Home
ಸುದ್ದಿಜಾಲ

ಜಿಯೋ ಫೈಬರ್ ಏಟಿಗೆ ಏರ್‌ಟೆಲ್, ವೊಡಾಫೋನ್ ವಿಲವಿಲ!

ಜಿಯೋ ಫೈಬರ್, ಲೈವ್ ಚಲನಚಿತ್ರ ಸ್ಟ್ರೀಮಿಂಗ್, ಟಿವಿ ಸೆಟ್‌ ಟಾಪ್‌ ಬಾಕ್ಸ್​ ನಂತಹ ಸೇವೆಗಳ ಘೋಷಣೆಯು ಎದುರಾಳಿ ಕಂಪನಿಗಳ ಮುಖ್ಯವಾಗಿ ಟೆಲಿಕಾಂ ಸಂಸ್ಥೆಗಳ ಷೇರಿನಲ್ಲಿ ಇಳಿಮುಖವಾಗಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್​ ನೀಡಿದ ಏಟಿಗೆ ಎದುರಾಳಿ ಕಂಪನಿಗಳಾದ ಭಾರ್ತಿ ಏರ್​ಟೆಲ್​ ಶೇ 4 ಮತ್ತು ವೋಡಾಪೋನ್​- ಐಡಿಯಾ ಷೇರುಗಳ ಮೌಲ್ಯದಲ್ಲಿ ಶೇ 5 ರಷ್ಟು ಇಳಿಕೆಯಾಗಿದೆ. ಮಲ್ಟಿಫ್ಲೆಕ್ಸ್​ ಚೈನ್​ ಆಪರೇಟರ್​ ಪಿವಿಆರ್​ ಮತ್ತು ಐಷರಾಮಿ ಐನಾಕ್ಸ್​. ಎನ್​ಎಸ್​ ಷೇರುಗಳಲ್ಲಿ ಕ್ರಮವಾಗಿ ಶೇ 8 ಮತ್ತು ಶೇ 10ರಷ್ಟು ಇಳಿಕೆಯಾಗಿದೆ.

ಜಿಯೋ ಫೈಬರ್ ಏಟಿಗೆ ಏರ್‌ಟೆಲ್, ವೊಡಾಫೋನ್ ವಿಲವಿಲ!

ಇದೇ ಸೋಮವಾರ ನಡೆದ ತಮ್ಮ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖೇಶ್ ಅಂಬಾನಿ ಅವರು ಜಿಯೋ ಫೈಬರ್​ 100 ಎಂಬಿಪಿಎಸ್​ ಸ್ಪೀಡ್​ನ ಬೇಸ್​ ಪ್ಲಾನ್ ಸೇರಿದಂತೆ ಫಸ್ಟ್​ ಡೇ ಫಸ್ಟ್​ ಶೋ ಪ್ಲಾನ್, ಹಾಗೂ ಉಚಿತ ಟಿವಿ ಸೆಟ್‌ ಟಾಪ್‌ ಬಾಕ್ಸ್ ಘೋಷಿಸಿದ ಮರು ದಿನದಿಂದಲೇ ಷೇರು ಪೇಟೆಯಲ್ಲಿ ತಲ್ಲಣ ಉಂಟಾಗಿದೆ. ಅಂಬಾನಿ ಅವರು ಮುಂದಿನ ತಿಂಗಳಿಂದ ಭಾರತದಾದ್ಯಂತ ಇಂಟರ್​ನೆಟ್​ ಸೇವೆಗಳ ಮೇಲಿನ ಶುಲ್ಕ ಕಡಿತಗೊಳಿಸುವ ಸುದ್ದಿಗೆ ಷೇರುಪೇಟೆಯಲ್ಲಿ ರಿಲಯನ್ಸ್​ ಷೇರುಗಳ ಮೌಲ್ಯದಲ್ಲಿ ಶೇ 12ರಷ್ಟು ಏರಿಕೆ ಕಂಡುಬಂದಿದೆ.

