ಜಿಯೋದಿಂದ 6೦೦೦ GB ಉಚಿತ ಡೇಟಾ ಆಫರ್: ಪಡೆದುಕೊಳ್ಳುವುದು ಹೇಗೆ..?
ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹವಾ ಎಬ್ಬಿಸಿರುವ ಶಿಯೋಮಿ ಸಬ್ ಬ್ರಾಂಡ್ ಪೊಕೊ ಬಿಡುಗಡೆ ಮಾಡಿರುವ ಪೊಕೊ F1 ಸ್ಮಾರ್ಟ್‌ಫೋನ್ ತನ್ನ ವಿಶೇಷತೆಗಳಿಂದ ಮತ್ತು ಕಡಿಮೆ ಬೆಲೆಯಿಂದಾಗಿ ಹೆಚ್ಚಿನ ಸದ್ದು ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಮತ್ತು ಮಿ.ಕಾಮ್‌ನಲ್ಲಿ ಮಾತ್ರವೇ ಮಾರಾಟವಾಗಲಿದ್ದು, ಇದನ್ನು ಖರೀದಿಸಿದವರಿಗೆ ಬೊಂಬಾಟ್ ಆಫರ್‌ಗಳನ್ನು ಕಾಣಬಹುದಾಗಿದೆ.

ಮೊದಲ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್ ಖರೀದಿ ಮಾಡಿದವರಿಗೆ ಭರಪೂರ ಆಫರ್‌ಗಳು ಲಭ್ಯವಿದೆ ಎನ್ನಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಳ್ಳಬಹುದಾಗಿದೆ. ಜಿಯೋ ಸೇರಿದಂತೆ ಹಲವು ಕಂಪನಿಗಳು ಪೊಕೊ F1 ಸ್ಮಾರ್ಟ್‌ಫೋನ್ ಖರೀದಿದಾರಿಗೆ ಆಫರ್‌ಗಳನ್ನು ನೀಡುತ್ತಿವೆ, ಈ ಕುರಿತ ಮಾಹಿತಿಯೂ ಮುಂದಿದೆ. ನೀವು ಪೊಕೊ F1 ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಇದ್ರೆ ಈ ಮಾಹಿತಿ ನಿಮ್ಮ ಸಹಾಯಕ್ಕೆ ಬರಲಿದೆ.

ಜಿಯೋದಿಂದ 6000 GB ಡೇಟಾ:
ಪೊಕೊ F1 ಸ್ಮಾರ್ಟ್‌ಫೋನ್ ಖರೀದಿ ಮಾಡುವವರಿಗೆ ಜಿಯೋ ಬೊಂಬಾಟ್ ಆಫರ್ ನೀಡಿದೆ. ಪೊಕೊ F1 ಸ್ಮಾರ್ಟ್‌ಫೋನಿನೊಂದಿಗೆ ಜಿಯೋ ಸಿಮ್ ಬಳಕೆ ಮಾಡುವವರಿಗೆ ರೂ.8000ದ ಬೆನಿಫಿಟ್ ನೀಡಲಿದ್ದು, ಅಲ್ಲದೇ 6TB ಹೈಸ್ಪೀಡ್ ಡೇಟಾವನ್ನು ನೀಡಲಿದೆ ಎನ್ನಲಾಗಿದೆ. ಅಂದರೆ 6000GB ಗೂ ಅಧಿಕ ಡೇಟಾ ಉಚಿತ ಬಳಕೆಗೆ ಲಭ್ಯವಿರಲಿದೆ.

