ನವೆಂಬರ್ 30 ರ ವರೆಗೆ ವಿಸ್ತರಣೆಗೊಂಡ“ಜಿಯೋ ದೀಪಾವಳಿ ಆಫರ್”
ಗ್ರಾಹಕರನ್ನು ಸೆಳೆಯುವುದರಲ್ಲಿ ಜಿಯೋ ಸಂಸ್ಥೆಯದ್ದು ಎತ್ತಿದ ಕೈ. ಆಗಾಗ ವಿಭಿನ್ನ ಆಫರ್ ಗಳನ್ನು ನೀಡುತ್ತಲೇ ಇರುತ್ತದೆ. ರಿಲಯನ್ಸ್ ಜಿಯೋ ಸಂಸ್ಥೆ ಇದೀಗ ತನ್ನ ಜಿಯೋಫೋನ್ ದೀಪಾವಳಿ 2019 ರ ಆಫರ್ ನ್ನು ಒಂದು ತಿಂಗಳ ಅವಧಿಗೆ ವಿಸ್ತರಿಸಿರುವ ಬಗ್ಗೆ ಪ್ರಕಟಿಸಿದೆ. ಇದೀಗ ಜಿಯೋ ದೀಪಾವಳಿ ಆಫರ್ ನವೆಂಬರ್ ತಿಂಗಳಲ್ಲೂ ಕೂಡ ಲಭ್ಯವಿರುತ್ತದೆ ಎಂದು ಕಂಪೆನಿ ತಿಳಿಸಿದೆ.

1,500 ರುಪಾಯಿಯ ಫೋನ್ ಕೇವಲ 699 ರುಪಾಯಿಗೆ:
ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಜಿಯೋ ಸಂಸ್ಥೆ ತನ್ನ 1500 ರುಪಾಯಿಯ ಜಿಯೋಫೋನ್ ನ್ನು ಕೇವಲ 699 ರುಪಾಯಿಯ ಆಫರ್ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.

ದೀಪಾವಳಿಯಲ್ಲಿ ಖರೀದಿಸಲು ಅಸಾಧ್ಯವಾದವರಿಗೆ ಸಿಹಿಸುದ್ದಿ:
ಜಿಯೋ ಫೀಚರ್ ಫೋನ್ ನ್ನು ಯಾರಿಗೆ ದೀಪಾವಳಿಯ ಸಮಯದಲ್ಲಿ ಖರೀದಿಸುವುದಕ್ಕೆ ಸಾಧ್ಯವಾಗಲಿಲ್ಲವೋ ಅವರಿಗೆ ಖಂಡಿತ ಇದು ಸಿಹಿ ಸುದ್ದಿ. ಜಿಯೋಫೋನ್ ದೀಪಾವಳಿ ಆಫರ್ ನ್ನು ಮಿಸ್ ಮಾಡಿಕೊಂಡಿದ್ದರೆ ಇದೀಗ ನವೆಂಬರ್ ತಿಂಗಳಲ್ಲೂ ಕೂಡ ನೀವು ಆಫರ್ ನಲ್ಲಿ ಜಿಯೋಫೋನ್ ಖರೀದಿಸುವುದಕ್ಕೆ ಜಿಯೋ ಅವಕಾಶ ಮಾಡಿಕೊಡುತ್ತಿದೆ. ಒಂದು ತಿಂಗಳ ಅವಧಿಗೆ ವಿಸ್ತರಣೆ ಮಾಡಲಾಗಿರುವುದರಿಂದಾಗಿ ಜಿಯೋಫೋನ್ ಖರೀದಿಸಬೇಕು ಎಂದುಕೊಂಡಿರುವ ಗ್ರಾಹಕರು ಇದರ ಸದುಪಯೋಗವನ್ನು ಕೂಡಲೇ ಪಡೆದುಕೊಳ್ಳಬಹುದು.

4ಜಿ ಡಿವೈಸ್ ಫ್ಲ್ಯಾಟ್ ಫಾರ್ಮ್:
ಜಿಯೋ ಸಂಸ್ಥೆ ಮಲ್ಟಿ-ಫೋಲ್ಡ್ 2ಜಿ ಫೀಚರ್ ಫೋನ್ ಬಳಕೆದಾರರನ್ನು ಜಿಯೋ ಫ್ಲ್ಯಾಟ್ ಫಾರ್ಮ್ ಗೆ ಸ್ಥಳಾಂತರಿಸುವುದಕ್ಕೆ ಇಚ್ಛಿಸುತ್ತಿದೆ ಮತ್ತು ಅತೀ ದೊಡ್ಡ 4ಜಿ ಡಿವೈಸ್ ನ ಫ್ಲ್ಯಾಟ್ ಫಾರ್ಮ್ ಆಗಿ ಮುಂದುವರಿಯಲಿದೆ.

