ಜಿಯೋ ಟೆಲಿಕಾಂನಿಂದ ಐದು ಹೊಸ ಪೋಸ್ಟ್‌ಪೇಯ್ಡ್ ಪ್ಲಾನ್ ಲಾಂಚ್! ಆಫರ್ ಏನು?
ಪ್ರಸ್ತುತ ದೇಶದ ಟೆಲಿಕಾಂ ವಲಯದಲ್ಲಿ ತನ್ನ ಜನಪ್ರಿಯ ಪ್ಲಾನ್‌ಗಳ ಮೂಲಕ ಜಿಯೋ ಟೆಲಿಕಾಂ ನಂಬರ್ ಒನ್ ಪಟ್ಟದಲ್ಲಿ ಮುಂದುವರೆದಿದೆ. ಈಗಾಗಲೇ ಅಧಿಕ ಡೇಟಾ, ಅನಿಯಮಿತ ಕರೆ ಪ್ರಯೋಜನಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಇದೀಗ ತನ್ನ ಜಿಯೋ ಫೈಬರ್ ನಲ್ಲಿ ಐದು ಹೊಸ ಪೋಸ್ಟ್‌ಪೇಯ್ಡ್ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಈಗಾಗಲೇ 6 ಮತ್ತು 12 ತಿಂಗಳ ಬ್ರಾಡ್‌ಬ್ಯಾಂಡ್ ಪ್ಲಾನ್ ನೀಡಿರುವ ಜಿಯೋ ಇದೀಗ ತ್ರೈಮಾಸಿಕ ಪ್ಲಾನ್‌ಗಳನ್ನು ಪರಿಚಯಿಸಿದೆ.

ಹೌದು, ಜಿಯೋ ಫೈಬರ್ ಹೊಸ ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಹೊಸ ಪ್ಲಾನ್‌ಗಳನ್ನು ಪರಿಚಯಿಸಿದೆ. ಇನ್ನು ಈ ಪ್ಲಾನ್‌ಗಳು 2,097ರೂ, ಗಳಿಂದ ಪ್ರಾರಂಭವಾಗಲಿದೆ. ಅಂದರೆ ಪ್ರತಿ ತಿಂಗಳಿಗೆ 699 ರೂ. ಆಗಲಿದ್ದು, ಇದರಲ್ಲಿ ಜಿಎಸ್‌ಟಿ ಶುಲ್ಕಗಳು ಸಹ ಅನ್ವಯವಾಗುತ್ತವೆ ಎಂದು ಜಿಯೋ ದೃಡಪಡಿಸಿದೆ. ಸದ್ಯ ಇನ್ನು ಈ ಹೊಸ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳಿಗೆ ಯಾವುದೇ ಇನ್‌ಸ್ಟಾಲೇಶನ್ ಶುಲ್ಕವಿಲ್ಲ ಎನ್ನಲಾಗಿದೆ. ಹಾಗಾದ್ರೆ ಜಿಯೋ ಕಂಪೆನಿಯ ಈ ಹೊಸ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಫೈಬರ್ ಪೋಸ್ಟ್‌ಪೇಯ್ಡ್ ಬ್ರಾಡ್‌ಬ್ಯಾಂಡ್ ಪ್ಲಾನ್
ಜಿಯೋ ಫೈಬರ್ ಪರಿಚಯಿಸಿರುವ ಈ ಹೊಸ ಪೋಸ್ಟ್‌ಪೇಯ್ಡ್ ಬ್ರಾಡ್‌ಬ್ಯಾಂಡ್ ಪ್ಲಾನ್ ತ್ರೈಮಾಸಿಕ ಪ್ಲಾನ್‌ಗಳಾಗಿವೆ. ಮೂರು ತಿಂಗಳ ಅವಧಿ ಹೊಂದಿರುವ ಈ ಪ್ಲಾನ್‌ಗಳ ಬೆಲೆ 2,097ರೂ ಆಗಿದೆ. ಇದು 100Mbps ಅಪ್‌ಲೋಡ್ ಮತ್ತು ಮೂರು ತಿಂಗಳ ಡೌನ್‌ಲೋಡ್ ವೇಗ, ಅನಿಯಮಿತ ಡೇಟಾ ಮತ್ತು ವಾಯ್ಸ್ ಕಾಲ್ ಪ್ರಯೋಜನಗಳನ್ನು ನೀಡಲಿದೆ. ಅಲ್ಲದೆ ಈ ಬ್ರಾಡ್‌ಬ್ಯಾಂಡ್ ಪ್ಲಾನ್‌ನಲ್ಲಿ ಮೂರು ತಿಂಗಳವರೆಗೆ 150Mbps ವೇಗ ಮತ್ತು ವಾಯ್ಸ್ ಕಾಲ್ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಅಮೆಜಾನ್ ಪ್ರೈಮ್ ವೀಡಿಯೊ, ಡಿಸ್ನಿ+ಹಾಟ್‌ಸ್ಟಾರ್, ಅಲ್ಟ್‌ಬಾಲಾಜಿ, ಇರೋಸ್‌ನೌ, ಡಿಸ್ಕವರಿ ಪ್ಲಸ್, HoiChoi, JioSaavn, JioCinema, Lionsate Play, ShemarooMe, SonyLIV, Sun NXT, Voot Kids, Voot Select, ಮತ್ತು Zee5 ಸೇರಿದಂತೆ ಹಲವು ವೀಡಿಯೊ ಸ್ಟ್ರೀಮಿಂಗ್ ಆಪ್‌ಗಳಿಗೆ ಬಳಕೆದಾರರು ಉಚಿತ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