HDFC ಆಫರ್:
ಇದಲ್ಲದೇ ಮೊದಲ ಸೇಲ್‌ನಲ್ಲಿ ಪೊಕೊ F1 ಸ್ಮಾರ್ಟ್‌ಫೋನ್ ಖರೀದಿ ಮಾಡುವವರಿಗೆ HDFC ಆಫರ್ ನೀಡಿದ್ದು, HDFC ಕಾರ್ಡ್ ಮೂಲಕ ಮೊದಲ ಸೇಲ್‌ನಲ್ಲಿ ಪೊಕೊ F1 ಸ್ಮಾರ್ಟ್‌ಫೋನ್ ಖರೀದಿ ಮಾಡಿದರೆ ರೂ.1000 ಕ್ಯಾಷ್ ಬ್ಯಾಕ್ ದೊರೆಯಲಿದೆ. ಇದಾದ ನಂತರದಲ್ಲಿ ಎರಡನೇ ಬಾರಿ ಸೇಲ್‌ನಲ್ಲಿ ನೀವು ಪೊಕೊ F1 ಸ್ಮಾರ್ಟ್‌ಫೋನ್ ಖರೀದಿಸಿದರೆ ಈ ಲಾಭ ದೊರೆಯುವುದಿಲ್ಲ.

ಫೇಸ್‌ಲಾಕ್ ಇದೆ:
ಇನ್‌ಫಾರೆಡ್ ಫೇಸ್ ಆನ್‌ಲಾಕ್ ಅನ್ನು ಪೊಕೊ F1 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಲಾಗಿದೆ. ಇದು ಕತ್ತಲೆಯಲ್ಲಿಯೂ ನಿಮ್ಮ ಫೇಸ್ ಅನ್ನು ಗುರುತಿಸಿ ಫೇಸ್‌ಆನ್‌ಲಾಕ್ ಮಾಡಲಿದೆ. ಅಲ್ಲದೇ ಬೇರೆ ಯಾರು ಸಹ ನಿಮ್ಮ ಫೋಟೋವನ್ನು ಕದ್ದು ಆನ್‌ಲಾಕ್ ಮಾಡಲಾಗದ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಇದಕ್ಕದಾಗಿ ಕ್ಯಾಮೆರಾವನ್ನು ಬಳಕೆ ಮಾಡಿಕೊಂಡಿಲ್ಲ ಎನ್ನಲಾಗಿದೆ. ಇದಕ್ಕದಾಗಿಯೇ ಇನ್ಫಾರೆಡ್ ಸೆನ್ಸಾರ್ ನೀಡಲಾಗದೆ. ನೋಚ್ ಬೇಡ ಎಂದರೆ ತೆಗೆದು ಬಿಡುವ ಆಯ್ಕೆಯನ್ನು ನೀಡಲಾಗಿದೆ.

ವೇಗದ ಪ್ರೋಸೆಸರ್:
ಪೊಕೊ FI ಸ್ಮಾರ್ಟ್‌ಫೋನ್ ವೇಗವಾಗಿ ಕಾರ್ಯನಿರ್ವಹಿಸಲಿದ್ದು, ಇದಕ್ಕಾಗಿಯೇ ಸ್ನಾಪ್‌ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಮಾರುಕಟ್ಟೆಯಲ್ಲಿ ಕೆಲವೇ ಸ್ಮಾರ್ಟ್‌ಫೋನ್‌ಗಳು ಈ ಪ್ರೋಸೆಸರ್ ಹೊಂದಿವೆ. ಇದಲ್ಲದೇ ಉತ್ತಮ ಗ್ರಾಫಿಕ್ಸ್ ಪ್ಲೇ ಮಾಡುವ ಸಲುವಾಗಿ ಆಡ್ರಿನೋ 630 GPUವನ್ನು ನೀಡಲಾಗಿದ್ದು, 2.8GHz CPU ಬಳಕೆದಾರರಿಗೆ ವೇಗದ ಕಾರ್ಯಚರಣೆಯನ್ನು ನೀಡಲಿದೆ.