ಜಿಯೋಫೋನ್ ದೀಪಾವಳಿ ಆಫರ್ ನ ಲಾಭಗಳು:
ಜಿಯೋ ಫೋನ್ ದೀಪಾವಳಿ ಆಫರ್ ನ ಭಾಗವಾಗಿ ಇನ್ನೊಂದು ತಿಂಗಳ ಅವಧಿಗೆ 1,500 ರುಪಾಯಿಯ ಜಿಯೋ ಫೋನ್ ಇದೀಗ 699 ರುಪಾಯಿಗೆ ಖರೀದಿಸುವುದಕ್ಕೆ ಲಭ್ಯವಿದೆ. ಅಂದರೆ ನವೆಂಬರ್ 30 ರ ವರೆಗೆ ಈ ಆಫರ್ ನ್ನು ಗ್ರಾಹಕರು ಪಡೆದುಕೊಳ್ಳಬಹುದು.
ದೀಪಾವಳಿ ಆಫರ್ ಹೆಚ್ಚುವರಿ ಡಾಟಾ ಆಫರ್ ನ್ನು ಕೂಡ ನೀಡುತ್ತಿದ್ದು 700 ರುಪಾಯಿ ಬೆಲೆಬಾಳುವ ಲಾಭವನ್ನು ಗ್ರಾಹಕರು ಪಡೆದುಕೊಳ್ಳಬಹುದು. ಗ್ರಾಹಕರು ಮಾಡುವ ಮೊದಲ 7 ರೀಚಾರ್ಜ್ ಗೆ ಜಿಯೋ ಸಂಸ್ಥೆ 99 ರುಪಾಯಿಯ ಹೆಚ್ಚುವರಿ ಡಾಟಾವನ್ನು ಪ್ರತಿ ರೀಚಾರ್ಜ್ ನಲ್ಲಿ ನೀಡುತ್ತದೆ. (99 ರುಪಾಯಿ*) ಅಂದರೆ ಈ ಹೆಚ್ಚುವರಿ ಡಾಟಾದ ಒಟ್ಟು ಬೆಲೆ ಅಂದಾಜು 700 ರುಪಾಯಿ ಆಗಲಿದೆ. ಮನರಂಜನೆ, ಪಾವತಿ, ಇ-ಕಾಮರ್ಸ್, ಕಲಿಕೆ, ರೈಲು ಮತ್ತು ಬಸ್ ಬುಕ್ಕಿಂಗ್ ಮತ್ತು ಇತ್ಯಾದಿ ಹಲವು ಸೇವೆಗಳಿಗಾಗಿ ಇದನ್ನು ಗ್ರಾಹಕರು ಬಳಕೆ ಮಾಡಬಹುದು.

ಜಿಯೋ ಫೋನ್ ವೈಶಿಷ್ಟ್ಯತೆಗಳು :
- 2.4 ಇಂಚಿನ QVGA ಡಿಸ್ಪ್ಲೇ
- SD ಕಾರ್ಡ್ ಸ್ಲಾಟ್
- ಬ್ಯಾಟರಿ: 2000 mAh
- ಆಲ್ಫಾನ್ಯೂಮರಿಕ್ ಕಪ್ಯಾಡ್
- 4-ವೇ ನೇವಿಗೇಷನ್
- ಹೆಡ್ ಫೋನ್ ಜ್ಯಾಕ್
- ಟಾರ್ಚ್ ಲೈಟ್
- ಎಫ್ಎಂ ರೇಡಿಯೋ
- ಕ್ಯಾಮರಾ: ಹಿಂಭಾಗದ ಕ್ಯಾಮರಾ: 2 MP; ಮುಂಭಾಗದ ಕ್ಯಾಮರಾ: 0.3 MP
- ಮೈಕ್ರೋ ಫೋನ್ ಮತ್ತು ಸ್ಪೀಕರ್
- 128ಜಿಬಿ ವರೆಗೆ ಎಸ್ ಡಿ ಕಾರ್ಡ್ ಬೆಂಬಲ


Click it and Unblock the Notifications








