ಜಿಯೋ ಎಫೆಕ್ಟ್: ವೊಡಾಫೋನ್ ನಿಂದ 5 ರೂ.ಗೆ ಅನ್‌ಲಿಮಿಟೆಡ್ ಡೇಟಾ..!!!
ವೊಡಾಪೋನ್ ಸಹ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯಲು ಹೊಸ ದೊಂದು ಆಫರ್ ನೀಡಲು ಮುಂದಾಗಿದೆ.
ಸದ್ಯ ದೇಶದಲ್ಲಿ ಜಿಯೋ ಎದುರಿಗೆ ದರ ಸಮರ ನಡೆಸುವವರು ಹೆಚ್ಚಿನ ಆಫರ್ ನೀಡಲು ಮುಂದಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೇ ಮಾದರಿಯಲ್ಲಿ ವೊಡಾಪೋನ್ ಸಹ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯಲು ಹೊಸ ದೊಂದು ಆಫರ್ ನೀಡಲು ಮುಂದಾಗಿದೆ.

ವೊಡಾಪೋನ್ ಸದ್ಯ ಅನ್‌ಲಿಮಿಟೆಡ್ ಡೇಟಾ ಮತ್ತು ಉಚಿತ ಲೋಕಲ್ ಮತ್ತು STD ಕರೆ ಮಾಡುವ ಪ್ಲಾನ್‌ಗಳನ್ನು ಕೇವಲ 5 ರೂ.ಗಳಿಂದ ಆರಂಭಿಸುವ ಮೂಲಕ ಮತ್ತೇ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಮಾಡಲು ಮುಂದಾಗಿದೆ.

ರಂಜಾನ್ ಸ್ಪೆಷಲ್ ಪ್ಯಾಕ್
ರಂಜಾನ್ ಹಬ್ಬದ ಕಾರಣ ಉತ್ತರಪ್ರದೇಶ ಸರ್ಕಲ್ ನಲ್ಲಿ ವೊಡಾಫೋನ್ 2G ಮತ್ತು 3G ಗ್ರಾಹಕರಿಗೆ ಅಲ್‌ಲಿಮಿಟೆಡ್ ಡೇಟಾವನ್ನು 5 ರೂ. ಮತ್ತು ರೂ. 19 ಕ್ಕೆ ನೀಡಲು ಮುಂದಾಗಿದೆ. ಇದಕ್ಕಾಗಿ ರಂಜಾನ್ ಸ್ಪೆಷಲ್ ಪ್ಯಾಕ್ ಎಂದು ವೊಡಾಪೋನ್ ನಾಮಕರಣ ಮಾಡಿದೆ.

ರೂ.5 ಆಫರ್:
ವೊಡಾಫೋನ್ ರೂ. 5 ಕ್ಕೆ ರಂಜಾನ್ ಸ್ಪೆಷಲ್ ಪ್ಯಾಕ್ ನಲ್ಲಿ ಒಂದು ಗಂಟೆಗೆ ಅನಿಯಮಿತ ಮೊಬೈಲ್ ಡೇಟಾವನ್ನು 2G ವೇಗದಲ್ಲಿ ನೀಡಲು ಮುಂದಾಗಿದೆ.

ರೂ.19 ಆಫರ್:
ಇದೇ ಮಾದರಿಯಲ್ಲಿ ರೂ.19 ರಂಜಾನ್ ಸ್ಪೆಷಲ್ ಪ್ಯಾಕ್ ನಲ್ಲಿ ಅನಿಯಮಿತ ಮೊಬೈಲ್ ಡೇಟಾವನ್ನು ಒಂದು ಗಂಟೆ ಅವಧಿಗೆ 3G ವೇಗದಲ್ಲಿ ನೀಡಲಿದೆ.

ರೂ. 17 ಆಫರ್:
ಇದು ಕಾಲಿಂಗ್ ಪ್ಯಾಕ್ ಆಗಿದ್ದು, ರೂ. 17ಕ್ಕೆ ಸ್ಥಳೀಯ ಮತ್ತು STD ಕರೆಗಳನ್ನು 90 ದಿನಗಳ ಅವಧಿಗೆ ನಿಮಿಷಕ್ಕೆ 30 ಪೈಸೆಯ ದರದಲ್ಲಿ ನೀಡುತ್ತದೆ.

ರೂ. 253 ಆಫರ್:
28 ದಿನಗಳ ಅವಧಿಯ ಈ ಪ್ಲಾನ್ ನಲ್ಲಿ ಅನಿಯಮಿತ ಕರೆಗಳನ್ನು (ಸ್ಥಳೀಯ ಮತ್ತು STD) ಮತ್ತು ಅನಿಯಮಿತ ಡೇಟಾವನ್ನು 2G ವೇಗದಲ್ಲಿ ನೀಡುತ್ತದೆ.

ರೂ. 345 ಆಫರ್:
28 ದಿನಗಳ ಅವಧಿಯ ಈ ಪ್ಲಾನ್ ನಲ್ಲಿ ಅನಿಯಮಿತ ಕರೆಗಳನ್ನು (ಸ್ಥಳೀಯ ಮತ್ತು STD) ಮತ್ತು ಅನಿಯಮಿತ ಡೇಟಾವನ್ನು 3G ವೇಗದಲ್ಲಿ ನೀಡುತ್ತದೆ. ದಿನಕ್ಕೆ ಒಂದು GB ಯಂತೆ ನೀಡಲಿದೆ.


Click it and Unblock the Notifications