ಬೆಸ್ಟ್ ಬ್ಯಾಟರಿ ಇದೆ:
ಪೊಕೊ FI ಸ್ಮಾರ್ಟ್‌ಫೋನ್ ಬ್ಯಾಟರಿ ಅತ್ಯುತ್ತಮವಾಗಿದೆ. ಇದಕ್ಕಾಗಿ ಇದರಲ್ಲಿ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಫೋನ್‌ಗಳಲ್ಲಿ ಇದರದಂತಹ 4000mAh ಬ್ಯಾಟರಿಯನ್ನು ಇದರಲ್ಲಿ ಮಾತ್ರವೇ ನೀಡಿದ್ದು, ಇದು ಹೆಚ್ಚಿನ ಪ್ರಮಾಣದ ಬಾಳಿಕೆಯನ್ನು ನೀಡಲಿದೆ. ಫುಲ್ ಡೇ ಲೈಫ್ ನೀಡಲಿದೆ. ವೇಗವಾಗಿ ಚಾರ್ಜ್ ಆಗುವ ಸಲುವಾಗಿ ಕ್ವಿಕ್ ಚಾರ್ಜ್ 3.0ವನ್ನು ನೀಡಲಾಗಿದೆ.

ಪೊಕೊ FI ಸ್ಮಾರ್ಟ್‌ಫೋನ್ ಬೆಲೆ:
ಮೂರು ಆವೃತ್ತಿ ಆವೃತ್ತಿಯಲ್ಲಿ ಪೊಕೊ FI ಸ್ಮಾರ್ಟ್‌ಫೋನ್ ಮಾರಾಟವಾಗಲಿದ್ದು, 6GB RAM + 64GB ಕೇವಲ ರೂ.20,999ಕ್ಕೆ ದೊರೆಯಲಿದೆ, ಮಾರುಕಟ್ಟೆಯನ್ನು ಈ ಬೆಲೆಯೂ ಅಲ್ಲಾಡಿಸಲಿದೆ. ಇದರೊಂದಿಗೆ 6GB RAM + 128GB ಆವೃತ್ತಿಯೂ 23,999ಕ್ಕೆ ದೊರೆಯಲಿದೆ. ಇದರೊಂದಿಗೆ 8GB RAM+256GB ಆವೃತ್ತಿಯೂ ರೂ.28,999ಕ್ಕೆ ಮಾರಾಟವಾಗಲಿದೆ. ಇನ್ನೊಂದು ಮಾದರಿಯಲ್ಲಿ 8GB RAM+256GB ಆವೃತ್ತಿಯೂ ರೂ.29999ಕ್ಕೆ ದೊರೆಯಲಿದೆ.

ಮೊದಲ ಸೇಲ್;
ರೂ,1000 ಕ್ಯಾಷ್ ಬ್ಯಾಕ್ ಸಹ ನೀಡಲಾಗಿದೆ. ಇದರೊಂದಾಗಿ ಗಿ 6GB RAM + 64GB ರೂ.19999ಕ್ಕೆ ದೊರೆಯಲಿದೆ ಎನ್ನಲಾಗಿದೆ. ಟಾಪ್ ಎಂಡ್ ಫೋನ್‌ವೊಂದು ಇಷ್ಟು ಕಡಿಮೆ ಬೆಲೆಗೆ ದೊರೆಯುವುದು ಸಾಧ್ಯವೇ ಇಲ್ಲ. 6GB RAM + 128GB ಆವೃತ್ತಿಯೂ 22,999ಕ್ಕೆ ಹಾಗೂ 8GB RAM+256GB ಆವೃತ್ತಿಯೂ ರೂ.27,999ಕ್ಕೆ ದೊರೆಯಯಲಿದೆ. ಅಲ್ಲದೇ ಜಿಯೋ 6T ಡೇಟಾವನ್ನು ನೀಡಲಿದೆ. ಇದು ಮೊದಲ ಸೇಲ್‌ನಲ್ಲಿ ಮಾತ್ರವೇ ಲಭ್ಯವಿರಲಿದೆ.


Click it and Unblock the Notifications








