕ್ ವೋಚರ್ ಗಳು

  • 399 70 50ರುಪಾಯಿಯ 8 ವೋಚರ್ ಗಳು
  • 458 84 50 ರುಪಾಯಿ 9 ರೀಚಾರ್ಜ್ ವೋಚರ್ ಗಳು
  • 509 90 50 ರುಪಾಯಿ 10 ವೋಚರ್ ಗಳು
  • ವೋಚರ್ ಗಳನ್ನು ಬಳಕೆದಾರರ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ ಮತ್ತು ಅವರು ಮೈ ವಡಾಫೋನ್ ಆಪ್ ಮೂಲಕ ಪಡೆದುಕೊಳ್ಳಬಹುದು. ವೋಚರ್ ನ್ನು ಮುಂದಿನ ರೀಚಾರ್ಜ್ ಗೆ ಬಳಸಿಕೊಳ್ಳಬಹುದು.

    275 ರುಪಾಯಿ ರೀಚಾರ್ಜ್ ಪ್ಲಾನ್:

    275 ರುಪಾಯಿ ರೀಚಾರ್ಜ್ ಪ್ಲಾನ್:

    ಇದರ ಜೊತೆಗೆ ವಡಾಫೋನ್ ಕಳೆದ ತಿಂಗಳು 275 ರುಪಾಯಿಯ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ನ್ನು ಕೂಡ ಬಿಡುಗಡೆಗೊಳಿಸಿದೆ. ಕಂಪೆನಿಯು ಅನಿಯಮಿತ ವಾಯ್ಸ್ ಕರೆಗಳು ಜೊತೆಗೆ 4GB ಯಷ್ಟು 3G/ 4G ಡಾಟಾವನ್ನು 84 ದಿನಗಳ ಅವಧಿಗೆ ನೀಡುತ್ತದೆ ಮತ್ತು ಅನಿಯಮಿತ ಎಸ್ಎಂಎಸ್ ಗಳನ್ನು ಕೂಡ ಈ ಆಫರ್ ನ ಅಡಿಯಲ್ಲಿ ನೀಡುತ್ತದೆ.

    ಜಿಯೋ ಪ್ಲಾನ್ ಜೊತೆಗೆ ಸ್ಪರ್ಧೆ:

    ಜಿಯೋ ಪ್ಲಾನ್ ಜೊತೆಗೆ ಸ್ಪರ್ಧೆ:

    ಕಂಪೆನಿಯು ಅನಿಯಮಿತ ಕರೆಗಳ ಬೆನಿಫಿಟ್ ಏನೋ ನೀಡಿದೆ ಆದರೆ ಪ್ರತಿದಿನ ಮತ್ತು ವಾರದ FUP ಯನ್ನು ಈ ಬೆನಿಫಿಟ್ ಗೆ ಅಪ್ಲೈ ಮಾಡಲಾಗುತ್ತದೆ. ನೀವು ಕೇವಲ 250 ನಿಮಿಷ ಪ್ರತಿದಿನ ಮತ್ತು 1000 ನಿಮಿಷ ಒಂದು ವಾರಕ್ಕೆ ಎಂಜಾಯ್ ಮಾಡಲು ಅವಕಾಶವಿರುತ್ತದೆ. ಇದರ ನಂತರ ಕಂಪೆನಿಯು ನಿಮಗೆ ಚಾರ್ಜ್ ಮಾಡುತ್ತದೆ. ಈ ಪ್ಲಾನ್ ಕೆಲವು ಆಯ್ದ ಸರ್ಕಲ್ ನಲ್ಲಿ ಮಾತ್ರವೇ ಲಭ್ಯವಿದೆ.

    ಈ ಪ್ಲಾನ್ ಜಿಯೋ 399 ರುಪಾಯಿ ಪ್ಲಾನ್ ಜೊತೆಗೆ ಸ್ಪರ್ಧೆ ಮಾಡುತ್ತದೆ. ಜಿಯೋ ಪ್ಲಾನ್ 126ಜಿಬಿ ಡಾಟಾ ಜೊತೆಗೆ ಪ್ರತಿದಿನ FUP ಲಿಮಿಟ್ 1.5ಜಿಬಿ ಪ್ರತಿದಿನ ಮತ್ತು 100ಎಸ್ಎಂಎಸ್ ಪ್ರತಿದಿನ 84 ದಿನಗಳ ಅವಧಿಗೆ ನೀಡುತ್ತದೆ.

Best Mobiles in India

English summary
Jio effect: Vodafone offers 100 per cent cashback with select prepaid recharge plans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+