ಇದಲ್ಲದೆ ಜಿಯೋ ಕಂಪೆನಿಯ ಹೊಸ ಪೋಸ್ಟ್‌ಪೇಯ್ಡ್ ಪ್ಲಾನ್‌ನಲ್ಲಿ 4,497 ರೂ.ಪ್ಲಾನ್ ಕೂಡ ಸೇರಿದೆ. ಇದು ಕೂಡ ತ್ರೈಮಾಸಿಕ ಪ್ಲಾನ್ ಆಗಿದ್ದು, ಇದರಲ್ಲಿ 300Mbps ವೇಗ ಮತ್ತು ವಾಯ್ಸ್ ಕಾಲ್ ಪ್ರಯೋಜನ ಹೊಂದಿದೆ. ಇನ್ನು ಈ ಪ್ಲಾನ್ ಕೂಡ 2,997 ರೂ ಬ್ರಾಡ್‌ಬ್ಯಾಂಡ್ ಪ್ಲಾನ್ ನಲ್ಲಿ ಜಿಯೋ ನೀಡುವ ಎಲ್ಲಾ OTT ಪ್ಲಾಟ್‌ಫಾರ್ಮ್‌ಗಳನ್ನು ಸಹ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.

ಮೂರನೇಯದಾಗಿ ಜಿಯೋ ಫೈಬರ್ 7,497ರೂ ಬ್ರಾಡ್‌ಬ್ಯಾಂಡ್ ಪ್ಲಾನ್ ಲಾಂಚ್ ಮಾಡಿದೆ. ಇದು 500Mbps ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗ ಮತ್ತು ವಾಯ್ಸ್ ಕಾಲ್ ಬೆಂಬಲವನ್ನು ನೀಡುತ್ತದೆ. ಈ ಪ್ಲಾನ್ 4,497 ರೂ ಪ್ಲಾನ್ ಒಳಗೊಂಡಿರುವ ಎಲ್ಲಾ ಪ್ರಯೋಜನಗಳನ್ನು ಒಳಗೊಂಡಿದೆ.

ಇದಲ್ಲದೆ 500Mbps ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಹುಡುಕುತ್ತಿರುವವರು ಜಿಯೋದ 11,997 ತ್ರೈಮಾಸಿಕ ಪೋಸ್ಟ್‌ಪೇಯ್ಡ್ ಪ್ಲಾನ್ ಅನ್ನು ಸಹ ಪರಿಶೀಲಿಸಬಹುದು. ಇದು 1Gbps ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಒಳಗೊಂಡಿದೆ. ಮೇಲೆ ತಿಳಿಸಿದ ಯೋಜನೆಗಳಂತೆಯೇ, ಇದು ಕೂಡ ಧ್ವನಿ ಕರೆ ಪ್ರಯೋಜನಗಳನ್ನು ಮತ್ತು 15 OTT ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.

ಇನ್ನು ಹೆಚ್ಚಿನ ಡೇಟಾ ಅಗತ್ಯವಿರುವವರಿಗೆ, 25,497ರೂ, ಪೋಸ್ಟ್‌ಪೇಯ್ಡ್ ಪ್ಲಾನ್ ಸೂಕ್ತ ಎನಿಸಲಿದೆ. ಇದು 6,600GB ಡೇಟಾ, ಉಚಿತ ಧ್ವನಿ ಕರೆಗಳು ಮತ್ತು ನೆಟ್‌ಫ್ಲಿಕ್ಸ್ ಸೇರಿದಂತೆ 15 OTT ಅಪ್ಲಿಕೇಶನ್‌ಗಳಿಗೆ ಪ್ರವೇಶವನ್ನು ಬೆಂಬಲಿಸುತ್ತದೆ.


Click it and Unblock the Notifications