ಮನರಂಜನೆ, ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಹುಟ್ಟುಹಾಕುವ ಭಾರಿ ನಿರೀಕ್ಷೆ ಮೂಡಿಸಿರುವ ರಿಲಯನ್ಸ್‌ನ ಜಿಯೊ ಫೈಬರ್‌ ಸೇವೆಯು ಡಿಟಿಎಚ್ ಮತ್ತು ಮಲ್ಟಿಪ್ಲೆಕ್ಸ್ ಸ್ಕ್ರೀನ್ ವಹಿವಾಟಿನ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಆದರೆ, ಬಿಡುಗಡೆಯಾಗುವ ದಿನವೇ ಮನೆಯಲ್ಲಿಯೇ ವೀಕ್ಷಿಸುವ ಸೌಲಭ್ಯವು ಜಿಯೊ ಫೈಬರ್‌ನ ಪ್ರೀಮಿಯಂ ಕೊಡುಗೆಯಲ್ಲಿ ಇರುವುದರಿಂದ ತಮ್ಮ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮ ಬೀರದು ಎಂದು ಮಲ್ಟಿಪ್ಲೆಕ್ಸ್ ಸಂಸ್ಥೆಗಳು ಪ್ರತಿಕ್ರಿಯಿಸಿವೆ.

ಜಿಯೋ ಫೈಬರ್ ಏಟಿಗೆ ಏರ್‌ಟೆಲ್, ವೊಡಾಫೋನ್ ವಿಲವಿಲ!

ಥಿಯೇಟರ್‌ಗಳಲ್ಲಿ ಮತ್ತು ಮನೆಯಲ್ಲಿ ಕುಳಿತು ಸಿನಿಮಾ ವೀಕ್ಷಿಸುವುದು ಎರಡೂ ಸಂಪೂರ್ಣವಾಗಿ ಪ್ರತ್ಯೇಕ ಅನುಭವವಾಗಿರುತ್ತದೆ ಎಂದು ಪಿವಿಆರ್ ಸಿನಿಮಾಸ್ ಹೇಳಿದರೆ, ಥಿಯೇಟರ್‌ಗಳಲ್ಲಿ ಹೊಸ ಸಿನಿಮಾ ಬಿಡುಗಡೆಯಾದ ಎಂಟು ವಾರಗಳ ನಂತರವೇ ಟಿವಿ ಸೇರಿದಂತೆ ಬೇರೆ ಮಾಧ್ಯಮಗಳಲ್ಲಿ ಪ್ರದರ್ಶಿಸಲು ಚಲನಚಿತ್ರ ನಿರ್ಮಾಪಕರು, ವಿತರಕರು ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರು ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಇದು ಮಲ್ಟಿಪ್ಲೆಕ್ಸ್‌ಗಳ ವಹಿವಾಟಿನ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಐನಾಕ್ಸ್ ಅಭಿಪ್ರಾಯಪಟ್ಟಿದೆ.

ಇನ್ನು ಜಿಯೊ ಫೈಬರ್‌ನ ಆಕರ್ಷಕ ಸೌಲಭ್ಯಗಳ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಅಂತರ್ಜಾಲ ತಾಣದಲ್ಲಿ ಕೆಲ ನಕಲಿ ಸಂಸ್ಥೆಗಳು ಹುಟ್ಟಿಕೊಂಡು ಗ್ರಾಹಕರಿಗೆ ಮೋಸ ಮಾಡಲು ಹೊರಟಿವೆ. jiofiber.org, gigafiber.jio.com ಹೆಸರಿನ ತಾಣಗಳು ಗ್ರಾಹಕರ ನೋಂದಣಿ ಹೆಸರಿನಲ್ಲಿ ವಿಳಾಸ, ಮೊಬೈಲ್‌ ಮತ್ತಿತರ ವಿವರ ಪಡೆಯಲು ಹವಣಿಸುತ್ತಿವೆ. ಈ ಬಗ್ಗೆ ಬಳಕೆದಾರರು ಜಾಗ್ರತೆಯಿಂದ ಇರಬೇಕು. https://www.jio.com ಮಾತ್ರ ಜಿಯೊದ ಅಧಿಕೃತ ತಾಣವಾಗಿದೆ ಎಂದು ರಿಲಯನ್ಸ್‌ ವಕ್ತಾರರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.

Best Mobiles in India

English summary
Reliance Shares Jump Most In A Decade After Mukesh Ambani Reveals Zero-Net-Debt Plan. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+